
ಕನ್ನಡದ ಜನಪ್ರಿಯ ವಾಹಿನಿ 'ಸ್ಟಾರ್ ಸುವರ್ಣ' ಪ್ರೇಕ್ಷಕರಿಗಾಗಿ ಹೊತ್ತು ತರ್ತಿದೆ ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆ 'ಅನುಪಮ'. ವಿಭಿನ್ನ ಕಥಾ ಹಂದರವುಳ್ಳ ನಮ್ಮಲಚ್ಚಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು, ಕಥೆಯೊಂದು ಶುರುವಾಗಿದೆ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡಿರುವ ಸ್ಟಾರ್ ಸುವರ್ಣ ಇದೀಗ ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆಯನ್ನು ಹೇಳಲು ಮುಂದಾಗಿದೆ.
ಮಧ್ಯ ವಯಸ್ಕ ಮಹಿಳೆ ಅನುಪಮ. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ ಈಕೆಗೆ ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ. ತಾಯಿ, ಹೆಂಡತಿ. ಮಗಳು, ಸೊಸೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುವ ಈಕೆಗೆ 3 ಮಕ್ಕಳು, ಗಂಡನಿಗೆ ಈಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರು ಅತ್ತೆ ದೂಷಿಸುವುದು ಈಕೆಯನ್ನೇ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕ ಯುಗಕ್ಕೆ ಹೊಂದಿಕೊಂಡಿರುವ ಕುಟುಂಬದಲ್ಲಿ ಅನುಪಮ ಯಾವ ರೀತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಗಂಡಂದಿರು ಅಡ್ಜೆಸ್ಟ್ ಮಾಡಿಕೊಂಡಿಲ್ಲ ಅಂದ್ರೆ ಕಷ್ಟ ಆಗುತ್ತೆ: 'ಕನ್ನಡತಿ' ಚಿತ್ಕಲಾ ಬಿರಾದರ್
ದೇಶದ ನಂ.1 ಧಾರವಾಹಿ ಎಂಬ ಪಟ್ಟವನ್ನು ಅಲಂಕರಿಸಿರುವ "ಅನುಪಮ" ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡದಲ್ಲಿ ಬರ್ತಿರೋದಕ್ಕೆ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಅಂದಹಾಗೆ ಈ ಧಾರಾವಾಹಿ ಯಾವಾಗಿಂದ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದಹಾಗೆ ಹೊಚ್ಚ ಹೊಸ ಧಾರಾವಾಹಿ "ಅನುಪಮ" ಮಧ್ಯಾಹ್ನದ ಮನರಂಜನೆಯಲ್ಲಿ ಇದೇ ಮಾರ್ಚ್ 6 ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.
ಸ್ಟಾರ್ ಸುವರ್ಣದಲ್ಲಿ ಸಿಹಿಕಹಿ ಚಂದ್ರು ಬೊಂಬಾಟ್ ಭೋಜನ ಸೀಸನ್ 3 ಶುರು
ಅನುಪಮಾ ಧಾರಾವಾಹಿಯನ್ನು ಕನ್ನಡದಲ್ಲೂ ಕಣ್ತುಂಬಿಕೊಳ್ಳಲು ಕನ್ನಡ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಅನುಪಮಾ ಪ್ರಸಾರಕ್ಕೆ ಇನ್ನೇನು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿದ್ದ ಅನುರಾಗ ಅರಳಿತು ಧಾರಾವಾಹಿ ಮಾರ್ಚ್ 6ರಿಂದ ಮಧ್ಯಾಹ್ನಾ 2 ಗಂಟೆಗೆ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.