Bhagyalaxmi serial : ಭಾಗ್ಯಳ ಬದಲಾವಣೆಯನ್ನೇ ಎದುರು ನೋಡುತ್ತಿರುವ ಪ್ರೇಕ್ಷಕರು, ಭಾಗ್ಯ ಬದಲಾಗ್ತಾಳಾ?

Published : May 11, 2023, 01:40 PM IST
Bhagyalaxmi serial : ಭಾಗ್ಯಳ ಬದಲಾವಣೆಯನ್ನೇ ಎದುರು ನೋಡುತ್ತಿರುವ ಪ್ರೇಕ್ಷಕರು, ಭಾಗ್ಯ ಬದಲಾಗ್ತಾಳಾ?

ಸಾರಾಂಶ

ಹಳೇ ಕಾಲದ ಸತಿ ಸಾವಿತ್ರಿಯಂತೆ ಬದುಕುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಭಾಗ್ಯಗೆ ಬದಲಾವಣೆಯ ಸಮಯ ಬಂದ ಹಾಗಿದೆ. ಅವಳು ನಿಜಕ್ಕೂ ಬದಲಾಗ್ತಾಳಾ ಅಥವಾ ಗಂಡನನ್ನೇ ತನ್ನ ದಾರಿಗೆ ತರ್ತಾಳಾ?

ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ ಏಳು ಗಂಟೆಗೆ ಪ್ರಸಾರವಾಗ್ತಿರೋ ಸೀರಿಯಲ್ ಭಾಗ್ಯಲಕ್ಷ್ಮೀ. ಇದರ ನಾಯಕಿ ಭಾಗ್ಯ. ಮೊದಲು ಇದು ಭಾಗ್ಯ ಎಂಬ ಅಕ್ಕ ಮತ್ತು ಲಕ್ಷ್ಮೀ ಅನ್ನೋ ತಂಗಿಯ ಕತೆ ಆಗಿತ್ತು. ಇದೀಗ ಅಕ್ಕನ ಕಥೆ ಭಾಗ್ಯಲಕ್ಷ್ಮೀ ಅನ್ನೋ ಸೀರಿಯಲ್‌ ಆಗಿದೆ. ತಂಗಿಯ ಕಥೆಯ 'ಲಕ್ಷ್ಮೀ ಬಾರಮ್ಮ' ಎಂಬ ಇನ್ನೊಂದು ಸೀರಿಯಲ್‌ ಆಗಿದೆ. ಬಹುಶಃ ಈ ಸೀರಿಯಲ್‌ನಲ್ಲಿ ಅಕ್ಕ ತಂಗಿಯರ ಇಬ್ಬರ ಪಾತ್ರಗಳನ್ನೂ ವೀಕ್ಷಕರು ಮೆಚ್ಚಿಕೊಂಡ ಕಾರಣಕ್ಕೋ ಏನೋ ಜನ ಒಂದೇ ಸೀರಿಯಲ್‌ ಎರಡು ಕವಲಾಗಿ ಒಡೆದಿದೆ. ಇದೀಗ ಎರಡೂ ಸೀರಿಯಲ್‌ಗಳೂ ವೀಕ್ಷಕರ ಮನಗೆದ್ದಿವೆ. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಈ ಕಾಲದ ದಿಟ್ಟ ಹೆಣ್ಣುಮಗಳಾಗಿ ಲಕ್ಷ್ಮೀ ಕಾಣಿಸಿಕೊಂಡರೆ, ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಗಂಡ, ಅತ್ತೆ, ಮಾವ, ಮಕ್ಕಳೇ ತನ್ನ ಸರ್ವಸ್ವ ಎಂದು ಬದುಕುತ್ತಿರುವ ಹಳೇ ಕಾಲದ ಹೆಣ್ಣುಮಗಳನ್ನು ಭಾಗ್ಯ ಪ್ರತಿನಿಧಿಸುತ್ತಾಳೆ.

