ಕಿಯಾ ಕಾರು ಖರೀದಿಸಿ, ನನ್ನ ಬಹುದಿನಗಳ ಕನಸು ನನಸಾಯ್ತು ಎಂದ ಬಿಗ್‌ಬಾಸ್ ತುಕಾಲಿ ಸಂತೋಷ್!

By Sathish Kumar KH  |  First Published Mar 2, 2024, 6:19 PM IST

ಬಿಗ್‌ ಬಾಸ್ ತುಕಾಲಿ ಸಂತೋಷ್ ಅವರು ಕಿಯಾ ಕಾರನ್ನು ಖರೀದಿ ಮಾಡಿ ತಮ್ಮ ಬಹುದಿನಗಳ ಕನಸು ನನಸಾದ ದಿನವೆಂದು ಸಂತಸವನ್ನು ಹಂಚಿಕೊಂಡಿದ್ದಾರೆ. 


ಬೆಂಗಳೂರು (ಮಾ.2): ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್ ಅವರು ಕಿಯಾ ಕಾರನ್ನು ಖರೀದಿಸಿ ನನ್ನ ಬಹುದಿನಗಳ ಕನಸು ನನಸಾದ ದಿನವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

ಹೌದು, ನಾವು ನೀವು ನೋಡುತ್ತಿರುವುದು ಅಕಷರಶಃ ಸತ್ಯ. ಅತ್ಯಂತ ಬಡ ಕುಟುಂಬದಿಂದ ಬಂದ ತುಕಾಲಿ ಸಂತೋಷ್ ಕಾಮಿಡಿ ಶೋಗಳಲ್ಲಿ ತೊಡಗಿಸಿಕೊಂಡು ತಮ್ಮ ಹಾಸ್ಯದಿಂದಲೇ ರಾಜ್ಯಾದ್ಯಂತ ಪ್ರಸಿದ್ಧಿ ಆಗಿದ್ದಾರೆ. ಹಂತ ಹಂತವಾಗಿ ಬೆಳೆಯುತ್ತಿರುವ ತುಕಾಲಿ ಸಂತೋಷ್ ಅವರಿಗೆ ಕೋವಿಡ್‌ ಅವಧಿಯಿಂದಲೂ ಲಕ್ ಶುರುವಾದಂತಿದೆ. ಕೋವಿಡ್ ಅವಧಿಯಲ್ಲಿ ಗುಪ್ತವಾಗಿ ಮನೆಯವರ ಸಮ್ಮುಖದಲ್ಲಿ ಮಾನಸ ಅವರನ್ನು ಮದುವೆಯಾದರು. ನಂತರ, ಅವರು ಮುಟ್ಟಿದ್ದೆಲ್ಲವೂ ಚಿನ್ನವಾಯ್ತು ಎಂಬಂತೆ, ಕಾಲಿಟ್ಟ ಕಡೆಯಲ್ಲೆಲ್ಲಾ ಯಶಸ್ವಿಯಾಗುತ್ತಲೇ ಸಾಗಿದ್ದಾರೆ. 

