Kannadathi serial : ಫಸ್ಟ್‌ನೈಟ್‌ ಶಾಸ್ತ್ರಕ್ಕೆ ಭುವಿಯಿಂದಲೇ ಬಂತು ಸಿಗ್ನಲ್!

Published : Jul 23, 2022, 05:55 PM IST
Kannadathi serial : ಫಸ್ಟ್‌ನೈಟ್‌ ಶಾಸ್ತ್ರಕ್ಕೆ ಭುವಿಯಿಂದಲೇ ಬಂತು ಸಿಗ್ನಲ್!

ಸಾರಾಂಶ

ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಭುವಿ ಮದುವೆ ನಡೆದು ಆಗಲೇ ಕೆಲವು ದಿನಗಳಾದವು. ಆದರೆ ಅಮ್ಮಮ್ಮ ಹುಷಾರಿಲ್ಲದೇ ಅಮೆರಿಕಾದಲ್ಲಿರುವ ಕಾರಣ ಇವರಿಬ್ಬರ ನಡುವೆ ಫಸ್ಟ್ ನೈಟ್ ಶಾಸ್ತ್ರ ಇನ್ನೂ ನಡೆದಿಲ್ಲ. ಅಮ್ಮಮ್ಮ ಚೇತರಿಸಿಕೊಳ್ಳುತ್ತಿರುವ ಸುದ್ದಿ ಬರ್ತಿದ್ದ ಹಾಗೆ ಫಸ್ಟ್‌ನೈಟ್ ಶಾಸ್ತ್ರಕ್ಕೂ ಭುವಿಯಿಂದ ಸಿಗ್ನಲ್ ಸಿಕ್ಕಿದೆ.

ಈ ಹಿಂದೆ ಹರ್ಷ ಭುವಿ ಪ್ರೀತಿ, ವಿರಹದ ಕತೆಯಾಗಿದ್ದ 'ಕನ್ನಡತಿ'ಯಲ್ಲಿ ಈಗ ಕೊಂಚ ಬದಲಾವಣೆ. ಪ್ರೀತಿ ಪ್ರೇಮದ ಕಥೆಯೇ ಮುಖ್ಯವಾಗಿದ್ದ ಸೀರಿಯಲ್‌ ನಿಧಾನಕ್ಕೆ ಸಾಂಸಾರಿಕ ಸೀರಿಯಲ್ ಆಗಿ ಬದಲಾಗುವ ಸೂಚನೆ ಸಿಗುತ್ತಿದೆ. ಇದಕ್ಕೆ ಸೂಚನೆ ಎಂಬಂತೆ ಮಹತ್ವದ ಘಟನೆಯೊಂದಕ್ಕೆ ಈ ಸೀರಿಯಲ್‌ ಸಾಕ್ಷಿಯಾಗುವ ದಿನ ದೂರ ಇಲ್ಲ ಅನ್ನೋ ಸೂಚನೆಯೂ ಸಿಕ್ಕಿದೆ. ಮದುವೆಯ ಮೊದಲ ರಾತ್ರಿ ಅನ್ನೋದೇ ಕಚಗುಳಿ ಇಡುವ ಸಂಗತಿ. ನಾಚಿಕೆ, ಗಾಬರಿ, ಸಂತೋಷ ಒಟ್ಟೊಟ್ಟಿಗೆ ತರುವ ಈ ಫಸ್ಟ್‌ನೈಟ್‌ ಲೈಫಲ್ಲೂ ಜೀವನವಿಡೀ ನೆನಪಿಟ್ಟುಕೊಳ್ಳುವ ಸಿಹಿ ಘಳಿಗೆ, ಸೀರಿಯಲ್‌ಗಳಲ್ಲೂ ಈ ಫಸ್ಟ್‌ನೈಟ್‌ನ ಆಚರಣೆಯನ್ನು ರಸವತ್ತಾಗಿ ತೋರಿಸುತ್ತಾರೆ. ಆದರೆ ಹೆಚ್ಚಿನ ಸೀರಿಯಲ್‌ಗಳಲ್ಲಿ ರೋಚಕತೆಯನ್ನು ಕಾಯ್ದುಕೊಳ್ಳಲೋಸ್ಕರ ಈ ಫಸ್ಟ್‌ನೈಟ್‌ಅನ್ನು ಮುಂದೆ ಹಾಕುತ್ತಲೇ ಇರುತ್ತಾರೆ. ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನ ಅನಾರೋಗ್ಯ ನೆಪವಾಗಿ ಸಿಕ್ಕಿದೆ. ಆದರೆ ಮದುವೆಯ ಹೊತ್ತಿಗೆ ಟಾಪ್‌ನಲ್ಲಿದ್ದ ಈ ಸೀರಿಯಲ್ ಟಿಆರ್‌ಪಿ ಮದುವೆಯ ನಂತರ ಜರ್ರನೆ ಇಳಿದ ಕಾರಣಕ್ಕೋ ಏನೋ ಈಗ ಫಸ್ಟ್‌ನೈಟ್‌ ಅನ್ನು ತಂದು ಟಿಆರ್‌ಪಿ ಮತ್ತೆ ಏರಿಸಿಕೊಳ್ಳುವ ಪ್ಲಾನ್‌ ಮಾಡುತ್ತಿರುವಂತಿದೆ ಸೀರಿಯಲ್‌ ಟೀಮ್‌.

