Lakshna serial: ಆಯ್ತಲ್ಲಾ, ನಕ್ಷತ್ರಾ ಕಥೆ ಎಲ್ಲ ಭೂಪತಿಗೆ ಗೊತ್ತಾಯ್ತು, ಮುಂದ?

Published : Feb 15, 2023, 11:08 AM IST
Lakshna serial: ಆಯ್ತಲ್ಲಾ, ನಕ್ಷತ್ರಾ ಕಥೆ ಎಲ್ಲ ಭೂಪತಿಗೆ ಗೊತ್ತಾಯ್ತು, ಮುಂದ?

ಸಾರಾಂಶ

ಲಕ್ಷಣ ಸೀರಿಯಲ್‌ನಲ್ಲಿ ಇಲ್ಲೀವರೆಗೆ ಮುಚ್ಚಿಟ್ಟ ಸತ್ಯ ಬಯಲಾಗಿದೆ. ಭೂಪತಿ ತಮ್ಮ ಮೌರ್ಯನೆ ಸತ್ಯ ಏನು ಅನ್ನೋದನ್ನು ಮನದಟ್ಟು ಮಾಡಿಸಿದ್ದಾನೆ. ಇನ್ನೊಂದು ಕಡೆ ಡೆವಿಲ್ ಮತ್ತು ಶ್ವೇತಾ ನಡುವೆ ಫೈಟ್ ಶುರುವಾಗ್ತಿದೆ. ಇದೆಲ್ಲಿ ಹೋಗಿ ಮುಟ್ಟಬಹುದು ಅನ್ನೋ ಕುತೂಹಲ ಹೆಚ್ಚಾಗ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷಣ’. ಈ ಸೀರಿಯಲ್‌ ಶುರುವಿಂದಲೂ ಹೊಸತನಕ್ಕೆ ಜನಪ್ರಿಯವಾಗಿತ್ತು. ಇದರ ಸ್ಟೋರಿ ಲೈನ್‌ನಲ್ಲೇ ಹೊಸತನ ಇತ್ತು. ಹೆಚ್ಚು ಲ್ಯಾಗ್‌ಗಳಿಲ್ಲದೇ ಕಥೆಯನ್ನು ಡಿಫರೆಂಟ್ ಆಗಿ ನರೇಟ್ ಮಾಡೋ ರೀತಿಗೆ ವೀಕ್ಷಕರು ಫಿದಾ ಆಗಿದ್ರು. ಇದೀಗ ಮತ್ತೊಂದು ತಿರುವು ಎದುರಾಗಿದೆ. ಬಹಳ ರೋಚಕವಾಗಿ ಸೀರಿಯಲ್‌ ಮುನ್ನುಗ್ಗುತ್ತಿದೆ. ನಕ್ಷತ್ರ ಮೇಲೆ ತಾನು ವೃಥಾ ತಪ್ಪು ಹೊರಿಸಿದ್ದು ಭೂಪತಿಗೆ ಗೊತ್ತಾಗಿದೆ. ಆತನಿಗೆ ತನ್ನ ತಪ್ಪು ಕಲ್ಪನೆ ಬಗ್ಗೆ ಅರಿವಾಗಿದೆ. ಇಲ್ಲೀವರೆಗೆ ಮದುವೆ ಸಮಯದಲ್ಲಿ ನಕ್ಷತ್ರ ತನಗೆ ಮೋಸ ಮಾಡಿದ್ದಾಳೆ ಅಂತಲೇ ಭೂಪತಿ ನಂಬಿದ್ದ. ಆದರೆ ತಾನು ಅಂದುಕೊಂಡದ್ದೆಲ್ಲ ಸತ್ಯ ಅಲ್ಲ ಅನ್ನೋ ಸಂಗತಿ ಭೂಪತಿಗೆ ಗೊತ್ತಾಗಿದೆ.

