ಸುವರ್ಣ ಸೂಪರ್ ಸ್ಟಾರ್‌ನಲ್ಲಿ ಕನ್ನಡತಿ ಚಿತ್ಕಲಾ ಬಿರಾದರ್. ರಿಯಲ್ ಲೈಫ್ ಹೀರೋ ನನ್ನ ಪತಿನೇ....
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕನ್ನಡತಿ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾದ ರತ್ನಮಾಲಾ ಉರ್ಫ್ ಚಿತ್ಕಲಾ ಬಿರಾದರ್ ಸುವರ್ಣ ಸೂಪರ್ ಸ್ಟಾರ್ ಶೋನಲ್ಲಿ ಸ್ಪರ್ಧಿಸಿದ್ದಾರೆ. ಶಾಲಿನಿ ಸತ್ಯನಾರಾಯಣ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋಗೆ ತನುಜಾ ಸಿನಿಮಾ ತಂಡದವರು ಆಗಮಿಸಿದ್ದರು. ಈ ವೇಳೆ ತಮ್ಮ ಲೈಫ್ ರಿಯಲ್ ಸ್ಟಾರ್ ಯಾರೆಂದು ಹೇಳಿದ್ದಾರೆ.
'ನನ್ನ ಲೈಫ್‌ನ ಸೂಪರ್ ಸ್ಟಾರ್ ವ್ಯಕ್ತಿ ನನ್ನ ಗಂಡ. ಎಷ್ಟೋ ಸಲ ತಂದೆ ತಾಯಿ ಬಗ್ಗೆ ಮಾತನಾಡಿರುವೆ. ಗಂಡ ಸೂಪರ್ ಸ್ಟಾರ್ ಅಂತ ಈಗ ಅನಿಸುತ್ತಿರುವುದು. ಮದುವೆಯಾಗಿ ಅದೆಷ್ಟೋ ವರ್ಷ ಆದ್ಮೇಲೆ ಸಿನಿಮಾ ಇಂಡಸ್ಟ್ರಿಗೆ ಬಂದಿರುವುದು ಆ ಸಮಯದಲ್ಲಿ ತಂದೆ ತಾಯಿ ಮಾವ ಎಲ್ಲ ಸ್ವಲ್ಪ ಬೇಡ ಎನ್ನುತ್ತಿದ್ದರು. ಲೆಕ್ಚರ್ ಆಗಿ ಕೆಲಸ ಮಾಡಲಿ ಎಂದು ಮಾವ ಹೇಳುತ್ತಿದ್ದರು. ಮನೆಯಲ್ಲಿ ಕೋಲ್ಡ್ ವಾರ್ ಆಯ್ತು ವಾದ ವಿವಾದಗಳು ಆಯ್ತು ಆ ಸಮಯದಲ್ಲಿ ನನ್ನ ಜೊತೆಗೆ ನಿಂತವರು ನನ್ನ ಗಂಡ. ಇವತ್ತಿಗೂ ಕೂಡ ಅದೆಷ್ಟೋ ದಿನಗಳು ಶೂಟಿಂಗ್ ಮುಗಿಸಿಕೊಂಡು ತಡರಾತ್ರಿ ಬರ್ತೀವಿ ನಿದ್ರೆ ಆಗಿರುವುದಿಲ್ಲ ಅಡುಗೆ ಮಾಡಲು ಆಗುವುದಿಲ್ಲ ಮನೆಯಲ್ಲಿ ಅಸ್ತವ್ಯಸ್ತಗಳು ಅದೆಷ್ಟೋ ಆಗುತ್ತದೆ ಆ ಸಮಯದಲ್ಲಿ ಗಂಡಂದಿರು ಅಜೆಸ್ಟ್ ಮಾಡಿಕೊಂಡಿಲ್ಲ ಅಂದ್ರೆ ಕಷ್ಟ ಆಗುತ್ತದೆ. ನನ್ನ ಮಕ್ಕಳು ಕೂಡ ಅಜೆಸ್ಟ್ ಮಾಡಿಕೊಳ್ಳುತ್ತಾರೆ ಅದು ಅಪ್ಪನ ನೋಡಿ ಮಾಡಿಕೊಳ್ಳುತ್ತಾರೆ ಅಪ್ಪ ಸಪೋರ್ಟ್ ಮಾಡುತ್ತಿದ್ದಾರೆ ಅಂದರೆ ನಾಳೆ ಅವರ ಹೆಂಡತಿಗೂ ಕೂಡ ಸಪೋರ್ಟ್ ಮಾಡುತ್ತಾರೆ. ನನ್ನ ಜರ್ನಿಯಲ್ಲಿ ಮಕ್ಕಳು ಕೂಡ ಕಲಿಯುತ್ತಿದ್ದಾರೆ ಎಂದು ನಾನು ಅಂದುಕೊಂಡಿರುವೆ' ಚಿತ್ಕಲಾ ಮಾತನಾಡಿದ್ದಾರೆ.