ಸದ್ಯಕ್ಕೀಗ ಹರ್ಷ ಭುವಿಯ ನಡುವಿನ ಫಸ್ಟ್‌ನೈಟ್‌(First night)ಗೆ ಸೂಚನೆ ಭುವಿಯ ಕಡೆಯಿಂದಲೇ ಬಂದಿದೆ. ಭುವಿಗಾಗಿ ಕಾತರಿಸಿ ಹಂಬಲಿಸಿ ಅವಳ ಜೊತೆಗೆ ಊಟ ಮಾಡೋಣ ಅಂತ ಆಕೆ ಸ್ಕೂಲಿನ ಬಳಿ ಹೋದರೂ ಅವಳು ಸಿಗದೇ ಪೆಚ್ಚು ಮೋರೆ ಹಾಕಿಕೊಂಡು ಹರ್ಷ ಮನೆಗೆ ಹಿಂತಿರುಗಿದ್ದಾನೆ. ಅವಳು ಬರುವ ತನಕವೂ ಹಸಿದುಕೊಂಡೇ ಕೂತಿದ್ದಾನೆ. ಭುವಿಗೆ ಹರ್ಷನ ಈ ನಡವಳಿಕೆ ಕಂಡು ಮನಸ್ಸು ತುಂಬಿ ಬಂದಿದೆ. ಅವಳು ಕೈಯಾರೆ ಹರ್ಷನಿಗೆ ಊಟ ಮಾಡಿಸಿದ್ದಾಳೆ. ಅಷ್ಟೊತ್ತಿಗೆ ಹರ್ಷನ ಚಿಕ್ಕಮ್ಮ ಹೇಳಿದ ವಿಷಯ ಅವಳ ಮನಸ್ಸಿಗೆ ಬಂದಿದೆ. ಅದನ್ನವಳು ನಾಚಿಕೊಂಡು ನಾಚಿಕೊಂಡೇ ಹರ್ಷನ ಬಳಿ ಪ್ರಸ್ತಾಪ ಮಾಡಿದ್ದಾಳೆ. 

ಕನ್ನಡತಿ: ಬೆಂಗಳೂರಿಗೆ ಬಂದಿಳಿದ ಚೀತ್ಕಳಾ, ಅಮ್ಮಮ್ಮನ ಎಂಟ್ರಿ ಸೂಚನೆಯೂ ಸಿಕ್ತು!

ಅಮ್ಮಮ್ಮ ಚೇತರಿಸಿಕೊಳ್ಳುತ್ತಿರುವುದನ್ನು ಹೇಳುತ್ತಲೇ, 'ಈಗ ಇನ್ನೇನು ತಡಮಾಡೋದು ಬೇಡ ಅನ್ಸುತ್ತೆ, ಅತ್ತೆ ಬಂದ ಮೇಲೆ ಶಾಸ್ತ್ರಗಳನ್ನು ಮಾಡಬಹುದು' ಅಂತ ಹರ್ಷನ ಬಳಿಕ ಹೇಳಿದ್ದಾಳೆ. ಹರ್ಷನಿಗೆ ಒಂದು ಕ್ಷಣ ಇವಳು ಏನು ಹೇಳ್ತಿದ್ದಾಳೆ ಅಂತ ಅರ್ಥ ಆಗದಿದ್ದರೂ ಆಮೇಲೆ ಟ್ಯೂಬ್‌ಲೈಟ್‌ ಹೊತ್ತಿಕೊಂಡಿದೆ. ಆದರೆ ಅವಳನ್ನು ಕಿಂಡಲ್‌(Kindle) ಮಾಡಲೆಂದೇ ತನಗೆ ಅರ್ಥವೇ ಆಗಿಲ್ಲ, ಇನ್ನೊಮ್ಮೆ ಹೇಳುವಂತೆ ಭುವಿಯ ಬಳಿ ನಾಟಕ ಮಾಡಿದ್ದಾನೆ. ಇದಕ್ಕೆ ಭುವಿ ನಾಚಿಕೊಂಡಿದ್ದಾಳೆ. ನಾಚಿಕೆಯಿಂದ ಮುಖ ಕೆಂಪು ಮಾಡಿಕೊಂಡು ಓಡಿ ಹೋಗುತ್ತಿದ್ದವಳ ಕೈ ಹಿಡಿದು, 'ಅಂದ್ರೆ ಆದಷ್ಟು ಬೇಗ ಈ ರೂಮಿಗೆ ಶಿಫ್ಟ್ ಆಗಬೇಕು ಅಂತಿದ್ದೀರಾ' ಅಂದಿದ್ದಾನೆ. ಭುವಿಯ ನಾಚಿಕೆಯೇ ಇದಕ್ಕೆ ಉತ್ತರವಾಗಿದೆ.

