ಸಿಂಪಥಿಗೋಸ್ಕರ್ ವರ್ಷ ಕಾವೇರಿ ಹೊಸ ಗೇಮ್ ಶುರು? ಕೈ ಹಿಡಿಯುವ ಹುಡುಗನ ಬಗ್ಗೆ ಚಿಂತಿಸುತ್ತಿರುವ ರೀಲ್ಸ್ ರಾಣಿ!

Published : Sep 14, 2024, 11:00 AM ISTUpdated : Sep 14, 2024, 11:04 AM IST
ಸಿಂಪಥಿಗೋಸ್ಕರ್ ವರ್ಷ ಕಾವೇರಿ ಹೊಸ ಗೇಮ್ ಶುರು? ಕೈ ಹಿಡಿಯುವ ಹುಡುಗನ ಬಗ್ಗೆ ಚಿಂತಿಸುತ್ತಿರುವ ರೀಲ್ಸ್ ರಾಣಿ!

ಸಾರಾಂಶ

ಜೀವ ಬೆದರಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ವರ್ಷ ಕಾವೇರಿ. ಪೋಷಕರ ನಂಬಿಕೆ ಮುಖ್ಯವಾಗುತ್ತದೆ ಎಂದ ರೀಲ್ಸ್ ರಾಣಿ

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿರುವ ರೀಲ್ಸ್ ರಾಣಿ, ಮೇಕಪ್ ಸುಂದರಿ ವರ್ಷ ಕಾವೇರಿ ತಮ್ಮ ಮಾಜಿ ಪ್ರಿಯಕರನ ವಿರುದ್ಧ ದೂರು ನೀಡಿದ್ದರು. ಒಂದೇ ದಿನದಲ್ಲಿ ಕಂಪ್ಲೇಂಟ್ ವಾಪಸ್ ಪಡೆದಿದ್ದಾರೆ. ಹೀಗೆ ಮಾಡಿದ್ದು ಸಿಂಪಥಿ ಗಿಟ್ಟಿಸಿಕೊಳ್ಳಲು ಎಂದು ಜನರು ಕಾಮೆಂಟ್ ಮಾಡುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. 

'ನನ್ನ ಬೆದರಿಕೆ ಹಾಕಿದ್ದರು...ಒಂದು ವರ್ಷಗಳ ಹಿಂದೆ ಹೇಳಿದ ಮಾತುಗಳನ್ನು ನಾನು ಕಂಪ್ಲೇಂಟ್‌ನಲ್ಲಿ ಮೆನ್ಶನ್ ಮಾಡಿದ್ದೀನಿ. ಆ ಮಾತುಗಳನ್ನು ಕೇಳಿ ನಾನು ಡಿಪ್ರೆಶನ್‌ಗೆ ಜಾರಿದ್ದೆ, ಈಗ ಅದರಿಂದ ಹೊರ ಬಂದಿದ್ದೀನಿ. ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿಲ್ಲ ಆದರೆ ಮುಂದೆ ಯಾರನ್ನೇ ಮದುವೆ ಮಾಡಿಕೊಂಡರೂ ಹೀಗೆ ಹಾಗೆ ಮಾಡುತ್ತೀನಿ ಎಂದು ಬೆದಕರಿಗೆ ಹಾಕಿದ್ದರು. ಕಂಪ್ಲೇಂಟ್ ಕೊಟ್ಟ ಮೇಲೆ ಆ ವ್ಯಕ್ತಿಯನ್ನು ಕರೆಸಿದ್ದರು ನನ್ನ ಮುಂದೆ ಕೆಲವೊಂದು ಡಿಲೀಟ್ ಮಾಡಿದ್ದರು, ಅವರ ಫೋನ್‌ಗಳಲ್ಲಿ ಇರುವ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಒಂದೆರಡು ಫೋಟೋಗಳು ವಿಡಿಯೋಗಳು ಇದೆ ಅದು ಡಿಲೀಟ್ ಮಾಡಬೇಕಿದೆ. ಅಲ್ಲಿ ನಾನು ಕಂಪ್ಲೇಂಟ್ ವಾಪಸ್ ತೆಗೆದುಕೊಂಡು ಬಂದೆ ಏಕೆಂದರೆ ಮುಂದೆ ತೊಂದರೆ ಕೊಡುವುದಿಲ್ಲ ಎಂದು ಅವರು ಕೂಡ ಬರೆದುಕೊಟ್ಟು ಸೈನ್ ಮಾಡಿದ್ದರು. ಪೊಲೀಸ್ ಸ್ಟೇಷನ್‌ನಲ್ಲಿ ಮಾತುಕತೆಯಲ್ಲಿ ಬ್ಯುಸಿಯಾಗಿದ್ದರೆ ಆದರೆ ಅಷ್ಟರಲ್ಲಿ ಮೀಡಿಯಾದಲ್ಲಿ ತಪ್ಪಾಗಿ ವೈರಲ್ ಆಗಿದೆ. ತಕ್ಷಣವೇ ಕ್ಲಾರಿಟಿ ಕೊಡುತ್ತೀನಿ ಎಂದು ನಾನು ಸ್ಟೇಟಸ್ ಹಾಕಿದ್ದೆ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರಿಗೆ ಇದು ಅರ್ಥವಾಗುತ್ತಿದೆ, ನನ್ನ ಕಂಡರೆ ಆಗದವರು ಮಾತ್ರ ಮತ್ತೆ ನಾನು ಸಿಂಪಥಿ ಗಿಟ್ಟಿಸಿಕೊಳ್ಳಲು ಹೊಸ ನಾಟಕ ಶುರು ಮಾಡಿದ್ದೀನಿ ಎಂದು ಹಬ್ಬಿಸುತ್ತಿದ್ದಾರೆ. ನನ್ನ ಲೈಫ್‌ನಲ್ಲಿ ಏನೂ ಇಲ್ಲ ಅಂತ ಮತ್ತೆ ಏನೋ ಶುರು ಮಾಡಿಕೊಂಡಿದ್ದಾಳೆ ಅಂತಿದ್ದಾರೆ ಆದರೆ ನಿಜಕ್ಕೂ ಜೀವನದಲ್ಲಿ ತುಂಬಾ ಖುಷಿಯಾಗಿದ್ದೀನಿ ತುಂಬಾ ಇದೆ ಸದ್ಯಕ್ಕೆ ಜೀವನ ತುಂಬಾ ಚೆನ್ನಾಗಿದೆ. ನನ್ನ ಭವಿಷ್ಯ ಚೆನ್ನಾಗಿ ಇರಲಿ ಎಂದು ಈ ಹೆಜ್ಜೆ ತೆಗೆದುಕೊಂಡಿರುವುದು' ಎಂದ ವರ್ಷ ಕಾವೇರಿ ಮಾತನಾಡಿದ್ದಾರೆ. 

