
Zee Kannadaದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲವೂ ಸುಖಾಂತ್ಯವಾಗಿದ್ದು, ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಕೆಲವೇ ಎಪಿಸೋಡ್ಸ್‌ನಲ್ಲಿ ಮುಗಿಯಬಹುದೆಂದು ವೀಕ್ಷಕರು ಗೆಸ್ ಮಾಡುತ್ತಿದ್ದಾರೆ. ಕಥೆ ಏನಾಗಬಹುದು?
ಮಧ್ಯ ವಯಸ್ಸಲ್ಲಿ ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು ಮದ್ವೆಯಾಗುವ ಜೋಡಿ, ಒಬ್ಬರಿಗೊಬ್ಬರು ಬಿಟ್ಟಿರಲಾಗದಂಥ ಸಂಬಂಧವನ್ನು ಸೃಷ್ಟಿಸಿಕೊಳ್ಳುತ್ತಾರೆ. ಆದರೆ, ಯಾವುದೋ ದುಷ್ಟ ಶಕ್ತಿಯ ಅಟ್ಟಹಾಸಕ್ಕೆ ಈ ಸುಂದರವಾದ ಸಂಬಂಧಕ್ಕೆ ದೃಷ್ಟಿ ಬಿದ್ದಿರುತ್ತೆ? ಈ ಕಥೆ ಇರುವ ಅಮೃತಧಾರೆ ಶೀಘ್ರವೇ ಅಂತ್ಯ ಕಾಣುತ್ತಾ?
ರಾಜೇಶ್ ನಟರಂಗ ಬಿಲಿಯನೇರ್ ಉದ್ಯಮಿ ಗೌತಮ್ ದಿವಾನ್ ಹಾಗೂ ಛಾಯಾ ಸಿಂಗ್ ಮಧ್ಯಮ ವರ್ಗದ ಟೀಚರ್ ಆಗಿ ನಟಿಸಿದ್ದ ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಹೆಚ್ಚು ಟಿಆರ್‌ಪಿ ಇರೋ ಸೀರಿಯಲ್‌ಗಳಲ್ಲಿ ಮೇಲ್ಪಂಕ್ತಿಯಲ್ಲಿದೆ. ಸಿಕ್ಕಾಪಟ್ಟೆ ಮೆಚ್ಯುರಿಟಿ ಇರೋ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಎದುರಾಗೋ ಸಮಸ್ಯೆಯನ್ನು ಪ್ರಬುದ್ಧವಾಗಿ ಹ್ಯಾಂಡಲ್ ಮಾಡೋದು ಪ್ರೇಕ್ಷಕರಿಗೆ ಇಷ್ಟವಾಗುತ್ತಿತ್ತು. ಎಲ್ಲವೂ ಸರಿ ಇದೆ ಎನ್ನುವಾಗ, ಎಲ್ಲೆಡೆ ಇರುವಂತೆ ಮನೆಯೊಳಗೆ ಇರುವ ರೌಡಿಗಳು ಈ ಜೋಡಿಯನ್ನು ದೂರ ಮಾಡಲು ಯತ್ನಿಸುತ್ತಲೇ ಇರುತ್ತೆ. ಒಂದು ಫೈನ್ ಡೇ ಅದು ಸಕ್ಸಸ್ ಸಹ ಆಗುತ್ತೆ.
ಅಚ್ಚುಮೆಚ್ಚಿನ ಪತಿಯಿಂದ ಭೂಮಿಕಾ ಹೇಳದೇ ಕೇಳದೆ ದೂರ ಹೋಗುತ್ತಾಳೆ. ಹುಟ್ಟಿದ ಅವಳಿ ಮಕ್ಕಳಲ್ಲಿ ಒಂದು ಮಗು ರೌಡಿಗಳ ಪಾಲಾಗಿರುತ್ತೆ. ಗಂಡು ಮಗುವನ್ನು ಭೂಮಿಕಾ ಕರ್ಕೊಂಡು ಹೋಗುತ್ತಾಳೆ. ಹುಟ್ಟಿದ ಹೆಣ್ಣು ಮಗು ಮಿಸ್ ಆಗಿರುತ್ತೆ. ಇತ್ತು ಗೌತಮ್ ಇರೋ ಒಬ್ಬ ಮಗನನ್ನು ಕಳ್ಕೊಂಡು, ನೆಚ್ಚಿನ ಮಡದಿಯೂ ಇಲ್ಲದೇ ನೊಂದು ಕೊಂಡರೆ, ಎಲ್ಲಿಯೋ ಭೂಮಿಕಾ ಕಷ್ಟಪಟ್ಟು ಮಗ ಹಾಗೂ ಓರಗಿತ್ತಿ ಮಲ್ಲಿಯೊಂದಿಗೆ ಜೀವನ ಕಟ್ಟಿ ಕೊಳ್ಳುತ್ತಾಳೆ.