 

ಅತ್ತ ಅಮ್ಮಮ್ಮ ಸೀರಿಯಲ್‌ಗೆ ಮರಳುವ ಸೂಚನೆ ಈಗಾಗಲೇ ಸಿಕ್ಕಾಗಿದೆ. ಈ ಪಾತ್ರ ನಿರ್ವಹಿಸುವ ಚಿತ್ಕಳಾ ಬಿರಾದಾರ್ ಅಮೇರಿಕಾ ಪ್ರವಾಸಕ್ಕೆ ಹೋದವರು ಅಲ್ಲಿಂದ ಮರಳಿದ್ದಾರೆ. ಹಿಂದೆ ಇವರು ಅಮೆರಿಕಾಕ್ಕೆ ಹೋಗುತ್ತಿರುವ ಕಾರಣಕ್ಕೇ ಅವರ ಪಾತ್ರಕ್ಕೆ ತಾತ್ಕಾಲಿಕ ಬ್ರೇಕ್(Break) ನೀಡಲಾಗಿತ್ತು. ಈಗ ಅವರು ಮತ್ತೆ ಬರುವ ಸೂಚನೆ ಸಿಕ್ಕಿದೆ. ಅಮ್ಮಮ್ಮ ಚೇತರಿಸಿಕೊಳ್ತಿದ್ದಾರೆ ಅನ್ನೋದನ್ನು ಹರ್ಷನ ಚಿಕ್ಕಮ್ಮನೇ ಆತನಿಗೆ ತಿಳಿಸಿದ್ದಾರೆ. ಅಲ್ಲಿಗೆ ಅಮ್ಮಮ್ಮನ ಪಾತ್ರಕ್ಕಾಗಿ ತವಕಿಸುತ್ತಿದ್ದವರಿಗೆ ಅವರು ಮರಳುತ್ತಿರುವ ಸೂಚನೆ ಖುಷಿ ಕೊಟ್ಟಿದೆ. ಮತ್ತೊಂದೆಡೆ ಇದೇ ಕಾರಣಕ್ಕೆ ಕೊಂಚ ನೀರಸವಾಗುತ್ತಿರುವ ಹರ್ಷ ಭುವಿ ಬದುಕಿಗೂ ಖುಷಿ ಮರಳುವ ಸೂಚನೆ ಸಿಕ್ಕಿದೆ. ಆದರೆ ವರೂ ಈಗಾಗಲೇ ಭುವಿಯೇ ಡಿವೋರ್ಸ್ ಕೇಳುತ್ತಿರುವಂತೆ ಲಾಯರ್‌ ಬಳಿ ಲೆಟರ್ ರೆಡಿ ಮಾಡಿಸಿಕೊಂಡಿದ್ದಾಳೆ. ಇನ್ನೊಂದು ಕಡೆ ಸಾನಿಯಾ ಇವರಿಬ್ಬರ ಸಂಬಂಧಕ್ಕೆ ಕಲ್ಲು ಹಾಕಿ ಅತ್ತೆಯ ಆಸ್ತಿ ಕೊಳ್ಳೆ ಹೊಡೆಯೋ ಪ್ಲಾನ್ ಮಾಡುತ್ತಿದ್ದಾಳೆ. ಇವೆಲ್ಲದರ ನಡುವೆ ಹರ್ಷ ಭುವಿಯ ರೊಮ್ಯಾಂಟಿಕ್ ಲೈಫ್‌ ಯಾವಾಗ ಶುರುವಾಗಬಹುದು ಅನ್ನೋದು ಕುತೂಹಲ ಹೆಚ್ಚಿಸಿದೆ. ಭುವಿ ಪಾತ್ರದಲ್ಲಿ ರಂಜನಿ ರಾಘವನ್ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ರೊಮ್ಯಾಂಟಿಕ್(Romantic) ಹೀರೋ ಲುಕ್‌ನಲ್ಲಿ ಕಿರಣ್‌ರಾಜ್ ಮಿಂಚುತ್ತಿದ್ದಾರೆ.

ಕನ್ನಡತಿ: ಹರ್ಷ ಭುವಿ ಡಿವೋರ್ಸಾ? ಏನಪ್ಪಾ ಈ ಡೈರೆಕ್ಟರ್ ಕಥೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?