ದೊಡ್ಡ ವ್ಯಕ್ತಿ ಎನಿಸಿಕೊಂಡಿರೋ ಹುಳಗಳಿಂದ ಕೊಲೆ ಬೆದರಿಕೆ; ನಟಿ ವಿನಯಾ ಪ್ರಸಾದ್ ಪುತ್ರಿಯ ಶಾಕಿಂಗ್ ಹೇಳಿಕೆ

By Vaishnavi ChandrashekarFirst Published Mar 4, 2023, 5:03 PM IST
Highlights

ತಂದೆಯನ್ನು ಕಳೆದುಕೊಂಡ ನಂತರ ಜೀವನ ಬದಲಾದ ರೀತಿ ಬಗ್ಗೆ ನೆನಪಿಸಿಕೊಂಡ ಪ್ರಥಮಾ ಪ್ರಸಾದ್. Z- ಸೆಕ್ಯೂರಿಟಿ ಪಡೆಯಲು ಕಾರಣವೇನು?
 

ಕನ್ನಡ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ಅದ್ಭುತ ನಟಿ ಎಂದು ಹೆಸರು ಮಾಡಿರುವ ಪ್ರಥಮಾ ಪ್ರಸಾದ್ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ. ಬಾಡಿ ಶೇಮಿಂಗ್, ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ ಬಗ್ಗೆ ಮಾತನಾಡಿರುವ ಪ್ರಥಮಾ ತಂದೆಯನ್ನು ಕಳೆದುಕೊಂಡ ನಂತರ ಜೀವನ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. 

'ತಂದೆ ಇಲ್ಲ ತಂದೆ ಬೇಕು ಎಂದು ನಾನು ಹಠ ಮಾಡಿದ್ದರೆ ನನ್ನ ತಾಯಿ ಬ್ರೇಕ್ ಡೌನ್ ಅಗುತ್ತಿದ್ದರು. ನನ್ನ ತಾಯಿಗೆ ನಾನೇ ಶಕ್ತಿ ಮತ್ತು ನಾನೇ ವೀಕ್‌ನೆಸ್‌. ನನ್ನ ತಾಯಿ ಕಣ್ಣಲ್ಲಿ ನೀರು ಬರಬಾರದು. ಪ್ರಪಂಚದಲ್ಲಿ ಯಾರಿಗೆ ಬೇಕಿದ್ದರೂ ನೋವು ಹೇಳಿಕೊಳ್ಳುವೆ ನನ್ನ ಸ್ನೇಹಿತರ ಬಳಿ ಅಳುವೆ ಆದರೆ ನನ್ನ ತಾಯಿ ಜೊತೆ ಈ ವಿಚಾರ ಮಾತನಾಡಲು ಆಗುತ್ತಿರಲಿಲ್ಲ. ತಂದೆ ಜೀವನದ ಖುಷಿ ಕ್ಷಣಗಳು ಮತ್ತು ಅವರ ಲೈಫ್‌ಸ್ಟೈಲ್ ಹಾಗು ಪಾಸಿಟಿವ್ ವಿಚಾರಗಳನ್ನು ಮಾತ್ರ ನಾನು ಚರ್ಚೆ ಮಾಡುತ್ತಿದ್ದೆ. ತಾಯಿ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡುವುದಿಲ್ಲ' ಎಂದು ನಿರ್ದೇಶಕ ರಘುರಾಮ್‌ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos

ವೇಟ್‌ಲಾಸ್‌ನಿಂದ ಲಕ್ಷಗಟ್ಟಲೆ ಹಣ ಕಳೆದುಕೊಂಡೆ; ಬಾಡಿ ಶೇಮಿಂಗ್‌ ಬಗ್ಗೆ ಮೌನ ಮುರಿದ ಪ್ರಥಮಾ ಪ್ರಸಾದ್