ಒಂದು ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಂಡ ದೀಪಿಕಾ ದಾಸ್; ದಯವಿಟ್ಟು ನನ್ನಂತೆ ಮಾಡಬೇಡಿ ಎಂದ ನಟಿ!

ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಇರುವುದು..ತಂದೆ ತಾಯಿ ಇದ್ದಾರೆ...ಇಷ್ಟು ಚಿಕ್ಕ ವಯಸ್ಸಿಗೆ ಇಡೀ ಮನೆ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿರುವೆ. ಇಲ್ಲಿ ನನಗೆ ಯಾರ ಸಿಂಪಥಿನೂ ಬೇಡ ಆದರೆ ನನ್ನಂತೆ ಸ್ಟ್ರಾಂಗ್ ಆಗಿ ನಿಂತುಕೊಳ್ಳಬೇಕು ತೋರಿಸಿಕೊಡುತ್ತಿರುವೆ. ಮಾಧ್ಯಮಗಳಲ್ಲಿ ಏನೇ ಬರಲಿ ನಾವು ಅದನ್ನು ನಂಬುವುದಿಲ್ಲ ನಿನ್ನ ಮೇಲೆ ನಂಬಿಕೆ ಇದೆ ಎಂದು ಅಪ್ಪ ಅಮ್ಮ ಹೇಳಿದ್ದರು. ಮಾತಿನಲ್ಲಿ ಏನೇ ಹೇಳಬಹುದು ಆದರೆ ಅವರ ಕಣ್ಣಿನಲ್ಲಿ ಆತಂಕ ಕಾಣಿಸುತ್ತದೆ ಎಂದು ಕಿರಿಕ್ ಕೀರ್ತಿ ಸಂದರ್ಶನದಲ್ಲಿ ವರ್ಷ ಹೇಳಿದ್ದಾರೆ. 

ನನಗೆ ಜೀವ ಬೆದರಿಕೆ ಹಾಕಿರುವುದು ನಿಜ, ಈಗಲೂ ತಂದೆ ತಾಯಿಗೆ ಧೈರ್ಯ ಹೇಳುತ್ತಿರುವೆ: ವರ್ಷ ಕಾವೇರಿ

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದನ್ನು ಹ್ಯಾಂಡಲ್ ಮಾಡುವುದು ಕಷ್ಟ. ಏನೇ ತಪ್ಪು ಆದರೂ ಮೊದಲು ಹೆಣ್ಣು ಮಕ್ಕಳ ವಿರುದ್ಧ ಬೆರಳು ಮಾಡಿ ತೋರಿಸುತ್ತಾರೆ. ಮೀಡಿಯಾದಲ್ಲಿ ತೋರಿಸುತ್ತಿರುವುದನ್ನು ನೋಡಿ ನನ್ನ ಮೈಂಡ್ ಡಿಸ್ಟರ್ಬ್ ಆಗುತ್ತಿದೆ. ನನ್ನ ಮೇಲೆ ನಂಬಿಕೆ ಇರಬೇಕಿರುವುದು ನನ್ನ ತಂದೆ ತಾಯಿ, ನಾನು ಮುಂದೆ ಮದುವೆ ಆಗುವವರ ತಂದೆ ತಾಯಿ ಅಷ್ಟೇ ಎಂದಿದ್ದಾರೆ ವರ್ಷ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?
Halli Power Show Winner: ಹಳ್ಳಿ ಪವರ್‌ ಶೋ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆಲ್ಲೋರು ಯಾರು?