ಶ್ರೀಮಂತರ ಮನೆಗೆ ಹೆಣ್ಣು ಮಕ್ಕಳನ್ನು ಸೊಸೆಯಾಗಿ ಕಳಿಸೋದೇ ಈ ತಾಯಿ ಗುರಿ; Gowri Kalyana Serial

Published : Jan 22, 2026, 05:12 PM IST
gowri kalyana serial cast

ಸಾರಾಂಶ

Gowri Kalyana Kannada Tv Serial Timing: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸದಾಗಿ ‘ಗೌರಿ ಕಲ್ಯಾಣ’ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವಿದೆ. ಕೆ ಎಸ್‌ ರಾಮ್‌ಜೀ ಅವರು ಈ ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದಾರೆ. 

‘ಗೌರಿ ಕಲ್ಯಾಣ’ ಧಾರಾವಾಹಿಯಲ್ಲಿ ( Gowri Kalyana Kannada Serial ) ತನ್ನ ಮೂರು ಹೆಣ್ಣುಮಕ್ಕಳನ್ನ ಒಳ್ಳೆ ಶ್ರೀಮಂತ ಮನೆತನಕ್ಕೆ ಸೇರಿಸಬೇಕು ಅಂತ ತನಗೆ ತಾನೆ ಮಾತು ತಾಯಿ ಕೊಟ್ಕೊಂಡಿದ್ದಾಳೆ. ಈ ಭಿನ್ನ ಕಥೆ ಇದೇ ಜನವರಿ 27ರ ಮಂಗಳವಾರದಿಂದ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿವೆ.

ಗೌರಿ ಕಲ್ಯಾಣ ಧಾರಾವಾಹಿ ಕಥೆ ಏನು?

ಮಧ್ಯಮ ವರ್ಗದ, ಸಂಪ್ರದಾಯಸ್ಥ ಮನೆತನದ ಸಭ್ಯ ಗೃಹಿಣಿ ಕಾಂತಲಕ್ಷ್ಮಿಗೆ ಮೂವರು ಸುಂದರ ಹೆಣ್ಣುಮಕ್ಕಳ- ಮೋನಿಕಾ, ಗೌರಿ ಮತ್ತು ಚಿನ್ಮಯಿ. ತನ್ನ ಮೂವರು ಹೆಣ್ಣು ಮಕ್ಕಳನ್ನು ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಕಳಿಸಬೇಕು ಅನ್ನೋ ಮಹದಾಸೆ ಆಕೆಯದ್ದು. ಬಡತನದಲ್ಲಿ ತಾನು ಅನುಭವಿಸಿದ ಕಷ್ಟ ತನ್ನ ಮಕ್ಕಳು ಅನುಭವಿಸಬಾರದು ಎಂದದು ಹಂಬಲಿಸೋ ಆ ತಾಯಿಗೆ, ತನ್ನ ಮಕ್ಕಳ ಸುಂದರ ಭವಿಷ್ಯದ್ದೇ ಕನಸು.

ದೀನಬಂಧು ಮನತನದ ಶ್ರೀಮಂತಿಕೆಗೆ ಮರುಳಾಗಿ ತಾಯಿ ತನ್ನ ದೊಡ್ಡಮಗಳನ್ನು ಆ ಮನೆಗೆ ಸೊಸೆಯಾಗಿಸಲು ಹಂಬಲಿಸ್ತಾಳೆ. ಅದಕ್ಕಾಗಿ ಪರಿಪರಿಯಾದ ಪ್ರಯತ್ನ ಮಾಡ್ತಾಳೆ. ಆಕೆಯ ಆ ಪ್ರಯತ್ನ, ಆಕೆ ತನ್ನ ಗುರಿ ಸಾಧನೆಗೆ ಹಿಡಿದ ದಾರಿ ಆಕೆಯ ಮಕ್ಕಳಿಗೆ ಹೂವಿನ ಹಾಸಿಗೆ ಹಾಸುತ್ತೋ? ಅಥವಾ ಮುಳ್ಳಿನ ದಾರಿಯಾಗುತ್ತೋ? ಕಾದುನೋಡಬೇಕು. ಮುಂದಿನ ದಿನಗಳಲ್ಲಿ ಇವರು ಎದುರಿಸುವ ಭಾವನಾತ್ಮಕ ಸವಾಲುಗಳು ಎಂಥವು? ಮದುವೆಯ ನಂತರ ಘಟಿಸೋ ತಿರುವುಗಳೇನು? ಅನ್ನೋದೆ ‘ಗೌರಿಕಲ್ಯಾಣ’ ಧಾರಾವಾಹಿಯ ಜೀವಾಳ

