Kendasampige: ತನ್ನ ಭವಿಷ್ಯವಾ? ಅಪ್ಪನ ಪ್ರಾಣವಾ? ಸುಮಿ ಮುಂದೆ ಎರಡು ಆಯ್ಕೆ!

By Suvarna NewsFirst Published Aug 26, 2022, 1:55 PM IST
Highlights

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಸೀರಿಯಲ್ ಕೆಂಡ ಸಂಪಿಗೆ. ಆರಂಭದಲ್ಲೇ ಫ್ಯಾಮಿಲಿ ಡ್ರಾಮ, ರಾಜಕೀಯದ ಕತೆಯಿಂದ ಗಮನ ಸೆಳೆಯುತ್ತಿದೆ. ಈ ಸೀರಿಯಲ್ ನಾಯಕಿ ಸುಮನಾ. ಹೂ ಕಟ್ಟಿ ಬದುಕು ಸಾಗಿಸುವವಳು. ಅವಳ ತಂದೆ ರಾಮಯ್ಯ ಪ್ರಾಣಾಪಾಯದಲ್ಲಿದ್ದಾರೆ. ಇನ್ನೊಂದೆಡೆ ಅವಳು ಅಪ್ಪ ಜೀವ ಉಳಿಸಬೇಕಿದ್ದರೆ ತನ್ನ ಭವಿಷ್ಯವನ್ನೇ ಕಣ್ಣೀರಲ್ಲಿ ತೊಳೆಯಬೇಕು ಅನ್ನೋ ಸ್ಥಿತಿ ಇದೆ.

ಕೆಂಡ ಸಂಪಿಗೆ ಇತ್ತೀಚೆಗೆ ತಾನೇ ಕಲರ್ಸ್ ಕನ್ನಡದಲ್ಲಿ ಆರಂಭವಾಗಿರುವ ಧಾರಾವಾಹಿ. ಇದು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಬಡ ಹಾಗೂ ಶ್ರೀಮಂತ ವರ್ಗದವರ ನಡುವಿನ ಸಂಘರ್ಷ, ಪ್ರೇಮವನ್ನೇ ಮುಂದಾಗಿಟ್ಟುಕೊಂಡು ಈ ಸೀರಿಯಲ್ ಕಥೆ ಹೆಣೆಯಲಾಗಿದೆ. ಹೂವು ಕಟ್ಟಿ ಮಾರಿ ಜೀವನ ಸಾಗಿಸುವ ಹುಡುಗಿ ಸುಮನಾ. ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಈ ಸೀರಿಯಲ್‌ನ ನಾಯಕ ನಾಯಕಿ. ಮಹಾನ್ ಧೈರ್ಯವಂತೆ, ಸಾಹಸಿ, ಛಲಗಾರ್ತಿ ಹುಡುಗಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವು ಕಟ್ಟಿ ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಇವಳ ತಂದೆ ರಾಮಯ್ಯ ಅವರಿಗೆ ಹೆಂಡತಿ ಇಲ್ಲ. ಹೀಗಾಗಿ ಸುಮನಾ ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ಇನ್ನು ಕಥೆಯ ನಾಯಕ ತೀರ್ಥಂಕರ್ ಪ್ರಸಾದ್. ಆತ ಕಾರ್ಪೊರೇಟರ್.

