
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಹೊಸ ಧಾರಾವಾಹಿ ಭಾರ್ಗವಿ ಎಲ್‌ಎಲ್‌ಬಿ ಶುರುವಾಗಿದೆ. ದೇವರಿಗೆ ಪೂಜೆ ಮಾಡುವ ನಾಯಕಿ ಮನೆಯಿಂದ ಶುರುವಾಗುತ್ತದೆ. ಪೂಜೆ ಮಾಡುತ್ತಿರುವ ತಂದೆ, ಅಡುಗೆಮನೆಯಲ್ಲಿ ಗೊಣಗುತ್ತಾ ಕೆಲಸ ಮಾಡುತ್ತಿರೋ ಅಮ್ಮ. ಪೂಜೆಗೆ ಅಪ್ಪನಿಗೆ ಸಹಾಯ ಮಗಳು. ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಕಥೆ ಶುರುವಾಗುತ್ತದೆ. ನೀವಂತೂ ಕೆಲಸ ಮಾಡಲ್ಲ. ಮನೆ ಬಾಡಿಗೆ ಇನ್ನು ಕಟ್ಟಿಲ್ಲ. ಹಾಲಿನ ಬೆಲೆ 2 ರೂಪಾಯಿ ಏರಿಕೆಯಾಗಿದೆ. ತರಕಾರಿ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ನಾಯಕಿ ಭಾರ್ಗವಿ ಅಡುಗೆಮನೆಯಿಂದಲೇ ಗಂಡ-ಮಗಳಿಗೆ ಬೈಯ್ಯುತ್ತಿರುತ್ತಾಳೆ. ಚಿಕ್ಕ ಚಿಕ್ಕ ಕೇಸ್‌ಗಾಗಿ ಹುಡುಕಾಟ ನಡೆಸುತ್ತಿರೋ ವಕೀಲೆಯಾಗಿ ಭಾರ್ಗವಿಯನ್ನು ತೋರಿಸಲಾಗಿದೆ. ಭಾರ್ಗವಿ ಮನೆ ಹಾಗೂ ಆಕೆಯ ಫ್ರೆಂಡ್ಸ್ ಟೀಂನ್ನು ಚೊಕ್ಕದಾಗಿ ತೋರಿಸಲಾಗಿದೆ. ಇದರ ಜೊತೆಯಲ್ಲಿ ತಂದೆ-ಮಗಳ ನಡುವಿನ ಪ್ರೀತಿಯನ್ನು ಸಹ ತೋರಿಸಲಾಗಿದೆ.
ಮತ್ತೊಂದೆಡೆ ಹೀರೋ ಮನೆಯನ್ನು ಸಹ ತೋರಿಸಲಾಗಿದೆ. ಹೀರೋಗೆ ಮೂವರು ಸೋದರಿಯರು, ಇಬ್ಬರು ಚಿಕ್ಕಪ್ಪ, ಅಣ್ಣ-ಅತ್ತಿಗೆ, ಅಪ್ಪ-ಅಮ್ಮ ಮತ್ತು ಅಜ್ಜಿ ಪಾತ್ರವನ್ನು ತೋರಿಸಲಾಗಿದೆ. ಹೀರೋ ಅರ್ಜುನ್ ತಾಯಿಯಾಗಿ ನಟಿ ಸುಜಾತಾ ಬಹುದಿನಗಳ ಬಳಿಕ ಶಕುಂತಲಾ ಪಾಟೀಲ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಹೀರೋ ಅರ್ಜುನ್ ಅತ್ತಿಗೆಯಾಗಿ ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ಚೈತ್ರಾ ರಾವ್ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸೀರಿಯಲ್‌ನಲ್ಲಿ ಚೈತ್ರಾ ರಾವ್ ಅವರದ್ದು ನೆಗೆಟಿವ್ ರೋಲ್ ಅನ್ನೋದು ಖಾತ್ರಿಯಾಗಿದೆ. ಹೀರೋ ತಂದೆ ಹಿರಿಯ ಮತ್ತು ಪ್ರಭಾವಿಶಾಲಿ ವಕೀಲ ಜಯಪ್ರಕಾಶ್ ಪಾಟೀಲ್ ಈ ತುಂಬಿದ ಕುಟುಂಬದ ಯಜಮಾನ.
