Ramachari serial: ರಾಮಾಚಾರಿ ಮದುವೆ ಠುಸ್ ಪಟಾಕಿ, ವೀಕ್ಷಕರನ್ನು ಫೂಲ್ ಮಾಡಿದ್ರಾ?

By Suvarna News  |  First Published Jul 23, 2022, 6:05 PM IST

ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿಗೂ ಚಾರುಲತಾಗೂ ಮದುವೆ ಅಂತ ಕಲರ್ಸ್ ಕನ್ನಡದಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಿದ್ದೂ ಮಾಡಿದ್ದೇ. ಆದರೆ ಇದೀಗ ಮದುವೆ ಠುಸ್ ಪಟಾಕಿ ಆಗಿದೆ. ಆದ್ರೆ ಈ ಮದ್ವೆ ಮೂಲಕ ರಾಮಾಚಾರಿ ಪರಿಶುದ್ಧ ಅನ್ನೋದು ಗೊತ್ತಾಗಬೇಕಾದವರಿಗೆ ಗೊತ್ತಾಗಿದೆ.


ಮದುವೆ ಅಂದ್ರೆ ತಾಳಿ ಕಟ್ಟಿದ್ರೆ ಮುಗೀತಾ? ಹುಡುಗ ತಾಳಿ ಕಟ್ಟಿದ ಅಂದಮಾತ್ರ ಹುಡುಗಿ ತನಗೊಂದು ಮನಸ್ಸೇ ಇಲ್ಲ ಅನ್ನೋ ಹಾಗೆ ಕೊನೇವರೆಗೂ ಅವನ ಜೊತೆಗೆ ಬದುಕಬೇಕಾ? ಸಪೋಸ್ 'ರಾಮಾಚಾರಿ' ಸೀರಿಯಲ್‌ನಲ್ಲಿ ರಾಮಾಚಾರಿಗೂ ಚಾರುಲತಗೂ ಮದುವೆ ನಡೆದಿದ್ರೆ ಹೀಗೊಂದು ಪ್ರಶ್ನೆ ಎಲ್ಲೋ ಒಂದು ಕಡೆ ಬರ್ತಿತ್ತು. ಎಷ್ಟೇ ಕನ್ವಿನ್ಸ್ ಮಾಡಿದರೂ ರಾಮಾಚಾರಿ ಪಾತ್ರದ ಘನತೆ ಕೊಂಚ ತಗ್ಗುತ್ತಿತ್ತು. ಹೀಗಾಗಬಾರದು ಅಂತಲೇ 'ರಾಮಾಚಾರಿ' ಸೀರಿಯಲ್‌ನ ಮದುವೆಯನ್ನು ಠುಸ್ ಪಟಾಕಿ ಮಾಡಿದ್ದಾರೆ. ಆದರೆ ಹೀಗೆ ಸದ್ದು ಗದ್ದಲ ಇಲ್ಲದೇ ಸರಳವಾದ ಮದುವೆ, ಅದೂ ವಧುವಿಗೆ ಏನೊಂದನ್ನೂ ತಿಳಿಸದೇ ಮಾಡುತ್ತಿರುವ ಮದುವೆ ಅಂದಾಗ ಇದು ನಿಜಕ್ಕೂ ನಡೆಯುತ್ತಾ ಅನ್ನೋ ಯೋಚನೆ ಕೆಲವರಿಗೆ ಬಂದಿತ್ತು. ಅವರ ಊಹೆ ನಿಜವಾಗಿದೆ. ರಾಮಾಚಾರಿ ಚಾರುಲತಾ ಮದುವೆ ಆಗಲಿ ಅಂತಲೇ ಈ ಸೀರಿಯಲ್‌ ನೋಡುವ ವೀಕ್ಷಕರ ಮನಸ್ಸಲ್ಲಿರೋದು. ಆದರೆ ಈಗ ಇಷ್ಟು ಬೇಗ ಮದುವೆ ಬೇಡವಿತ್ತು ಅಂತಲೇ ಹೆಚ್ಚಿನವರು ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಅನ್ನೋದು ಗಂಡು ಹೆಣ್ಣಿನ ನಡುವಿನ ಪ್ರೀತಿಗೆ ಒಂದು ನೈತಿಕ ಅಂಕಿತ ಅಷ್ಟೇ. ಮದುವೆ ಬಗೆಗಿನ ಈ ಅಂಶವನ್ನೇ ಸೀರಿಯಲ್ ಕಡಗಣಿಸಿದರೆ ಅದಕ್ಕೊಂದು ಅರ್ಥವೇ ಇರೋದಿಲ್ಲ. ಈ ಹಿನ್ನೆಲೆಯಲ್ಲಿ ಮದುವೆ ಠುಸ್ ಪಟಾಕಿ ಆಗಿದೆ.

