ಸ್ವಂತ ಕಂಪೆನಿ ಕಟ್ಟಾಯ್ತು; ರಿಯಲ್‌ ಆಗಿ ನಿಶ್ಚಿತಾರ್ಥವೂ ಆಯ್ತು! ʼದೃಷ್ಟಿಬೊಟ್ಟುʼ ನಟಿ ಗೌತಮಿ ಜಯರಾಮ್‌ ಸಾಧನೆ!

Published : Mar 17, 2025, 09:55 AM ISTUpdated : Mar 17, 2025, 10:53 AM IST
ಸ್ವಂತ ಕಂಪೆನಿ ಕಟ್ಟಾಯ್ತು; ರಿಯಲ್‌ ಆಗಿ ನಿಶ್ಚಿತಾರ್ಥವೂ ಆಯ್ತು! ʼದೃಷ್ಟಿಬೊಟ್ಟುʼ ನಟಿ ಗೌತಮಿ ಜಯರಾಮ್‌ ಸಾಧನೆ!

ಸಾರಾಂಶ

ʼದೃಷ್ಟಿಬೊಟ್ಟುʼ ಧಾರಾವಾಹಿ ನಟಿ ಗೌತಮಿ ಜಯರಾಮ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ʼರಾಮಾಚಾರಿʼ ಧಾರಾವಾಹಿ ನಟಿ ಶೀಲಾ ಎಚ್‌, ಬಿಗ್‌ ಬಾಸ್‌ ಕನ್ನಡ ಖ್ಯಾತಿಯ ರಂಜಿತ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ʼದೃಷ್ಟಿಬೊಟ್ಟುʼ ಧಾರಾವಾಹಿ ನಟಿ ಗೌತಮಿ ಜಯರಾಮ್‌ ಅವರು ಕೂಡ ಉಂಗುರು ಬದಲಾಯಿಸಿಕೊಂಡಿದ್ದಾರೆ.

ಅದ್ದೂರಿ ನಿಶ್ಚಿತಾರ್ಥ! 
ಗೌತಮಿ ಜಯರಾಮ್‌ ಅವರು ಉದಯ್‌ ರಾಜ್‌ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಪ್ತರು, ಕುಟುಂಬಸ್ಥರು, ಸ್ನೇಹಿತರು, ಕಿರುತೆರೆ ಗಣ್ಯರ ಸಾಕ್ಷಿಯಾಗಿ ಈ ಎಂಗೇಜ್‌ಮೆಂಟ್‌ ನಡೆದಿದೆ. ನಿಶ್ಚಿತಾರ್ಥದ ಫೋಟೋಗಳನ್ನು ಗೌತಮಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇಂಜಿನಿಯರಿಂಗ್ ಹುಡ್ಗಿ ತೆರೆ ಮೇಲೆ 'ನಾಗಿಣಿ' ಆಗಿ ಬದಲಾಗಿದ್ದು ಹೀಗೆ!

ಗೌತಮಿ ಮದುವೆ ಆಗ್ತಿರೋ ಹುಡುಗ ಯಾರು? 
ಗೌತಮಿ ಅವರ ಹುಡುಗ ಏನು ಕೆಲಸ ಮಾಡುತ್ತಿದ್ದಾರೆ? ಇವರದ್ದು ಲವ್‌ ಮ್ಯಾರೇಜ್?‌ ಅರೇಂಜ್‌ ಮ್ಯಾರೇಜ್‌ ಎಂಬ ಬಗ್ಗೆ ಉತ್ತರ ಇಲ್ಲ. ಇನ್ನು ಈ ಜೋಡಿ ಯಾವಾಗ ಮದುವೆ ಆಗಲಿದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಪ್ರಶ್ನೆಗಳಿಗೆ ಗೌತಮಿಯೇ ಉತ್ತರ ಕೊಡಬೇಕಿದೆ.

