ಧಾರಾವಾಹಿ ಅಭಿಮಾನಿಗಳಿಗೆ ಬೇಸರದ ಸುದ್ದಿ; ಮುಕ್ತಾಯವಾಗ್ತಿದೆ 'ಜೊತೆ ಜೊತೆಯಲಿ' ಸೀರಿಯಲ್, ಮೇಘಾ ಹೇಳಿದ್ದೇನು?

Published : May 11, 2023, 11:59 AM IST
ಧಾರಾವಾಹಿ ಅಭಿಮಾನಿಗಳಿಗೆ ಬೇಸರದ ಸುದ್ದಿ; ಮುಕ್ತಾಯವಾಗ್ತಿದೆ 'ಜೊತೆ ಜೊತೆಯಲಿ' ಸೀರಿಯಲ್, ಮೇಘಾ ಹೇಳಿದ್ದೇನು?

ಸಾರಾಂಶ

ಧಾರಾವಾಹಿ ಅಭಿಮಾನಿಗಳಿಗೆ ಬೇಸರದ ಸುದ್ದಿ. 'ಜೊತೆ ಜೊತೆಯಲಿ' ಸೀರಿಯಲ್ ಸದ್ಯದಲ್ಲೇ ಮುಕ್ತಾಯವಾಗುತ್ತಿದೆ. 

ಕನ್ನಡ ಧಾರಾವಾಹಿ ಅಭಿಮಾನಿಗಳಿಗೆ ಬೇಸರ ಸುದ್ದಿ ಇದು. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಸದ್ಯದಲ್ಲೇ ಮುಕ್ತಾಯವಾಗುತ್ತಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಈಗಾಗಲೇ ಜೀ ವಾಹಿನಿಯಲ್ಲಿ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ ಹಾಗೂ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇದೀಗ ಪ್ರಸಾರ ನಿಲ್ಲಿಸುತ್ತಿರುವ ಸೀರಿಯಲ್ಗಳ ಸಾಲಿಗೆ ಜೊತೆ ಜೊತೆಯಲಿ ಧಾರಾವಾಹಿ ಕೂಡ ಸೇರಿದೆ.

ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಒಂದಕ್ಕಿಂತ ಒಂದು ಧಾರಾವಾಹಿಗಳು ಸೂಪರ್ ಎನ್ನುವ ಹಾಗೆ ಪೈಪೋಟಿಗೆ ಬಿದ್ದು ಬಿತ್ತರವಾಗುತ್ತಿವೆ. ಅನೇಕ ಧಾರಾವಾಹಿಗಳು ಕುತೂಹಲ ಹೆಚ್ಚಿಸುತ್ತಾ, ಪ್ರೇಕ್ಷಕರ ಹೃದಯ ಗೆದ್ದರೆ ಇನ್ನು ಕೆಲವು ಸೀರಿಯಲ್‌ಗಳು ಟಿಆರ್‌ಪಿ ಇಲ್ಲದೆ ಒದ್ದಾಡುತ್ತಿವೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಕೂಡ ಮುಕ್ತಾಯದ ಹಂತ ತಲುಪಿದೆ. 

ಈ ಸೀರಿಯಲ್‌ನ ಪ್ರಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಸದ್ಯ ನಡೆಯುತ್ತಿದೆ. ಈ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿ ನಾಯಕಿ ಮೇಘಾ ಶೆಟ್ಟಿಈ ಬಗ್ಗೆ ಮಾತನಾಡಿದ್ದಾರೆ. ಧಾರಾವಾಹಿ ಮುಕ್ತಾಯವಾಗುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಜೊತೆ ಜೊತೆಯಲಿ ಅನೇಕ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ನಾಯಕನಾಗಿ ಕಾಣಿಸಿಕೊಂಡಿದ್ದ ನಟ ಅನಿರುದ್ಧ ಒಂದಿಷ್ಟು ವಿವಾದಗಳ ಕಾರಣಕ್ಕೆ ಸೀರಿಯಲ್ ಬಿಟ್ಟು ಹೊರಬಂದಿದ್ದರು.  ಅಲ್ಲದೇ ಮೇಘಾ ಶೆಟ್ಟಿ ಕೂಡ ಈ ಧಾರಾವಾಹಿಗೆ ಗುಡ್ ಬೈ ಹೇಳಿದ್ರು ಎನ್ನಲಾಗಿತ್ತು. ಇದೆಲ್ಲದರ ನಡುವೆಯೂ ಜೊತೆ ಜೊತೆ ಇಷ್ಟು ಪ್ರಸಾರವಾಗುತ್ತಿದೆ. ಇದೀಗ ಮುಕ್ತಾಯದ ಹಂತಕ್ಕೆ ಬಂದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. 

Sathya serial : ಇಲ್ಲೀವರೆಗೆ ಬಾಯ್ ಕಟ್, ಇನ್ನು ಸತ್ಯಾ ಉದ್ದ ಕೂದಲಿನ ಸುಂದ್ರಿ ಆಗ್ತಾಳಂತೆ!

ಮೇಘಾ ಶೆಟ್ಟಿ ಹೇಳಿದ್ದೇನು?

ನಟಿ ಮೇಘಾ ಶೆಟ್ಟಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ದೊಡ್ಡ ಪರದೆ ಮೇಲೆ ಮಿಂಚಿರುವ ಕನಸು ಕಂಡಿರುವ ಮೇಘಾ ಮಾತನಾಡಿ,‘ನಾನು ಈ ಧಾರಾವಾಹಿಯಿಂದ ಹೊರಬರುತ್ತಿಲ್ಲ. ಬದಲಿಗೆ ಈ ಸೀರಿಯಲ್‌ ಕೊನೆಯಾಗುತ್ತಿದೆ. ಇಷ್ಟುಸಮಯದ ಸೀರಿಯಲ್‌ ಜರ್ನಿ ಮರೆಯಲಾಗದ ಅನುಭವ ಕೊಟ್ಟಿದೆ. ಮುಂದೆ ಸಿನಿಮಾಗಳತ್ತ ನನ್ನ ಚಿತ್ತ. ಒಂದಿಷ್ಟು ಸ್ಕ್ರಿಪ್ಟ್ ಕೇಳಿದ್ದೇನೆ. ಮುಂದಿನ ವಾರ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ. 

ಮಗಳಿಗೆ ಕಿವಿ ಚುಚ್ಚುವಾಗ ಕಣ್ಣೀರಿಟ್ಟ ಚಂದು ಗೌಡ; ಭಾವುಕ ವಿಡಿಯೋ ವೈರಲ್

ಮೇಘಾ ಸದ್ಯ ‘ಕೈವ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕವೀಶ್‌ ಶೆಟ್ಟಿಅವರೊಂದಿಗೆ ‘ಆಫ್ಟರ್‌ ಆಪರೇಶನ್‌ ಲಂಡನ್‌ ಕೆಫೆ’ ಸಿನಿಮಾ ಮೂಲಕ ಮೇಘಾ ಜೂ.30ಕ್ಕೆ ತೆರೆಮೇಲೆ ಬರ್ತಿದ್ದಾರೆ. ಇನ್ನೇನು ಧಾರಾವಾಹಿ ಮುಗಿಯುತ್ತಿದ್ದಂತೆ ಮೇಘಾ ಸಂಪೂರ್ಣವಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?