ಚಾರು ಮೇಡಂ, ನಿಮ್ಮ ಕೊರಳಿಗೆ ಇನ್ನೊಂದು ತಾಳಿ ಬೀಳೋದಿಕ್ಕೆ ಬಿಡಲ್ಲ: ರಾಮಾಚಾರಿ ಶಪಥ

Published : Mar 06, 2023, 12:46 PM IST
ಚಾರು ಮೇಡಂ, ನಿಮ್ಮ ಕೊರಳಿಗೆ ಇನ್ನೊಂದು ತಾಳಿ ಬೀಳೋದಿಕ್ಕೆ ಬಿಡಲ್ಲ: ರಾಮಾಚಾರಿ ಶಪಥ

ಸಾರಾಂಶ

ರಾಮಾಚಾರಿ ಸೀರಿಯಲ್‌ನಲ್ಲಿ ವಿಕಾಸ್‌ ಬನ್ನೇರಿ ಕಾಟದಿಂದ ಚಾರುವಿಗೆ ಮುಕ್ತಿ ಸಿಗೋ ಹಾಗೆ ಕಾಣ್ತಿಲ್ಲ. ಇನ್ನೊಂದೆಡೆ ರಾಮಾಚಾರಿಯೂ ಕಷ್ಟದಲ್ಲಿ ಸಿಲುಕಿದ್ದಾನೆ. ಆದರೂ ನಿಮ್ಮ ಕೊರಳಿಗೆ ಇನ್ನೊಂದು ತಾಳಿ ಬೀಳೋದಿಕ್ಕೆ ಬಿಡಲ್ಲ ಮೇಡಂ ಅಂತ ಚಾರು ಬಳಿ ಶಪಥ ಮಾಡಿದ್ದಾರೆ ಚಾರಿ. ಈತನ ನೆಕ್ಸ್ಟ್ ಪ್ಲಾನ್ ಏನು ಗೊತ್ತಾ?

ರಾಮಾಚಾರಿ ಸೀರಿಯಲ್‌ನಲ್ಲಿ ವೀಕ್ಷಕರ ಮೂಗಿಗೆ ತುಪ್ಪ ಹಚ್ಚೋ ತಂತ್ರ ಮುಂದುವರೀತಿದೆ. ರಾಮಾಚಾರಿ ಮದುವೆ ವಿಚಾರವನ್ನು ಮನೆಯವರ ಬಳಿ ಹೇಳೇ ಬಿಟ್ಟ ಅಂತ ಎರಡು ಸಲ ರೀಲ್ ಹತ್ತಿಸಿ ಆಯ್ತು. ಮೊದಲ ಸಲ ತನ್ನ ಕಲ್ಪನೆಯಲ್ಲೇ ಮದುವೆ ವಿಚಾರ ಹೇಳ್ಬಿಟ್ಟ. ಓಕೆ ಏನೋ ಒಂದ್ಸಲ ಕಾಗೆ ಹಾರಿಸ್ತಿದ್ದಾನೆ ಅಂತ ನಕ್ಕು ಸುಮ್ಮನಾದ್ರು ವೀಕ್ಷಕರು. ಇದೀಗ ಎರಡನೇ ಬಾರಿ ಆಂಜನೇಯನ ಪೂಜೆ ಮಾಡಬೇಕು ಅಂದಾಗ ರಾಮಾಚಾರಿ ಒಲ್ಲೆ ಅಂದ. ಯಾಕೆ ಅಂತ ಕೇಳಿದ್ದಕ್ಕೆ ತಾನೀಗ ವಿವಾಹಿತ ಅಂದ. ಮನೆಯವರೆಲ್ಲ ಗಾಬರಿಯಲ್ಲಿ ಬೆಚ್ಚಿಬಿದ್ದು ರಾಮಾಚಾರಿಯ ಮೇಲೆ ಮುಗಿಬೀಳ್ತಿರುವಾಗಲೇ ಇನ್ನೊಮ್ಮೆ ರಾಮಾಚಾರಿ ಕಾಗೆ ಹಾರಿಸಿದ್ದಾನೆ. ತನ್ನ ಮಾವನ ಮಗಳು ದೀಪಾ ಜೊತೆಗೆ ತನ್ನ ಮದುವೆ ಮಾತುಕತೆ ಈಗಾಗಲೇ ನಡೆದಿದೆ. ಅದಾಗಿ ಒಂದು ವರ್ಷ ಆಗಿರೋ ಕಾರಣ ಮದುವೆ ಆದ ಹಾಗೆಯೇ ಅಲ್ವಾ, ಸೋ ತಾನು ವಿವಾಹಿತ ಆದ ಹಾಗೆ ಅಂತ ಹೇಳಿದ್ದಾನೆ. ಇದು ಮನೆಯವರಿಗೆಲ್ಲ ರಿಲೀಫ್ ಕೊಟ್ಟಿದೆ. ಆದರೆ ಚಾರು, ಚಾರಿ ದಾಂಪತ್ಯವನ್ನು ಮತ್ತಷ್ಟು ಸಿಕ್ಕುಗಟ್ಟಿಸಿದೆ.

