
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದರ ನಡುವೆಯೇ, ಮದುವೆಗೂ ಮುನ್ನ ನಡೆದ ಸ್ವಾರಸ್ಯಕರ ಘಟನೆಯನ್ನು ಸೋನಲ್ ಅವರು ಹಂಚಿಕೊಂಡಿದ್ದಾರೆ.
ಕ್ರೈಸ್ತ ಸಮುದಾಯದಲ್ಲಿ ಸಾಮಾನ್ಯವಾಗಿ ಎಲ್ಲಾ ಸೆಲಬ್ರೇಷನ್ಗಳಲ್ಲಿ ಡ್ರಿಂಕ್ಸ್ ಇರಲೇಬೇಕು. ಅದೇ ರೀತಿ ಮದುವೆಗೆ ಮುನ್ನ ನಡೆದ ಅರಿಶಿಣ ಶಾಸ್ತ್ರದ ಸಂದರ್ಭದಲ್ಲಿ ಮೊದಲ ಬಾರಿಗೆ ಅತ್ತೆ ಮನೆಗೆ ಹೋದಾಗ ತರುಣ್ ಪೇಚಿಗೆ ಸಿಲುಕಿದ ಪ್ರಸಂಗವನ್ನು ರೋಚಕವಾಗಿ ಸೋನಲ್ ಹೇಳಿದ್ದಾರೆ. 'ಅರಿಶಿಣ ಶಾಸ್ತ್ರ ಇರುವಂತೆ ನಮ್ಮಲ್ಲಿ ರೋಸ್ ಶಾಸ್ತ್ರ ಇರುತ್ತದೆ. ಕಾಯಿಯ ಹಾಲನ್ನು ಹಚ್ಚುವ ಶಾಸ್ತ್ರ ಅದು. ಅದಕ್ಕಾಗಿ ತರುಣ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಪಟಾಕಿ ಎಲ್ಲಾ ಸಿಡಿಸಿ ತುಂಬಾ ಚೆನ್ನಾಗಿ ಬರಮಾಡಿಕೊಂಡರು. ಅದನ್ನು ನೋಡಿ ತರುಣ್ ಫುಲ್ ಖುಷ್ ಆಗಿ ಸೋ ನೈಸ್ ಎಂದರು. ಅಷ್ಟಾಗುತ್ತಿದ್ದಂತೆಯೇ ನಮ್ಮಲ್ಲಿ ಬಾರ್ ಓಪನ್ ಆಗಿಬಿಡ್ತು. ಎಲ್ಲರೂ ಫುಲ್ ಡ್ರಿಂಕ್ಸ್ ತಗೊಂಡು ಡಾನ್ಸ್ ಶುರು ಮಾಡಿಕೊಂಡರು. ನನ್ನಮ್ಮ, ಅಣ್ಣ ಎಲ್ಲರೂ ಡಾನ್ಸ್ ಮಾಡಿದರು. ಇದನ್ನು ನೋಡಿ ತರುಣ್ ಫುಲ್ ಸುಸ್ತಾಗಿ ಬಿಟ್ಟರು' ಎಂದು ಸೋನಲ್ ಹೇಳಿದ್ದಾರೆ.
ಪತ್ನಿಯನ್ನು ಆಸ್ಪತ್ರೆಗೆ ಕರೆತಂದು ಕಂಗ್ರಾಟ್ಸ್ ಹೇಳಿದ ತರುಣ್ ಸುಧೀರ್: ಅಲ್ಲಾಗಿದ್ದೇ ಬೇರೆ!
ನಾನು ಮೊದಲೇ ನಮ್ಮ ಮನೆಯವರಿಗೆ ಹೇಳಿದ್ದೆ. ದಯವಿಟ್ಟು ಸ್ವಲ್ಪ ಸಮಾಧಾನದಿಂದ ಇರಿ, ಅವರಿಗೆ ಇವೆಲ್ಲಾ ಅಭ್ಯಾಸ ಇಲ್ಲ ಎಂದು. ಆದರೆ ಯಾರೂ ಕೇಳಲೇ ಇಲ್ಲ. ಎಲ್ಲರೂ ಡ್ರಿಂಕ್ಸ್ ತೆಗೆದುಕೊಂಡು ಬಿಟ್ಟರು. ಇದನ್ನು ನೋಡಿ ತರುಣ್ ಪೆಚ್ಚು ಬಿದ್ದರು ಎಂದು ಅಮದು ನಡೆದ ಘಟನೆಯನ್ನು ಸೋನಲ್ ಸ್ವಾರಸ್ಯಕರವಾಗಿ ಹೇಳಿದ್ದು, ಅದರ ವಿಡಿಯೊ ಅನ್ನು, ಬಿಂದು ಗೌಡ ಎನ್ನುವವರು ಶೇರ್ ಮಾಡಿದ್ದಾರೆ.
ಇನ್ನು ತರುಣ್ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್ ಫ್ಯಾಕ್ಟರಿ, ಬನಾರಸ್, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್, ಶಂಭೋ ಶಿವ ಶಂಕರ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.
ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್- ತರುಣ್ ಹೇಳಿದ್ದೇನು ಕೇಳಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.