ಈ ಮದುವೆ ನಡೀಬೇಕು ಅಂತ ರಾಮಾಚಾರಿ ಅಂದುಕೊಂಡಿರುವ ಉದ್ದೇಶವೇ ತನ್ನ ಮನೆಯವರಿಗೆ, ಆಫೀಸಿನವರಿಗೆ ತನ್ನ ಹಾಗೂ ಚಾರುಲತಾ ಮಧ್ಯೆ ಏನೂ ನಡೀತಿಲ್ಲ ಅನ್ನೋದನ್ನು ತೋರಿಸಿಕೊಡೋದಕ್ಕೆ. ಜೊತೆಗೆ ತಾನು ಪ್ರೀತಿಯ ಬಲೆಯಲ್ಲಿ ಬಿದ್ದಿಲ್ಲ. ಇದೆಲ್ಲ ಚಾರು ಆಡ್ತಿರುವ ನಾಟಕ ಅನ್ನೋದನ್ನು ರಿವೀಲ್ ಮಾಡೋದಕ್ಕೆ. ಜೊತೆಗೆ ತನ್ನ ಜೀವನದ ಜೊತೆಗೆ ಆಟ ಆಡ್ತಿರುವ ಚಾರುಲತಾಗೆ ಬುದ್ಧಿ ಕಲಿಸೋದಕ್ಕೆ.

Tap to resize

Latest Videos

ರಾಮಾಚಾರಿಯ ಮದುವೆಗೆ ಸಕಲ ತಯಾರಿಯೂ ನಡೆಯುತ್ತೆ. ಚಾರುಲತಾ ತಂದೆ ಉದ್ಯಮಿ(Industrialist) ಜೈ ಶಂಕರ್‌ ಅವರೂ ಬರ್ತಾರೆ. ಅವರಿಗೂ ಇದು ಸರ್ಪೈಸ್‌. ರಾಮಾಚಾರಿ ಮೊದಲೇ ನಿಮಗೆ ಗೊತ್ತಿರೋ ಹುಡುಗಿಯನ್ನೇ ನಾನು ಮದುವೆ ಆಗೋದು ಅಂತ ಹೇಳಿದ್ದಾನೆ. ಹೀಗಾಗಿ ಅವರಿಗೂ ರಾಮಾಚಾರಿಯನ್ನು ವರಿಸುವ ಹುಡುಗಿ ಬಗ್ಗೆ ಕುತೂಹಲ ಇತ್ತು. ಕೊನೆಗೆ ತನ್ನ ಮಗಳು ಚಾರುಲತಾಳನ್ನೇ ರಾಮಾಚಾರಿ ಮದುವೆ ಆಗ್ತಾನೆ ಅಂದಾಗ ಅವರಿಗೂ ಶಾಕಿಂಗ್. ರಾಮಾಚಾರಿ ದೇವಸ್ಥಾನವೆಲ್ಲ ಅಟ್ಟಾಡಿಸಿ ತಾಳಿ ಕಟ್ಟೋದಕ್ಕೆ ಹೋಗ್ತಾನೆ. ಚಾರು ಗಾಬರಿಯಲ್ಲಿ ಓಡುತ್ತಾಳೆ. ತನ್ನ ಪ್ಲಾನ್(Plan) ತನಗೇ ತಿರುಗಿ ಹೊಡಿದಿರೋದನ್ನು ಅವಳಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ.