ಇನ್ನೊಂದು ಕಡೆ ಮತ್ತೊಂದು ಟ್ವಿಸ್ಟ್ ಆಗಿದೆ. ಚಾರುವಿಗೆ ವಿಕಾಸ್‌ ಜೊತೆಗೆ ಮದುವೆ ಫಿಕ್ಸ್ ಆಗಿದೆ. ಆ ವಿಕೃತ ಮನಸ್ಸಿನ ವ್ಯಕ್ತಿ ಚಾರುವಿಗೆ ಮನಸ್ಸಿದೆಯಾ ಇಲ್ವಾ ಅನ್ನೋದನ್ನೂ ನೋಡದೇ ಆಕೆಯ ಅಂಗೈ ಚುಂಬಿಸಿದ್ದಾನೆ. ಇದು ಚಾರುವಿಗೆ ಸಿಕ್ಕಾಪಟ್ಟೆ ಸಿಟ್ಟು ತಂದಿದೆ. ತಾನು ಸತ್ಯ ಹೇಳದೇ ಬೇರೆ ದಾರಿಯಿಲ್ಲ ಅನಿಸಿದೆ. ಅತ್ತ ರಾಮಾಚಾರಿ ಏನೋ ಸಬೂಬು ಹೇಳಿ ಮನೆಯವರ ಬಾಯಿ ಮುಚ್ಚಿಸುತ್ತಿದ್ದರೆ ಇತ್ತ ಚಾರು ಮನೆಯವರ ಮುಂದೆ ತನಗೆ ಕಣ್ಣು ಕಾಣ್ತಿರೋ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ಈ ಕಾರಣಕ್ಕಾದರೂ ಮನೆಯವರು ರಾಮಾಚಾರಿಯನ್ನು ಒಪ್ಪಬಹುದು ಅನ್ನೋದು ಅವಳ ಆಸೆ. ಆದರೆ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಚಾರು ತಾಯಿ ಮಾನ್ಯತಾ ಈ ಕಣ್ಣು ಬಂದ ಕ್ರೆಡಿಟ್ಸ್‌ ಎಲ್ಲವನ್ನೂ ಚಾರು ಮದ್ವೆ ಆಗೋ ಹುಡುಗ ವಿಕಾಸ್‌ಗೆ ಕೊಟ್ಟಿದ್ದಾಳೆ. ರಾಮಾಚಾರಿ ಮೇಲೆ ಅವಳ ದ್ವೇಷ ಮುಂದುವರಿದಿದೆ.

Ramachari: ಯಾಕಂದ್ರೆ ನನಗೆ ಮದ್ವೆ ಆಗಿದೆ.. ಎದೇಲಿ ಬಚ್ಚಿಟ್ಟುಕೊಂಡ ಸತ್ಯ ಹೇಳೇಬಿಟ್ಟ ರಾಮಾಚಾರಿ..

