Sathya serial : ಎಂಟ್ರಿಯಲ್ಲೇ ನಡುಕ ಹುಟ್ಟಿಸಿದ ಮಾಳವಿಕಾ, ಮತ್ತೆ ವಿಲನ್ ಆದ್ರು ಐಶ್ವರ್ಯ ಬಸ್ಪುರೆ

Published : Dec 07, 2022, 03:31 PM IST
Sathya serial : ಎಂಟ್ರಿಯಲ್ಲೇ ನಡುಕ ಹುಟ್ಟಿಸಿದ ಮಾಳವಿಕಾ, ಮತ್ತೆ ವಿಲನ್ ಆದ್ರು ಐಶ್ವರ್ಯ ಬಸ್ಪುರೆ

ಸಾರಾಂಶ

ಗಟ್ಟಿಗಿತ್ತಿ ಹೆಣ್ಣೊಬ್ಬಳ ಕಥೆಯುಳ್ಳ 'ಸತ್ಯ' ಸೀರಿಯಲ್‌ಗೆ ಇದೀಗ ಖಡಕ್‌ ವಿಲನ್‌ ಎಂಟ್ರಿಯಾಗಿದೆ. ಆಕೆ ಮತ್ಯಾರೂ ಅಲ್ಲ, ಹಿಂದೆ ಯಾರೇ ನೀ ಮೋಹಿನಿ ಸೀರಿಯಲ್ ಖ್ಯಾತಿಯ ಖಳ ನಟಿ ಐಶ್ವರ್ಯ ಬಸ್ಪುರೆ. ಎಂಟ್ರಿ ಕೊಟ್ಟ ವಾರದಲ್ಲೇ ಈಕೆ ಕಾರ್ತಿಕ್ ವ್ಯಕ್ತಿತ್ವಕ್ಕೆ ಮಸಿ ಬಳಿಯೋ ಮೂಲಕ ತನ್ನ ಕಮಾಲ್ ತೋರಿಸಿದ್ದಾರೆ.  

ಐಶ್ವರ್ಯಾ ಬಸ್ಪುರೆ ವಿಲನ್ ಪಾತ್ರದ ಮೂಲಕ ನಡುಕ ಹುಟ್ಟಿಸುವ ನಟಿ. 'ಯಾರೇ ನೀ ಮೋಹಿನಿ' ಸೀರಿಯಲ್‌ನಲ್ಲಿ ಇವರ ಆಕ್ಟಿಂಗ್ ಅನ್ನು ಬಹಳ ಮಂದಿ ಮೆಚ್ಚಿಕೊಂಡಿದ್ದರು. ಅಲ್ಲಿ ಎಲ್ಲರ ಮನ ಗೆದ್ದಿದ್ದ ಖಳ ನಾಯಕಿ ನಟಿ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಸತ್ಯ ಸೀರಿಯಲ್‌ನಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮನರಂಜನಾ ಜಗತ್ತಿಗೆ ಎಂಟ್ರಿ ಕೊಟ್ಟಾಗಿಂದಲೂ ಖಳ ನಾಯಕಿ ಪಾತ್ರದಿಂದಲೇ ಹೆಚ್ಚು ಹೆಸರು ಮಾಡಿದವರು ಐಶ್ವರ್ಯ ಬಸ್ಪುರೆ, ಕೆಲ ಕಾಲ ಕಿರುತೆರೆಯಿಂದ ದೂರವಿದ್ದ ಇವರು ಇದೀಗ ಕಂ ಬ್ಯಾಕ್ ಮಾಡಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ದೇವಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸತ್ಯಾ ಸೀರಿಯಲ್‌ನಲ್ಲೂ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಗುಂಡು ಮುಖ, ಹರಿತ ಕಣ್ಣುಗಳ ಈ ಚೆಲುವೆ 2015ರಲ್ಲಿ ಮಿಸ್ ಕರ್ನಾಟಕ ವಿಜೇತೆಯಾಗಿದ್ದರು. ಸೌಂದರ್ಯ ರಾಣಿ ಕಿರೀಟ ಮುಡಿಗೇರಿಸಿದ ನಟಿ ಅದ್ಯಾಕೋ ನಟನೆಗೆ ಹೆಚ್ಚು ಆದ್ಯತೆ ಇರುವ ವಿಲನ್ ಪಾತ್ರದಲ್ಲೆ ಮಿಂಚುತ್ತಿದ್ದಾರೆ. ನಾಯಕಿಯಾಗಿ ಎಂಟ್ರಿ ಕೊಟ್ಟರೂ ಈಕೆಗೆ ಹೆಸರು ತಂದದ್ದು ವಿಲನ್ ಪಾತ್ರಗಳು. ನಟನೆಯ ಜೊತೆಗೆ ಐಶ್ವರ್ಯ ಬಸ್ಪುರೆ ಅವರು ಮಾಡೆಲಿಂಗ್ ಕ್ಷೇತ್ರದಲ್ಲೂ ಬ್ಯುಸಿ ಆಗಿರೋದು ವಿಶೇಷ.

