
ಗಂಡ ಕಾರು ಚಾಲನೆ ಮಾಡುವಾಗ ಪಕ್ಕದಲ್ಲಿ ಹೆಂಡತಿ ಇದ್ದರೆ, ಆಕೆ ಇನ್ಸ್ಟ್ರಕ್ಷನ್ ಕೊಡುವುದು ಸಾಮಾನ್ಯ. ಗಂಡ ಕಾರು ಚಾಲನೆಯಲ್ಲಿ ಎಷ್ಟೇ ಎಕ್ಸ್ಪರ್ಟ್ ಇದ್ರೂ, ಹೆಂಡ್ತಿಗೆ ಸರಿಯಾಗಿ ಸ್ಟೇರಿಂಗ್ ಹಿಡಿಯಲು ಬರದಿದ್ರೂ ಗಂಡನಿಗೆ ಕಾರು ಚಾಲನೆಗೆ ಟಿಪ್ಸ್ ಕೊಡುವುದು ಮಾತ್ರ ಮರೆಯುವುದಿಲ್ಲ. ಸ್ಲೋ ಆಗಿ ಓಡಿಸಿ, ಮುಂದೆ ಹಂಪ್ಸ್ ಇದೆ, ಮುಂದೆ ಗಾಡಿ ಬರ್ತಿದೆ, ಗೇರ್ ಚೇಂಜ್ ಮಾಡಿ, ಮುಂದೆ ಅಪ್ ಇದೆ- ಡೌನ್ ಇದೆ ಸರಿಯಾಗಿ ಓಡಿಸಿ.... ಹೀಗೆ ಹತ್ತಾರು ರೀತಿಯ ಸಲಹೆ- ಸೂಚನೆ ಬರುತ್ತಲೇ ಇರುತ್ತದೆ. ಕೆಲವೊಮ್ಮೆ ಗಂಡಂದಿರು ಗರಂ ಆದರೆ, ಇವಳದ್ದು ಇದ್ದದ್ದೇ ಗೋಳು ಎಂದು ಮತ್ತೆ ಕೆಲವರು ಸುಮ್ಮನೇ ಇರಬಹುದು.
ಎಲ್ಲರ ಮನೆಯ ದೋಸೆನೂ ತೂತೇ ಅನ್ನುವಂತೆ, ಈಗ ಅಂಥದ್ದೇ ಒಂದು ರೀಲ್ಸ್ ಮಾಡಿದ್ದಾರೆ ಶ್ರೀರಸ್ತು ಶುಭಮಸ್ತು ಪೂರ್ಣಿ ಅರ್ಥಾತ್ ನಟಿ ಲಾವಣ್ಯ ಭಾರದ್ವಾಜ್ ಮತ್ತು ಅಮೃತಧಾರೆಯಲ್ಲಿ ಜೀವ ಪಾತ್ರಧಾರಿಯಾಗಿದ್ದ ಶಶಿ ದಂಪತಿ. ಇದರಲ್ಲಿ ಶಶಿ ಅವರು ಕಾರು ಚಾಲನೆ ಮಾಡುತ್ತಿದ್ದರೆ, ಪತ್ನಿ ಲಾವಣ್ಯ ಅವರು ಸಾಮಾನ್ಯವಾಗಿ ಮಹಿಳೆಯರು ನೀಡುವಂತೆ ಇನ್ಸ್ಟ್ರಕ್ಷನ್ ನೀಡಿದ್ದಾರೆ. ನೋಡುವಷ್ಟು ನೋಡಿ ಸುಸ್ತಾದ ಶಶಿ, ಕೊನೆಗೆ ನೀನೇ ಚಾಲನೆ ಮಾಡು ಎಂದು ಆಕೆಯ ಕೈಗೆ ಸ್ಟೇರಿಂಗ್ ಕೊಟ್ಟಿದ್ದಾರೆ. ಕಾರು ಶುರು ಮಾಡ್ತಿದ್ದಂತೆಯೇ ಸೈಕಲ್ಗೆ ಹೋಗಿ ಗುದ್ದಿದ್ದಾರೆ ಲಾವಣ್ಯ. ಕೊನೆಗೆ ಯಾರಾದ್ರೂ ಹೀಗೆ ಸೈಕಲ್ ಅನ್ನು ರೋಡ್ಸೈಡ್ ನಿಲ್ಲಿಸ್ತಾರಾ ಎಂದು ವಾದ ಮಾಡಿದ್ದಾರೆ. ಈ ತಮಾಷೆಯ ರೀಲ್ಸ್ ಇದೀಗ ವೈರಲ್ ಆಗಿದೆ. ಬಹುತೇಕ ಕಮೆಂಟಿಗರು ನಮ್ಮ ಮನೆಯಲ್ಲೂ ಇದೇ ಕಥೆ ಎಂದು ಬರೆದುಕೊಂಡಿದ್ದಾರೆ!
ಆ್ಯಂಕರ್ ಅನುಶ್ರೀ ಮದ್ವೆ ರಿವೀಲ್ ಮಾಡಿಯೇ ಬಿಟ್ರು ಕ್ರೇಜಿಸ್ಟಾರ್ ರವಿಚಂದ್ರನ್! ಹುಡುಗ ಯಾರು?
ಅಂದಹಾಗೆ ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಲಾವಣ್ಯ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದು, ಆಗಾಗ್ಗೆ ಹಲವಾರು ರೀಲ್ಸ್ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.
ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಈಚೆಗೆ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಇದು ನಮ್ಮ ಹನಿಮೂನ್ ಎಂದು ತಮಾಷೆ ಮಾಡಿದ್ದರು. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ತಂದೆ, ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು. ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು! ಇದೀಗ ಈ ಜೋಡಿಗೆ ಪುಟ್ಟ ಕಂದ ಬರಲಿ ಎನ್ನುವುದು ಫ್ಯಾನ್ಸ್ ಆಸೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.