ಕನ್ನಡತಿ ಸೀರಿಯಲ್ ಮುಕ್ತಾಯದ ಹಂತದಲ್ಲಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಫೆ.೩ಕ್ಕೆ ಸೀರಿಯಲ್ ಮುಕ್ತಾಯವಾಗುತ್ತೆ ಅಂತ ಈ ಸೀರಿಯಲ್ ನೋಡೋ ಎಲ್ಲರಿಗೂ ಗೊತ್ತು. ಈಗ ಸೀರಿಯಲ್ ಮುಕ್ತಾಯದ ಸೂಚನೆಯಾಗಿ ಮೇನ್ ವಿಲನ್ ಸಾನಿಯಾನೇ ಬದಲಾಗಿ ಬಿಟ್ಟಿದ್ದಾಳೆ.
ಕನ್ನಡತಿ ಸೀರಿಯಲ್ ಮುಂದಿನ ವಾರವೇ ಕೊನೆಯಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಮೊದಲಿಂದಲೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ ವೀಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಈ ಸೀರಿಯಲ್ ಇದೀಗ ಮುಕ್ತಾಯದ ಹಂತ ತಲುಪಿದೆ. ಹಾಗಂತ ಈ ಮೆಗಾ ಧಾರಾವಾಹಿಯನ್ನು ಇನ್ನಷ್ಟು ದಿನ ವಿಸ್ತರಿಸಬಹುದಿತ್ತು. ಟಿಆರ್‌ಪಿಯಲ್ಲೂ ಅಂಥಾ ಇಳಿಕೆ ಇಲ್ಲದ ಕಾರಣ ಇದನ್ನು ಮುಂದುವರಿಸಬಹುದಿತ್ತು ಅಂತ ಜನ ಮಾತಾಡುತ್ತಿದ್ದಾರೆ. ಸುಮ್ಮನೆ ಎಳೆದಾಡಬೇಕಾಗುತ್ತೆ ಅನ್ನೋ ಹಾಗೂ ಇಲ್ಲ. ಏಕೆಂದರೆ ಇನ್ನೂ ಕೆಲ ಕಾಲ ವಿಸ್ತರಿಬಹುದಾದಷ್ಟು ಕಥೆ ಈ ಸೀರಿಯಲ್‌ನಲ್ಲಿತ್ತು. ಹಳ್ಳಿ ಹುಡುಗಿ ಕನ್ನಡ ಪ್ರೇಮದ ಭುವಿ ಮಾಲಾ ಕೆಫೆಯನ್ನು ಹೇಗೆ ಮತ್ತೊಂದು ಎತ್ತರಕ್ಕೆ ತಗೊಂಡು ಹೋಗ್ತಾಳೆ ಅನ್ನೋದನ್ನು ಪರಿಣಾಮಕಾರಿಯಾಗಿ ಹೇಳಬಹುದಿತ್ತು.
ಇದೀಗ ಕನ್ನಡತಿ ಮುಕ್ತಾಯ ಆಗುತ್ತಿರುವುದರ ಸೂಚನೆ ಸೀರಿಯಲ್‌ನಲ್ಲೇ ಸಿಕ್ತಿದೆ. ಸಾನಿಯಾ ಎಷ್ಟೋ ಬಾರಿ ಭುವಿಯನ್ನು ಕೊಲ್ಲಲು ಹೋಗಿದ್ದಾಳೆ. ಅದಕ್ಕೆ ಆದಿಗೆ ಕೋಪ ಇತ್ತು. ಎಷ್ಟು ಸಲ ಹೇಳಿದ್ರೂ ಬುದ್ಧಿ ಕಲಿತಿರಲಿಲ್ಲ. ಸಾನಿಯಾಗೆ ಹಣ, ಅಧಿಕಾರ ಮುಖ್ಯ, ಅವಳು ಬದಲಾಗಲ್ಲ. ನೀನು ಸಾಯಿ ಎಂದು ಬಿಲ್ಡಿಂಗ್ ಮೇಲಿಂದ ತಳ್ಳಿ ಬಿಡುತ್ತಾನೆ. ಆಗ ಸಾನಿಯಾ ಒಂದು ಕಂಬಿ ಹಿಡಿದು ನಿಂತಿರುತ್ತಾಳೆ. ಆಗ ಭುವಿ ಮತ್ತೆ ಆದಿ ಸೇರಿ ಆಕೆಯನ್ನು ಮೇಲೆ ಎತ್ತುತ್ತಾರೆ. ಸಾನಿಯಾಳನ್ನು ಕಾಪಾಡಿದ ಆದಿ, ಬಿಲ್ಡಿಂಗ್ ಮೇಲಿಂದ ಆಯಾ ತಪ್ಪಿ ಬೀಳುತ್ತಾನೆ. ಅವನು ಕಂಬಿ ಹಿಡಿದಿರುತ್ತಾನೆ. ಆಗ ಸಾನಿಯಾ ಆತನ ಕೈ ಹಿಡಿಯುತ್ತಾಳೆ.
