ಮಗನಿಂದಲೇ ಬಯಲಾಗುತ್ತಾ ಅಪ್ಪನ ಬಂಡವಾಳ? ಅಡಕತ್ತರಿಯಲ್ಲಿ ತಾಂಡವ್​, ಸಿಕ್ಕಿಬೀಳ್ತಾಳಾ ಸುಂದ್ರಿ?

By Suvarna News  |  First Published Jan 31, 2024, 5:13 PM IST

ಮನೆಯಲ್ಲಿ ಕಳ್ಳತನ ಮಾಡಿದ ಸುಂದ್ರಿ ಯಾರ ಕೈಗೂ ಸಿಗದಂತೆ ಮಾಡುವಲ್ಲಿ ತಾಂಡವ್ ಯಶಸ್ವಿಯಾಗಿದ್ದಾನೆ. ಆದರೆ ಮಗನ ಕೈಯಿಂದ ಸಿಕ್ಕಿ ಬೀಳ್ತಾನಾ?
 


ಭಾಗ್ಯಳಿಂದ ದೂರವಾಗಿ ಶ್ರೇಷ್ಠಾಳ ಜೊತೆ ನೆಲೆಸಿರುವ ತಾಂಡವ್​, ಸ್ವಂತ  ಅಪ್ಪ-ಅಮ್ಮಂದಿರನ್ನು ಬಿಟ್ಟು ನಕಲಿ ಅಪ್ಪ-ಅಮ್ಮನ ಹಿಂದೆ ಹೋಗಿದ್ದಾನೆ. ಶ್ರೇಷ್ಠಾಳ ಮನೆಯವರಿಗೆ ಹಾಗೂ ತಾನು ನೆಲೆಸಿರುವ ಮನೆಯವರಿಗೆ ಇದೇ ನಕಲಿ ಅಪ್ಪ-ಅಮ್ಮನೇ ಅಸಲಿ ಎಂದು ಹೇಳಿದ್ದಾನೆ. ಇನ್ನು ಈ ನಕಲಿಗಳೋ ಪಕ್ಕಾ ಕಳ್ಳರು. ಖುದ್ದು ಭಾಗ್ಯಳ ಮನೆಯಲ್ಲಿ ಕದ್ದಿದ್ದಾಳೆ ನಕಲಿ ಅಮ್ಮ ಸುಂದ್ರಿ. ಆದರೆ ಇದೀಗ ಅವಳು ಸಿಕ್ಕಿಬಿದ್ದಿದ್ದು, ತಾಂಡವ್​ ಮಗ ಗುಂಡಾ ಆಕೆಯನ್ನು ಕೂಡಿ ಹಾಕಿದ್ದಾನೆ. ಎಲ್ಲಿ ತನ್ನ ಬಂಡವಾಳ ಬಯಲಾಗುತ್ತೋ ಎಂದು ಮಗನನ್ನು ಆಚೆಗೆ ಕಳುಹಿಸಿ ಸುಂದ್ರಿಯನ್ನು ಕೊಠಡಿಯಿಂದ ಹೊರಕ್ಕೆ ಕಳುಹಿಸಿದ್ದಾನೆ ತಾಂಡವ್​.

