ಸ್ನೇಕ್​ ಶ್ಯಾಮ್​, ಗೌರೀಶ್​ ಅಕ್ಕಿ ಬಿಗ್​ಬಾಸ್​ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?

By Suvarna News  |  First Published Jan 31, 2024, 4:19 PM IST

ಸ್ನೇಕ್​ ಶ್ಯಾಮ್​, ಪತ್ರಕರ್ತ ಗೌರೀಶ್​ ಅಕ್ಕಿ  ಕೆಲವೇ ದಿನಗಳಲ್ಲಿ ಎಲಿಮಿನೇಟ್​ ಆದದ್ದೇಕೆ? ಬಿಗ್​ಬಾಸ್​ ಪಯಣದ ಕುರಿತು ನಟಿ ಭಾಗ್ಯಶ್ರೀ ಹೇಳಿದ್ದೇನು? 
 


58 ಸಾವಿರಕ್ಕಿಂತಲೂ ಹೆಚ್ಚಿನ ಹಾವುಗಳನ್ನು ಹಿಡಿದಿದ್ದ ಸ್ನೇಕ್​ ಶ್ಯಾಮ್​ ಅವರು 'ಬಿಗ್ ಬಾಸ್‌' ಕನ್ನಡ ಸೀಸನ್ 10ರ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆಯಿಂದಾಗಿ  ಹೊರಬಂದಿದ್ದರು. ಸಮರ್ಥರ ಗುಂಪಿನಲ್ಲಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ 'ಸ್ನೇಕ್' ಶ್ಯಾಮ್‌ ಅವರಿಗೆ ಕಡಿಮೆ ವೋಟ್‌ ಸಿಕ್ಕ ಕಾರಣ, ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. 'ನನಗೆ ಬಿಗ್ ಬಾಸ್ ಒಳ್ಳೆಯ ಚಾನ್ಸ್ ನೀಡಿತ್ತು. ಒಳ್ಳೆಯ ಗೆಳೆಯರು ಸಿಕ್ಕರು. ಆದರೆ, ನನ್ನ ಪ್ರಾಣಿಗಳ ಮೇಲೆ ಜಾಸ್ತಿ ನನಗೆ ಅಟ್ಯಾಚ್‌ಮೆಂಟ್ ಇದೆ. ಅವುಗಳನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೆ. ಬಹುಶಃ ಅದಕ್ಕೆ ನಾನು ಇಲ್ಲಿದೆ ವೀಕ್‌ ಆದೆ ಅನಿಸುತ್ತಿದೆ. ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ನನಗೆ ಹೆಲ್ತ್ ಕೈಕೊಟ್ಟಿತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ' ಎಂದು ಶ್ಯಾಮ್ ಮನೆಯಿಂದ ಹೊರಕ್ಕೆ ಬಂದಾಗ ಹೇಳಿದ್ದರು. ಹೊರಗಡೆ ಪಟಪಟ ಎಂದು ಮಾತನಾಡುವ ಸ್ನೇಕ್​ ಶ್ಯಾಮ್​ ಅವರಿಗೆ ಹೆಚ್ಚು ದಿನ ಬಿಗ್​ಬಾಸ್​ನಲ್ಲಿ ಉಳಿಯಲು ಕಾರಣವಾಗದೇ ಇದ್ದುದು ಏನು ಎಂಬ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ.

ಇನ್ನು, ಗೌರೀಶ್​ ಅಕ್ಕಿ. ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಯಿಂದ ಎರಡೇ ವಾರಕ್ಕೆ ಔಟ್​ ಆದರು. ಟೀಮ್ ಜೊತೆ ಇದ್ದ ಗೌರೀಶ್​ ಆಟವಾಡಲು ಮುಂದೇ ಬರಲಿಲ್ಲ. ಉಸ್ತುವಾರಿಯಾಗಿಯೇ ಉಳಿದು ಬಿಟ್ರು. ಹೀಗಾಗಿ ಗೌರೀಶ್​ ಅಕ್ಕಿ ಮನೆ ಮಂದಿಯ ಈಸಿ ಟಾರ್ಗೆಟ್​ ಆಗಿ ಬಿಟ್ರೂ. ಪ್ರೇಕ್ಷಕರಿಂದಲೂ ಕಡಿಮೆ ವೋಟ್​ ಬಂದ ಹಿನ್ನೆಲೆ ಗೌರೀಶ್ ಅಕ್ಕಿ ಬಿಗ್​ ಬಾಸ್​ ಮನೆಯಿಂದ ಹೊರಬರಲು ಕಾರಣ ಎನ್ನಲಾಗಿತ್ತು. ಇದಕ್ಕೆ ಈಗ ಗೌರೀಶ್​ ಅವರು ಕೊಟ್ಟಿರುವ ಪ್ರತಿಕ್ರಿಯೆ ಏನು? ಅದೇ ರೀತಿ ಕಿರುತೆರೆ ನಟಿ ಭಾಗ್ಯಶ್ರೀ ಕೂಡ ಕೆಲವೇ ದಿನಗಳಲ್ಲಿ ಮನೆಯಿಂದ ಔಟ್​ ಆದರು. ಅವರು ತಮ್ಮ ಬಿಗ್​ಬಾಸ್​ ಜರ್ನಿಯ ಬಗ್ಗೆ ಏನು ಹೇಳುತ್ತಿದ್ದಾರೆ?