ಚಿತ್ಕಲಾಗೀಗ 50K ಫ್ಯಾನ್ಸ್! ಖುಷಿ ಹಂಚಿಕೊಂಡ ಕನ್ನಡತಿ ಅಮ್ಮಮ್ಮ!
'ನೀವು ಹೇಳುತ್ತಿರುವುದಲ್ಲ ತಪ್ಪಿಲ್ಲ. ಮದುವೆ ಆದ ತಕ್ಷಣವೇ ಕೆಲಸಕ್ಕೆ ಸೇರಬೇಕು ಹಾಗೆ ಹೀಗೆ ಅನ್ನೋದು ಏನು ಇಲ್ಲ. ಒಬ್ಬರ ಕೆರಿಯರ್ ಯಾವಾಗ ಬೇಕಿದ್ದರೂ ಶುರುವಾಗಬಹುದು. ಮದುವೆಯಾಗಿರುವ ಸಂಗಾತಿ ಸಪೋರ್ಟ್ ಮಾಡಿದರೆ ಸಾಕು' ಶಾಲಿನಿ ಹೇಳಿದಾರೆ.'ಹಗಲು ರಾತ್ರಿ ಎಷ್ಟು ಸಲ ಹುಷಾರಿಲ್ಲ ಅಡುಗೆ ಮಾಡಲು ಆಗಲ್ಲ ಅಂದ್ರೂ ಏನೂ ಯೋಚನೆ ಮಾಡಬೇಡ ಆರಾಮ್ ಆಗಿ ರೆಸ್ಟ್ ಮಾಡು ನೋಡೋಣ ಹೊರಗಡೆ ಊಟ ತರಿಸೋಣ ಅಂತಾನೆ. ಪ್ರತಿ ಸಲನೂ ಸಪೊರ್ಟ್ ಮಾಡುತ್ತಾರೆ ಹೀಗಾಗಿ ನನ್ನ ಪತಿನೇ ನನ್ನ ಸೂಪರ್ ಸ್ಟಾರ್' ಎಂದಿದ್ದಾರೆ ಚಿತ್ಕಲಾ
'ಜಗದೀಶ್ ಕುಮಾರ್ ಅವರಿಗೆ ನೀವು ಚಿತ್ಕಲಾ ಅವರಿಗೆ ಹೀಗೆ ಸಪೋರ್ಟ್ ಮಾಡಿ ಅವರು ಒಳ್ಳೆ ಒಳ್ಳೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲಿ' ಎಂದು ಶಾಲಿನಿ ವಿಶ್ ಮಾಡಿದ್ದಾರೆ.
ಚಿತ್ಕಲಾ ಯಾರು?
ಚಿತ್ಕಲಾ ಬಿರಾದರ್ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೆಲವು ವರ್ಷಗಳ ಕಾಲ ಆಂಗ್ಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ ಹಾಗೂ ಒಂದು ವರ್ಷ ಜರ್ಮಿನಿಯಲ್ಲಿ ಶಿಕ್ಷಕಿಯಾಗಿದ್ದರು. ಆಪ್ತರ ಒತ್ತಾಯಕ್ಕೆ ನಟನೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು ಎನ್ನಲಾಗಿದೆ. 'ಬಂದೇ ಬರತಾವ ಕಾಲ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಆದರೆ 'ಅವನು ಮತ್ತು ಶ್ರಾವಣೆ'ಯಲ್ಲಿ ಅಯ್ಯಂಗಾರ್ ಪುಷ್ಪವಲ್ಲಿ ಪಾತ್ರ ಹೆಚ್ಚಿನ ಜನ ಪ್ರಿಯತೆ ತಂದುಕೊಟ್ಟಿದೆ. ಚಿತ್ಕಲಾ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. 'ಮದುವೆ ಮನೆ','ಫ್ಯಾಂಟಮ್','ಪ್ರೇಮ ಪೂಜ್ಯಂ' ಹಾಗೂ 'ನಿನ್ನ ಸನಿಹಕೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ.