ಮತ್ತೆ ಬರ್ತಿದೆ ವೀಕೆಂಡ್ ವಿತ್ ರಮೇಶ್: ಈ ಬಾರಿ ಸಿನಿಮಾ ಕ್ಷೇತ್ರದ ಹೊರತಾಗಿ ಹೆಚ್ಚಿನ ವ್ಯಕ್ತಿಗಳು ಇರಲಿದ್ದಾರಂತೆ

Published : Jan 26, 2023, 11:48 AM IST
ಮತ್ತೆ ಬರ್ತಿದೆ ವೀಕೆಂಡ್ ವಿತ್ ರಮೇಶ್: ಈ ಬಾರಿ ಸಿನಿಮಾ ಕ್ಷೇತ್ರದ ಹೊರತಾಗಿ ಹೆಚ್ಚಿನ ವ್ಯಕ್ತಿಗಳು ಇರಲಿದ್ದಾರಂತೆ

ಸಾರಾಂಶ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಮತ್ತೆ ಬರ್ತಿದೆ. ಸೀಸನ್ 5 ಇದಾಗಿದ್ದು ಯಾವೆಲ್ಲ ಅತಿಥಿಗಳು ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.  

ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ, ಪ್ರೇಕ್ಷಕರ ಹೃದಯ ಗೆದ್ದ 'ವೀಕೆಂಡ್ ವಿತ್ ರಮೇಶ್' ಮತ್ತೆ  ಬರ್ತಿದೆ. ಈಗಾಗಲೇ 4 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ವೀಕೆಂಡ್ ವಿತ್ ರಮೇಶ್ ಇದೀಗ 5ನೇ ಸೀಸನ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಂದಹಾಗೆ ಸ್ಯಾಂಡಲ್ ವುಡ್‌ನ ಖ್ಯಾತ ನಟ, ಯಶಸ್ವಿ ನಿರೂಪಕ ರಮೇಶ್ ಸೀಸನ್ 5 ಅನ್ನು ನಡೆಸಿಕೊಡುತ್ತಿದ್ದಾರೆ. ರಮೇಶ್ ನಿರೂಪಣ ಶೈಲಿ ಕನ್ನಡ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಮತ್ತೆ ಬರ್ತಿದೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. 

ಈಗಾಗಲೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಿದ್ದತೆ ಪ್ರಾರಂಭವಾಗಿದ್ದು ಸದ್ಯದಲ್ಲೇ ಪ್ರಸಾರ ಪ್ರಾರಂಭಿಸಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಟೈಮ್ಸ್ ಆಫೀಸ್ ಇಂಡಿಯಾ ವರದಿ ಮಾಡಿರುವ  ಪ್ರಕಾರ, '5ನೇ ಸೀಸನ್ ಕಾರ್ಯಕ್ರಮದ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ. ಕಾರ್ಯಕ್ರಕ್ಕೆ ಆಹ್ವಾನಿಸುವ ಅತಿಥಿಗಳ ಪಟ್ಟಿಯನ್ನು ನಾವು ಅಂತಿಮಗೊಳಿಸುತ್ತಿದ್ದೇವೆ. ಲಿಸ್ಟ್ ಸಿದ್ಧತೆ ಮುಗಿದ ಬಳಿಕ ಟೀಸರ್ ಶೂಟ್ ಮೂಲಕ ಕಾರ್ಯಕ್ರಮ ಅಧಿಕೃತವಾಗಿ ಪ್ರರಾಂಭವಾಗಲಿದೆ. ಈ ಸೀಸನ್‌ನಲ್ಲಿ ಸಿನಿಮಾ ಕ್ಷೇತ್ರದ ಹೊರತಾಗಿ ಹೆಚ್ಚಿನ ವ್ಯಕ್ತಿಗಳು ಇರಲಿದ್ದಾರೆ' ಎಂದು ಮೂಲಗಳು ಮಾಹಿತಿ ನೀಡಿವೆ ಎಂದು ವರದಿ ಮಾಡಿದೆ. 

ಅಂದಹಾಗೆ ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸೀಸನ್‌ನ ಮೊದಲ ಅತಿಥಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಆಗಲಿದ್ದಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿ ಬರಲಿ ಎನ್ನವುದು ಅಭಿಮಾನಿಗಳ್ಆಸೆ ಕೂಡ ಆಗಿದೆ. ಸಿನಿಮಾ ಮಂದಿಯ ಜೊತೆಗೆ ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಗಣ್ಯರು ವೀಕೆಂಡ್ ವಿತ್ ರಮೇಶ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ 4 ಸೀಸನ್ ಮುಗಿಸಿರುವ ವೀಕೆಂಡ್ ವಿತ್ ರಮೇಶ್ ಕೊನೆಯ ಸೀಸನ್ 2019ರಲ್ಲಿ ಕೊನೆಗೊಂಡಿತ್ತು. 

Anchor Anushree: ಬರ್ತ್‌ಡೇಗೂ ಮೊದಲು ಅನುಶ್ರೀಗೆ ಶುಭಾಶಯಗಳ ಮಹಾಪೂರ, ಅಂದಹಾಗೆ ಅನುಶ್ರೀ ವಯಸ್ಸೆಷ್ಟು?

ಜನಪ್ರಿಯಾ ಶೋ ಆಗಿರುವ ವೀಕೆಂಡ್ ವಿತ್ ರಮೇಶ್ ಮುಗಿದ ಬಳಿಕ ಮತ್ತೆ ಪ್ರಾರಂಭ ಮಾಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ವೀಕೆಂಡ್ ವಿತ್ ರಮೇಶ್ ಯಾವಾಗ ಎಂದು ಪ್ರೇಶ್ನೆ ಮಾಡುತ್ತಿದ್ದರು. ಇದೀಗ ಅಭಿಮಾನಿಗಳ ಆಸೆಯಂತೆ ಮತ್ತೆ ಪ್ರಾರಂಭವಾಗುತ್ತಿದೆ.

ಕನ್ನಡದ ನಂ.1 ಧಾರಾವಾಹಿ ಯಾವುದು? ಟಾಪ್ 5 ಸೀರಿಯಲ್‌ಗಳ ಲಿಸ್ಟ್ ಇಲ್ಲಿದೆ

  ಈಗಾಗಲೇ ಪ್ರಸಾರವಾಗಿರುವ ವೀಕೆಂಡ್ ವಿತ್ ರಮೇಶ್‌ನ ಹಿಂದಿನ ಸೀಸನ್‌ನಲ್ಲಿ ಪುನೀತ್ ರಾಜ್‌ಕುಮಾರ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಅಂಬರೀಶ್, ಗಣೇಶ್, ರವಿಚಂದ್ರನ್, ಯಶ್, ಸುಧಾ ಮೂರ್ತಿ, ನಾರಾಯಣಮೂರ್ತಿ, ರಾಜೇಂದ್ರ ಸಿಂಗ್ ಬಾಬು, ಸಿದ್ದರಾಮಯ್ಯ, ಹೆಚ್ ಡಿ ದೇವೇಗೌಡ, ವೀರೇಂದ್ರ ಹೆಗ್ಗಡೆ, ವಿಜಯ ಸಂಕೇಶ್ವರ್ ಮತ್ತು ಇನ್ನೂ ಅನೇಕರು ಕಾಣಿಸಿಕೊಂಡಿದ್ದರು. ಈ ಬಾರಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?