'ಚಿಕ್ಕ ವಯಸ್ಸಿಗೆ ಅಷ್ಟೊಂದು ಮೆಚ್ಯೂರಿಟಿ ಬರಲು ಕಾರಣ ಏನೆಂದರೆ ನನ್ನ ತಾಯಿ ಬೇರೆ ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದರು ಹೀಗಾಗಿ ತಿಂಗಳುಗಟ್ಟಲೆ ಮನೆಗೆ ಬರುತ್ತಿರಲಿಲ್ಲ ದುಡಿಯುವ ಅನಿವಾರ್ಯ ಇತ್ತು.  ಮಗಳನ್ನು ಹಾಸ್ಟಲ್‌ಗೆ ಸೇರಿಸು ಇಲ್ಲ ಕೆಲಸ ಬಿಡು ಅದು ಆಗಲ್ಲ ಅಂದ್ರೆ ಬ್ಯಾಂಕ್ ಕೆಲಸಕ್ಕೆ ಸೇರಿಕೊಳ್ಳಿ ಎಂದು ಅನೇಕರು ಹೇಳುತ್ತಿದ್ದರು ಆದರೆ ನನ್ನನ್ನು ಒಬ್ಬಂಟಿ ಮಾಡಲು ತಾಯಿಗೆ ಇಷ್ಟವಿರಲಿಲ್ಲ. ನಾನು ಕಲಾವಿದೆ ಬ್ಯಾಂಕ್‌ ಕೆಲಸ ಸೇರಿಕೊಂಡು ಜೀವನ ಮಾಡಬಹುದು ಆದರೆ ನನ್ನ ಪ್ಯಾಷನ್‌ನ ಯಾವಾಗ ಫಾಲೋ ಮಾಡಬೇಕು ಎಂದು ಇಡೀ ಕುಟುಂಬವನ್ನು ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಿಸಿಕೊಂಡರು. ಮಗಳು ಸೆಕ್ಯೂರ್ ಆಗಿರಬೇಕು ಎಂದು ಅಮ್ಮ ಯೋಚನೆ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಪೋನ್‌ ಇರುತ್ತಿರಲಿಲ್ಲ ಬ್ಯುಸಿ ಕೆಲಸ ಮುಗಿಸಿಕೊಂಡು ಅಮ್ಮ ಕರೆ ಮಾಡಿದಾಗ ಅಳುವುದಕ್ಕೆ ಆಗುತ್ತಿರಲಿಲ್ಲ ಒಂದೇ ವಿಚಾರ ನಾನು ಯೊಚನೆ ಮಾಡಿದ್ದು ಅಂದ್ರೆ ನಾನು ಖುಷಿಯಾಗಿದ್ದರೆ ಅಮ್ಮ ಖುಷಿಯಾಗಿರುತ್ತಾರೆಂದು. ಶಾಲೆಗೆ ಹೋದರೆ ಅಲ್ಲಿದ್ದವರು ನಿಮ್ಮ ಅಪ್ಪ ಸತ್ತೋದ್ರಾ ಎನ್ನುತ್ತಿದ್ದರು ನಿಮ್ಮ ತಾಯಿ ನಿನ್ನನ್ನು ಬಿಟ್ಟು ಸಿನಿಮಾ ಮಾಡುತ್ತಿದ್ದಾರಾ ಎಂದು ಕೊಂಕು ಮಾತನಾಡುತ್ತಿದ್ದರು. ಅನೇಕರು ಕೊಂಕು ಮಾತುಗಳನ್ನು ಕೇಳಿಸಿಕೊಂಡು ಸ್ಟ್ರಾಂಗ್ ಆಗಿದೆ. ಅಜ್ಜಿ ಮತ್ತು ಚಿಕ್ಕಮ್ಮ ಸಪೋರ್ಟ್‌ ಇತ್ತು. ನಾನು ಖುಷಿಯಾಗಿದಷ್ಟು ನನ್ನ ತಾಯಿ ಖುಷಿಯಾಗಿರುತ್ತಿದ್ದರು' ಎಂದು ಹೇಳಿದ್ದಾರೆ. \

