ಕಾಶ್ಮೀರದಲ್ಲಿ ನಾಗಿಣಿ; 8 ದಿನಕ್ಕೆ 50 ಸಾವಿರ ಖರ್ಚು ಮಾಡಿದ ಕಿರುತೆರೆ ನಟಿ ನಮ್ರತಾ ಗೌಡ

By Vaishnavi ChandrashekarFirst Published Jul 23, 2022, 3:16 PM IST
Highlights

ಪ್ರ್ಯಾಂಕ್ ವಿಡಿಯೋ ವೈರಲ್ ಆದ ಬೆನ್ನಲೆ ಕಾಶ್ಮೀರ್ ಟ್ರಿಪ್ ವಿಡಿಯೋ ಹಂಚಿಕೊಂಡ ನಾಗಿಣಿ ನಟಿ ನಮ್ರತಾ ಗೌಡ....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿ ನಟಿ ನಮ್ರತಾ ಗೌಡ ತಮ್ಮ ಸ್ನೇಹಿತೆ ಪ್ರಿಯಾಂಕಾ ಕುಟುಂಬದ ಜೊತೆ ಕಾಶ್ಮೀರಕ್ಕೆ ಪ್ರಯಾಣ ಮಾಡಿದ್ದಾರೆ. ಸುಮಾರು 8 ದಿನಗಳ ಕಾಲ ಕಾಶ್ಮೀರವನ್ನು ಎಂಜಾಯ್ ಮಾಡಿರುವ ನಟಿ ಅದನ್ನು ವ್ಲಾಗ್ ಮಾಡಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. 19 ನಿಮಿಷಗಳ ವಿಡಿಯೋದಲ್ಲಿ 8 ದಿನಗಳ ಹೈಲೈಟ್‌ನ ಜನರಿಗೆ ತೋರಿಸಿದ್ದಾರೆ. ಜೊತೆಗೆ ರಸ್ತೆ ನಡುವೆ ನಾಲ್ಕು ಮರಗಳು ಬಿದ್ದು ನಾಲ್ಕು ಗಂಟೆಗಳ ಕಾಲ -2 ಡಿಗ್ರಿ ಚಳಿಯಲ್ಲಿ ದಿನ ಕಳೆದಿದ್ದಾರೆ. 

'ತುಂಬಾ ಜನರು ನನಗೆ ಟ್ರ್ಯಾವಲ್ ವ್ಲಾಗ್‌ ಬಗ್ಗೆ ಕೇಳುತ್ತೀರಿ. ಯೂಟ್ಯೂಬ್‌ ಚಾನೆಲ್‌ನಲ್ಲಿ ನನ್ನ ಥೈಲ್ಯಾಂಡ್‌ ಪ್ರಯಾಣದ ಒಂದು ಭಾಗ ವಿಡಿಯೋ ಅಪ್ಲೋಡ್ ಮಾಡಿರುವೆ. ಭಾಗ 2 ಅಪ್ಲೋಡ್ ಮಾಡಬೇಕಿದೆ. ಅಷ್ಟರಲ್ಲಿ ಎಷ್ಟೊಂದು ಜನ ಕಾಶ್ಮೀರ್ ವ್ಲಾಗ್‌ ಕೂಡ ಬೇಕು ಎಂದು ಕೇಳಿದ್ರಿ ಅದಿಕ್ಕೆ ಅಪ್ಲೋಡ್ ಮಾಡುತ್ತಿರುವ' ಎಂದು ನಮತ್ರಾ ಗೌಡ ವಿಡಿಯೋ ಆರಂಭಿಸಿದ್ದಾರೆ. 

'ಕಾಶ್ಮೀರಕ್ಕೆ ನಾನು ನನ್ನ ಬೆಸ್ಟ್‌ಫ್ರೆಂಡ್ ಪ್ರಿಯಾಂಕಾ ಮತ್ತು ಅವಳ ಇಡೀ ಫ್ಯಾಮಿಲಿ ಜೊತೆ ನಾನು ಪ್ರಯಾಣ ಮಾಡಿರುವೆ. 20 ಜನರ ಜೊತೆ ನಾನೂ ಹೋಗಬೇಕು ಅಂತ ಕೊನೆ ಕ್ಷಣದಲ್ಲಿ ಪ್ಲ್ಯಾನ್ ಆಯ್ತು. ನಮ್ಮ ಜರ್ನಿ ಆರಂಭವಾಗಿದ್ದು ಶ್ರೀನಗರದಿಂದ 8 ದಿನ ಹೇಗೆ ಹೋಯ್ತು ಎಂದು ಈ ವಿಡಿಯೋದಲ್ಲಿ ನೋಡಬಹುದು. ಟ್ರ್ಯಾವಲ್‌ ಎಂದಾಕ್ಷಣ ಎಲ್ಲರೂ ಬಜೆಟ್‌ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅದರಲ್ಲೂ ಥೈಲ್ಯಾಂಡ್‌ ಮತ್ತು ಕಾಶ್ಮೀರ್ ಬಜೆಟ್‌ ಬಗ್ಗೆ ತುಂಬಾ ಮೆಸೇಜ್ ಬಂದಿದೆ. ಅಂದಾಜು ಲೆಕ್ಕ ಮಾತ್ರ ನಾನು ಹೇಳಬಹುದು...ನಾವು ಹೋಗಿದ್ದ 8 ದಿನಕ್ಕೆ 50 ಸಾವಿರ ಬೇಕಿತ್ತು. ರೂಮ್‌, ಹೋಟೆಲ್, ಆಹಾರ ಎಲ್ಲಾ. ಇದೆಲ್ಲಾ ಕನಿಷ್ಠ ಖರ್ಚು. ಶಾಪಿಂಗ್ ಎಲ್ಲಾ ಇದಕ್ಕೆ ಲೆಕ್ಕ ಬರುವುದಿಲ್ಲ' ಎಂದು ನಮ್ರತಾ ಮಾತನಾಡಿದ್ದಾರೆ.