ಮೊದಲ ಎಪಿಸೋಡ್‌ನಲ್ಲಿ ಜಯಪ್ರಕಾಶ್ ಪಾಟೀಲ್ ತನ್ನ ಎರಡನೇ ಮಗ ಅರ್ಜುನ್‌ಗೆ ಮದುವೆ ಮಾಡಿಸುವ ಸಿದ್ಧತೆಯಲ್ಲಿದ್ದಾರೆ. ಆಪ್ತ ಗೆಳೆಯ ಎಂಎಲ್‌ಎ ಶಕ್ತಿಪ್ರಸಾದ್ ಭೂಪತಿ ಶೆಟ್ಟಿ ಮಗಳು ವಂದನಾ ಜೊತೆಯಲ್ಲಿ ಮಗ ಅರ್ಜುನ್ ಮದುವೆ ಮಾಡಿಸಲು ಪಾಟೀಲ್ ಕುಟುಂಬ ಪ್ಲಾನ್ ಮಾಡಿಕೊಂಡಿದೆ. ಪಾಟೀಲ್ ಕುಟುಂಬಕ್ಕೆ ಆಗಮಿಸಿರುವ ಸ್ವಾಮೀಜಿಗಳು, ನಿಮ್ಮ ಮಗನ ಜೀವನಕ್ಕೆ ಆತನ ಬಾಳಸಂಗಾತಿ ಎಂಟ್ರಿ ಕೊಟ್ಟಿದ್ದಾಳೆ. ಆಕೆ ಆಗಮನದಿಂದ ಮನೆಗೆ ಒಳ್ಳೆಯದಾಗಲಿದೆ ಎಂದು ಭಾರ್ಗವಿ ಹೆಸರು ಹೇಳದೇ ನಟಿಯ ಗುಣಗಾನ ಮಾಡಿದ್ದಾರೆ. ಆದ್ರೆ ಮದುವೆಗಾಗಿ ಮಾಡುತ್ತಿರುವ ಪೂಜೆಯಲ್ಲಿ ವರ ಅರ್ಜುನ್ ಇಲ್ಲ. ಆತನಿಗಾಗಿ ಇಡೀ ಮನೆ ಕಾಯುತ್ತಿದೆ.
ಇತ್ತ ಎಂಎಲ್‌ಎ ಶಕ್ತಿಪ್ರಸಾದ್ ಭೂಪತಿ ಶೆಟ್ಟಿ ಮಗನ ಪಾತ್ರವನ್ನು ಮೊದಲ ಸಂಚಿಕೆಯಲ್ಲಿಯೇ ತೋರಿಸಲಾಗಿದೆ. ಬೆಳಗ್ಗೆಯೇ ಗೆಳೆಯರು ಮತ್ತು ಗೆಳೆತಿಯರೊಂದಿಗೆ ಮದ್ಯ ಕುಡಿಯುತ್ತಾ ಲೈಫ್ ಎಂಜಾಯ್ ಮಾಡುತ್ತಿರೋ ಶ್ರೀಮಂತ ಕುಟುಂಬದ ದಾರಿ ತಪ್ಪಿದ ಮಗನೇ ವಿಕ್ಕಿ ಭೂಪತಿ ಶೆಟ್ಟಿ. ಈ ವಿಕ್ಕಿ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಪಾಟೀಲ್ ಮನೆಯಲ್ಲಿ ಕೆಲಸ ಮಾಡುವ ಸಂಧ್ಯಾ ಬರುತ್ತಾಳೆ. ಸಂಧ್ಯಾಳನ್ನು ನೋಡುತ್ತಿದ್ದಂತೆ ಮದ್ಯ ಕುಡಿದ ವಿಕ್ಕಿ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ. ಆಕೆ ಬಟ್ಟೆಯನ್ನು ಹರಿದು, ಸ್ವಿಮ್ಮಿಂಗ್ ಪೂಲ್‌ಗೆ ತಳ್ಳುತ್ತಾನೆ. ನಂತರ ಸಂಧ್ಯಾಳನ್ನು ಬಲವಂತವಾಗಿ ತಬ್ಬಿಕೊಳ್ಳಲು ಹೋದಾಗ ಕಪಾಳಕ್ಕೆ ಏಟು ತಿನ್ನುತ್ತಾನೆ. ಇದರಿಂದ ಕೋಪಗೊಂಡ ವಿಕ್ಕಿ, ಇವತ್ತು ಆಕೆ ನನಗೆ ಬೇಕೆಂದು ತನ್ನ ಚೇಲಾಗಳನ್ನು ಕಳುಹಿಸುತ್ತಾನೆ. ಅಲ್ಲಿಗೆ ಬಂದ ವಂದನಾ , ಸೋದರ ವಿಕ್ಕಿ ಕೆನ್ನೆಗೆ ಹೊಡೆದು ಓಡಿ ಹೋದ ಯುವತಿ, ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿರೋ ಸಂಧ್ಯಾ ಎಂದು ಹೇಳುತ್ತಾನೆ.
