Lakshana Serial: ಟ್ಯೂಬ್‌ಲೈಟ್‌ ಭೂಪತಿಗೆ ಮೌರ್ಯ ಕೊಟ್ಟ ನೋಡಿ ಚಮಕ್!

Published : Mar 15, 2023, 01:39 PM IST
Lakshana Serial: ಟ್ಯೂಬ್‌ಲೈಟ್‌ ಭೂಪತಿಗೆ ಮೌರ್ಯ ಕೊಟ್ಟ ನೋಡಿ ಚಮಕ್!

ಸಾರಾಂಶ

ಭೂಪತಿ ಮತ್ತು ನಕ್ಷತ್ರ ಒಂದಾಗಿದ್ದರೂ ನಮ್ಮಿಬ್ಬರದು ಸ್ನೇಹನಾ ಅಥವಾ ಪ್ರೀತಿನಾ ಅಂತ ಭೂಪತಿಗೆ ಅರ್ಥ ಆಗ್ತಿಲ್ಲ. ಅದಕ್ಕೆ ಒಂದು ಚೆಂದದ ಸೀನ್ ಕ್ರಿಯೇಟ್ ಮಾಡಿ ಮೌರ್ಯ ಉತ್ತರ ಕೊಟ್ಟಿದ್ದಾನೆ. ಭೂಪತಿ ಬಾಯಿಂದಲೇ ಸತ್ಯ ಹೇಳಿಸಿದ್ದಾನೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಇಂಟರೆಸ್ಟಿಂಗ್ ಸೀರಿಯಲ್ ಲಕ್ಷಣ. ಇದರಲ್ಲಿ ಒಂದು ಕಡೆ ನಕ್ಷತ್ರ ಭೂಪತಿ ಜೋಡಿ ಒಂದಾಗೋದಕ್ಕೆ ವಿಧಿಯೇ ಸಂಚು ಹೂಡ್ತಿದ್ರೆ, ಅವರಿಬ್ಬರನ್ನು ದೂರ ಮಾಡೋದಕ್ಕೆ ಡೆವಿಲ್ ಮತ್ತು ಶ್ವೇತಾ ಕಾಯ್ತಿದ್ದಾರೆ. ಭೂಪತಿ ಹಾಗೂ ನಕ್ಷತ್ರಳನ್ನ ಬೇರೆ ಬೇರೆ ಮಾಡಲು ಡೆವಿಲ್ ಅಲಿಯಾಸ್ ಭಾರ್ಗವಿ ಏನೋ ಪ್ಲಾನ್ ಮಾಡಿದ್ದಾಳೆ. ಇದರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳೋ ಪ್ರಯತ್ನದಲ್ಲಿರುವ ಶ್ವೇತಾ ಡೆವಿಲ್ ಜೊತೆಗೆ ಕೈ ಜೋಡಿಸಿದ್ದಾರೆ. ನಕ್ಷತ್ರ ಮನೆಗೆ ಭಾರ್ಗವಿ ಅಲಿಯಾಸ್ ಡೆವಿಲ್ ದಿಢೀರ್ ಅಂತ ಭೇಟಿ ನೀಡುತ್ತಾಳೆ. ನಕ್ಷತ್ರ ತಾಯಿ ಆರತಿ ಪೂಜೆ ಮಾಡಿಸಿದ್ದಾಳೆ, ಪ್ರಸಾದ ಕೊಟ್ಟು ಹೋಗೋಕೆ ಬಂದೆ ಅಂತ ನಕ್ಷತ್ರ ಬಳಿ ಭಾರ್ಗವಿ ಸುಳ್ಳು ಹೇಳಿದ್ದಾಳೆ. ಪ್ರಸಾದದ ನೆಪದಲ್ಲಿ ನಕ್ಷತ್ರಗೆ ಸೀರೆ, ಅರಿಶಿನ ಹಾಗೂ ಕುಂಕುಮವನ್ನ ಭಾರ್ಗವಿ ಕೊಟ್ಟಿದ್ದನ್ನ ನೋಡಿ ಶ್ವೇತಾ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾಳೆ. ಪರಿಣಾಮ, ಭಾರ್ಗವಿಯನ್ನ ಪಕ್ಕಕ್ಕೆ ಕರೆದುಕೊಂಡು ಹೋಗಿ ಡಬಲ್ ಗೇಮ್ ಆಡ್ತಿದ್ಯಾ ಅಂತ ಶ್ವೇತಾ ಪ್ರಶ್ನೆ ಹಾಕಿದ್ದಾಳೆ. ತನ್ನ ಪ್ಲಾನ್ ವರ್ಕ್ ಆಗ್ತಿದ್ಯೋ, ಇಲ್ವೋ ಅಂತ ಕಣ್ಣಾರೆ ನೋಡೋಕೆ ಬಂದಿದ್ದೀನಿ ಹಾಗೇ ವಾರ್ನಿಂಗ್ ಕೊಡ್ತೀನಿ ಅಂತ ಭಾರ್ಗವಿ ಹೇಳೋಷ್ಟರಲ್ಲಿ ನಕ್ಷತ್ರ ಮಧ್ಯೆ ಬರುತ್ತಾಳೆ. ಯಾರಿಗೆ ವಾರ್ನಿಂಗ್ ಕೊಡೋದು ಅಂತ ನಕ್ಷತ್ರ ಕೇಳಿದಾಗ, ಶ್ವೇತಾ ಕಪಾಳಕ್ಕೆ ಭಾರ್ಗವಿ ಬಾರಿಸುತ್ತಾಳೆ. ನಿನ್ನ ಸಂಸಾರವನ್ನ ಶ್ವೇತಾ ಹಾಳು ಮಾಡುತ್ತಿದ್ದಾಳೆ, ಅವಳಿಗೇ ವಾರ್ನಿಂಗ್ ಕೊಡೋಕೆ ಈ ಪ್ರಸಾದದ ನೆಪ ಅಂತ ನಕ್ಷತ್ರಗೆ ಭಾರ್ಗವಿ ಹೇಳಿದ್ದಾಳೆ. ಏನು ನಡೆಯುತ್ತಿದೆ ಅಂತ ಗೊತ್ತಾಗದೆ ನಕ್ಷತ್ರ ಕಕ್ಕಾಬಿಕ್ಕಿಯಾಗಿದ್ದಾಳೆ.