ಸತ್ಯಾ ಸೀರಿಯಲ್‌ನಲ್ಲಿ ಐಶ್ವರ್ಯಾ ಬಸ್ಪುರೆ ನಿಭಾಯಿಸ್ತಿರೋ ಪಾತ್ರದ ಹೆಸರು ಮಾಳವಿಕಾ. ಬ್ಯುಸಿನೆಸ್ ಲೇಡಿಯಾಗಿ ಈಕೆಯ ಎಂಟ್ರಿಯಾಗಿದೆ. ಒಂದು ಇವೆಂಟ್ ಮೂಲಕ ಮಾಳವಿಕಾ ಈ ಕಥೆಗೆ ಎಂಟ್ರಿ ಕೊಡ್ತಿದ್ದಾಳೆ. ಬ್ಯುಸಿನೆಸ್‌ಗೆ ಸಂಬಂಧಿಸಿದ ಪಾರ್ಟಿಯೊಂದರಲ್ಲಿ ಕಾರ್ತಿಕ್ ಒಬ್ಬನೇ ನಿಂತಿದ್ದಾಗ ಅಲ್ಲಿಗೆ ಐಶ್ವರ್ಯಾ ಅಂದರೆ ಮಾಳವಿಕಾ ಎಂಟ್ರಿಯಾಗುತ್ತೆ. ತನ್ನನ್ನು ಕಾರ್ತಿಕ್ ಗೆ ಪರಿಚಯ ಮಾಡಿಕೊಳ್ಳೋ ಆಕೆ ಆತನಿಗೆ ಹತ್ತಿರವಾಗೋ ಪ್ರಯತ್ನದಲ್ಲಿದ್ದಾಳೆ. ಒಂದು ಹಂತದಲ್ಲಿ ಎಲ್ಲರ ಗಮನ ಸೆಳೆಯುತ್ತಲೇ ಕಾರ್ತಿಕ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ ಅನ್ನೋ ರೀತಿ ಬಿಂಬಿಸೋ ಪ್ರಯತ್ನ ಮಾಡ್ತಿದ್ದಾಳೆ.

 

ಈಕೆಯ ಈ ಸಂಚಿಗೆ ಅಮೂಲ್ ಬೇಬಿ ಕಾರ್ತಿಕ್ ಬಲಿಯಾಗಿದ್ದಾನೆ. ಆತನ ಬಗೆಗಿನ ಸುದ್ದಿಗಳು ಮಾಧ್ಯಮದಲ್ಲಿ ಬ್ರೇಕಿಂಗ್ ಆಗಿ ಬರುತ್ತವೆ. ಇದನ್ನು ಮನೆಯವರು ನೋಡಿ ಆಘಾತಗೊಳ್ತಾರೆ. ಆದರೆ ಸತ್ಯಾ ಮಾತ್ರ ತನ್ನ ಗಂಡನನ್ನು ಅರಿತಿದ್ದಾಳೆ. ಆಕೆ ಗಂಡ ಕಾರ್ತಿಕ್‌ನ ಬೆಂಬಲಕ್ಕೆ ನಿಲ್ಲುತ್ತಾಳೆ. ವಿಲನ್ ಮಾಳವಿಕಾ ಉದ್ದೇಶ ಏನು, ಆಕೆ ಕಾರ್ತಿಕ್ ಲೈಫಿಗೆ ಏಕೆ ಬಂದಳು ಅನ್ನೋ ಕುತೂಹಲ ಈ ಸೀರಿಯಲ್ ವೀಕ್ಷಕರಿಗೆ ಇದೆ.

