ಆಂಕರ್ ಅನುಶ್ರೀ ನಿರೂಪಣೆಗೆ ವಿರೋಧ: ಮುಟ್ಟಿನೋಡಿಕೊಳ್ಳುವಂತೆ ಟಾಂಗ್ ಕೊಟ್ಟ ಬ್ಯೂಟಿ!

Published : Mar 03, 2025, 09:08 PM ISTUpdated : Mar 03, 2025, 09:34 PM IST
ಆಂಕರ್ ಅನುಶ್ರೀ ನಿರೂಪಣೆಗೆ ವಿರೋಧ: ಮುಟ್ಟಿನೋಡಿಕೊಳ್ಳುವಂತೆ ಟಾಂಗ್ ಕೊಟ್ಟ ಬ್ಯೂಟಿ!

ಸಾರಾಂಶ

ಕನ್ನಡ ಕಿರುತೆರೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾ ಜನರಿಗೆ ಮನರಂಜನೆ ನೀಡುವ ಅನುಶ್ರೀ ಅವರ ನಿರೂಪಣೆಯನ್ನು ಕಿತ್ತುಕೊಳ್ಳಲು ಕೆಲವರು ಹುನ್ನಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಅನುಶ್ರೀ ಅವರು ತಮ್ಮ ಆಂಕರಿಂಗ್ ಅನ್ನು ವಿರೋಧಿಸಿದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಯಾವುದೇ ವೇದಿಕೆಯಾದರೂ ಸಹ ಹರಳುಹುರಿದಂತೆ ನಿರರ್ಗಳವಾಗಿ ಮಾತನಾಡುತ್ತಾ, ಮೇಲೆ ಎಲ್ಲರನ್ನೂ ತನ್ನವರಂತೆ ಕಾಣುತ್ತಾ ಜನರಿಗೆ ಮನರಂಜನೆ ನೀಡುವ ಆಂಕರ್ ಅನುಶ್ರೀ ಅವರ ನಿರೂಪಣೆಯನ್ನು ಕಿತ್ತುಕೊಳ್ಳಲು ಕೆಲವರು ಹುನ್ನಾರ ಮಾಡಿದ್ದಾರೆ. ಹೀಗಾಗಿ, ತನ್ನ ಆಂಕರಿಂಗ್ ಮಾಡುವುದನ್ನು ವಿರೋಧಿಸಿದವರಿಗೆ ನಟಿ ಮತ್ತು ಆಂಕರ್ ಅನುಶ್ರೀ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ.

ಕಾಮಿಡಿ ಕಿಲಾಡಿ ಕಾರ್ಯಕ್ರಮದ ಸ್ಪರ್ಧಿಗಳಾದ ಜಗ್ಗಪ್ಪ, ಸೂರಜ್, ನಯನಾ ಹಾಗೂ ಅನುಶ್ರೀ ಅವರು ಕುಳಿತು ಮಾತನಾಡುವಾಗ, ಅನುಶ್ರೀ ಆಂಕರಿಂಗ್ ಮಾಡುವುದಕ್ಕೆ ವಿರೋಧ ಮಾಡಿದವರ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, 'ನಾನು ಎಲ್ಲಿಯೇ ನಿರೂಪಣೆಗೆ ಹೋದರೂ ಇವಳು ಬಿಟ್ಟರೆ ಬೇರೆ ಯಾರು ಇಲ್ಲವೇ ನಿಮಗೆ. ಇವಳನ್ನು ಬಿಟ್ಟರೆ ಬೇರೆ ಆಂಕರ್ ಸಿಗುವುದಿಲ್ಲವೇ ಎಂದು ಕೇಳುತ್ತಾರೆ. ಅಂಥವರಿಗೆ ನಾನು ಹೇಳೋದಿಷ್ಟೇ.. ನಾನು ಕೆಲಸ ಮಾಡ್ತೀನಿ ಗುರು. ಅವರವರ ಕೆಲಸವನ್ನು ಪಡೆಯುವುದು ಅವರ ಟ್ಯಾಲೆಂಟಿನ ಮೇಲೆ. ಅದನ್ನು ಮೊದಲು ನೀವು ತಿಳಿದುಕೊಳ್ಳಿ. ಈಗ ನಯನಾ ಇದಾಳೆ, ನಯನ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂದರೆ ಅದು ನಯನಾ ಟ್ಯಾಲೆಂಟ್. ಇದೀಗ ನಾನು ನಯನಾ ಅಥವಾ ಬೆರೆಯವರ ಬಗ್ಗೆ ಮಾತನಾಡುತ್ತಿಲ್ಲ. ನನ್ನ ಬಗ್ಗೆ ಬಂದ ಕಾಮೆಂಟ್‌ಗಳ ಬಗ್ಗೆ ನಾನು ಇದೀಗ ಸ್ಪಷ್ಟನೆಯನ್ನು ಕೊಡುತ್ತಿದ್ದೇನೆ ಎಂದಿದ್ದಾರೆ. 

ನಿಮಗೆ ಇವಳನ್ನು ಬಿಟ್ರೇ ಬೇರೆ ಆಂಕರ್ ಇಲ್ವಾ ಎಂದು ಕೇಳುವವರು ಇಲ್ಲಿ ಕೇಳಿ.. ನನಗೆ ಟಾಕ್ ಬ್ಯಾಕ್ ಕೊಡಬೇಡಿ.. ನನಗೆ ಸ್ಕ್ರಿಪ್ಟ್ ಕೊಡಬೇಡಿ ಆದರೂ ನಾನು ಆಂಕರಿಂಗ್ ಮಾಡುತ್ತೇನೆ. 10 ಗಂಟೆ ನಾನು ವೇದಿಕೆ ಮೇಲೆ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ, ಯಾರ ಮುಂದೆಯೂ ಮಾತನಾಡಿಲ್ಲ. ಇಲ್ಲಿ ನಾವೆಲ್ಲರೂ ಒಂದು ಫ್ಯಾಮಿಲಿ ತರಹ ಇರುವುದರಿಂದ ನಾನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡರು.

ಇದನ್ನೂ ಓದಿ: ಅಪ್ಪು ಅಭಿಮಾನಿ ಎನ್ನುತ್ತಲೇ ಶಿವಣ್ಣನ ಭೈರತಿ ರಣಗಲ್ ಸ್ಟೈಲಲ್ಲಿ ಪೋಸ್ ಕೊಟ್ಟ ಆಂಕರ್ ಅನುಶ್ರೀ..!

ನನಗೆ ಟಾಕ್ ಬ್ಯಾಕ್ ಬೇಡ, ಸ್ಕ್ರಿಪ್ಟ್ ಬೇಡ, ಯಾರು ಬರ್ತಾರೆ, ಏನು ಎಂದು ಒಂಚೂರೂ ಮಾಹಿತಿ ಕೊಡಬೇಕು. ಆದರೂ ಆಂತಹ ಕಾರ್ಯಕ್ರಮವನ್ನು 10 ಗಂಟೆಗಳ ಕಾಲ ನಿರರ್ಗಳವಾಗಿ ನಡೆಸಿಕೊಡ್ತೀನಿ. ಇದು ಗೊತ್ತಿರುವುದರಿಂದ ನಮ್ಮ ಚಾನೆಲ್‌ನವರು, ಕೆಲವೊಂದು ವ್ಯಕ್ತಿ ಅಥವಾ ಸಂಸ್ಥೆಗಳು ಏ.. ಅವಳು ಮಾಡ್ತಾಳೆ ಬಿಡೋ ಎಂದು ಹೇಳಿ ನನ್ನನ್ನು ಕರೆದು ವೇದಿಕೆ ಮೇಲೆ ನಿರೂಪಣೆಗೆ ಬಿಡುತ್ತಾರೆ. ಏನಿಲ್ಲ ಎಂದರೂ ಮಾಡುತ್ತಾಳೆ, ಕಾರ್ಯಕ್ರಮಕ್ಕೆ ಹಾಕೊಳ್ಳಿ ಪರವಾಗಿಲ್ಲ ಎಂದು ಹೇಳುತ್ತಾರೆ. ಇದು ಹೆಂಗೆ ಗೊತ್ತಾ ಮನೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮವನ್ನು ನೋಡುವಂತಹ ಜನಕ್ಕೆ ಗೊತ್ತಿದೆ. ಅವರು ತುಂಬಾ ಕಾರ್ಯಕ್ರಮವನ್ನು ತುಂಬಾ ಎಂಜಾಯ್ ಮಾಡುತ್ತಿರುತ್ತಾರೆ. ಈ ಮೊಬೈಲ್‌ನಲ್ಲಿ ಮೆಸೇಜ್ ಮಾಡುವಂತಹವರಿಗೆ ಗೊತ್ತಿರೊಲ್ಲ. ಏಕೆಂದರೆ ಅವರಿಗೆ ಮಾಡೋದಕ್ಕೆ ಕೆಲಸ ಇರೋದಿಲ್ವಲ್ಲ, ಅದಕ್ಕೆ ಹೀಗೆ ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

ಇಲ್ಲಿ ಜಗ್ಗ ಹೇಳಿದ್ದು ಕೂಡ ಸರಿಯಾಗಿದೆ. ಜನರ ಮನಸ್ಸನ್ನು ಒಮ್ಮೆ ಗೆದ್ದುಬಿಟ್ಟರೆ ಸಾಕು. ಅವನಿಗೆ ಬದುಕು ಇರೋದೇ ಇಲ್ಲವಾ? ನಿಜವಾಗಿ ಹೇಳಬೇಕೆಂದರೆ ಗೆದ್ದವರಿಗೆ ಕಷ್ಟಗಳು ಜಾಸ್ತಿ ಎಂದು ಅನುಶ್ರೀ ಅವರು ತಮಗಾದ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಆಂಕರ್ ಅನುಶ್ರೀ ಕ್ಯಾರೆಕ್ಟರ್ ರಿವೀಲ್ ಮಾಡಿದ ಕಿಪಿ ಕೀರ್ತಿ!

ಇದೇ ವೇಳೆ 'ಎಷ್ಟು ವರ್ಷದಿಂದ ನೀವೇ ಆಂಕರಿಂಗ್ ಮಾಡ್ತೀರಾ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಯಾರಾದರೂ ಹೊಸಬರಿಗೆ ಅವಕಾಶ ಕೊಟ್ಟುಬಿಡಿ. ಹೊಸದಾಗಿ ಏನಾದರೂ ಮಾಡಿ ಎಮದು ಹೇಳುತ್ತಾರೆ ಎಂದು ಕಾಮಿಡಿ ಕಿಲಾಡಿಗಳು ನಟಿ ನಯನಾ ತಮ್ಮ ಅಳಲನ್ನೂ ತೋಡಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?