ಸುಮಿ ತಂದೆ ಸಂಪ್‌ ಕ್ಲೀನಿಂಗ್‌ಗೆ ಹೋಗಿ ವಿಷ ಅನಿಲ ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಅವರು ಹೀಗೆ ಮಾಡಲು ಕಾರಣ ಸಾಲ ಕೊಡುವ ಕಾಲೊನಿ ಮಹಿಳೆ ವಿಜಯ ಹೇಳಿದ ಮಾತು. ಆಕೆ ಸಮನಾಗೂ ಸಾಲ ಕೊಟ್ಟಿದ್ದಾಳ. ಅದಕ್ಕೆ ಬದಲಾಗಿ ತನ್ನ ಮಗನಿಗೆ ಸುಮಿಯನ್ನು ಮದುವೆ ಮಾಡುವಂತೆ ಕೇಳಿದ್ದಾಳೆ. ಮಹಾ ಹೆಣ್ಣು ಹುಚ್ಚು ಇರುವ ಲಂಪಟ ವಿಜಯಕ್ಕನ ಮಗ. ಹೀಗಾಗಿ ರಾಮಯ್ಯ ಮಗಳನ್ನು ಮದುವೆ ಮಾಡಲು ಒಪ್ಪೋದಿಲ್ಲ. ಇನ್ನೊಂದೆಡೆ ವಿಜಯಾ ಮಾತಿಗೆ ಮನನೊಂದು ಅನಾರೋಗ್ಯವಿದ್ದರೂ ಕೆಲಸ ಮಾಡುತ್ತೇನೆ ಎಂದು ರಾಮಯ್ಯ ಸಂಪ್ ಕ್ಲೀನಿಂಗ್‌ಗೆ ಹೋಗಿದ್ದಾರೆ. ಅಲ್ಲಿ ವಿಷಾನಿಲ ಸೇವಿಸಿ ಬದುಕು ಸಾವಿನ ಮಧ್ಯೆ ಹೋರಾಟ ಮಾಡಿ ಕೊನೆಗೂ ಬದುಕಿ ಉಳಿದಿದ್ದಾರೆ.

 

ಆದರೆ ಕುಡಿತದ ಪರಿಣಾಮ ಅವರ ಕಿಡ್ನಿ ಹಾಳಾಗಿದೆ. ಅದಕ್ಕೆ ಡಾಕ್ಟರ್ ಬೇಗ ಆಪರೇಷನ್ ಮಾಡಿಸಿ, ನಿಮ್ಮ ತಂದೆಯನ್ನು ಉಳಿಸಿಕೊಳ್ಳಿ ಎನ್ನುತ್ತಾರೆ. ಸುಮನಾ ಡಾಕ್ಟರ್ ಮಾತಿನಂತೆ ತಂದೆಯನ್ನು ಸರ್ಕಾರಿ ಆಸ್ಪತ್ರೆಯಿಂದ, ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾಳೆ. ಆದ್ರೆ ಅಲ್ಲಿ ಡಾಕ್ಟರ್ ಈ ಚಿಕಿತ್ಸೆಗೆ 4.5 ಲಕ್ಷ ಬೇಕು ಎನ್ನುತ್ತಾರೆ. ಹೂ ಕಟ್ಟಿ ಮಾರಿ ಬಹಳ ಕಷ್ಟದಿಂದ ಸಂಸಾರ ತೂಗಿಸುವ ಸುಮನಾ, ಅಪ್ಪನನ್ನು ಉಳಿಸಿಕೊಳ್ಳಲು ಲಕ್ಷ ಲಕ್ಷ ದುಡ್ಡು ಬೇಕು ಎಂಬುದನ್ನು ಕೇಳಿ ಕಂಗಾಲಾಗಿದ್ದಾಳೆ.

Hitler Kalyana: ಹಾವು ಮುಂಗುಸಿಯಂತಿದ್ದ ಏಜೆ - ಲೀಲಾ ಈಗ ಬೆಸ್ಟ್ ಫ್ರೆಂಡ್ಸ್! ಅಬ್ಬಬ್ಬಾ, ಅದ್ಹೇಗೆ?