ಇದೀಗ ಭಾಗ್ಯಳಲ್ಲ ಬದಲಾವಣೆಯ ಸಮಯ ಬಂದಿದೆ. ಇಷ್ಟು ದಿನ ಕುಸುಮಾ ಎಷ್ಟೇ ಬೈದರೂ ಭಾಗ್ಯ ಒಂದೂ ಮಾತನಾಡಲ್ಲ. ಎಲ್ಲವನ್ನು ಅವಳು ಸಹಿಸಿಕೊಂಡು ಇರುತ್ತಾಳೆ. ಒಂದು ಹಂತದವರೆಗೆ ಈ ಸ್ವಭಾವ ಸಹಿಸಿಕೊಳ್ಳಬಹುದು, ಆದರೆ ಈ ಕಾಲದಲ್ಲಿ ಒಂದು ಹಂತದ ಬಳಿಕ ಈ ಅತಿಗಳೇ ಎಲ್ಲರಿಗೂ ರೇಜಿಗೆ ತರಿಸುತ್ತವೆ. ಅದನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸಿಯೂ ಇದ್ದಾರೆ. ಈ ಭಾಗ್ಯಳಿಗೆ ಒಂದು ಸ್ವಂತಿಕೆಯೇ ಇಲ್ಲವೇ, ಗಂಡ ತಾಂಡವ್‌ ತನ್ನನ್ನು ಇಷ್ಟಪಡೋದಿಲ್ಲ ಅಂದರೆ ಕಣ್ಣೀರು ಹಾಕುತ್ತಾ ಇರಬೇಕಾ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಒಂದೋ ಅವಳೀಗ ಬದಲಾಗಬೇಕು, ಇಲ್ಲವೇ ತನ್ನ ಪಾಡಿಗೆ ತಾನು ತಾನಂದುಕೊಂಡ ಹಾಗೆ ಬದುಕಬೇಕು. ಆದರೆ ಮೂರು ಹೊತ್ತೂ ಕಣ್ಣೀರು ಹಾಕುತ್ತ ಇರಬಾರದು ಅನ್ನೋದು ವೀಕ್ಷಕರ ಭಾವನೆ.

Sathya serial : ಇಲ್ಲೀವರೆಗೆ ಬಾಯ್ ಕಟ್, ಇನ್ನು ಸತ್ಯಾ ಉದ್ದ ಕೂದಲಿನ ಸುಂದ್ರಿ ಆಗ್ತಾಳಂತೆ!

ಇನ್ನು ತಾಂಡವ್‌ ವಿಚಾರಕ್ಕೆ ಬಂದರೆ ಆತನಿಗೆ ಪತ್ನಿ ಭಾಗ್ಯ ಕಂಡರೆ ಇಷ್ಟ ಇಲ್ಲ. ಮನೆಯವರ ಒತ್ತಾಯದಿಂದ ಭಾಗ್ಯ ಜೊತೆ 16 ವರ್ಷ ಸಂಸಾರ ಮಾಡಿದ್ದಾನೆ. ಇದೀಗ ಒಂದು ಸನ್ನಿವೇಶದಲ್ಲಿ ನೇರವಾಗಿ ಭಾಗ್ಯಗೆ ನೀನಂದ್ರೆ ಇಷ್ಟ ಇಲ್ಲ ಅಂತ ಹೇಳಿದ್ದಾನೆ. ಆಫೀಸ್‌ನಲ್ಲಿ ಕೆಲಸ ಮಾಡುವ ಶ್ರೇಷ್ಠ ಜೊತೆ ಇರಬೇಕು ಎಂದುಕೊಂಡಿದ್ದಾನೆ.