ಇದನ್ನೂ ಓದಿ: ಅಮೃತಧಾರೆ ಪೆದ್ದು ಮಲ್ಲಿ, ಭಾರ್ಗವಿ ಆದ್ಮೇಲೆ ಹೀಗೆಲ್ಲಾ ಬದಲಾದ್ಲಾ? ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು!
ಮತ್ತೊಂದೆಡೆ ವಿಕ್ಕಿ ಆಂಡ್ ಗ್ಯಾಂಗ್‌ನಿಂದ ತಪ್ಪಿಸಿಕೊಂಡಿರುವ ಸಂಧ್ಯಾ ಜಾತ್ರೆಯೊಳಗೆ ಹೋಗುತ್ತಾಳೆ. ಈ ವೇಳೆ ತನಗೆ ಎದುರಾಗುವ ಭಾರ್ಗವಿ ಬಳಿ ತನ್ನನ್ನು ರಕ್ಷಿಸುವಂತೆ ಸಂಧ್ಯಾ ಸಹಾಯ ಕೇಳುತ್ತಾಳೆ. ಆಗ ವೀಕ್ಷಕರಿಗೆ ಭಾರ್ಗವಿಯ ಆಕ್ಷನ್ ಲುಕ್ ನೀಡಲು ಸಿಗುತ್ತದೆ. ವಕೀಲೆಯಾಗಿರುವ ಭಾರ್ಗವಿ ಧೈರ್ಯಶಾಲಿ ಎಂಬುದನ್ನು ಸಹ ತೋರಿಸಲಾಗಿದೆ. ವಿಕ್ಕಿ ಚೇಲಾಗಳಿಗೆ ಭಾರ್ಗವಿ ಸರಿಯಾಗಿಯೇ ಬೆಂಡೆತ್ತಿದ್ದಾಳೆ. ಭಾರ್ಗವಿ ಫೈಟ್ ಮಾಡುವಾಗಲೇ ಹೀರೋ ಅರ್ಜುನ್ ಪಾಟೀಲ್‌ನನ್ನು ತೋರಿಸಲಾಗಿದೆ. ಅರ್ಜುನ್‌ಗೆ ಮೊದಲ ನೋಟದಲ್ಲಿಯೇ ಭಾರ್ಗವಿ ಮೇಲೆ ಲವ್ ಆಗಿದೆ. ಇದಾದ ಬಳಿಕ ಸಂಧ್ಯಾಳ ಜೊತೆ ಪೊಲೀಸ್ ಠಾಣೆಗೆ ತೆರಳಿ ಎಂಎಲ್‌ಎ ಶಕ್ತಿಪ್ರಸಾದ್ ಭೂಪತಿ ಶೆಟ್ಟಿ ಮಗ ವಿಕ್ಕಿ ವಿರುದ್ಧ ಭಾರ್ಗವಿ ದೂರು ದಾಖಲಿಸಿದ್ದಾಳೆ. ಇಲ್ಲಿಂದಲೇ ಜಯಪ್ರಕಾಶ್ ಪಾಟೀಲ್ ಮತ್ತು ಭಾರ್ಗವಿಯ ಮುಖಾಮಖಿಯಾಗಲಿದ್ದಾರೆ.
ಇದನ್ನೂ ಓದಿ: ಅಮೃತಧಾರೆಯಿಂದ ಮಲ್ಲಿ ಔಟ್- ಕಾರಣ ಕೊಟ್ಟ ನಟಿ: ಇನ್ಮುಂದೆ ಅಕ್ಕವ್ರೇ ಅಕ್ಕವ್ರೇ ಅನ್ನೋರು ಯಾರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.