
ಕರ್ನಾಟಕದ ಪ್ರಸಿದ್ಧ ಕಿರುತೆರೆ ನಿರೂಪಕಿ ಅನುಶ್ರೀ ಮಾತಿನ ಶೈಲಿ ಕನ್ನಡ ನಾಡಿನ ಜನರ ಹೃದಯಕ್ಕೆ ಹತ್ತಿರವಾಗಿದೆ. ಯಾವುದೇ ವೇದಿಕೆಯಿರಲಿ, ಎಂತಹ ಸಂದರ್ಭವೇ ಇರಲಿ, ಸ್ಕ್ರಿಪ್ಟ್ ಇದ್ದರೂ, ಇದರಿದ್ದರೂ ತಾನೇ ಸ್ವಂತವಾಗಿ ಗಂಟೆಗಟ್ಟಲೆ ಕಾರ್ಯಕ್ರಮನ ನಿರೂಪಣೆ ಮಾಡಿ ನಡೆಸಿಕೊಡುವ ಚಾಕಚಕ್ಯತೆ ಹೊಂದಿದ್ದಾರೆ. ಆದರೆ, ಅನುಶ್ರೀ ನಿರೂಪಣೆ ಜೊತೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದು, ಹಲವು ಸಿನಿಮಾ ನಟ, ನಟಿಯರ ಸಂದರ್ಶನವನ್ನೂ ಮಾಡುತ್ತಿದ್ದಾರೆ. ಹಾಗಾದರೆ, ಅವರ ಯೂಟ್ಯೂಬ್ ಆದಾಯ ಎಷ್ಟಿದೆ ಎಂಬ ಮಾಹಿತಿ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ವಿವರ...
ಆಂಕರ್ ಅನುಶ್ರೀ ಅವರು ಸಾಮಾಜಿಕ ಜಾಲತಾಣ ಯೂಟೂಬ್‌ನಲ್ಲಿ @anushreeanchor ಎಂಬ ಹೆಸರಿನಲ್ಲಿ ಖಾತೆಯನ್ನು ಹೊಂದಿದ್ದಾರೆ. ಈವರೆಗೆ ಅನುಶ್ರೀ ಅವರು 264 ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಜನರ ವೀಕ್ಷಣೆಗೆ ಶೇರ್ ಮಾಡಿಕೊಂಡಿದ್ದಾರೆ. ಅವರ ಚಾನೆಲ್‌ಗೆ 1.05 ಮಿಲಿಯನ್ (10.50 ಲಕ್ಷ) ಸಬ್‌ಸ್ಕ್ರೈಬರ್ಸ್ ಇದ್ದಾರೆ. ಇದರಲ್ಲಿ 219 ಲಾಂಗ್ ಫಾರ್ಮ್ಯಾಟ್ ವಿಡಿಯೋಗಳನ್ನು ಮಾಡಿದ್ದಾರೆ. ಉಳಿದಂತೆ 45 ವಿಡಿಯೋಗಳು ಯೂಟ್ಯೂಬ್ ಶಾರ್ಟ್ ರೀಲ್ಸ್‌ಗಳಿವೆ. ಇನ್ನು ಶಾರ್ಟ್ ರೀಲ್ಸ್‌ಗಳಿಗೆ ಆದಾಯ ಬರುವುದಿಲ್ಲ. ಆದರೆ, ಲಾಂಗ್ ಫಾರ್ಮ್ಯಾಟ್ ವಿಡಿಯೋಗಳಿಗೆ ಯೂಟ್ಯೂಬ್ ವತಿಯಿಂದ ಹಣವನ್ನು ಕೊಡಲಾಗುತ್ತದೆ.