ಆರ್ಕಿಟೆಕ್ಸ್‌ ಆಗಿ ಕೆಲಸ ಮಾಡ್ತಾರೆ! 
ಗೌತಮಿ ಜಯರಾಮ್‌ ಅವರು ನಟಿ ಒಂದೇ ಅಲ್ಲದೆ ಆರ್ಕಿಟೆಕ್ಟ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಗೌತಮಿ ಅವರದ್ದೇ ಆದ ಸ್ವಂತ ಕಂಪೆನಿ ಕೂಡ ಇದೆ. ಈಗಾಗಲೇ ಸಾಕಷ್ಟು ಮನೆ, ಆಫೀಸ್‌ ಇಂಟಿರಿಯರ್‌ ಡಿಸೈನ್‌ ಮಾಡಿದ್ದಾರೆ. “ಕಲಾವಿದೆ ಆಗಿದ್ದಕ್ಕೆ ಸಾಕಷ್ಟು ಬೇಗ ನನ್ನ ಕೆಲಸ ಮಾಡಿಕೊಡ್ತಾರೆ. ಆಗ ನನಗೆ ಕಲಾವಿದರ ಬೆಲೆ ಗೊತ್ತಾಯ್ತು” ಎಂದು ಗೌತಮಿ ಹೇಳಿದ್ದಾರೆ. 

ನನ್ನ ಇತಿಹಾಸ ಗೊತ್ತಿದ್ರೂ ಮದ್ವೆಗೆ ಒಪ್ಪಿದ್ದಾಳೆ! ಮತ್ತೊಂದು ಮದ್ವೆಗೆ ರೆಡಿಯಾದ ದೃಷ್ಟಿಬೊಟ್ಟು ನಟ ವಿಜಯ್​ ಹೇಳಿದ್ದೇನು?

ಧಾರಾವಾಹಿಗಳಲ್ಲಿ ನಟನೆ
ಗೌತಮಿ ಅವರು ನವೀನ್‌ ಕೃಷ್ಣ, ಕೃತಿಕಾ ನಟನೆಯ ʼಭೂಮಿಗೆ ಬಂದ ಭಗವಂತʼ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ವಿಜಯ್‌ ಸೂರ್ಯ ನಟನೆಯ ʼದೃಷ್ಟಿಬೊಟ್ಟುʼ ಧಾರಾವಾಹಿಯಲ್ಲಿ ಗೌತಮಿ ಅವರು ಸೆಕೆಂಡ್‌ ಹೀರೋಯಿನ್‌ ಪಾತ್ರ ಮಾಡಿದ್ದರು. ನಟನೆ, ಆರ್ಕಿಟೆಕ್ಟ್‌ ಕೆಲಸವನ್ನು ಅವರು ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತಿದ್ದಾರೆ. ʼಮಹಾಕಾಳಿʼ ಎನ್ನುವ ಪೌರಾಣಿಕ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ರು. 

ಉದ್ಯಮದಲ್ಲಿ ಬ್ಯುಸಿಯಾಗಿರುವ ಕಲಾವಿದರು! 
ಕಲಾವಿದರಿಗೆ ಯಾವಾಗ ಪ್ರಾಜೆಕ್ಟ್‌ ಸಿಗತ್ತೆ, ಸಿಗೋದಿಲ್ಲ ಎಂದು ಹೇಳೋಕೆ ಆಗೋದಿಲ್ಲ. ಇದರ ಜೊತೆಗೆ ಸಂಭಾವನೆ ಸಮಸ್ಯೆಯೂ ಇದೆ. ಹೀಗಾಗಿ ಬೇರೆ ಆದಾಯದ ಮೂಲ ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುವರು. ಈಗಾಗಲೇ ಸಾಕಷ್ಟು ನಟಿಯರು ಮೇಕಪ್‌ ಆರ್ಟಿಸ್ಟ್‌ ಆಗಿಯೂ, ಹೋಟೆಲ್‌ ಸೇರಿದಂತೆ ಸಾಕಷ್ಟು ಜ್ಯುವೆಲರಿ ಶಾಪ್‌ಗಳನ್ನು ನಡೆಸುತ್ತಿದ್ದಾರೆ. ಇನ್ನು ರೆಸಾರ್ಟ್‌, ಸಲೂನ್‌, ಬ್ಯೂಟಿ ಪಾರ್ಲರ್‌ ಸೇರಿದಂತೆ ಸಾಕಷ್ಟು ಉದ್ಯಮಗಳನ್ನು ನಡೆಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?