ಕಾಲ ಕಳೆಯುತ್ತೆ. ಹೆಂಡತಿಯನ್ನು ಹುಡುಕುವಲ್ಲಿ ಕಡೆಗೂ ಯಶಸ್ವಿಯಾಗುತ್ತಾನೆ ಗೌತಮ್. ಆದರೆ, ಹಠಮಾರಿ ಭೂಮಿಕಾ ಪತಿಯೊಡನೆ ಹೋಗಲು ನಿರಾಕರಿಸುತ್ತಲೇ ಇರುತ್ತಾಳೆ. ವೀಕ್ಷಕರಿಗೂ ಬೇಜಾರು ಬರುವಷ್ಟು ದಿನಗಳಾದರೂ ಈ ಜೋಡಿ ಒಂದಾಗಿರಲೇ ಇರಲಿಲ್ಲ. ಕಡೆ ಕಡೇಗಂತೂ ಪ್ರುಬುದ್ಧೆ ಎಂದು ಕೊಂಡ ಭೂಮಿಕಾ ಹೀಗ್ಯಾಕೆ ಮಾಡುತ್ತಾಳಪ್ಪ ಎನ್ನುವಷ್ಟು ವೀಕ್ಷಕರು ಫೆಡ್ ಅಪ್ ಆಗಿದ್ದರು. ಅಂತೂ ಭೂಮಿಕಾ ಬದಲಾಗಿ ಪ್ರೇಕ್ಷಕರು ಬಹಳ ದಿಗಳಿಂದ ಕಾಯುತ್ತಿದ್ದ ದಿನಗಳು ಬಂದಿದ್ದು, ಈ ಮುದ್ದಾದ ಜೋಡಿ ಒಂದಾಗಿದೆ.
ಒಂದು ರೀತಿಯಲ್ಲಿ ಎಲ್ಲವೂ ಸುಖಾಂತ್ಯವಾಗಿದೆ. ಆದರೆ, ಗೌತಮ್ ಮಲ ತಾಯಿ ಶಕುಂತಲಾ ಹಾಗೂ ಅವಳ ಮತ್ತೊಬ್ಬ ಮಗ ಜೈ ದೇವ್ ಕುತಂತ್ರ ಮಾತ್ರ ಇನ್ನೂ ನಿಂತಿಲ್ಲ. ಏನಾದರೂ ಒಂದು ಕಿತಾಪತಿ ಮಾಡುವ ಈ ಕುತಂತ್ರಿಗಳು ಈಗಲೂ ಗೌತಮ್-ಭೂಮಿ ಮಕ್ಕಳಿಗೆ ತೊಂದರೆ ಕೊಡಲು, ಇಲ್ಲವೇ ಈ ಜೋಡಿಗೆ ಏನೇನು ತೊಂದರೆ ಕೊಡಬಹುದೋ ಅದನ್ನು ಕೊಡಲು ಸದಾ ಯತ್ನಿಸುತ್ತಲೇ ಇರುತ್ತದೆ. ಆದರೆ, ಅವೆಲ್ಲವಕ್ಕೂ ಫುಲ್ ಸ್ಟಾಪ್ ಇಡುವಂತೆ ಗೌತಮ್-ಭೂಮಿಕಾ ಜೋಡಿ ಒಂದಾಗಿದೆ. ಮಕ್ಕಳೊಂದಿಗೆ ಹೊಸ ಜೀವನ ಶುರು ಮಾಡಿದ್ದಾರೆ.
ಇನ್ನೇನು? ಗೌತಮ್ ತಾಯಿ ಭಾಗ್ಯಮ್ಮ ಈಗ ಮಾತನಾಡಬಲ್ಲಳು. ಭೂಮಿಕಾ ಯಾಕೆ ಗೌತಮ್‌ನಿಂದ ದೂರವಾಗಿದ್ದು ಅರ್ಥವಾಗಿದೆಯ ಎಲ್ಲೂ ಸೇರಿ ರೌಡಿಗಳಿಗೆ ತಕ್ಕ ಪಾಠ ಕಲಿಸಿದರೆ ಆಯಿತು. ಅದೇನು ಕಷ್ಟದ ವಿಷಯವಿಲ್ಲ. ಅವರಿಗೆ ಪಾಠ ಕಲಿಸಿದ ಮೇಲೆ ಕಥೆ ಮುಗಿಯುತ್ತೆ. ಅಧರ್ಮದ ವಿರುದ್ಧ ಧರ್ಮಕ್ಕೆ ಜಯ ದೊರಿಕಿಸುವುದು ತಾನೇ ಪ್ರತೀ ಸೀರಿಯಲ್ ಉದ್ದೇಶ. ಆದ್ದರಿಂದ ಈ ಸೀರಿಯಲ್ ಇನ್ನು ಹೆಚ್ಚು ಎಪಿಸೋಡ್ ಬರುವುದಿಲ್ಲ ಎನ್ನುವುದು ಪ್ರೇಕ್ಷಕರ ನಿರೀಕ್ಷೆ. ಆದರೆ, ಗೊತ್ತಿಲ್ಲ ಕಥೆಗೆ ಇನ್ನೇನು ಟ್ವಿಸ್ಟ್ ಕೊಟ್ಟು ಚೀಯಿಂಗ್ ಗಮ್‌ನಂತೆ ಎಳೀತಾರೋ ಗೊತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.