Tap to resize

Latest Videos

ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಕಲರ್ಸ್​ ಕನ್ನಡ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಮೂವರು ಇದೀಗ ಮಾತನಾಡಿದ್ದಾರೆ. ಎಷ್ಟೊಂದು ಡೈಲಾಗ್​ ಹೇಳುವ ಸ್ನೇಕ್​ ಶ್ಯಾಮ್​ ಅವರು ಬಿಗ್​ಬಾಸ್​ಮನೆಯಲ್ಲಿ ಏಕೆ ಮಾತನಾಡಲಿಲ್ಲ ಎಂಬ ಪ್ರಶ್ನೆಗೆ ಸ್ನೇಕ್​ ಶ್ಯಾಮ್​ ಅವರು, ನಾನು ತುಂಬಾ ಚೆನ್ನಾಗಿಯೇ ಮಾತನಾಡುವವ. ಆದರೆ ಬಿಗ್​ಬಾಸ್​ನಿಂದ ಯಾವಾಗ ಕರೆ ಬಂದಿತ್ತೋ, ಆಗಲೇ ಮಗಳು ವಾರ್ನ್​ ಮಾಡಿ ಕಳುಹಿಸಿದ್ದಳು.   ಡಬಲ್​ ಮೀನಿಂಗ್​, ಪೋಲಿ ಜಾಸ್ತಿ ಮಾತನಾಡಬೇಡ. ಹೆಚ್ಚು ಏನೇನೋ ಹೇಳಲು ಹೋಗಬೇಡ, ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿಯಾ ಎಂದಿದ್ದಳು. ಅದೇ ನನ್ನ ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು. ಅದಕ್ಕೇ ಮಾತನಾಡಲಿಲ್ಲ ಎಂದರು.
 
ಇನ್ನು ಟಿವಿ ಡಿಬೇಟ್​ಗಳಲ್ಲಿ ಜಾಸ್ತಿ ಮಾತನಾಡುವ ಗೌರಿಶ್​ ಅಕ್ಕಿ ಅವರಿಗೂ ಮೌನವೇ ಬಿಗ್​ಬಾಸ್​ ಮನೆಯಲ್ಲಿ ಶತ್ರುವಾಗಿದೆ. ನಾನು ಹೆಚ್ಚು ಮಾತನಾಡುವುದು, ಜಗಳವಾಡುವುದು ಮಾಡುತ್ತಿರಲಿಲ್ಲ. ಸಮಾಧಾನಿ ಆಗಿದ್ದರೆ ಏನೂ ಕ್ರಿಯೇಟ್​ ಆಗುವುದಿಲ್ಲ ಎನ್ನುವ ಮೂಲಕ ಬಿಗ್​ಬಾಸ್​ಗೆ ಬೇಕಾಗಿರುವುದು ಎಂಥ ವ್ಯಕ್ತಿಗಳು ಎಂಬ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ. ಇನ್ನು ಕಿರುತೆರೆ ನಟಿ ಭಾಗ್ಯಶ್ರೀ ಅವರು ತಾವು ನಟಿಯಾಗಿ ಸಾಕಷ್ಟು ಹೆಸರು ಮಾಡಿದ್ದರೂ, ಬಿಗ್​ಬಾಸ್​ ತಮ್ಮನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯಿತು ಎಂದಿದ್ದಾರೆ. ಮಗನ ಶಾಲೆಗೆ ಹೋದಾಗ 2-3ನೇ ಕ್ಲಾಸ್​ ಮಕ್ಕಳೂ ಬಿಗ್​ಬಾಸ್​ ಬಗ್ಗೆ ಮಾತನಾಡುವುದು ನೋಡಿದ್ರೆ ಅವರೂ ಈ ಷೋ ನೋಡ್ತಾರಾ ಎಂದು ಖುಷಿಯಾಯಿತು ಎಂದರು. 

ಡ್ರೋನ್​ ಪ್ರತಾಪ್​ಗೆ ಹುಷಾರು ತಪ್ಪಿದ್ದೇಕೆ? ಬಿಗ್​ಬಾಸ್​ ಮನೆಯಲ್ಲಿ ಹೇಳಿದ್ದೇನು, ಈಗ ಹೇಳ್ತಿರೋದೇನು?

click me!