ʼಲಕ್ಷ್ಮೀ ಬಾರಮ್ಮʼ ನಟಿ ಭೂಮಿಕಾ ರಮೇಶ್‌, ಅಭಿನವ್‌ ವಿಶ್ವನಾಥನ್‌ ಪ್ರೀತಿಸ್ತಿದ್ದಾರಾ? ಶೋನಲ್ಲಿ ಸತ್ಯ ಬಯಲು!

Published : Mar 12, 2025, 09:29 AM ISTUpdated : Mar 12, 2025, 11:47 AM IST
ʼಲಕ್ಷ್ಮೀ ಬಾರಮ್ಮʼ ನಟಿ ಭೂಮಿಕಾ ರಮೇಶ್‌, ಅಭಿನವ್‌ ವಿಶ್ವನಾಥನ್‌ ಪ್ರೀತಿಸ್ತಿದ್ದಾರಾ? ಶೋನಲ್ಲಿ ಸತ್ಯ ಬಯಲು!

ಸಾರಾಂಶ

Bhoomika Ramesh And Abhinav Vishwanathan: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ‌ ನಟಿಸುತ್ತಿರುವ ಭೂಮಿಕಾ ರಮೇಶ್ ಹಾಗೂ ʼನನ್ನರಸಿ ರಾಧೆʼ ಧಾರಾವಾಹಿ ನಟ ಅಭಿನವ್‌ ವಿಶ್ವನಾಥನ್‌ ಪ್ರೀತಿ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಈ ಜೋಡಿ ಉತ್ತರ ಕೊಟ್ಟಿದೆ. 

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಗಮನಸೆಳೆಯುತ್ತಿರುವ ನಟಿ ಭೂಮಿಕಾ ರಮೇಶ್‌ ಅವರೀಗ ತೆಲುಗಿನ ʼಮೇಘ ಸಂದೇಶಂʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ʼನನ್ನರಸಿ ರಾಧೆʼ ಧಾರಾವಾಹಿ ನಟ ಕೂಡ ಅಭಿನಯಿಸುತ್ತಿದ್ದಾರೆ. ಈ ಜೋಡಿ ಜಸ್ಟ್ ಫ್ರೆಂಡ್ಸ್‌ ಆಗಿ ಉಳಿದುಕೊಂಡಿದ್ಯಾ? ಅಥವಾ ಪ್ರೇಮಿಗಳಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ರಿಯಾಲಿಟಿ ಶೋನಲ್ಲಿ ಇವರಿಬ್ಬರು ಉತ್ತರ ಕೊಟ್ಟಿದ್ದಾರೆ.

ಲವ್‌ ಮಾಡ್ತಿದ್ದಾರಾ? 
ʼಮೇಘ ಸಂದೇಶಂʼ ಧಾರಾವಾಹಿಯಲ್ಲಿ ಭೂಮಿಕಾ ರಮೇಶ್‌ ಅವರು ಭೂಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗಗನ್‌ ಪಾತ್ರದಲ್ಲಿ ಅಭಿನವ್‌ ವಿಶ್ವನಾಥನ್‌ ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಆಚೆ ಕೂಡ ಈ ಜೋಡಿ ಆತ್ಮೀಯತೆಯಿಂದ ಇದೆ. ಇದನ್ನು ನೋಡಿ ಕೆಲವರು ಇವರಿಬ್ಬರು ಪ್ರೀತಿ ಮಾಡ್ತಿರಬಹುದು ಎಂದು ಭಾವಿಸಿದ್ದರು. 

BIGG BOSS 10 ಟ್ವಿಸ್ಟ್​ ಟ್ವಿಸ್ಟ್​... ಯಾರು ಒಳಗೆ? ಯಾರು ಹೊರಗೆ? ಪ್ರೇಕ್ಷಕರಿಂದ ವೋಟಿಂಗ್​!