Viral Prank: ನಾಗಿಣಿ 2 ನಟಿ ನಮ್ರತಾ ಗೌಡ ಕಾಲಿಗೆ ಪೆಟ್ಟು, ಸ್ಥಿತಿ ಗಂಭೀರ

'ಕಾಶ್ಮೀರದಲ್ಲಿ ಆಹಾರ ಇಷ್ಟವಾಯ್ತು. ಸಂಪೂರ್ಣ ನಾರ್ಥ್‌ ಇಂಡಿಯಾ ಫುಡ್. ಯಾವ ರೇಂಜ್‌ಗೆ ನಾನು ನಾರ್ಥ್‌ ಇಂಡಿಯಾ ಫುಡ್‌ ತಿಂದಿದ್ವೆ ಅಂದ್ರೆ ಬೆಂಗಳೂರಿಗೆ ಬಂದ ಎರಡು ತಿಂಗಳು ನಾರ್ಥ್‌ ಫುಡ್‌ ಬೇಡವೇ ಬೇಡ ಅನಿಸಿತ್ತು. ಅದು ಬಿಟ್ಟು ನನಗೆ ಮಂಜು ನೋಡಬೇಕು ಅಂತ ತುಂಬಾ ಆಸೆ ಇತ್ತು, ನಿಜ ಜೀವನದಲ್ಲಿ ನಾನು ಮಂಜು ನೋಡಿರಲಿಲ್ಲ. ಕಾಶ್ಮೀರಿ ಟ್ರಿಪ್‌ನಲ್ಲಿ ಎರಡು ಕಡೆ ಮಂಜು ಸಿಗ್ತು. ಒಂದು ಕಡೆ Sonamarg ಮಂಜು ನೋಡಿದ್ವಿ ಅಲ್ಲಿ ತುಂಬಾ ಚಳಿ ಇತ್ತು ಜನ ಜಾಸ್ತಿ ಇದ್ರು ಸಖತ್ ಗಿಜಿ ಗಿಜಿ ಇತ್ತು Sinthan Top ಜಾಗದಲ್ಲಿ ಮಂಜು ಸೂಪರ್ ಆಗಿತ್ತು ಜನರು ಕಡಿಮೆ ಇದ್ರು. ಅಲ್ಲಿಂದ ವಾಪಸ್ ಬರ್ತಾ ಮರ ಬಿದಿತ್ತು ಆ ಕ್ಷಣ ಜೀವನದಲ್ಲಿ ಮರೆಯುವುದಿಲ್ಲ' ಎಂದಿದ್ದಾರೆ ನಮ್ರತಾ.

ಕಾಶ್ಮೀರ ಟಾಪ್‌ ಪಾಯಿಂಟ್‌ಗೆ ಭೇಟಿ ಕೊಟ್ಟು ಅಲ್ಲಿ ಉಸಿರಾಡಲು ಎಷ್ಟು ಕಷ್ಟವಾಗುತ್ತದೆ ಎಂದು ವಿಡಿಯೋ ಮಾಡಿದ್ದಾರೆ. 'ಟಾಪಲ್ಲಿ ನಿಂತಿದ್ದೀವಿ ತುಂಬಾ ಮಂಜು ಇದೆ. ನೋಡಲು ಸುಂದರವಾಗಿ ಮಾತನಾಡಲು ಆಗುತ್ತಿಲ್ಲ ಉಸಿರಾಡಲು ಆಗುತ್ತಿಲ್ಲ ಆದರೆ ಈ ಜಾಗ ಅಮೇಜಿಂಗ್ ಆಗಿದೆ' ಎಂದು ನಮ್ರತಾ ವಿಡಿಯೋ ಮಾಡಿದ್ದಾರೆ. 

 

click me!