ಜೈದೇವ ಅರೆಸ್ಟ್​! ಯಾರದ್ದೋ ತಂತ್ರಕ್ಕೆ ಸಿಲುಕಿದ ಭೂಮಿಕಾ- ಗೌತಮ್​ ಕಿಡಿ: ದೂರು ಕೊಟ್ಟವರಾರು?

Published : Mar 03, 2024, 12:58 PM IST
 ಜೈದೇವ ಅರೆಸ್ಟ್​! ಯಾರದ್ದೋ ತಂತ್ರಕ್ಕೆ ಸಿಲುಕಿದ ಭೂಮಿಕಾ- ಗೌತಮ್​ ಕಿಡಿ: ದೂರು ಕೊಟ್ಟವರಾರು?

ಸಾರಾಂಶ

ಪತ್ನಿ ಮೇಲೆ ಹಲ್ಲೆ ಮಾಡಿದ ಜೈದೇವ ಅರೆಸ್ಟ್ ಆಗಿದ್ದಾನೆ. ಭೂಮಿಕಾ ವಿರುದ್ಧ ಆರೋಪ ಬಂದಿದೆ. ಹಾಗಿದ್ದರೆ ನಿಜವಾಗಿಯೂ ದೂರು ಕೊಟ್ಟವರು ಯಾರು?   

ಕೆಲಸದಾಕೆ ಮಲ್ಲಿಯನ್ನು ಕಾಮತೃಷೆಗಾಗಿ ಬಳಸಿಕೊಂಡು ಕೈಕೊಡುವ ಪ್ಲ್ಯಾನ್​ ಮಾಡಿದ್ದ ಜೈದೇವನ ಆಟ ಭೂಮಿಕಾ ಮುಂದೆ ನಡೆಯಲಿಲ್ಲ. ನಾಪತ್ತೆ ಮಾಡಲಾಗಿದ್ದ ಮಲ್ಲಿಯನ್ನು ಹುಡುಕಿ ತಂದು ಜೈದೇವನ ಜೊತೆ ಭೂಮಿಕಾ ಮದುವೆ ಮಾಡಿಸಿದ್ದಾಳೆ. ಮದುವೆಯೇನೋ ಆಗಿದೆ. ಆದರೆ ಪತ್ನಿಯೆಂದು ಆಕೆಯನ್ನು ಒಪ್ಪಿಕೊಳ್ಳಬೇಕಲ್ಲ. ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ. ಆದರೆ ಈ ಕುತಂತ್ರಿ ಜೈದೇವ ಮಲ್ಲಿಗೆ ಕೆನ್ನೆಗೆ ಚೆನ್ನಾಗಿ ಬಾರಿಸಿದ್ದಾನೆ, ಆಕೆಯ ಮೇಲೆ ಹಲ್ಲೆ ಮಾಡಿದ್ದದಾನೆ. ಮಲ್ಲಿಯ ಮೇಲೆ ಕೈಮಾಡಿದ ಜೈದೇವನ ವಿರುದ್ಧ ಭೂಮಿಕಾ ಕಿಡಿಕಿಡಿಯಾಗಿದ್ದಾಳೆ. ಅತ್ತೆಯ ಎದುರಿಗೇ ಜೈದೇವನನ್ನು ಝಾಡಿಸಿದ್ದಾಳೆ. ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ನಾನು ಅತ್ತಿಗೆ ಎನ್ನುವ ಕಾರಣ ಬಾಯಿಮುಚ್ಚಿಕೊಂಡಿದ್ದೆ, ಇನ್ನೊಂದು ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಜೈದೇವ ಹೇಳಿದರೆ ಭೂಮಿಕಾ ಸುಮ್ಮನೇ ಇರುತ್ತಾಳೆಯೆ?ಮೈದುನ ಎನ್ನುವ ಕಾರಣಕ್ಕೆ ಬಾಯಿಮುಚ್ಚಿಕೊಂಡಿದ್ದೆ. ಪತ್ನಿಯನ್ನು ಸರಿಯಾಗಿ ನೋಡದೇ ಹೋದರೆ ಮನೆಯಲ್ಲಿ ಜಾಗವಿರುವುದಿಲ್ಲ ಎಂದಿದ್ದಾಳೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ. 

