
ನನ್ನಮ್ಮ ಸೂಪರ್ಸ್ಟಾರ್ ಮತ್ತು ಗಿಲಿಗಿಲಿ ಗಿಚ್ಚಿ ಮಹಾಸಂಗಮ ಸಂಚಿಕೆಯಲ್ಲಿ ಬಿಗ್ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಜೀನಿ ಗೆಟಪ್ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ತಮಾಷೆ ಮಾಡಲಿದ್ದಾರೆ. ಆದರೆ ರಿಯಾಲಿಟಿ ಷೋಗಳಲ್ಲಿ ಕೂಡ ಸಿನಿಮಾದಂತೆಯೇ ಒಂದು ಗೆಟಪ್ಗೆ ಕಲಾವಿದರ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೇಕಪ್ ಮಾಡಿಕೊಂಡು ಕುಳಿತುಕೊಳ್ಳುವುದು ಎಂದರೆ ಸುಲಭದ ಕೆಲಸವಲ್ಲ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದಂತೆಯೇ ರಿಯಾಲಿಟಿ ಷೋಗಳಲ್ಲಿಯೂ ಭರ್ಜರಿ ಮೇಕಪ್ ಇರುವ ಕಾರಣ, ತುಕಾಲಿ ಅವರು ಕೂಡ ಜೀನಿ ಮೇಕಪ್ಗೆ ಸಕತ್ ಶ್ರಮ ವಹಿಸಿದ್ದಾರೆ.
ಅದರ ವಿಡಿಯೋ ಒಂದನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಅದರಲ್ಲಿ ತುಕಾಲಿ ಅವರು ಮೇಕಪ್ ಮಾಡಿಕೊಳ್ಳುವುದನ್ನು ನೋಡಬಹುದು. ತುಕಾಲಿ ಸಂತೋಷ್ ಜೀನೀ ಗೆಟಪ್ಗೆ ಯಾವ ಎಮೋಜಿ ಮೂಲಕ ಪ್ರೀತಿ ತೋರಿಸ್ತೀರಾ? ಎನ್ನುವ ಶೀರ್ಷಿಕೆ ಕೊಟ್ಟು ಕಲರ್ಸ್ ಕನ್ನಡ ವಾಹಿನಿ ವಿಡಿಯೋ ರಿಲೀಸ್ ಮಾಡಿದೆ.
ಅಮೂಲ್ಯ ಮಕ್ಕಳಿಗೆ 2ನೇ ಹುಟ್ಟುಹಬ್ಬ: ಮೊದಲ ಬಾರಿ ವಿಮಾನ ಹತ್ತಿ ಶಿರಡಿ ದರ್ಶನ- ನಟಿ ಹೇಳಿದ್ದೇನು?
ಅಷ್ಟಕ್ಕೂ ತುಕಾಲಿ ಸಂತೋಷ್ ಎಂದ್ರೆನೇ ನಗುವಿನ ಹೊಳೆ. ಕಾಲಿ ಸಂತೋಷ್ ಅವರ ಹಾಸ್ಯದ ಮಾತುಗಳಂತೂ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುವುದು ಇದೆ. ಇಬ್ಬರು ಸಂತೋಷ್ಗಳು ಸಂತು – ಪಂತು ಎಂದೇ ಬಿಗ್ಬಾಸ್ನಲ್ಲಿ ಫೇಮಸ್ ಆದವರು. ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬಿಗ್‌ಬ್ಯಾಗ್ ಮೇಲೆ ಕೂತು ಹರಟಿದ್ದಾರೆ.
ಈಚೆಗೆ, ಬಿಗ್ಬಾಸ್ ಪಯಣದ ಕುರಿತು ಮೊದಲಿಗೆ ತುಕಾಲಿ ಸಂತೋಷ್ ಅವರಿಗೆ ಕೇಳಲಾಯಿತು. ಆದರೆ ವಿಶೇಷವೆಂದರೆ ಇಂಗ್ಲಿಷ್ನಲ್ಲಿ ಅನುಭವ ಹೇಳುವಂತೆ ಹೇಳಲಾಗಿತ್ತು. ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ತುಕಾಲಿ ಸಂತೋಷ್, ಬಿಗ್ಬಾಸ್ನ ಎಲ್ಲ ಸ್ಪರ್ಧಿಗಳ ಬಗ್ಗೆಯೂ ತಮ್ಮದೇ ಕನ್ನಡ ಮಿಕ್ಸ್ ಇಂಗ್ಲಿಷ್ನಲ್ಲಿ ಮಾತನಾಡಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದರು.
ಸೀತಾರಾಮ ಲವ್ ಸ್ಟೋರಿ ಶೂಟಿಂಗ್ ಹೇಗಿತ್ತು? ಸುಂದರ ಕ್ಷಣಗಳ ವಿಡಿಯೋ ರಿಲೀಸ್ ಮಾಡಿದ ವಾಹಿನಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.