ಸ್ವಂತ ಬಟ್ಟೆಯನ್ನು ಅರ್ಧ ಬೆಲೆಗೆ ಮಾರಿದ ಬಿಗ್ ಬಾಸ್ ಚೈತ್ರಾ ವಾಸುದೇವನ್; ಲಾಭವೆಷ್ಟು?

Published : Feb 14, 2023, 04:18 PM ISTUpdated : Feb 14, 2023, 04:35 PM IST
ಸ್ವಂತ ಬಟ್ಟೆಯನ್ನು ಅರ್ಧ ಬೆಲೆಗೆ ಮಾರಿದ ಬಿಗ್ ಬಾಸ್ ಚೈತ್ರಾ ವಾಸುದೇವನ್; ಲಾಭವೆಷ್ಟು?

ಸಾರಾಂಶ

ಥ್ರಿಫ್ಟ್‌ ಮಾಡುವುದರಿಂದ ಪ್ರಕೃತಿ ಬೆಳಸಬಹುದು. ನಿರೂಪಕಿ ಚೈತ್ರಾ ವಾಸುದೇವನ್ ಹೊಸ ಐಡಿಯಾ ಮೆಚ್ಚಿ ಸಪೋರ್ಟ್‌ ಮಾಡಿದ ಕನ್ನಡಿಗರು...

ಕನ್ನಡ ಜನಪ್ರಿಯ ನಿರೂಪಕಿ ಕಮ್ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ನಿರೂಪಕಿಯಾಗಿರುವ ಕಾರಣ ಪ್ರತಿಯೊಂದು ಶೋಗೂ ಡಿಸೈನರ್‌ ಡ್ರೆಸ್‌ ಅಥವಾ ದುಬಾರಿ ಡ್ರೆಸ್‌ ಧರಿಸಬೇಕು. ಒಮ್ಮೆ ಬಳಸುವ ಬಟ್ಟೆ ಮತ್ತೊಮ್ಮೆ ಬಳಸುವಂತಿಲ್ಲ ಹೀಗಾಗಿ ಹೊಸ ಉಪಾಯ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ. 

'ಥ್ರಿಫ್ಟ್‌ ಶಾಪ್ ಅಂದ್ರೆ ಮರು ಬಳಕೆ ಮಾಡುವುದು ಸೆಕೆಂಡ್ ಹ್ಯಾಂಡ್‌ ರೀತಿ. ಈ ವಿಡಿಯೋದಿಂದ ನಿಮಗೆ ಬ್ಯುಸಿನೆಸ್ ಐಡಿಯಾ ಬರಬಹುದು. ಕೆಲವರಿಗೆ ಅಯ್ಯಯೋ ಅನಿಸಬಹುದು ಇನ್ನು ಕೆಲವರಿಗೆ ತಪ್ಪು ಅನಿಸಬಹುದು ಆದರೆ ನನ್ನ ಪ್ರಕಾರ ಸೆಕೆಂಡ್ ಹ್ಯಾಂಡ್‌ ಬಳಸುವುದು ಅಥವಾ ಥ್ರಿಫ್ಟ್‌ ಅಂಗಡಿಯಿಂದ ಬಳಸುವುದು ತುಂಬಾನೇ ಕೂಲ್. ವಿದೇಶದಲ್ಲಿ ಇದು ಕಾಮನ್ ಆದರೆ ಈಗ ಇಲ್ಲಿ ಟ್ರೆಂಡ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚಾಗಿ ಥ್ರಿಫ್ಟ್‌ ಪದಗಳನ್ನು ನೋಡಬಹುದು' ಎಂದು ಹೇಳುವ ಮೂಲಕ ಚೈತ್ರಾ ವಿಡಿಯೋ ಆರಂಭಿಸಿದ್ದಾರೆ.