Tap to resize

Latest Videos

undefined

ಹದಿಹರೆಯದಲ್ಲಿ ತುಂಬಾ ನೋಡಿದ್ದೆ ಮೇಡಂ; ತುಕಾಲಿ ಸಂತೋಷ್ ಮಾತಿಗೆ ಅನುಶ್ರೀ ಶಾಕ್

ಕೋವಿಡ್ ಸೋಂಕು ಇಳಿಕೆಯಾದ ನಂತರ ಮತ್ತೆ ಸಹಜ ಸ್ಥಿತಿಗೆ ಬಂದ ನಂತರ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡ ತುಕಾಲಿ ಸಂತೋಷ್‌ಗೆ ಅದೃಷ್ಟದ ಬಾಗಿಲು ತೆರೆದಿತ್ತು. ತನ್ನ ಪ್ರಸಿದ್ಧಿಯಿಂದ ಬಿಗ್‌ಬಾಸ್‌ ಸೀಸನ್ 10ಕ್ಕೆ ಆಯ್ಕೆಯಾದರು. ಇಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗದಿದ್ದರೂ ಉತ್ತಮ ಆಟವಾಡಿ ಇಡೀ ರಾಜ್ಯದ ಜನರ ಪ್ರೀತಿಯನ್ನು ಗಳಿಸಿದ್ದರು. ಜೊತೆಗೆ, ತಮ್ಮ ಹಾಸ್ಯದಿಂದ ರಾಜ್ಯದ ಜನತೆಯನ್ನು ನಗಿಸುತ್ತಾ ಮನೆ ಮಾತಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಪುನಃ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಾಮಿಡಿ ಶೋಗಳಲ್ಲಿ ಅವರ ಪತ್ನಿ ಮಾನಸ ಅವರು ಕೂಡ ಭಾಗವಹಿಸುತ್ತಿದ್ದು, ಕುಟುಂಬದ ಆದಾಯವೈ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ಖರೀದಿ ಮಾಡಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಗಂಡನ ಹಾದಿಯಲ್ಲಿ ಸಾಗಿದ ಮಾನಸ:
ಬಿಗ್ ಬಾಸ್​ ಮನೆಯಿಂದ ಬಂದ ನಂತರ ತುಕಾಲಿ ಸಂತೋಷ್​ ಅವರ ಪತ್ನಿ ಮಾನಸ ಕೂಡ ಕಾಮಿಡಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಕೆಲವು ಸ್ಪರ್ಧಿಗಳು  ಕಲರ್ಸ್​ ಕನ್ನಡ ವಾಹಿನಿಯಲ್ಲಿ ನಾಳೆ ಫೆಬ್ರುವರಿ 3ರಿಂದ ಪ್ರಸಾರ ಆಗ್ತಿರೋ ಗಿಚ್ಚಿ ಗಿಲಿಗಿಲಿಯ ಸೀಸನ್​-3 ರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತುಕಾಲಿ ಸಂತೋಷ್​ ಅವರು ಬಿಗ್​ಬಾಸ್​ ಟ್ರೋಫಿ ಗೆಲ್ಲಲಿಲ್ಲವೆಂದು ಅವರ ಪತ್ನಿ ಚಚ್ಚಿ ಚಚ್ಚಿ ಹಾಕಿದ್ದರು. ಅಷ್ಟಕ್ಕೂ ಮಾನಸ ಅವರು ಗಿಚ್ಚಿಗಿಲಿಗಿಲಿ ವೇದಿಕೆಯಲ್ಲಿ ತಮಾಷೆಗಾಗಿ ಪತಿಯನ್ನು ಚಚ್ಚಿ ಹಾಕಿದ್ದಾರೆ. ತುಕಾಲಿ ಅವರನ್ನು ಅನುಕರಿಸುತ್ತಿರುವ ಮಾನಸ ಅವರು ಕೂಡ ಎಲ್ಲರನ್ನೂ ನಗಿಸುವಲ್ಲಿ ಯಶಸ್ವಿ ಆಗುತ್ತಿದ್ದಾರೆ.

ಬಟ್ಟೆ ಬರ್ತಿಲ್ಲ ಅಂತ ನೋವಿತ್ತು; ವರ್ತೂರ್ ಚಪ್ಪಲಿ, ವಿನಯ್ ಬಟ್ಟೆ ಸಹಾಯ ಮೆಚ್ಚಿದ ತುಕಾಲಿ ಸಂತೋಷ್!

ಮುಂದಿನ ಬಿಗ್ ಬಾಸ್ ಸೀಸನ್‌ಗೆ ಮಾನಸಗೆ ಅವಕಾಶ ಕೊಡಲು ಒತ್ತಾಯ: ಕನ್ನಡ ಬಿಗ್‌ ಬಾಸ್‌ ಸೀಸನ್‌ 10ರ ಮನೆಗೆ ಹಾಸ್ಯದ ಹಿನ್ನೆಲೆಯುಳ್ಳ ತುಕಾಲಿ ಸಂತೋಷ್ ಅವರು ಹೋಗಿ ಬಂದ ಬೆನ್ನಲ್ಲಿಯೇ ಅವರ ಪತ್ನಿ ಮಾನಸ ಅವರನ್ನು ಮುಂದಿನ ಬಿಗ್‌ಬಾಸ್ ಸೀಸನ್-11ಕ್ಕೆ ಸ್ಪರ್ಧಿಯಾಗಿ ಮನೆಯೊಳಗೆ ಕಳಿಸಬೇಕು ಎಂದು ಅಭೊಮಾನಿಗಳು ಮನವಿ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 10ರ ವೇಳೆ ಮನೆಯೊಳಗೆ ಅತಿಥಿಯಾಗಿ ಹೋಗಿದ್ದ ಹಾಗೂ ಫಿನಾಲೆ ವೇದಿಕೆಗೆ ಆಗಮಿಸಿದ್ದ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ತಮ್ಮದೇ ಶೈಲಿಯ ಹಾಸ್ಯದ ಮೂಲಕ ಜನರನ್ನು ನಗಿಸುತ್ತಿದ್ದಾರೆ. ಇನ್ನು ಗಿಚ್ಚಿ ಗಿಲಿಗಿಲಿ ಸೀಸನ್-3 ವೇದಿಕೆ ಮೂಲಕವೂ ಪ್ರಸಿದ್ಧಿ ಆಗುತ್ತಿದ್ದಾರೆ. ಹೀಗಾಗಿ, ಮುಂದಿನ ಬಿಗ್ ಬಾಸ್ ಸೀಸನ್ 11ರಲ್ಲಿ ಮಾನಸ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

click me!