ಬಿಗ್‌ಬಾಸ್ ಸ್ಪರ್ಧಿ ಮೇಲೆ ಗೆಳೆಯನಿಂದಲೇ ಅತ್ಯಾಚಾರ,ಠಾಣೆಯಲ್ಲಿ ದಾಖಲಾಯಿತು ದೂರು!

Published : Jan 31, 2024, 04:55 PM IST
ಬಿಗ್‌ಬಾಸ್ ಸ್ಪರ್ಧಿ ಮೇಲೆ ಗೆಳೆಯನಿಂದಲೇ ಅತ್ಯಾಚಾರ,ಠಾಣೆಯಲ್ಲಿ ದಾಖಲಾಯಿತು ದೂರು!

ಸಾರಾಂಶ

ಬಿಗ್‌ಬಾಸ್ ರಿಲಿಯಾಲಿಟಿ ಶೋ ಸ್ಪರ್ಧಿ ಹಾಗೂ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಗೆಳೆಯನಿಂದಲೇ ಅತ್ಯಾಚಾರವಾಗಿರುವುದಾಗಿ ದೂರು ದಾಖಲಿಸಿದ್ದಾಳೆ. ಇದೀಗ ಈ ಆರೋಪ ಗಂಭೀರ ಸ್ವರೂಪ ಪಡೆಯುತ್ತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೆಹಲಿ(ಜ.31) ರಿಯಾಲಿಟಿ ಶೋಗಳ ಪೈಕಿ ಬಿಗ್‌ಬಾಸ್ ಹಲವು ಭಾಷೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಅದರಲ್ಲೂ ಹಿಂದಿ ಹಾಗೂ ಕನ್ನಡ ಭಾಷೆಯ ಬಿಗ್‌ಬಾಸ್ ಭಾರಿ ವೀಕ್ಷಕರನ್ನು ಸೆಳೆಯುವ ಮೂಲಕ ಕೆಲ ದಾಖಲೆ ಬರೆದಿದೆ. ಇದೇ ಬಿಗ್‌ಬಾಸ್ ಹಾಗೂ ಬಿಗ್‌ಬಾಸ್ ಸ್ಪರ್ಧಿಗಳು ಹಲವು ವಿವಾದಕ್ಕೂ ಕಾರಣವಾಗಿದ್ದಾರೆ.ಇದೀಗ ಹಿಂದಿ ಬಿಗ್‌ಬಾಸ್ 11ನೇ ಆವೃತ್ತಿಯ ಸ್ಪರ್ಧಿ ಮೇಲೆ ಅತ್ಯಾಚಾರವಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಖುದ್ದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಹಿಳಾ ಸ್ಪರ್ಧಿ, ತನ್ನ ಗೆಳೆಯನೇ ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದಾಳೆ. 

11ನೇ ಆವೃತ್ತಿ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ದಕ್ಷಿಣ ದೆಹಲಿಯ ಟೈಗ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ತನ್ನ ಆಪ್ತ ಗೆಳೆಯನ ವಿರುದ್ಧವೇ ಆರೋಪ ಮಾಡಿದ್ದಾಳೆ. ಹೀಗಾಗಿ ಈ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿದೆ.

ಸಿಲ್ಕ್ ಸ್ಮಿತಾನ್ನ ಹತ್ತು ಹುಡುಗ್ರು ಎತ್ತಾಕ್ಕೊಂಡು ಹೋಗಿದ್ರಂತೆ; ಸಾಯೋ ಮೊದ್ಲು ಕನ್ನಡದ ಖ್ಯಾತ ನಟರಿಗೆ ಕಾಲ್ ಮಾಡಿದ್ರಂತೆ!?

2023ರಲ್ಲಿ ತನ್ನ ಮೇಲೆ ದೆಹಲಿಯ ಫ್ಲ್ಯಾಟ್ ಒಂದರಲ್ಲಿ ಗೆಳೆಯ ಅತ್ಯಾಚಾರ ಎಸಗಿದ್ದಾನೆ. ಈ ನೋವಿನಿಂದ ಹೊರಬರಲು ಇಷ್ಟು ದಿನ ತೆಗೆದುಕೊಂಡಿದ್ದೇನೆ. ಇದೀಗ ಧೈರ್ಯ ಮಾಡಿ ದೂರು ದಾಖಲಿಸಿದ್ದೇನೆ ಎಂದು ಬಿಗ್‌ಬಾಸ್ ಮಹಿಳಾ ಸ್ಪರ್ಧಿ ಹೇಳಿದ್ದಾರೆ. ಬಿಗ್‌ಬಾಸ್ 11ನೇ ಆವೃತ್ತಿಯಲ್ಲಿ ಮಿಂಚಿದ ಈ ಮಹಿಲಾ ಸ್ಪರ್ಧಿ ಬಳಿಕ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾಳೆ. ಆದರೆ ಕಳೆದ ಕೆಲ ದಿನದಿಂದ ಸೈಲೆಂಟ್ ಆಗಿದ್ದ ಈ ಸ್ಪರ್ಧಿ ಇದೀಗ ಏಕಾಏಕಿ ಗಂಭೀರ ಆರೋಪದ ಮೂಲಕ ಮತ್ತೆ ಮುನ್ನಲೆಗೆ ಬಂದಿದ್ದಾಳೆ. ಈ ಹಿಂದೆ ಇದೇ ರೀತಿ ಕೆಲ ಆರೋಪಗಳನ್ನು ಮಾಡಿ ಸುದ್ದಿಯಾಗಿದ್ದಳು. 

ಬಿಗ್‌ಬಾಸ್ ಮಹಿಳಾ ಸ್ಪರ್ಧಿಯ ದೂರಿನ ಕುರಿತು ಸಾಮಾಜಿಕ ಜಾಲತಾಣಧಲ್ಲಿ ಭಾರಿ ಚರ್ಚೆಯಾಗುತ್ತಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಹಲವರು ಮಹಿಳಾ ಬಿಗ್‌ಬಾಸ್ ಪರ ಧನಿಗೂಡಿಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಡಲು ಧೈರ್ಯ ತುಂಬಿದ್ದಾರೆ. ಇದೇ ವೇಳೆ ಹಲವರು ಬಿಗ್‌ಬಾಸ್ ಸ್ಪರ್ಧಿಯ ವಿರುದ್ದ ತಿರುಗಿ ಬಿದ್ದಿದ್ದಾರೆ. ಪ್ರಚಾರಕ್ಕಾಗಿ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.\

ಹಾವೇರಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಸಿಎಂ ಬರ್ತಿದ್ದಾರೆ ಅಂತ ಸಂತ್ರಸ್ತೆ ಶಿಫ್ಟ್ ಮಾಡಿದ್ರಾ..?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?