ಏನ್ರೀ ಸ್ಟೈಲ್‌ ನಿಮ್ದು; ಶಾಲಿನಿ ವಿಚಿತ್ರ ಬ್ಲೌಸ್‌ ನೋಡಿ ನೆಟ್ಟಿಗರು ಶಾಕ್

ಆರಂಭದಲ್ಲೇ ತನ್ನ ಪಾತ್ರದ ಮೂಲಕ ಐಶ್ವರ್ಯಾ ನಡುಕ ಹುಟ್ಟಿಸಿದ್ದಾರೆ. ಅವರು ಈ ಹಿಂದಿನ ಸೀರಿಯಲ್‌ಗಳಲ್ಲೂ(Serial) ವಿಲನ್ ಪಾತ್ರದಲ್ಲಿ ಜನರ ಮೆಚ್ಚುಗೆ ಗಿಟ್ಟಿಸಿದ್ದರು. ಮಹಾಸತಿ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಐಶ್ವರ್ಯ ಬಸ್ಪುರೆ ಬಣ್ಣ ಹಚ್ಚಿದ್ದರು. ಮಹಾಸತಿ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಐಶ್ವರ್ಯ ಬಸ್ಪುರೆ ಅವರು ನಾಯಕಿಯಾಗಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸಂಘರ್ಷ ಧಾರಾವಾಹಿಗೆ ಬಣ್ಣ ಹಚ್ಚಿದರು. ಶ್ರುತಿ ನಾಯ್ಡು ನಿರ್ಮಾಣ(Production)ದ 'ಒಲವಿನ ನಿಲ್ದಾಣ' ಸೀರಿಯಲ್‌ನಲ್ಲೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

BBK9; ಫ್ರಾಕ್ ಹಾಕಿ ಡಾನ್ಸ್ ಮಾಡಿದ ಪ್ರಶಾಂತ್ ಸಂಬರಗಿ; ಯಾರೆ ನೀನು ಚೆಲುವೆ ಎಂದ ನೆಟ್ಟಿಗರು

'ಸತ್ಯ' ಸೀರಿಯಲ್‌ನಲ್ಲಿ ಈಕೆಯ ಪಾತ್ರ ನೋಡಿದರೆ ಅದು ಸದ್ಯಕ್ಕೆ ಮುಗಿಯೋ ಗೆಸ್ಟ್ ಪಾತ್ರ ಅನಿಸೋದಿಲ್ಲ. ಹೀಗಾಗಿ ಐಶ್ವರ್ಯಾ ಅವರನ್ನು ಇನ್ನೂ ಕೆಲ ಕಾಲ ಕಿರುತೆರೆ(Small screen)ಯಲ್ಲಿ ಕಣ್ತುಂಬಿಸಿಕೊಳ್ಳಬಹುದು. ಈಕೆಯ ಆಗಮನದಿಂದ ಸತ್ಯಾ ಸೀರಿಯಲ್ ಕಥೆಗೂ ಹೊಸ ಟ್ವಿಸ್ಟ್(Twist) ಸಿಕ್ಕಿದೆ. ಈಕೆಯಿಂದ ತನ್ನ ಗಂಡ ಕಾರ್ತಿಕ್ ನನ್ನು ಸತ್ಯ ಹೇಗೆ ಬಚಾವ್ ಮಾಡ್ತಾಳೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