ಅನುಶ್ರೀ ಯೂಟೂಬ್‌ನಲ್ಲಿ ಮಾಡಲಾದ 219 ಲಾಂಗ್ ಫಾರ್ಮ್ಯಾಟ್ ವಿಡಿಯೋಗಳು ಕನಿಷ್ಠ 1 ನಿಮಿಷದಿಂದ 75 ನಿಮಿಷದವರೆಗೆ (1.15 ಗಂಟೆ) ಡೂರೇಷನ್ ಆಧರಿಸಿ (ವಿಡಿಯೋದ ಸಮಯ) ಹಣ ಪಾವತಿ ಮಾಡಲಾಗುತ್ತದೆ. ವಿಡಿಯೋ ಸೈಜ್ ಆಧರಿಸಿ 4 ಭಾಗಗಳನ್ನಾಗಿ ಮಾಡಿ ಹಣ ಹಂಚಿಕೆ ಮಾಡಲಾಗುತ್ತದೆ. ಇನ್ನು 1 ರಿಂದ 4 ನಿಮಿಷಗಳ ಒಳಗಿನ ವಿಡಿಯೋಗಳನ್ನು ಮನರಂಜನಾತ್ಮಕ ಕೆಟಗರಿಯಲ್ಲಿ ಪರಿನಗಣನೆ ಮಾಡಲಾಗುತ್ತದೆ. ಉಳಿದಂತೆ 4 ನಿಮಿಷಕ್ಕಿಂತ ಹೆಚ್ಚಿನ ಸಮಯ ಹೊಂದಿದ ವಿಡಿಯೋಗಳು ಕೇವಲ ಮನರಂಜನಾತ್ಮಕ ವಿಷಯದ ಜೊತೆಗೆ ಗ್ಲ್ಯಾಮರ್ ಮತ್ತು ಲೈಫ್‌ಸ್ಟೈಲ್‌ಗೂ ಸಂಬಂಧಿಸಿದ್ದಾಗಿರುತ್ತವೆ. ಆದ್ದರಿಂದ ವಿಡಿಯೋ ಡೂರೇಷನ್ ಆಧರಿಸಿ ಹಣ ಜನರೇಟ್ ಆಗುತ್ತದೆ.
ಇದನ್ನೂ ಓದಿ: ಆ್ಯಂಕರ್ ಅನುಶ್ರೀ ಮದ್ವೆ ರಿವೀಲ್ ಮಾಡಿಯೇ ಬಿಟ್ರು ಕ್ರೇಜಿಸ್ಟಾರ್ ರವಿಚಂದ್ರನ್! ಹುಡುಗ ಯಾರು?
1ರಿಂದ 4 ನಿಮಿಷ - 102 ಪ್ರೋಮೋ ವಿಡಿಯೋ: ಈ ವಿಡಿಯೋಗಳಿಂದ 10.66 ಮಿಲಿಯನ್ ವೀಕ್ಷಣೆಗಳು ಬಂದಿವೆ. ವಿಡಿಯೋ ಚಿಕ್ಕದಾಗಿದ್ದು, ಮನರಂಜನಾತ್ಮಕ ವಿಡಿಯೋಗಳು ಆಗಿರುವುದರಿಂದ ಇದಕ್ಕೆ ಹಣವನ್ನು ಕಡಿಮೆ ಪಾವತಿ ಮಾಡಲಾಗುತ್ತದೆ. ಸಣ್ಣ ವಿಡಿಯೋಗಳ ಒಂದು ಮಿಲಿಯನ್ ವೀಕ್ಷಣೆಗೆ 20 ಸಾವಿರ ರೂ.ಗಳಂತೆ 2.13 ಲಕ್ಷ ರೂ. ಹಣವನ್ನು ಅನುಶ್ರೀ ಗಳಿಸಿರುತ್ತಾರೆ.
5 ರಿಂದ 15 ನಿಮಿಷಗಳ 25 ವಿಡಿಯೋ: ಅನುಶ್ರೀ ಅವರ ಮಾಧ್ಯಮ ಗಾತ್ರದ ವಿಡಿಯೋಗಳಿಂದ ಒಟ್ಟು 10.7 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ. ಒಂದು ಮಿಲಿಯನ್ ವೀಕ್ಷಣೆಗೆ ಅಂದಾಜು 35 ಸಾವಿರ ರೂ.ಗಳನ್ನು ಯೂಟ್ಯೂಬ್ ನೀಡಲಿದೆ. ಅಂದರೆ ಮೀಡಿಯಂ ಸೈಜ್ ವಿಡಿಯೋಗಳಿಂದ 3.74 ಲಕ್ಷ ರೂ. ಆದಾಯವನ್ನು ಅನುಶ್ರೀ ಗಳಿಸಿರುತ್ತಾರೆ.
15 ರಿಂದ 30 ನಿಮಿಷಗಳ 31 ದೊಡ್ಡ ವಿಡಿಯೋ:
ಈ ಬಿಗ್ ಸೈಜ್ ವಿಡಿಯೋಗಳಿಂದ 32.59 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಈ ಬಿಗ್ ಸೈಜ್ ವಿಡಿಯೋಗಳ 1 ಮಿಲಿಯನ್ ವೀಕ್ಷಣೆಗೆ ಸರಾಸರಿ 55 ಸಾವಿರ ರೂ.ಗಳಂತೆ ಹಣ ಪಾವತಿ ಮಾಡಲಾಗುತ್ತದೆ. ಅಂದರೆ, ಅನುಶ್ರೀ ಅವರು ಮಾಡಿದ ಬಿಗ್ ಸೈಜ್ ವಿಡಿಯೋಗಳಿಗೆ 17.92 ಲಕ್ಷ ರೂ. ಹಣವು ಬಂದಿರಬಹುದು.