ಇದಕ್ಕು ಮೊದಲೇ ಚಾರು ರಾಮಾಚಾರಿಗೆ ಚೆನ್ನಾಗಿ ಕ್ಲಾಸ್ ತಗೊಂಡಿದ್ದಾಳೆ. ನೀನು ತಾಳಿ ಕಟ್ಟಿದ ನಿಮ್ಮ ಹೆಂಡ್ತಿಗೆ ಯಾರೊ ವಿಕಾಸ್ ಅನ್ನೋನು ಬಂದು ಕೈಗೆ ಮುತ್ತು ಕೊಟ್ಟಿದ್ದಾನೆ. ನಿನಗೇನೋ ಅನಿಸಿಲ್ವಾ? ನೀನು ತಾಳಿ ಕಟ್ಟೋ ಬದ್ಲು ನಾನು ಬೆಟ್ಟದಿಂದ ಬಿದ್ದು ಸಾಯೋಕೆ ಬಿಡಬಹುದಿತ್ತು. ನಂಗೆ ವಿಷ ಕೊಡು ಸತ್ಹೋಗ್ತೀನಿ ಅನ್ನೋ ಮಾತನ್ನು ಹೇಳಿದ್ದಾಳೆ. ರಾಮಾಚಾರಿ ಅವಳನ್ನು ಕನ್ವಿನ್ಸ್(Convince) ಮಾಡೋದಕ್ಕೆ ಟ್ರೈ ಮಾಡ್ತಿದ್ದಾನೆ. ಏನೇ ಪರಿಸ್ಥಿತಿ ಬಂದರೂ ತಾಳ್ಮೆ ತಗೋಬೇಕು ಮೇಡಂ ಅಂತ ತಾಳ್ಮೆಯ ಪಾಠ ಮಾಡ್ತಿದ್ದಾನೆ. ಇತ್ತ ತನ್ನ ಮನೆ ಮಂದಿಗೆ ಬೇರೆ ಏನೋ ಕಥೆ ಹೇಳಿದ್ದಾನೆ.

ಸದ್ಯಕ್ಕೀಗ ಚಾರು ಕತ್ತಿಗೆ ಎರಡನೇ ತಾಳಿ ಬೀಳೋದಕ್ಕೆ ಬಿಡೋದಿಲ್ಲ ಅಂತ ರಾಮಾಚಾರಿ ಚಾರುವಿಗೆ ಮಾತು ಕೊಟ್ಟಿದ್ದಾನೆ. ಆ ಮಾತನ್ನು ಹೇಗೆ ಈಡೇರಿಸ್ತಾನೋ ಗೊತ್ತಿಲ್ಲ. ಇನ್ನೊಂದೆಡೆ ಚಾರುವಿಗೆ ಕಣ್ಣು ಬಂದಿರೋ ವಿಷ್ಯ (Matter)ಗೊತ್ತಾದ್ರೆ ಅದಕ್ಕೆ ಹೇಗೆ ರಿಯಾಕ್ಟ್ ಆಗ್ತಾನೋ ಗೊತ್ತಿಲ್ಲ. ಏಕೆಂದರೆ ಈ ಹಿಂದೆಯೇ ಚಾರು ಮೇಡಂಗೆ ಕಣ್ಣು ಬಂದಮೇಲೆ ಅವರ ದಾರಿ ಅವರದು, ನನ್ನ ದಾರಿ ನನ್ನದು ಅನ್ನೋ ಮಾತು ಹೇಳಿದ್ದಾನೆ. ಮತ್ತೆ ಚಾರು ಚಾರು ಮಧ್ಯೆ ಅಂತರ (Distance) ಬೆಳಿಯುತ್ತಾ? ಅಥವಾ ಚಾರಿ ಚಾರುವಿನ ಮದುವೆಯನ್ನು (Marriage) ತಡೀತಾನಾ ಅನ್ನೋದನ್ನು ಕಾದು ನೋಡಬೇಕು.

Ramachari: ಚಾರುಗೆ ಮಗ ತಾಳಿ ಕಟ್ಟಿರೋ ವಿಷ್ಯ ಕೇಳಿ ರಾಮಾಚಾರಿ ತಾಯಿಗೆ ಹಾರ್ಟ್ ಅಟ್ಯಾಕ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್