ಜಗನ್ನಾಥ್ ಚಂದ್ರಶೇಖರ್ ಪ್ರಮುಖ ಪಾತ್ರದಲ್ಲಿ ನಿಭಾಯಿಸುತ್ತಿರುವ ‘ಲಕ್ಷಣ’ ಸೀರಿಯಲ್‌ಗೆ ಇದೀಗ ದೊಡ್ಡ ತಿರುವು ಲಭಿಸಿದೆ. ಭೂಪತಿ ಮುಂದೆ ಬಹುದೊಡ್ಡ ರಹಸ್ಯ ರಿವೀಲ್ ಆಗಿದೆ. ಇಷ್ಟು ದಿನ ನಕ್ಷತ್ರ ಬಗ್ಗೆ ಭೂಪತಿ ತಪ್ಪು ತಿಳಿದುಕೊಂಡಿದ್ದರು. ಆದ್ರೀಗ, ನಕ್ಷತ್ರಳದ್ದು ತಪ್ಪಿಲ್ಲ ಎಂಬ ಸತ್ಯ ಭೂಪತಿಗೆ ಗೊತ್ತಾಗಿದೆ.

ಹಿಂದೆ ಇದನ್ನೇ ಸತ್ಯವೆಂದು ನಂಬಿದ್ದ ಮೌರ್ಯ ನಕ್ಷತ್ರಳನ್ನ ಕೊಲ್ಲಲು ಮುಂದಾಗಿದ್ದ. ಭೂಪತಿ ಮದುವೆ ವಿಷಯದಲ್ಲಿ ಬ್ಲಾಕ್ ಮೇಲ್ ಮಾಡಿದ್ದ ಚಂದ್ರಶೇಖರ್ ಹಾಗೂ ಪುತ್ರಿ ನಕ್ಷತ್ರ ವಿರುದ್ಧ ಮೌರ್ಯ ದ್ವೇಷ ಕಾರುತ್ತಿದ್ದ. ಆದ್ರೆ, ಮಗಳ ಪ್ರೀತಿಯನ್ನ ಉಳಿಸುವ ಸಲುವಾಗಿ ಚಂದ್ರಶೇಖರ್ ಹಾಗೆ ಮಾಡಿದ್ದರು ಮತ್ತು ಮದುವೆ ವಿಚಾರದಲ್ಲಿ ನಕ್ಷತ್ರ ಯಾವುದೇ ಮೋಸ ಮಾಡಿರಲಿಲ್ಲ ಎಂಬ ಸತ್ಯ ಮೌರ್ಯನಿಗೆ ಅರಿವಾಯಿತು. ಯಾವಾಗ ಸತ್ಯ ಗೊತ್ತಾಯ್ತೋ ಆಗ ಮೌರ್ಯನಿಗೆ ದ್ವೇಷ ಕರಗಿತು. ನಕ್ಷತ್ರ ಒಳ್ಳೆತನ ಕಂಡು ಈಕೆಗಿಂತ ಒಳ್ಳೆ ಹುಡುಗಿ ತನ್ನ ಅಣ್ಣನಿಗೆ ಸಿಗೋದು ಸಾಧ್ಯ ಇಲ್ಲ ಅನ್ನೋದು ಗೊತ್ತಾಯ್ತು. ಹಿಂದೆ ನಕ್ಷತ್ರಳನ್ನ ಕೊಲ್ಲಲು ಮುಂದಾಗಿದ್ದ ಮೌರ್ಯನೇ ಇದೀಗ ಅತ್ತಿಗೆ ನಕ್ಷತ್ರಳ ಜೀವವನ್ನು ಕಾಪಾಡಿದ್ದಾನೆ. ಅಷ್ಟೇ ಅಲ್ಲ, ನಕ್ಷತ್ರ ಹಾಗೂ ಚಂದ್ರಶೇಖರ್ ಬಗೆಗೆ ಭೂಪತಿಗಿದ್ದ ತಪ್ಪು ಕಲ್ಪನೆಯನ್ನ ಹೋಗಲಾಡಿಸುವ ಕೆಲಸವನ್ನು ಮೌರ್ಯ ಮಾಡಿದ್ದಾನೆ.

Jothe jotheyali : ಅನು ಪ್ರೆಗ್ನೆಂಟ್ ಆಗಿ ಅಷ್ಟು ಟೈಮಾಯ್ತು, ಯಾಕಿನ್ನೂ ಹೊಟ್ಟೆನೇ ಬಂದಿಲ್ಲ!