ರಿಯಾಲಿಟಿ ಶೋನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಏನು? 
ರವಿವಾರ ರಾತ್ರಿ 9 ಗಂಟೆಗೆ  ಜೀ ತೆಲುಗು ವಾಹಿನಿಯಲ್ಲಿ ʼಸೂಪರ್‌ ಸೀರಿಯಲ್‌ ಚಾಫಿಯನ್‌ಶಿಪ್‌ʼ ಶೋ ಪ್ರಸಾರ ಆಗುವುದು. ಅದರಲ್ಲಿ ʼಮೇಘ ಸಂದೇಶಂʼ  ಜೊತೆಗೆ ಬೇರೆ ಧಾರಾವಾಹಿ ತಂಡ ಕೂಡ ಭಾಗವಹಿಸಿದೆ. ಆ ವೇಳೆ ಅಭಿನವ್‌ ಹಾಗೂ ಭೂಮಿಕಾಗೆ “ನೀವು ಲವ್ವರ್ಸ್?‌ ಅಥವಾ ಸ್ನೇಹಿತರಾ? ಸತ್ಯ ಹೇಳಿ” ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಅಭಿನವ್‌ ಅವರು “ಭೂಮಿಕಾ ನನಗೆ ಸ್ನೇಹಿತೆಗಿಂತೆ ಹೆಚ್ಚು” ಎಂದು ಹೇಳಿದ್ದಾರೆ. ಆಗ ನಿರೂಪಕರು, “ಈ ರೀತಿ ಸ್ನೇಹ ಇದ್ದವರನ್ನೇ ಪತ್ನಿಯಾಗಿ ಮಾಡಿಕೊಳ್ಳಬೇಕು” ಎಂದು ಹೇಳಿದ್ದರು.

ಹಾರ ಬದಲಾಯಿಸಿಕೊಳ್ತಾರಾ? 
“ನಿಮ್ಮ ಮಧ್ಯೆ ನಿಜವಾಗಿಯೂ ಪ್ರೀತಿ ಇದ್ರೆ ಹಾರ ಬದಲಾಯಿಸಿಕೊಳ್ಳಿ” ಎಂದು ಪ್ರಶ್ನೆ ಮಾಡಿದ್ದರು. ಆಗ ಇವರಿಬ್ಬರು ಏನು ಮಾಡುತ್ತಾರೆ ಎನ್ನೋದನ್ನು ರವಿವಾರದ ಎಪಿಸೋಡ್‌ನಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿ ಭಾರೀ ಕುತೂಹಲವನ್ನು ಸೃಷ್ಟಿ ಮಾಡಿದೆ. 

Kannada Serial TRP 2025: ರೆಕಾರ್ಡ್‌ ಸೃಷ್ಟಿಸಿದ್ದ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್!‌ ಯಾವುದು?

ಅಭಿನವ್‌ರನ್ನು ಫಾಲೋ ಮಾಡ್ತಿರೋ ಭೂಮಿಕಾ!
ಭೂಮಿಕಾ ರಮೇಶ್‌ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಇದ್ದಾರೆ. ಭೂಮಿಕಾ ಅವರು ಕೇವಲ ನಾಲ್ಕು ಜನರನ್ನು ಫಾಲೋ ಮಾಡುತ್ತಿದ್ದು, ಅವರಲ್ಲಿ ಮೂವರು ಕುಟುಂಬದ ಸದಸ್ಯರಾದರೆ, ಇನ್ನೋರ್ವರು ಅಭಿನವ್‌ ಎಂದು ಹೇಳಬಹುದು. ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯ ಯಾವ ಕಲಾವಿದರನ್ನು ಕೂಡ ಅವರು ಫಾಲೋ ಮಾಡ್ತಿಲ್ಲ. ಈ ನಡೆ ಸಾಕಷ್ಟು ಅನುಮಾನ ಸೃಷ್ಟಿಸಿದೆ.

ಕೊನೆಗೂ ವೀಕ್ಷಕರ ಬಹುದಿನದ ಆಸೆ ಈಡೇರಿಸಿದ ʼಭಾಗ್ಯಲಕ್ಷ್ಮೀʼ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ತಂಡ!

ಕಿರುತೆರೆಯಲ್ಲಿ ಇವರಿಬ್ಬರು ಆಕ್ಟಿವ್!‌  
ಅಂದಹಾಗೆ ಭೂಮಿಕಾ ರಮೇಶ್‌ ಅವರು ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸೋದಕ್ಕೂ ಮುನ್ನ ಕನ್ನಡ, ತೆಲುಗು ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಭಿನವ್‌ ವಿಶ್ವನಾಥನ್‌ ಅವರು ಉತ್ತರ ಭಾರತದವರಾದರೂ ಕೂಡ ಕನ್ನಡ ಕಲಿತು, ʼನನ್ನರಸಿ ರಾಧೆʼ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ʼತ್ರಿಪುರ ಸುಂದರಿʼ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!