ಭಾಗ್ಯಗೆ ಮಾಡರ್ನ್ ಕಲ್ಚರ್(Modern culture) ಗೊತ್ತಿಲ್ಲ, ಯಾವತ್ತೂ ಅವಳಿಷ್ಟಕ್ಕೆ ತಕ್ಕ ಹಾಗೆ ಬದುಕಿಲ್ಲ, ಎದುರಿಸಿ ಮಾತನಾಡಿಲ್ಲ. ಸದಾ ಕಾಲ ಅತ್ತೆ-ಮಾವನ ಚಾಕರಿ ಮಾಡುವ ಭಾಗ್ಯ, ಮಕ್ಕಳ ಆಟ-ಪಾಠ, ಇಷ್ಟ ಕಷ್ಟ, ಗಂಡನ ಆರೈಕೆ ಮಾಡುತ್ತ ಜೀವನ ಸಾಗಿಸುತ್ತಿದ್ದಾಳೆ. ಈಗ ತಾಂಡವ್ ನೇರವಾಗಿ ಭಾಗ್ಯಗೆ ನೀನಂದ್ರೆ 'ನಂಗೆ ಇಷ್ಟ ಇಲ್ಲ, ನಾನು ಇಷ್ಟಪಟ್ಟ ಪತ್ನಿ ನೀನಲ್ಲ, ನನ್ನ ಕನಸಿನ ಪತ್ನಿ ನೀನು ಅಲ್ಲವೇ ಅಲ್ಲ. ನೀನು ನನ್ನ ಜೀವನದಿಂದ ತೊಲಗು, ನನಗೆ ಮುಕ್ತಿ ಕೊಡು' ಎಂದು ಹೇಳಿದ್ದಾನೆ. ಇದರಿಂದ ಮನನೊಂದು ಹೋದರೂ ಭಾಗ್ಯ ಬದಲಾಗಬೇಕು ಅಂದುಕೊಂಡಿದ್ದಾಳೆ. ಪರಿಸ್ಥಿತಿಯನ್ನು ತಾನು ನಿಭಾಯಿಸಬೇಕು ಅಂದುಕೊಂಡಿದ್ದಾಳೆ. ಅದರಂತೆ ನಿಧಾನಕ್ಕೆ ಭಾಗ್ಯ ಹೇರ್‌ಸ್ಟೈಲ್(Hairstyle) ಬದಲಾಯಿಸಬೇಕು, ಡಯೆಟ್(Diet) ಮಾಡಿ ಸಣ್ಣ ಆಗಬೇಕು, ನಿತ್ಯ ಸೀರೆ ಧರಿಸಬಾರದು ಅಂತ ಅಂದುಕೊಂಡಿದ್ದಾಳೆ. ವೀಕ್ಷಕರೂ ಈ ಭಾಗ್ಯಳದ್ದು ಅತಿಯಾಯ್ತು, ಸ್ವಲ್ಪವಾದರೂ ಅವಳು ಈ ಕಾಲದವರ ಹಾಗಿರಬೇಕು ಅಂದುಕೊಂಡಿದ್ದಾರೆ. ಸದ್ಯಕ್ಕೀಗ ವೀಕ್ಷಕರು ಭಾಗ್ಯಳ ಬದಲಾವಣೆಯನ್ನೇ ಎದುರು ನೋಡುತ್ತಿದ್ದಾರೆ.

Hitler Kalyana serial : ಮುಗ್ಧ ಲೀಲಾ ಕೊಲೆಯಾಗ್ತಾಳಾ? ಎತ್ತ ಸಾಗುತ್ತೆ ಸೀರಿಯಲ್?

ಆದರೆ ದೈಹಿಕವಾಗಿ ಏನೋ ಬದಲಾಗಬಹುದು, ಆದರೆ ಮಾನಸಿಕ ಬದಲಾವಣೆ(Changes) ಅಷ್ಟು ಸುಲಭವಲ್ಲ. ಸರಿದಾರಿಯಲ್ಲಿರುವ ಭಾಗ್ಯ ಹಳಿ ತಪ್ಪಿದ ತನ್ನ ಗಂಡನನ್ನು ಹೇಗೆ ಸರಿದಾರಿಗೆ ತರುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್ ಸೂರ್ಯವಂಶಿಯಾಗಿ ಸುದರ್ಶನ್ ರಂಗಪ್ರಸಾದ್, ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್, ಶ್ರೇಷ್ಠಳಾಗಿ ಕಾವ್ಯಾ ಗೌಡ, ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್ ಅವರು ಅಭಿನಯಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?