ಸುಮಾಗೆ ಈ ಹಿಂದೆ ಯಾವುದೇ ಸಹಾಯ ಬೇಕಿದ್ದರೂ ಕೇಳಿ ಎಂದಿದ್ದ ಕಾರ್ಪೋರೇಟರ್ ತೀರ್ಥಂಕರ್ ನೆನಪಾಗುತ್ತಾರೆ. ಲಕ್ಷ ಲಕ್ಷ ದುಡ್ಡು ಅವರ ಬಳಿ ಇರುತ್ತೆ. ಅವರು ಸಹಾಯ ಮಾಡಬಹುದು, ಕಾರ್ಪೊರೇಟರ್ ಬಳಿ ಹೋದ್ರೆ ತನ್ನ ಕೆಲಸ ಆಗಬಹುದು ಎಂದು ತಿರ್ಥಂಕರ್ ಮನೆಗೆ ಹೋಗಿದ್ದಾಳೆ. ಆದ್ರೆ ಅಲ್ಲಿ ಕಾರ್ಪೊರೇಟರ್ ತೀರ್ಥಂಕರ್ ಇರಲ್ಲ. ಕಾರ್ಪೊರೇಟರ್ ಅತ್ತಿಗೆ ಇದ್ದಾಳೆ. ಈ ಹಿಂದೆ ಅವಳ ದರ್ಪ, ದುಡ್ಡಿನ ಮದಕ್ಕೆ ಶಾಸ್ತಿ ಮಾಡಿದ್ದ ಅತ್ತಿಗೆ ಇದೇ ಸಮಯ ಅಂದುಕೊಂಡು ಸುಮಿಗೆ ಅವಮಾನ ಮಾಡುತ್ತಾಳೆ. ದುಡ್ಡಿಗಾಗಿ ನಾಟಕ ಆಡುತ್ತಿದ್ದಾಳೆ. ಈ ರೀತಿಯ ಜನ ದುಡ್ಡು ಬೇಕಾದ್ರೆ ಅಪ್ಪ-ಅಮ್ಮ ಆಸ್ಪತ್ರೆಯಲ್ಲಿದ್ದಾರೆ ಎಂದು ನಾಟಕ ಮಾಡಿ ದುಡ್ಡು ಹೊಡೆಯುತ್ತಾರೆ ಎಂದೆಲ್ಲ ಹೇಳಿ ಬೈದಿದ್ದಾಳೆ. ಅವಮಾನ ನುಂಗಿಕೊಂಡು ಸುಮನಾ ಹೊರಬಂದಿದ್ದಾಳೆ.

ಸದ್ಯಕ್ಕೆ ಸುಮಿಯ ಮುಂದೆ ಬೇರೆ ದಾರಿ ಇಲ್ಲ. ಅಪ್ಪನ ಪ್ರಾಣ ಉಳಿಯಬೇಕು ಅಂದ್ರೆ ದುಡ್ಡು ಬೇಕು. ಈಗ ವಿಜಯ ಬಿಟ್ಟರೆ ಸಹಾಯ ಮಾಡಲು ಯಾರೂ ಇಲ್ಲ. ಅದಕ್ಕೆ ಸುಮಿ ದುಡ್ಡು ಪಡೆದು ಮದುವೆಗೆ ಒಪ್ತಾಳಾ ಅಂತ ಕಾದು ನೋಡಬೇಕಿದೆ. ಅಪ್ಪನ ಜೀವವನ್ನು ಕಾಯ್ತಾಳಾ ಇಲ್ಲ ತನ್ನ ಭವಿಷ್ಯವನ್ನು ಬಲಿಕೊಡ್ತಾಳಾ ಅನ್ನೋ ಕುತೂಹಲ ಇದೆ. ಆದರೆ ಇದ್ಯಾವುದೂ ಆಗದೇ ಮತ್ತೇನೋ ಆಗುತ್ತೆ ಅಂತಿದ್ದಾರೆ ಸೀರಿಯಲ್ ಪಂಟರು.

ಏಕಾಏಕಿ ಹೇಗ್ಹೇಗೋ ಆಡುವ ರತ್ನಮಾಲಾ, ಶಾಕ್ ಆದ ವೀಕ್ಷಕರು!

click me!