ಇದೇ ವೇಳೆ ಪೊಲೀಸರ ಎಂಟ್ರಿಯಾಗಿದೆ. ಭೂಮಿಕಾಳಿಂದ ತಮಗೆ ಜೈದೇವ ವಿರುದ್ಧ ದೂರು ಬಂದಿರುವುದಾಗಿ ಹೇಳಲಾಗಿದೆ.  ಅಸಲಿಗೆ ಭೂಮಿಕಾ ಹೆಸರು ಹೇಳಿ ಬೇರೆಯವರು ದೂರು ಕೊಟ್ಟಿದ್ದಾರೆ.  ಭೂಮಿಕಾ ವಿರುದ್ಧ ತಂತ್ರ ಮಾಡಲಾಗಿದೆ. ಈ ಮೂಲಕ ಪತಿ-ಪತ್ನಿಯನ್ನು ದೂರ ಮಾಡಲು ನೋಡಲಾಗಿದೆ. ಪತ್ನಿ ಮೇಲೆ ಕೈಮಾಡಿದ ಜೈದೇವನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇದೀಗ ಪತಿ ಗೌತಮ್​ ಸೇರಿದಂತೆ ಎಲ್ಲರೂ ಭೂಮಿಕಾ ವಿರುದ್ಧ ಕಿಡಿಕಿಡಿಯಾಗಿದ್ದಾರೆ. ಅಷ್ಟಕ್ಕೂ ಭೂಮಿಕಾ ಈ ದೂರನ್ನು ತಾನು ಕೊಟ್ಟಿಲ್ಲ ಎಂದು ಹೇಳಿದರೂ ಗೌತಮ್​ ಸೇರಿದಂತೆ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಪೊಲೀಸರು ನಿನ್ನದೇ ಹೆಸರು ಹೇಳಿರುವಾಗ ಬೇರೆ ಯಾರು ದೂರು ಕೊಡಲು ಸಾಧ್ಯ ಎನ್ನುವುದು ಅತ್ತೆಯ ಮಾತು.

ಮಥುರಾಕ್ಕೆ ಹೇಮಾ ಮಾಲಿನಿ ಫಿಕ್ಸ್​! ಕಂಗನಾ ರಣಾವತ್​ ಕಥೆ ಏನು? ಬಿಜೆಪಿ ಪಟ್ಟಿ ಹೇಳ್ತಿರೋದೇನು?

ಈ ನಡುವೆ ತಾನು ದೂರು ಕೊಟ್ಟಿಲ್ಲ ಎಂದು ಎಷ್ಟೇ ಹೇಳಿದರೂ ಕೇಳದ ಅತ್ತೆ ವಿರುದ್ಧ ಭೂಮಿಕಾ ದನಿ ಎತ್ತಿದ್ದಾಳೆ. ತನ್ನ ಅಮ್ಮನ ಕುತಂತ್ರಿ ಬುದ್ಧಿ ತಿಳಿಯದ ಗೌತಮ್​, ಭೂಮಿಕಾ ವಿರುದ್ಧವೇ ಕೆಂಡಾಮಂಡಲ ಆಗಿದ್ದಾನೆ. ಎಲ್ಲದ್ದಕ್ಕೂ ನಾನು ಸಪೋರ್ಟ್​ ಮಾಡುತ್ತೇನೆ ಎನ್ನುವ ಕಾರಣಕ್ಕೆ ಈ ರೀತಿ ವರ್ತಿಸುವುದು, ಎದುರು ಮಾತನಾಡುವುದು ಸರಿಯಲ್ಲ ಎಂದು ಕೂಗಾಡಿದ್ದಾನೆ. ಇದನ್ನು ಕೇಳಿ ಗೆಳೆಯ ಆನಂದ್​ ಮತ್ತು ಆತನ ಪತ್ನಿ ಶಾಕ್​ ಆಗಿದ್ದಾರೆ. ಅವರಿಬ್ಬರನ್ನು ಬಿಟ್ಟರೆ ಬಹುಶಃ ಯಾರು ಕೂಡ ಭೂಮಿಕಾ ಈ ದೂರನ್ನು ಕೊಟ್ಟಿಲ್ಲ ಎಂದು ನಂಬುವ ಸ್ಥಿತಿಯಲ್ಲಿ ಇಲ್ಲ.

