ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ಇಬ್ಬರೂ ಬಿಗ್ ಮನೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಇಬ್ಬರ ಕಿತ್ತಾಟದ ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ ಸೀಸನ್ 9 ಈ ವಾರ ಮತ್ತಷ್ಟು ರಂಗೇರಿದೆ. ಬಿಗ್ ಬಾಸ್ ಸದ್ಯ 11ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಮನೆಯಲ್ಲಿ 10 ಮಂದಿ ಇದ್ದಾರೆ. 10 ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ, ತಮಾಷೆ ಜೋರಾಗಿದೆ. ಬಿಗ್ ಬಾಸ್ ಇಂದಿನ (ಡಿಸೆಂಬರ್ 7)ರ ಪ್ರೋಮೋ ರಿಲೀಸ್ ಆಗಿದ್ದು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಜಗಳ ತಾರಕಕ್ಕೇರಿದೆ. ಇಬ್ಬರ ಕಿತ್ತಾಟ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ಕಿತ್ತಾಟದ ಪ್ರೋಮೋ ಈಗ ವೈರಲ್ ಆಗಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಅಗ್ರೆಸಿವ್ ಆಗಿದ್ದಿದ್ದು ರೂರೇಶ್ ಮತ್ತು ಪ್ರಶಾಂತ್ ಸಂಬರಗಿ. ಆಗಾಗ ಆರ್ಯವರ್ಧನ್ ಜಗಳ ಕೂಡ ವೈರಲ್ ಆಗುತ್ತದೆ. ಇದೀಗ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಜೋರಾಗಿ ಕಿತ್ತಾಡಿಕೊಂಡಿದ್ದಾರೆ.
ರೂಪೇಶ್ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಮಾತನಾಡುತ್ತ ನಿಂತಿದ್ದರು. ಆಗ ದಿಢೀರ್ ಎಂಟ್ರಿ ಕೊಟ್ಟ ಆರ್ಯವರ್ಧನ್ ರೂಪೇಶ್ ರಾಜಣ್ಣ ಮೇಲೆ ಕೈ ಮಾಡಿದರು. ರೂಪೇಶ್ ರಾಜಣ್ಣ ಕೂಡ ತಿರುಗಿ ಆರ್ಯವರ್ಧನ್ ಗೆ ಸರಿಯಾಗಿ ಏಟು ಕೊಟ್ಟರು. ತಮಾಷೆಯಾಗಿ ಪ್ರಾರಂಭವಾದ ಕಿತ್ತಾಟ ಕೊನೆಗೆ ಗಂಭೀರ ರೂಪ ಪಡೆದುಕೊಂಡಿತು. ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಆಗ ರೂಪೇಶ್ ಶೆಟ್ಟಿ ಮತ್ತು ಅರುಣ್ ಸಾಗರ್ ಇಬ್ಬರ ಹೊಡೆದಾಟ ಬಿಡಿಸುವ ಪ್ರಯತ್ನ ಮಾಡಿದರು. ಆದರೂ ಇಬ್ಬರೂ ಕಿತ್ತಾಟ ನಿಲ್ಲಿಸಲಿಲ್ಲ.
ತಮಾಷೆ ಮಾಡಿದ್ದು ಅಷ್ಟೆ ಎಂದು ಆರ್ಯವರ್ಧನ್ ಹೇಳಿದರು. ತಮಾಷೆ ಹೀಗೆ ಮಾಡೋದ ಎಂದು ರೂಪೇಶ್ ಮತ್ತಷ್ಟು ಸಿಟ್ಟಾದರು. ಮಾನ ಮರ್ಯಾದೆ ಗೌರವ ಸರಿಯಾಗಿ ಬಳಸಿಕೊಳ್ಳಿ ಎಂದು ರೂಪೇಶ್ ರಾಜಣ್ಣ ಹೇಳಿದರು. ಏನ್ ಹೊಡೆದು ಬಿಡ್ತೀರಾ ಎಂದು ಆರ್ಯವರ್ಧನ್ ರೊಚ್ಚಿಗೆದ್ದರು. ಬಳಿಕ ಆರ್ಯವರ್ಧನ್ ರೂಪೇಶ್ ರಾಜಣ್ಣ ಕಾಲಿಗೆ ಬಿದ್ದರು. ಈ ಪ್ರೋಮೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇಬ್ಬರ ನಡುವೆ ನಿಜಕ್ಕೂ ಏನಾಯಿತು ಎನ್ನುವುದು ಸಂಪೂರ್ಣ ಎಪಿಸೋಡ್ ನೋಡಿದ ಬಳಿಕ ಗೊತ್ತಾಗಲಿದೆ.
BBK9; ಫ್ರಾಕ್ ಹಾಕಿ ಡಾನ್ಸ್ ಮಾಡಿದ ಪ್ರಶಾಂತ್ ಸಂಬರಗಿ; ಯಾರೆ ನೀನು ಚೆಲುವೆ ಎಂದ ನೆಟ್ಟಿಗರು
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು
ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
BBK9 ಪತ್ನಿಯನ್ನು ದೇವರ ರೀತಿ ನೋಡ್ತೀನಿ; ಕಾಲಿಗೆ ಬಿದ್ದ ರಾಜಣ್ಣ ಕಾಲೆಳೆದ ಕಿಚ್ಚ ಸುದೀಪ್
ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 7ನೇ ವಾರ ಎಲಿಮಿನೇಷನ್ ಇರದ ಕಾರಣ ಯಾರ ಮನೆಯಿಂದ ಹೊರಹೋಗಿಲ್ಲ. 8ನೇ ವಾರ ದೀಪಿಕಾ ದಾಸ್ ಮನೆಯಿಂದ ಹೊರಹೋಗಿದ್ದರು ಆದರೆ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. 9ನೇ ವಾರ ವಿನೋದ್ ಗೊಬ್ಬರಗಾಲ ಔಟ್ ಆಗಿದ್ದಾರೆ. 10ನೇ ವಾರ ಕಾವ್ಯಾ ಗೌಡ ಮನೆಯಿಂದ ಹೊರನಡೆದರು. 11ನೇ ವಾರ ಯಾರು ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.