ಇಲ್ಲಿ ಕಥಾನಾಯಕಿ ಗೌರಿ, ಓರ್ವ ಬೆರಗುಗಣ್ಣಿನ ಕನಸುಗಾರ್ತಿ. ಆಕೆಗೆ ಸಂಬಂಧಗಳೇ ಉಸಿರು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸಿಡಿದೇಳುವ ಗಟ್ಟಿಗಿತ್ತಿ! ತಾನಾಯ್ತು ತನ್ನ ಪುಟ್ಟ ಕುಟುಂಬದ ಹಿತವೇ ಆಕೆಯ ಡೆಸ್ಟಿನೇಷನ್.‌ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕು ಎಂದು ಕನಸು ಕಾಣೋ ಸ್ವಾವಲಂಬಿ ಜೀವ. ಒಬ್ಬ ಒಳ್ಳೆಯ ಡಿಸೈನರ್ ಆಗಬೇಕೆಂಬ ಛಲ ಅವಳಲ್ಲಿದೆ. ಯಾರ ಹಂಗಲ್ಲೂ ಬದುಕದೇ ಸ್ವಂತ ಶಕ್ತಿಯ ಮೇಲೆ ನಿಲ್ಲಬೇಕೆಂಬ ಹಠ ಅವಳದ್ದು. ಆದರೆ, ಬದುಕು ಅಡೆತಡೆ ಇಲ್ಲದ ಸಲೀಸು ರಸ್ತೆಯಲ್ಲವಲ್ಲ!

ಮಧ್ಯಮ ವರ್ಗದ ಜನರ ಸರಳತೆ ಮತ್ತು ಶ್ರೀಮಂತ ಸಮಾಜದ ನಿರೀಕ್ಷೆಗಳ ನಡುವೆ ನಡೆಯುವ ಭಾವನಾತ್ಮಕ ಹೋರಾಟ ‘ಗೌರಿ ಕಲ್ಯಾಣ’ ಧಾರಾವಾಹಿಯ ಹೈಲೈಟ್‌. ಇಲ್ಲಿ ಹಣ, ಅಧಿಕಾರದ ಅಮಲಿದೆ, ಮೇಲ್ವರ್ಗ ಕೆಳವರ್ಗಗಳ ನಡುವಿನ ಸಂಘರ್ಷವೂ ಕಾಣಿಸುತ್ತದೆ. ಸಂಬಂಧಗಳಲ್ಲಿನ ಮೌಲ್ಯಗಳನ್ನು ಸಾರುವುದಷ್ಟೇ ಅಲ್ಲದೆ, ಅಕ್ಕ-ತಂಗಿಯರ ನಡುವಿನ ಬಾಂಧವ್ಯಕ್ಕೂಈ ಧಾರಾವಾಹಿ ಕನ್ನಡಿಯಾಗಲಿದೆ. ಶ್ರೀಮಂತ ಮತ್ತು ಬಡವ ಅನ್ನೋ ಎರಡು ವರ್ಗಗಳ ನಡುವಿನ ಕಂದಕ ಎಷ್ಟು ಆಳವಿದೆ ಅನ್ನೋದನ್ನೂ ಈ ಧಾರಾವಾಹಿ ಮಾರ್ಮಿಕವಾಗಿ ಬಿಚ್ಚಿಡಲಿದೆ.

ಗೌರಿಕಲ್ಯಾಣ ಧಾರಾವಾಹಿಯಲ್ಲಿ ಗೌರಿಯಾಗಿ ಶಿಲ್ಪಾ ಕಾಮತ್‌, ವಿವೇಕ್‌ ಚಕ್ರವರ್ತಿಯಾಗಿ ಶರತ್‌ ಕುಮಾರ್‌, ಕಾಂತಲಕ್ಷ್ಮೀ ಪಾತ್ರದಲ್ಲಿ ದೀಪಿಕಾ ಶರಣ್‌ ಶೆಟ್ಟಿ, ಶಾಂತವೀರಣ್ಣ ಪಾತ್ರದಲ್ಲಿ ಅಶೋಕ್‌ ಜಂಬೆ, ಮೋನಿಕಾ ಪಾತ್ರದಲ್ಲಿ ಸಹನಾ, ಚಿನ್ಮಯಿ ಪಾತ್ರದಲ್ಲಿ ನಿಹಾರಿಕಾ ಶೆಟ್ಟಿ, ಚಕ್ರವರ್ತಿ ಪಾತ್ರದಲ್ಲಿ ಗುರುದತ್‌, ಸರಿತಾ ಪಾತ್ರದಲ್ಲಿ ಶೀಲಾ, ಚಂಚಲ ಪಾತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ. ರಾಮ್‌ಜಿ ಈ ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದು, ಭರತ್‌ ಕುಮಾರ್‌ ಎನ್‌ ಮೈಸೂರು ನಿರ್ದೇಶನ ಇರಲಿದೆ. ಪ್ರೋಮೋ ಮೂಲಕ ಗಮನ ಸೆಳೆದ “ಗೌರಿ ಕಲ್ಯಾಣ” ನೋಡುಗರಿಗೆ ಈ ಹೊಸತನದ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Megha Shetty: ಮಾವನ ಮಗಳ ಬೆಂಕಿ ಲುಕ್ ಗೆ ಮನಸೋತ ಪಡ್ಡೆ ಹೈಕ್ಳು
24ನೇ ವಯಸ್ಸಿಗೆ ಮುಂಬೈನಲ್ಲಿ ಮನೆ ತಗೊಂಡಿದ್ದು ಹೇಗೆ? Bigg Boss ರಕ್ಷಿತಾ ಬಿಚ್ಚಿಟ್ಟ ರಹಸ್ಯವೇನು?