ಅಷ್ಟಕ್ಕೂ ಈ ದೂರನ್ನು ಕೊಟ್ಟವರು ಯಾರು ಎಂಬ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಭೂಮಿಕಾಳನ್ನು ಸಿಲುಕಿಸಲು ಅತ್ತೆ ಶಕುಂತಲಾ ದೇವಿ ದೂರು ಕೊಟ್ಟಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಇದು ಖಂಡಿತಾ ಸಾಧ್ಯವಿಲ್ಲ, ಭೂಮಿಕಾ ಮೇಲೆ ಆಕೆಗೆ ಸಿಟ್ಟಿದ್ದರೂ ತನ್ನ ಮಗನನ್ನು ಜೈಲಿಗೆ ಕಳುಹಿಸುವ ಪ್ಲ್ಯಾನ್​ ಮಾಡಿರಲಿಕ್ಕಿಲ್ಲ ಎಂದಿದ್ದಾಳೆ. ಇನ್ನು ಜೈದೇವನ ತಂಗಿ ಈ ಕುತಂತ್ರ ಮಾಡಿರುವ ಎಲ್ಲಾ ಸಾಧ್ಯತೆ ಇದೆ ಎನ್ನುವುದು ಇನ್ನು ಕೆಲವರ ಪ್ಲ್ಯಾನ್​. ಏಕೆಂದರೆ ಇದಾಗಲೇ ಆಕೆ ತನ್ನ ಅಕ್ಕನ ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವಲ್ಲಿ ಯಶಸ್ವಿಯಾಗಿದ್ದಳು. ಈಗ ಅತ್ತಿಗೆ ವಿರುದ್ಧ ಸೇಡು ತೀರಿಸಿಕೊಳ್ಳಲು ಅಣ್ಣನನ್ನು ಜೈಲಿಗೆ ಕಳುಹಿಸುವ ಪ್ಲ್ಯಾನ್​ ಮಾಡಿರಲಿಕ್ಕೆ ಸಾಕು ಎನ್ನುತ್ತಿದ್ದಾರೆ. ಇಲ್ಲದಿದ್ದರೆ ಶಕುಂತಲಾದೇವಿಯ ಸಹೋದರನ ಕೆಲಸ ಇರಬಹುದು ಎನ್ನುವುದು ಇನ್ನು ಕೆಲವರ ಊಹೆ. ಈ ಸತ್ಯ ಗೊತ್ತಾಗಲು ಇನ್ನಷ್ಟು ದಿನ ಕಾಯಬೇಕು. ಅಷ್ಟಕ್ಕೂ ಸೀರಿಯಲ್​ನಲ್ಲಿ ಸತ್ಯ ಬೇಗ ಗೊತ್ತಾಗುವುದಿಲ್ಲವಲ್ಲ! 

ಅಂಬಾನಿ ಪುತ್ರನ ಮದ್ವೆಯಲ್ಲಿ ಗರ್ಭಿಣಿ ದೀಪಿಕಾ ಭರ್ಜರಿ ಡ್ಯಾನ್ಸ್​: ಹಣದ ದುರಾಸೆ ಯಾಕಮ್ಮಾ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