ಕೊನೆಗೂ ಡ್ರೀಮ್ ಕಾರ್ ಖರೀದಿಸಿದ ಚೈತ್ರಾ ವಾಸುದೇವನ್; ದುಬಾರಿ ಕಾರಿನ ಜೊತೆ ಮಸ್ತ್ ಪೋಸ್

'ಥ್ರಿಫ್ಟ್‌ ಅಥವಾ pre-loved ವಸ್ತುಗಳನ್ನು ಅಂದರೆ ಕೆಲವರು ಅತಿ ಹೆಚ್ಚಾಗಿ ಖರೀದಿಸಿರುತ್ತಾರೆ ಆದರೆ ಬಳಸಿರುವುದಿಲ್ಲ, ಕಡಿಮೆ ಸಲ ಬಳಸಿರುತ್ತಾರೆ ಅದನ್ನು ಮಾರುವ ಸ್ಥಿತಿಯಲ್ಲಿರುತ್ತದೆ ಆದರೆ ಈಗ ಬಳಕೆಯಲ್ಲಿ ಇರುವುದಿಲ್ಲ ಒಟ್ಟಿನಲ್ಲಿ ಮತ್ತೊಬ್ಬರು ಬಳಸ ಬಹುದು ಎನ್ನುವ ರೀತಿಯಲ್ಲಿ ಇರುತ್ತದೆ. ಇಷ್ಟು ದಿನ ಸೆಕೆಂಡ್ ಹ್ಯಾಂಡ್‌ ಬೈಕ್, ಕಾರು ರೀತಿ ಇತ್ತು ಆದರೆ ಈಗ ಬಟ್ಟೆ ಕೂಡ ಆರಂಭವಾಗಿದೆ. ತುಂಬಾ ಶಾಪಿಂಗ್ ಮಾಡುವ ಕಾರಣ ನಾವು ಕೆಲವೊಂದು ನಮ್ಮ ಬಳಿ ಇದೆ ಅನ್ನೋದು ಮರೆತು ಬಿಡುತ್ತೀವಿ. ಕೆಲವೊಂದು ನಮ್ಮ ಬಜೆಟ್‌ ಮೀರಿ ಇರುತ್ತದೆ ಮತ್ತೊಬ್ಬರಿಂದ ಕೇಳಿ ಪಡೆದು ಬಳಸಬೇಕು ಅದರ ಬದಲು ಥ್ರಿಫ್ಟ್‌ನಲ್ಲಿ ಖರೀದಿ ಮಾಡಿದರೆ ಹಣ ಉಳಿಯುತ್ತದೆ. ಹಾಕಿ ಬಿಸಾಡುವ ಬಟ್ಟೆ ಅದೆಷ್ಟೋ ವರ್ಷ ಹಾಗೆ ಉಳಿದು ಪ್ರಕೃತಿಕೆ ಹಾನಿ ಮಾಡುತ್ತದೆ ಹೀಗಾಗೆ ಬಳಸುವುದರಲ್ಲಿ ತಪ್ಪಿಲ್ಲ' ಎಂದು ಯುಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ್ದಾರೆ.

'ಕೆಲವು ದಿನಗಳ ಹಿಂದೆ ರಾಘವೇಂದ್ರ ರಾಜ್‌ಕುಮಾರ್‌ ಅಣ್ಣ ಅವರು ಹೇಳುತ್ತಿದ್ದರು ಅವರು ಬುಕ್‌ ರೀ ಸೈಕಲ್ ಮಾಡುತ್ತಿದ್ದಾರಂತೆ. 2ನೇ ತರಗತಿ ಮಕ್ಕಳು ಓದಿದ ನಂತರ ಅವರ ಪುಸ್ತಕಗಳನ್ನು 1ನೇ ತರಗತಿ ಮಕ್ಕಳಿಗೆ ಕೊಡುವುದು ಹೀಗೆ ಮಾಡುವುದರಿಂದ ಅನೇಕರಿಗೆ ಸಹಾಯವಾಗುತ್ತದೆ. ಒಂದು ಸಲ ಧರಿಸಿದ ಬಟ್ಟೆಯನ್ನು ಮಾರಾಟ ಮಾಡಲು ಮನಸ್ಸು ಮಾಡಿರುವೆ ಅದರ ಬೆಲೆ ಇಷ್ಟು ನಾನು ಇಷ್ಟಕ್ಕೆ ಮಾರುತ್ತಿರುವೆ ಎಂದು ಹಾಕಿದ್ರು...ನಾನು ಕೂಡ ಅದೇ ಮಾಡಬೇಕು ಎಂದು ನಿರ್ಧಾರ ಮಾಡಿ ಥ್ರಿಫ್ಟ್‌ ಮಾಡಲು ಶುರು ಮಾಡಿದೆ. Pre loved closet ಎಂದು ಹೆಸರಿಟ್ಟೆ. ನಾನು ಖರೀದಿ ಮಾಡಿದ ಹೊಸ ಮನೆಯಲ್ಲಿ ಆಫೀಸ್‌ ಜಾಗ ಮಾಡಿಕೊಂಡಿದ್ದೆ ಅಲ್ಲಿ ಬಟ್ಟೆಗಳನ್ನು ವಿಂಗಡಿಸಿ ಮಾರಾಟ ಮಾಡಲು ಮುಂದಾದೆ.' ಎಂದು ಚೈತ್ರಾ ಹೇಳಿದ್ದಾರೆ. 