ಇನ್ನೊಂದೆಡೆ ಭೂಪತಿ ನಕ್ಷತ್ರ ಜೊತೆಗೆ ಮಜವಾದ ಸೀನ್‌ಗಳಿವೆ. ಈಗ ಭೂಪತಿಗೆ ಸತ್ಯ ಏನು ಅಂತ ಗೊತ್ತಾಗಿದೆ. ಆದರೆ ತನ್ನ ಮತ್ತು ನಕ್ಷತ್ರ ನಡುವೆ ಇರೋದು ಸ್ನೇಹನಾ ಅಥವಾ ಪ್ರೀತಿನಾ ಅಂತ ಗೊತ್ತಾಗ್ತಿಲ್ಲ. ಅರಿವಿಲ್ಲದ ಹಾಗೆ ನಕ್ಷತ್ರನ್ನ ಕಾಳಜಿ ಮಾಡ್ತಿರೋ ಭೂಪತಿ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಿರುವಾಗಲೇ ಭೂಪತಿ ತಮ್ಮ ಮೌರ್ಯ ಸಖತ್ ಟ್ವಿಸ್ಟ್ ಕೊಟ್ಟಿದ್ದಾನೆ. ಭೂಪತಿ ತನಗೆ ತಾನೇ ನಕ್ಷತ್ರಳನ್ನು ತಾನು ಲವ್ ಮಾಡ್ತಿದ್ದೀನಿ ಅಂತ ಬಾಯಿ ಬಿಡುವ ಹಾಗೆ ಮಾಡಿದ್ದಾನೆ. ಇದರಲ್ಲಿ ಮೌರ್ಯ ಸಹಾಯಕ್ಕೆ ಆತನ ಗೆಳತಿಯು ಬಂದಿದ್ದಾಳೆ.

Lakshana serial: ಡೆವಿಲ್ ಭಾರ್ಗವಿಗೆ ಶ್ವೇತಾ ಮೇಲೆ ಕೆಂಡದಂಥಾ ಸಿಟ್ಟು! ಕಾರಣ ಏನು?