30 ರಿಂದ 75 ನಿಮಿಷದ 63 ವಿಡಿಯೋ:
ಈ ಲಾಂಗ್ ಫಾರ್ಮ್ಯಾಟ್ ವಿಡಿಯೋಗಳಿಗೆ ಯೂಟ್ಯೂಬ್ ವತಿಯಿಂದ ಪ್ರತಿ ಒಂದು ಮಿಲಿಯನ್ ವೀಕ್ಷಣೆಗೆ 75 ಸಾವಿರ ರೂ. ಹಣವನ್ನು ಸಿಗಲಿದೆ. ಅನುಶ್ರೀ ಅವರ 63 ಅತಿದೊಡ್ಡ ವಿಡಿಯೋಗಳು 76.819 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಅಂದರೆ ಒಟ್ಆರೆ ಈ ಲಾಂಗ್ ಫಾರ್ಮ್ಯಾಟ್ ವಿಡಿಯೋಗಳಿಗೆ ಅನುಶ್ರೀ ಅವರಿಗೆ 57.61 ಲಕ್ಷ ರೂ. ಆದಾಯ ಬಂದಿರಬಹುದು.
ಇದನ್ನೂ ಓದಿ: ಸೀರೆ, ಮುಡಿಯಲ್ಲಿ ಮಲ್ಲಿಗೆ … ಮಾರ್ಚ್ ಮುಗೀತಾ ಬಂತು ಮದ್ವೆ ಬಗ್ಗೆ ಇನ್ನಾದ್ರೂ ಮೌನ ಮುರಿತಾರ ಅನುಶ್ರೀ!
ನಿರೂಪಣೆ ಸಂಬಳಕ್ಕಿಂತ ಅತೀ ಕಡಿಮೆ ಯೂಟ್ಯೂಬ್ ಆದಾಯ: ಒಟ್ಟಾರೆ ಈ ನಾಲ್ಕು ಭಾಗಗಳಲ್ಲಿ 219 ವಿಡಿಯೋಗಳ ವೀಕ್ಷಣೆ ಮತ್ತು ಹಣವನ್ನು ಒಟ್ಟಾರೆ ಸೇರಿಸಿದರೆ 81,41,650 ರೂ. ಹಣ ಜನರೇಟ್ ಆಗಿದೆ. ಇನ್ನು ಅನುಶ್ರೀ ಅವರು 2019ರಿಂದ ಈ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ಆದರೆ, ಅನುಶ್ರೀ ಅವರಿಗೆ ಯೂಟೂಬ್‌ನಿಂದ ಬಂದ 81 ಲಕ್ಷ ರೂ. ಹಣ ಯಾವುದೇ ದೊಡ್ಡ ಮೊತ್ತವಲ್ಲ. ಅನುಶ್ರೀ ಒಂದು ರಿಯಾಲಿಟಿ ಶೋ ಕಾರ್ಯಕ್ರಮದ ಒಂದು ಸೀಸನ್ ಮುಗಿಸಿಕೊಡುವುದಕ್ಕೆ ಅಂದಾಜು 50 ಲಕ್ಷ ರೂ.ವರೆಗೆ ಸಂಭಾವನೆಯನ್ನು ಪಡೆಯುತ್ತಾರೆ. ಹೀಗಾಗಿ, ಅನುಶ್ರೀ ಅವರ ಯೂಟ್ಯೂಬ್ ಆದಾಯ, ಆಂಕರಿಂಗ್‌ನಿಂದ ಬರುವ ಆದಾಯದ ಮುಂದೆ ಯಾವುದೇ ಕಾರಣಕ್ಕೂ ಸಮವಾಗಲು ಸಾಧ್ಯವಿಲ್ಲ.
ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಇನ್ಲ್ಪೂಯೆನ್ಸರ್ ಪ್ರಶಾಂತ್ ಎಂಬ ವ್ಯಕ್ತಿ ಮಿ.ಕ್ರೈಂ007 (mr.crime007_) ಎಂಬ ಖಾತೆಯಿಂದ ಮಾಹಿತಿ ಹಂಚಿಕೊಂಡಿದ್ದಾರೆ. ಅನುಶ್ರೀ ಯೂಟೂಬ್ ಆದಾಯದ ಕುರಿತ ಮಾಹಿತಿ ಈ ವಿಡಿಯೋವನ್ನು ಆಧರಿಸಿದ್ದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.