
ಶ್ರೀರಸ್ತು ಶುಭಮಸ್ತು ಸೀರಿಯಲ್ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ತನ್ನ ಅಕ್ಕನ ಸಾವಿಗೆ ಮಾಧವ್‌ನೇ ಕಾರಣ ಎನ್ನುವುದು ಶಾರ್ವರಿ ಆರೋಪ. ಆದರೆ ತನ್ನ ಪತಿ ಹೀಗೆ ಮೋಸ ಮಾಡಲು ಸಾಧ್ಯವಿಲ್ಲ, ಅದರಲ್ಲೇನೋ ಆಗಬಾರದ್ದು ಆಗಿದೆ ಎಂದು ನಂಬಿದವಳು ತುಳಸಿ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.
ಇದೀಗ ಇನ್ನೊಂದು ಹಂತಕ್ಕೂ ಸೀರಿಯಲ್ ತಲುಪಿದ್ದು, ಸಮರ್ಥ್, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. ಅದೇ ಇನ್ನೊಂದೆಡೆ, ಅತ್ತೆಯ ಮಾತು ಕೇಳಿ ತಂಗಿ ಪೂರ್ಣಿ ಹಾಗೂ ಅತ್ತೆ ತುಳಸಿ ಕಂಡರೆ ಉರಿಬೀಳುತ್ತಿದ್ದ, ಇಬ್ಬರಿಗೂ ಹಾನಿ ಉಂಟು ಮಾಡಲು ಅತ್ತೆಯ ಜೊತೆ ಸ್ಕೆಚ್ ಹಾಕುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾಳೆ. ಇನ್ನೇನು ಇದೆ ಬಾಕಿ? ಎಲ್ಲವೂ ಬಹುತೇಕ ಮುಗಿದೇ ಹೋಗಿದೆ. ಈಗೇನಿದ್ದರೂ ಶಾರ್ವರಿಯ ಕುತಂತ್ರ ಸಾಕ್ಷಿ ಸಹಿತ ಬಯಲಾಗಿ ಆಕೆ ಜೈಲುಪಾಲು ಆಗಬೇಕಿರುವುದು ಮಾತ್ರ ಉಳಿದಿದೆ. ಇದಾಗಲೇ ಕಾರು ಅಪಘಾತ ಮಾಡಿರುವುದು ಶಾರ್ವರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಾಗಿದೆ.
ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ ಶ್ರೀರಸ್ತು ಶುಭಮಸ್ತು ಬೆಡಗಿಯರು: ಡಾನ್ಸ್ ನೋಡಿ ಫ್ಯಾನ್ಸ್ ಸುಸ್ತು!
ಅವೆಲ್ಲಾ ಆದ ಬಳಿಕ ಸೀರಿಯಲ್ ಮತ್ತಷ್ಟು ಎಳೆಯಲು ಯಾವುದೇ ಕಾರಣಗಳೂ ಇಲ್ಲ ಎನ್ನುವುದು ವೀಕ್ಷಕರ ಅಭಿಮತ. ಇದೀಗ ಕುತೂಲಹದ ಹಂತದಲ್ಲಿ ತುಳಸಿಯ ಹೊಟ್ಟೆಯಲ್ಲಿರುವ ಮಗು ಅಪಾಯದಲ್ಲಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಹೇಗಾದರೂ ಮಾಡಿ ಮಗುವನ್ನು ಉಳಿಸಿ, ಮಕ್ಕಳಾಗದ ತನ್ನ ಸೊಸೆ ಪೂರ್ಣಿಯ ಕೈಗಿತ್ತು ಕೊಡಬೇಕು ಎನ್ನುವುದು ತುಳಸಿಯ ಅಭಿಮತ. ಮಗುವನ್ನು ಉಳಿಸಲು ಆಕೆ ತನ್ನ ಪ್ರಾಣವನ್ನೇ ಕೊಡಲು ಸಿದ್ಧಳಾಗಿದ್ದಾಳೆ. ಕಥೆ ಈ ರೀತಿ ಸಾಗುತ್ತಲೇ ಇರುವಾಗ ಈಗ ಒಂದು ಕುತೂಹಲದ ಪ್ರೊಮೋ ಬಿಡುಗಡೆಯಾಗಿದೆ.
ಇದರಲ್ಲಿ, ಶಾರ್ವರಿ ಬಿಟ್ಟು ಉಳಿದವರೆಲ್ಲವೂ ಖುಷಿಯಿಂದ ಫೋಟೋಶೂಟ್ ಮಾಡಿಸಿಕೊಂಡು ಇದೊಂದು ಸ್ಮರಣೀಯ ದಿನ ಎನ್ನುತ್ತಿದ್ದಾರೆ. ದೀಪಿಕಾ ಕೂಡ ಬದಲಾಗಿರುವುದನ್ನು ಇದರಲ್ಲಿ ನೋಡಬಹುದು. ಅಕ್ಕ-ತಂಗಿ ಇಬ್ಬರನ್ನೂ ಕರೆದು ತುಳಸಿ ಈಗ ನಿಮ್ಮಿಬ್ಬರಲ್ಲಿ ಒಬ್ಬರು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು ಎನ್ನುತ್ತಾಳೆ. ಅದಕ್ಕೆ ಪೂರ್ಣಿ ನೀವಿರುವಾಗ ನಾವ್ಯಾಕೆ ನೋಡಿಕೊಳ್ಳಬೇಕು ಎಂದು ಕೇಳುತ್ತಾಳೆ. ಅದಕ್ಕೆ ತುಳಸಿ, ಇನ್ನು ಮುಂದೆ ನಾನಿರುವುದಿಲ್ಲವಲ್ಲ ಎನ್ನುತ್ತಾಳೆ. ಇದು ತುಳಸಿ ಮಗುವನ್ನು ಹೆತ್ತು ಸಾಯುವ ಸೂಚನೆ ತೋರಿಸುತ್ತಿದೆ ಎನ್ನುವುದು ನೆಟ್ಟಿಗರ ಅಭಿಮತ. ಶೇಕಡಾ 90ರಷ್ಟು ಸೀರಿಯಲ್ ಮುಗಿದಿದೆ. ಇದೀಗ ಅಂತಿಮ ಹಂತದಲ್ಲಿ ಟ್ವಿಸ್ಟ್ ತಂದು ತುಳಸಿಯನ್ನೇ ಸಾಯಿಸಿಬಿಡುತ್ತಾರೆ ಎನ್ನುವ ಆತಂಕವೂ ವೀಕ್ಷಕರಲ್ಲಿ ಕಾಡುತ್ತಿದೆ. ಇಷ್ಟು ದಿನ ತುಳಸಿ ಗರ್ಭಿಣಿ ಎಂದು ತಿಳಿದಾಗ, ಬಾಯಿಗೆ ಬಂದಂತೆ ಬೈಯುತ್ತಿದ್ದ ನೆಟ್ಟಿಗರು ಕೂಡ ತುಳಸಿ ಸಾಯುವುದು ಬೇಡ, ಆಕೆಯನ್ನು ದಯವಿಟ್ಟು ಸಾಯಿಸಬೇಡಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಮತ್ತೆ ಎಳೆದು ಬೇರೆ ಟ್ವಿಸ್ಟ್ ಕೊಡ್ತಾರಾ ಅಥವಾ ಮುಗಿಸುತ್ತಾರಾ ಕಾದು ನೋಡಬೇಕಿದೆ.
ರಿಯಲ್ ಲೈಫ್ ಲವ್ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.