ಈ ಕುತಂತ್ರ ಸದ್ಯ ಯಾರಿಗೂ ಗೊತ್ತಿಲ್ಲ. ಆದರೆ ಗುಂಡ ಬಿಡಬೇಕಲ್ಲಾ? ನಾನೇ ಖುದ್ದು ಆ ಕಳ್ಳಿಯನ್ನು ನೋಡಿದ್ದೇನೆ ಎನ್ನುತ್ತಿದ್ದರೆ ತಾಂಡವ್​ ಅದೆಲ್ಲಾ ಸುಳ್ಳು ಎಂದಿದ್ದಾನೆ. ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೇನು ಸಿಕ್ಕಿಬೀಳುವ ಹಂತದಲ್ಲಿದ್ದಾನೆ ತಾಂಡವ್​. ಸುಂದ್ರಿಯೇನೋ ತಪ್ಪಿಸಿಕೊಂಡಿದ್ದಾಳೆ. ಆದರೆ ಗುಂಡ ಮಾತ್ರ ಅಪ್ಪನ ಮೇಲೆ ಸಂಶಯ ತೋರಿದ್ದಾನೆ. ಸದಾ ಸುಳ್ಳು ಹೇಳುವ ಅಪ್ಪ ಎಂದಿದ್ದಾನೆ. ಕುಸುಮಾ, ಭಾಗ್ಯ ಸೇರಿದಂತೆ ಎಲ್ಲರಿಗೂ ಯಾರು ಸರಿ, ಯಾರು ತಪ್ಪು ಎನ್ನುವುದು ತಿಳಿಯುತ್ತಿಲ್ಲ. ಅಷ್ಟಕ್ಕೂ ಕಳ್ಳಿಯನ್ನು ತಾಂಡವ್​ ಕಳುಹಿಸಿಕೊಡುವುದು ಏಕೆ ಎನ್ನುವುದು ತಿಳಿಯದೇ ಇರುವ ಪ್ರಶ್ನೆ ಅವರಿಗೆಲ್ಲ. ಅವರಿಗೇನು ಗೊತ್ತು, ಇದೇ ಕಳ್ಳಿಯನ್ನು ತಾಂಡವ್​ ತನ್ನ ಅಮ್ಮ ಎಂದಿದ್ದಾನೆ ಎಂದು.

Tap to resize

Latest Videos

ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಒಟ್ಟಿನಲ್ಲಿ ಈಗ ತಾಂಡವ್​ಗೆ ಫಜೀತಿ ಶುರುವಾಗಿದೆ. ಇದನ್ನು ನೋಡಿ ಕುಸುಮಾಗೆ ಸಂದೇಹ ಬಂದಿದೆ. ಆ ಕಳ್ಳಿ ಹೇಗೆ ಇದ್ದಳು ಎಂದು ಕೇಳಿದಾಗ, ಗುಂಡ ಅವಳು ಹೀಗಿಗೆ ಇದ್ದಳು ಎಂದಿದ್ದಾನೆ. ಆಗ ಕುಸುಮಾ ಯಾರಿಗೋ ಕರೆ ಮಾಡಿ, ಒಬ್ಬಳ ಫೋಟೋ ಕಳುಹಿಸುವಂತೆ ಕೇಳಿದ್ದಾಳೆ. ಸುಂದ್ರಿ ಸಿಕ್ಕಿಬಿದ್ದರೆ ತಾಂಡವ್​ ಸಿಕ್ಕಿಬಿದ್ದಂತೆಯೇ. ಪ್ರತಿಬಾರಿಯೂ ಹೇಗ್ಹೇಗೋ ತಪ್ಪಿಸಿಕೊಳ್ತಿದ್ದ ತಾಂಡವ್​ ಈ ಬಾರಿಯೂ ತಪ್ಪಿಸಿಕೊಳ್ತಾನಾ ಅಥವಾ ಸಿಕ್ಕಿಬೀಳ್ತಾನಾ ಎನ್ನುವುದೇ ಪ್ರಶ್ನೆ.

ಇಷ್ಟೆಲ್ಲಾ ಆಗಿದ್ದರೂ ತಾಂಡವ್​, ಶ್ರೇಷ್ಠಾಳ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾನೆ ಎನ್ನುವುದು ಇದುವರೆಗೆ ಮನೆಯವರಿಗೆ ತಿಳಿದಿಲ್ಲ. ಶ್ರೇಷ್ಠಾ ತನ್ನ ಮದುವೆ ಫಿಕ್ಸ್​ ಆಗಿದೆ ಎಂದಿದ್ದಳೇ ವಿನಾ, ಹುಡುಗ ಇದೇ ತಾಂಡವ್ ಎಂದು ಹೇಳಿರಲಿಲ್ಲ. ಇದೇ ಕಾರಣಕ್ಕೆ ಇವರಿಬ್ಬರ ಸಂಬಂಧದ ಬಗ್ಗೆ ಮನೆಯಲ್ಲಿ ಯಾರಿಗೂ ಅರಿವಿಲ್ಲ.ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. 

ಸ್ನೇಕ್​ ಶ್ಯಾಮ್​, ಗೌರೀಶ್​ ಅಕ್ಕಿ ಬಿಗ್​ಬಾಸ್​ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?

click me!