ಬಿಗ್ ಬಾಸ್ ಆಯ್ತು ಈಗ UK ಬಿಗ್ ಬ್ರದರ್‌ನಲ್ಲಿ ಛೋಟಾ ಅಬ್ದು ರೋಝಿಕ್; ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

Published : Jan 25, 2023, 05:22 PM IST
ಬಿಗ್ ಬಾಸ್ ಆಯ್ತು ಈಗ UK ಬಿಗ್ ಬ್ರದರ್‌ನಲ್ಲಿ ಛೋಟಾ ಅಬ್ದು ರೋಝಿಕ್; ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ಸಾರಾಂಶ

ಹಿಂದಿ ಬಿಗ್ ಬಾಸ್ ಬಳಿಕ ಈಗ UK ಬಿಗ್ ಬ್ರದರ್‌ನಲ್ಲಿ ಛೋಟಾ ಅಬ್ದು ರೋಝಿಕ್ ಕಾಣಿಸಿಕೊಳ್ಳುತ್ತಿದ್ದಾರೆ.   

ಹಿಂದಿ ಬಿಗ್ ಬಾಸ್ 16 ಶೋ ಮೂಲಕ ಭಾರತೀಯ ಪ್ರೇಕ್ಷಕರ ಗಮನ ಸೆಳೆದ ಗಾಯಕ ಛೋಟಾ ಅಬ್ದು ರೋಝಿಕ್. ಹಿಂದಿ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ ಅಬ್ದು ಆಗಿದ್ದರು. ತಜಕಿಸ್ತಾನ ಮೂಲದ ಗಾಯಕ ಅಬ್ದು ಬಿಗ್ ಬಾಸ್ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ ಶೋನಲ್ಲಿ ಅಬ್ದು ನೆಟ್ಟಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮೆಚ್ಚುಗೆ ಗಳಿಸಿದ್ದರು ಅಬ್ದು ಅನೇಕ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗಿರಲಿಲ್ಲ. ಬೇಗನೇ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದರು. ಅಬ್ದು ಔಟ್ ಆಗಿದ್ದು ಪ್ರೇಕ್ಷಕರಿಗೆ ಬಾರಿ ಬೇಸರ ಮೂಡಿಸಿತ್ತು. ಆದರೆ ಮನೆಯಿಂದ ಹೊರಬಂದ ಮೇಲು ಅಬ್ದು ಅಭಿಮಾನಿಗಳನ್ನು ರಂಜಿಸಿದರು. ಇದೀಗ ಅಬ್ದು ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ.   

ಅಬ್ದು ಅವರು ಪ್ರಸಿದ್ಧ ಬಿಗ್ ಬ್ರದರ್ ಶೋಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಅತೀ ದೊಡ್ಡ ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಗೆ ಅಬ್ದು ಸಹಿ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬ್ರದರ್ ಶೋನಿಂದ ಆಫರ್ ಬಂದಿದ್ದು ಅಬ್ದು ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಬಿಗ್ ಬ್ರದರ್ ರಿಯಾಲಿಟಿ ಶೋ 5 ವರ್ಷಗಳ ಬಳಿಕ ಬರ್ತಿದೆ. ಹಾಗಾಗಿ ಈ ಶೋ ಮೇಲೆ ಬಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಅಬ್ದು ಬಿಗ್ ಬ್ರದರ್ ಶೋ ಒಪ್ಪಿಕೊಂಡಿದ್ದು ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗುತ್ತಿರುವ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ ನೋಡಿ ಸ್ಪರ್ಧಿಗಳು ಶಾಕ್

ಅಬ್ದು ತನ್ನ ಹಾಡುಗಳ ಮೂಲಕವೇ ಖ್ಯಾತಗಳಿಸಿದವರು. ಸೋಶಿಲಯ್ ಮೀಡಿಯಾ ಸೆನ್ಸೇಷನ್ ಅಬ್ದು ಇನ್ಸ್ಟಾಗ್ರಾಮ್ ನಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್ ನಲ್ಲಿ ಅವರು ಶಿವ ಠಾಕರೆ, ಸಾಜಿದ್ ಖಾನ್, ಎಸ್ ಸ್ಟಾನ್, ಸುಂಬುಲ್ ತೌಕೀರ್ ಮತ್ತು ನಿಮೃತ್ ಕೌರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಬ್ದು ತನ್ನ ಕಾಮಿಡಿ ಮೂಲಕವೂ ಪ್ರೇಕ್ಷಕರನ್ನು ಸೆಳೆದಿದ್ದರು. 

ಶೆಹನಾಜ್ ಗಿಲ್‌ನಿಂದ ತೇಜಸ್ವಿ ಪ್ರಕಾಶ್‌ವರೆಗೆ: ಬಿಗ್ ಬಾಸ್ ನಂತ್ರ ಇವರೇ ಜೀವನವೇ ಬದಲಾಯಿತು

ಅಬ್ದು 'ಓಹಿ ದಿಲಿ ಜೋರ್' ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದರು. ಅಬ್ದು Avlod Media ಎಂಬ ಯೂಟ್ಯೂಬ್ ಚಾನಲ್ ಮೂಲಕ ಸಖತ್‌ ಫೇಮಸ್‌ ಆಗಿದ್ದಾರೆ. ಅವರ ಈ ಚಾನಲ್‌ 635K ಚಂದಾದಾರರನ್ನು ಹೊಂದಿದೆ. ಅಂದಹಾಗೆ ಅಬ್ದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಅಬ್ದು ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಗ್ ಬ್ರದರ್ ಶೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?