ಸಡನ್ನಾಗಿ ಎಂಟ್ರಿ ಕೊಟ್ಟಿರೋ ಮೌರ್ಯ ಫ್ರೆಂಡ್ (Friend)ತನ್ನನ್ನು ಮೌರ್ಯ ಪ್ರೀತಿಸುತ್ತಿದ್ದಾನೆ. ಆದರೆ ಈ ಬಗ್ಗೆ ಕೇಳಿದರೆ ಬರೀ ಫ್ರೆಂಡ್‌ಶಿಪ್ ಅಂತ ಹೇಳ್ತಾನೆ ಅಂತ ಭೂಪತಿಯಲ್ಲಿ ಕಂಪ್ಲೇಂಟ್ ಮಾಡ್ತಾಳೆ. ತನ್ನನ್ನು ಮೌರ್ಯ ಹೇಗೆಲ್ಲ ಕಾಳಜಿ ಮಾಡಿದ ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳ್ತಾಳೆ. ತನಗಾಗಿ ಊರೆಲ್ಲ ಹುಡುಕಿದ್ದು, ತಲೆನೋವಾದಾಗ ರಾತ್ರಿ ಎಲ್ಲ ನಿದ್ದೆ ಬಿಟ್ಟು ಹಣೆ ತಿಕ್ಕುತ್ತಾ ಆರೈಕೆ ಮಾಡಿದ್ದು ಇತ್ಯಾದಿ ಘಟನೆಗಳನ್ನೆಲ್ಲ(Incidents) ಹೇಳ್ತಾಳೆ. ಆಕೆ ಹೇಳಿದ ಅಷ್ಟೂ ಕಥೆ(Story) ಭೂಪತಿ ನಕ್ಷತ್ರ ಮಧ್ಯೆ ನಡೆದಿರೋದು. ತನ್ನ ಕಥೆಯನ್ನೇ ಅವರಿಬ್ಬರೂ ತನ್ನ ಬಳಿ ಹೇಳ್ತಿದ್ರೆ ಭೂಪತಿ ಧೈರ್ಯವಾಗಿ ಅವರಿಬ್ಬರದು ಪ್ರೇಮ ಅಂತ ಸರ್ಟಿಫಿಕೇಟ್ ಕೊಟ್ಟು ಬಿಡ್ತಾನೆ.

ಕೊನೆಯಲ್ಲಿ ಚಮಕ್ ಕೊಡೋ ಮೌರ್ಯ, ಹೇಳಿದ್ದಷ್ಟೂ ನಿನ್ನ ನಕ್ಷತ್ರನ ಕಥೆಯೇ. ಈಗ ನೀನೇ ಹೇಳು ನಿನ್ನದು ಅವರದ್ದು ಸ್ನೇಹಾನ ಪ್ರೀತಿನಾ(Love) ಅಂತ ಪ್ರಶ್ನೆ ಮಾಡಿ ಭೂಪತಿ ಗೊಂದಲ ಬಗೆ ಹರಿಸೋದು ಮಾತ್ರ ಅಲ್ಲ, ಅದಕ್ಕೊಂದು ಚೆಂದದ ಫಿನಿಶಿಂಗ್ ಕೊಡ್ತಾನೆ. ಲಕ್ಷಣ ಸೀರಿಯಲ್‌ನಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಶ್ವೇತಾ ಆಗಿ ಸುಕೃತಾ ನಾಗ್, ಡೆವಿಲ್ ಅಲಿಯಾಸ್ ಭಾರ್ಗವಿ ಆಗಿ ಪ್ರಿಯಾ ಶಠಮರ್ಷಣ ನಟಿಸುತ್ತಿದ್ದಾರೆ.

ರಾಮಾಚಾರಿ, ಸತ್ಯ ಹೇಳಿದ್ರೆ ಸಾಯ್ತೀನಿ ಅಂತಿದ್ದಾಳೆ ಚಾರು, ರಾಮಚಾರಿ ಏನ್ಮಾಡಬೇಕು ನೀವೇ ಹೇಳಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