ರಾಮಾಚಾರಿ ಸೀರಿಯಲ್: ತಾಳಿ ಹಿಡಿದು ಚಾರು ಹಿಂದೆ ಓಡುತ್ತಿರುವ ರಾಮಾಚಾರಿ!

ಫೈನಲೀ ರಾಮಾಚಾರಿ ಚಾರು ತಂದೆ, ತಾನು ಕೆಲಸ ಮಾಡುವ ಸಂಸ್ಥೆಯ ಒಡೆಯ ಜೈ ಶಂಕರ್‌ ಅವರಿಗೆ ಚಾರುಲತಾಳಿಂದ ತನಗೆ ಏನೇನೆಲ್ಲ ಆಯ್ತು ಅನ್ನೋದನ್ನು ರಿವೀಲ್(Reveal) ಮಾಡಿದ್ದಾನೆ. ಇದನ್ನೆಲ್ಲ ತಿಳಿಸೋದಕ್ಕೆಂದೇ ಮದುವೆಯ ನಾಟಕ ಆಡಿರೋದಾಗಿ ಹೇಳಿದ್ದಾನೆ. ಅಲ್ಲಿಗೆ ರಾಮಾಚಾರಿ ಚಾರು ಮದುವೆ ಠುಸ್ ಪಟಾಕಿ ಆಗಿದೆ. ಆದರೆ ಜೈ ಶಂಕರ್‌ಗೆ ತನ್ನ ಮಗಳ ನಡವಳಿಕೆಯ ಬಗ್ಗೆ ವಿಪರೀತ ಸಿಟ್ಟು, ಬೇಸರ, ನೋವು ಎಲ್ಲ ಆಗಿದೆ. ಎಲ್ಲರೆದುರಿಗೇ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಆಟವಾಡಿದ ಮಗಳು ಚಾರುವಿನ ಕೆನ್ನೆಗೆ ಅವರು ಬಾರಿಸಿದ್ದಾರೆ. ಅಷ್ಟು ಜನರೆದುರು ಆದ ಅವಮಾನಕ್ಕೆ ಚಾರು ಕಣ್ಣಲ್ಲಿ ನೀರು ಬಂದಿದೆ. ತನ್ನ ಬಂಡವಾಳ ಎಲ್ಲ ಬಯಲಾದ ಕಾರಣ ತನ್ನ ಕಾಂಡಕ್ಟ್ ಸರ್ಟಿಫಿಕೇಟ್(Conduct certificate) ಏನು ಅನ್ನೋದು ಈಗಾಗಲೇ ಅವರಿಗೆ ತಿಳಿದಿರುತ್ತೆ. ಅಲ್ಲಿಗೆ ಕಂಪನಿಯ ಮುಖ್ಯಸ್ಥೆ ಆಗಬೇಕು ಅನ್ನುವ ಆಕೆಯ ಕನಸೂ ನುಚ್ಚುನೂರಾಗಿದೆ.

ರಾಮಾಚಾರಿ: ಮದುಮಗನ ವೇಷದಲ್ಲಿ ರಾಮಾಚಾರಿ, ಇನ್ನು ಮದುಮಗಳು ಚಾರು ಬರೋದಷ್ಟೇ ಬಾಕಿ!

ಈಗ ಚಾರುವಿನ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ. ರಾಮ್‌ಜೀ ನಿರ್ದೇಶನದ ಈ ಸೀರಿಯಲ್‌ನಲ್ಲಿ ರುತ್ವಿಕ್ ಕೃಪಾಕರ್, ಮೌನಾ ಗುಡ್ಡೆಮನೆ, ಗುರುದತ್ತ್, ಶಂಕರ್ ಅಶ್ವತ್ಥ್ ಮೊದಲಾದವರು ನಟಿಸಿದ್ದಾರೆ.

click me!