ಹೇಗೂ ಸುದ್ದಿ ಆಗಿದ್ಯಲ್ಲಾ, ಮಗು ಮಾಡ್ಕೊಂಬಿಡು ಗುರೂ! ಚಂದನ್ ಶೆಟ್ಟಿಗೆ ಗೆಳೆಯರ ಸಲಹೆ
ಆದ್ರೆ ಆದಿ ಕೈ ಬಿಡು ಸಾನಿಯಾ ನಾನು ಬದುಕಲ್ಲ. ನಿನ್ನ ಜೊತೆ ಇರಲು ಇಷ್ಟ ಇಲ್ಲ. ನಿನಗೆ ಹಣ, ಅಧಿಕಾರ ಬೇಕು. ಗಂಡ ಬೇಡ ತಾನೇ. ನಾನು ಇಲ್ಲ ಅಂದ್ರೂ ಅವುಗಳ ಜೊತೆ ಇರು ಎನ್ನುತ್ತಾನೆ. ಸಾನಿಯಾ ತುಂಬಾ ಕ್ಷಮೆ ಕೇಳಿದ ಮೇಲೆ ಆದಿ ಮೇಲೆ ಬರುತ್ತಾನೆ. ಇಷ್ಟು ದಿನ ದುಡ್ಡು ಬೇಕು. ಅಧಿಕಾರ ಬೇಕು ಎಂತಿದ್ದ ಸಾನಿಯಾಗೆ ಬುದ್ಧಿ ಬಂದಿದೆ. ಎಲ್ಲ ಇದ್ದೂ ಜೀವ ಇಲ್ಲ ಅಂದ್ರೆ ಏನ್ ಮಾಡೋದು ಎಂದು ಗೊತ್ತಾಗಿದೆ. ಅದಕ್ಕೆ ಸಾನಿಯಾ ಬದಲಾಗಿದ್ದಾಳೆ. ಆದಿ ಬಳಿ ಮತ್ತೆ ಕ್ಷಮೆ ಕೇಳಿ, ಬದಲಾಗುತ್ತೇನೆ ಎಂದಿದ್ದಾಳೆ. ನಿಜವಾಗ್ಲೂ ಬದಲಾಗುತ್ತೇನೆ. ಹಳೆಯ ತರ ಸುಳ್ಳು ಪ್ರಾಮಿಸ್(promise) ಮಾಡ್ತಾ ಇಲ್ಲ ಎಂದು ಹೇಳಿದ್ದಾಳೆ.
ಅಲ್ಲಿಗೆ ಭುವಿಯ ಮುಂದಿದ್ದ ದೊಡ್ಡ ಸವಾಲು ಮುಕ್ತಾಯವಾಗಿದೆ. ಅತ್ತ ವರೂ ಸಹ ಡಿವೋರ್ಸ್(Divorce) ಲಾಯರ್‌ನ ಮದುವೆ ಆಗೋದು ಫಿಕ್ಸ್ ಆದಂತಿದೆ. ಈಗ ಭುವಿಯ ಮುಂದಿರುವ ದೊಡ್ಡ ದೊಡ್ಡ ಸವಾಲುಗಳೆಲ್ಲ ತನ್ನಿಂತಾನೆ ಮುಕ್ತಾಯವಾಗುತ್ತಿದೆ. ಈ ನಡುವೆ ಹರ್ಷನ ಅತ್ತಿಗೆ ತಾಪ್ಸಿ ಕತೆ ಏನಾಗುತ್ತೆ ಅನ್ನೋದು ಇನ್ನೂ ಇನ್ನೂ ಕ್ಲಿಯರ್ ಆಗಿಲ್ಲ. ಈ ಎಲ್ಲದಕ್ಕೂ ಮುಂದಿನ ವಾರ ಉತ್ತರ ಸಿಗಲಿದೆ. ಮುಂದಿನ ಶುಕ್ರವಾರದ ಹೊತ್ತಿಗೆ ಕನ್ನಡತಿ ಕೊನೆಯ ಎಪಿಸೋಡ್(Episode) ಮುಕ್ತಾಯವಾಗಲಿದೆ. ಟೀಮ್‌ನ ಬಹಳ ಮಂದಿಗೆ ಈ ಸೀರಿಯಲ್ ಮುಕ್ತಾಯವಾಗುತ್ತಿರುವುದು ಬೇಸರ ತಂದಿದೆ. ಅನೇಕ ಮಂದಿ ಕಣ್ಣೀರು ಹಾಕಿದ್ದಾರೆ. ಮುಖ್ಯಪಾತ್ರದಲ್ಲಿರುವ ಕೆಲವರು ಇದೆಲ್ಲ ಅನಿವಾರ್ಯ ಎಂದಿದ್ದಾರೆ. ಫ್ಯಾನ್ಸ್ ಬಹಳ ಬೇಸರದಲ್ಲಿದ್ದಾರೆ. ಹಿಂದೊಮ್ಮೆ ಈ ಸೀರಿಯಲ್ ಮುಗಿಸಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿದವರೆ ಇಂದು ಯಾಕೆ ನಿಲ್ಲಿಸುತ್ತಿದ್ದೀರ, ಮುಂದುವರಿಸಿ ಅಂತಿದ್ದಾರೆ.
ಬಿಗ್ ಬಾಸ್ ಸುಂದರಿಯರ ಜೊತೆ ರಾಕೇಶ್ ಅಡಿಗ ಪಾರ್ಟಿ; 'ಸಪ್ಪೆ ಗ್ಯಾಂಗ್' ಎಂದ ಅನುಪಮಾ