ರಾಜಕುಮಾರನ ಕಥೆಯ ಮೂಲಕ ತನ್ನ ಅಣ್ಣನಿಗೆ ಮೌರ್ಯ ನಕ್ಷತ್ರಳ ಕಥೆ ಹೇಳಿದ್ದಾನೆ. ರಾಜಕುಮಾರನನ್ನು ಪ್ರೀತಿಸಿ ಆತನನ್ನು ಮೆಚ್ಚಿಕೊಂಡ ನಿರ್ಭಾಗ್ಯ ಹುಡುಗಿ ಆತನ ದೊಡ್ಡ ಶ್ರೀಮಂತ ಅಂತ ಗೊತ್ತಾದಮೇಲೆ ಹೇಗೆ ಎಲ್ಲ ತ್ಯಾಗಕ್ಕೂ ಮುಂದಾಗಿದ್ದಳು, ಮುಂದೆ ತನ್ನ ತಂದೆಯ ಆಣೆಗೆ ತಲೆಕೊಟ್ಟು ಮನಸ್ಸಿಲ್ಲದಿದ್ದರೂ ಹೇಗೆ ಆತನನ್ನು ಮದುವೆ ಆದಳು ಅನ್ನೋದನ್ನು ಹೇಳಿದ್ದಾನೆ. ಇದರಲ್ಲಿ ನಕ್ಷತ್ರಳದ್ದು ಕಿಂಚಿತ್ ತಪ್ಪೂ ಇಲ್ಲ ಅನ್ನೋದನ್ನು ಮನದಟ್ಟು ಮಾಡಿದ್ದಾನೆ. ಮದುವೆಯಲ್ಲಿ ನಕ್ಷತ್ರ ಕಡೆಯಿಂದ ಯಾವುದೇ ಮೋಸ ಆಗಿಲ್ಲ ಎಂಬ ಸತ್ಯದರ್ಶನ ಭೂಪತಿಗಾಗಿದೆ. ಸತ್ಯ(Truth) ಅರಿತ ಭೂಪತಿ ಇದೀಗ ಪ್ರಮಾಣ ಮಾಡಿದ್ದಾರೆ. 'ಇನ್ಯಾವತ್ತೂ ನಕ್ಷತ್ರ ಕಣ್ಣಲ್ಲಿ ನೀರು ಬಾರದ ಹಾಗೆ, ನಕ್ಷತ್ರ ಬೇಜಾರು ಮಾಡಿಕೊಳ್ಳದ ಹಾಗೆ ನಾನು ನೋಡಿಕೊಳ್ತೀನಿ' ಎಂದು ಮುಂದೆ ಭೂಪತಿ ಪ್ರಮಾಣ ಮಾಡಿದ್ದಾನೆ.

ಸತ್ಯ ಗೊತ್ತಾಯ್ತು, ಮುಂದೆ ರೊಮ್ಯಾಂಟಿಕ್(Romantic) ಕಥೆಯೊಂದು ಶುರುವಾಗ್ತಿದೆ ಅನ್ನೋ ಹಿಂಟ್(Hint) ಈ ಮೂಲಕ ವೀಕ್ಷಕರಿಗೆ ಸಿಕ್ಕಿದೆ. ಇನ್ನೊಂದು ಕಡೆ ಡೆವಿಲ್ ಯಾರು ಅನ್ನೋ ಸತ್ಯ ವಿಲನ್ ಶ್ವೇತಾಗೆ ಗೊತ್ತಾಗಿದೆ. ವಿಲನ್ ವಿಲನ್‌ಗಳ ಮಧ್ಯೆ ಫೈಟ್ ಶುರುವಾಗಿದೆ. ಅವ್ರವ್ರು ಹೊಡೆದಾಡ್ಕೊಂಡು ಸಾಯ್ಲಿ, ನಕ್ಷತ್ರ ಭೂಪತಿ ಚೆನ್ನಾಗಿರ್ಲಿ ಅಂತ ಒಳ್ಳೇ ಮನಸ್ಸಿನ ವೀಕ್ಷಕರು ಹಾರೈಸುತ್ತಿದ್ದಾರೆ.

ಶ್ವೇತಾಗೆ ಕೊಲೆ ಬೆದರಿಕೆ ಹಾಕಿದ ಡೆವಿಲ್; ಮೊಬೈಲ್ ಕ್ಯಾಮೆರಾದಲ್ಲಿ ಫುಲ್ ರೆಕಾರ್ಡ್‌?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?