ಹೀಲ್ಸ್‌ ಬೇಡವೇ ಬೇಡ ಚಪ್ಪಲಿ ಧರಿಸಿ, ಚಿಕ್ಕ ಕೇಕ್‌ ಪೀಸ್‌ ಸಿಗ್ತು: IKEA ಫಜೀತಿ ಬಿಚ್ಚಿಟ್ಟ ಚೈತ್ರಾ ವಾಸುದೇವನ್

'ಅನಾಥ ಮಕ್ಕಳಿಗೆ ಈ ಬಟ್ಟೆಯನ್ನು ಕೊಡಬೇಕು ಎಂದು ಅನೇಕರು ಸಲಹೆ ಕೊಟ್ಟರು ನಾನು ತುಂಬಾ ಮಾಡ್ರನ್ ಹಾಗೂ ಡಿಸೈನ್ ಇರುವ ಬಟ್ಟೆಗಳನ್ನು ಧರಿಸುವ ಕಾರಣ ಮಕ್ಕಳಿಗೆ ಕೊಡಲು ಆಗುವುದಿಲ್ಲ. ಬದಲಿಗೆ ಬಂದ ಹಣದಿಂದ ಮಕ್ಕಳಿಗೆ ಅಗತ್ಯವಿರುವ ವಸ್ತು ಮತ್ತು ಊಟ ವ್ಯವಸ್ಥೆ ಮಾಡುವೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಮೇಲೆ ನನ್ನ ಮ್ಯಾನೇಜ್‌ ಇದನ್ನು ಮ್ಯಾನೇಜ್ ಮಾಡಿದ್ದರು. ತುಂಬಾ ಕರೆಗಳು ಬರುತ್ತಿತ್ತು....ಸೇಲ್‌ ದಿನ ಸಾವಿರಾರು ಜನ ಬಂದಿದ್ದಾರೆ. ಬೆಂಗಳೂರು ಮಾತ್ರವಲ್ಲ ದಾವಣಗೆರೆ ಮೈಸೂರಿನಿಂದ ಬಂದಿದ್ದರು. ನಮ್ಮ ಜನ ಈ ರೀತಿ ಶಾಪಿಂಗ್‌ನ ಇಷ್ಟ ಪಡುತ್ತಾರೆಂದು ನನಗೆ ಗೊತ್ತಿರಲಿಲ್ಲ. ಸ್ವಲ್ಪ ಕಡಿಮೆ ಮಾಡಿ ಅಂತ ಕೆಲವರು ಕೇಳಿದ್ದರು ಅವರು ಕೇಳಿದಷ್ಟು ಹಣ ಕೊಟ್ಟಿದ್ದು ಆಯ್ತು. ಖರೀದಿ ಮಾಡಿದವರು ಬಳಸಿ ಮೆಸೇಜ್ ಮಾಡಿ ಚೆನ್ನಾಗಿದೆ ಎನ್ನುತ್ತಿದ್ದರು' ಎಂದಿದ್ದಾರೆ ಚೈತ್ರಾ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!