ನನ್ನ ಮಗುವಿಗೋಸ್ಕರ ಬದುಕಬೇಕು; ಡಿಪ್ರೆಶನ್‌ಗೆ ಜಾರಿದ ನಟಿ ಪ್ರಥಮ್ ಪ್ರಸಾದ್ ಕಿವಿ ಮಾತು

'28 ವರ್ಷಗಳಿಂದ ತಂದೆ ಇಲ್ಲ ಅನ್ನೋ ನೋವು ನನ್ನನ್ನು ಕಾಡುತ್ತದೆ. ನಾವು ಧೈರ್ಯ ಮಾಡಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ನನ್ನ ತಾಯಿಗೆ ತುಂಬಾ ಚಾಲೆಂಜ್‌ಗಳಿತ್ತು. ಆರ್ಥಿಕವಾಗಿ ಗಟ್ಟಿಯಾಗಬೇಕಿತ್ತು ಹಾಗೂ ನೆಗೆಟಿವ್ ಕಾಮೆಂಟ್‌ಗಳನ್ನು ಎದುರಿಸಲು ಮನಸ್ಸು ಬೇಕಿತ್ತು ಕೆಲವೊಮ್ಮೆ ರೋಬೋಟ್ ರೀತಿ ಕೆಲಸ ಮಾಡುತ್ತಿರುವೆ ಎನ್ನುತ್ತಿದ್ದರು. ನನ್ನ ಮಗುವನ್ನು ಮನೆಯಲ್ಲಿ ಬಿಟ್ಟು ಶೂಟಿಂಗ್ ಹೋಗಬೇಕು ಅಂದ್ರೆ ಮನಸ್ಸು ತಳಮಳ ಮಾಡುತ್ತದೆ, ಆಗ ನನ್ನ ತಾಯಿ ಹೇಗೆ ಅನಿಸುತ್ತಿತ್ತು ಎಂದು ನೆನವು ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ನನ್ನ ತಾಯಿ ಬೆಂಕಿ ರೀತಿ, ಸುಟ್ಟಿದ್ದರೆ ಭಸ್ಮ ಅಗುತ್ತೀರಾ ಅನ್ನೋ ರೀತಿ ಪ್ರೋಜೆಕ್ಟ್‌ ಮಾಡಿಕೊಂಡು ಬಂದಿದ್ದಾರೆ. ಯಾವುದೋ ಒಂದು ಕಾರಣಕ್ಕೆ ನನಗೆ z-ಸೆಕ್ಯೂರಿಟಿ ಹಾಕಬೇಕಿತ್ತು. ಸಾಮಾಜದಲ್ಲಿ ದೊಡ್ಡವರು ಅನಿಸಿಕೊಂಡಿರುವ ಹುಳಗಳು ತಾಯಿಗೆ ಬೆದರಿಕೆ ಹಾಕುತ್ತಿದ್ದರು ನಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ನಿನ್ನ ಮಗಳನ್ನು ಕೊಲೆ ಮಾಡುವೆವು ಎಂದು. ಆಗ ಅಮ್ಮನ ಮನಸ್ಥಿತಿ ಹೇಗಿರಬೇಕು ಯೋಜನೆ ಮಾಡಿ. ಒಂದು ದಿನ ಸೆಟ್‌ನಲ್ಲಿ ತಾಯಿ ಕಣ್ಣೀರು ಹಾಕಿಲ್ಲ ಅವರು ಹೇಗೆಂದು ಅವರ ತಂಡದವರನ್ನು ಕೇಳಿ. ತಾಯಿ ಏನು ಮಾಡುತ್ತಿದ್ದಾರೆ ಎಂದು ಅರ್ಥ ಅಗುತ್ತಿರಲಿಲ್ಲ ಆದರೆ ಈಗ ನೋಡಿದರೆ ಭಯನೇ ಆಗುತ್ತದೆ. ನನ್ನ ಮಹಾಕಾಳಿ ನನ್ನ ತಾಯಿ ನನ್ನ ಜೊತೆಗಿದ್ದಾರೆ' ಎಂದಿದ್ದಾರೆ ಪ್ರಥಮಾ. 

 

click me!