ಚಂದನ್-ನಿವೇದಿತಾ ಬೇರೆಯಾಗಲು ಸೃಜನ್ ಲೋಕೇಶ್ ಕಾರಣ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಇಬ್ಬರೂ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಜೂ.10): ವಿಚ್ಚೇದನ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಎಲ್ಲಾ ರೂಮರ್ಸ್ ಗಳನ್ನು ತಳ್ಳಿ ಹಾಕಿದ್ದಾರೆ. ಜೊತೆಗೆ ಮೂರನೇ ವ್ಯಕ್ತಿ ನಮ್ಮ ಸಂಸಾರದಲ್ಲಿ ಬರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯವಾಗಿ ಇವರಿಬ್ಬರು ಬೇರೆಯಾಗಲು ಸೃಜನ್ ಲೋಕೇಶ್ ಕಾರಣ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಂದನ್ ಮತ್ತು ನಿವೇದಿತಾ ನಮ್ಮಿಬ್ಬರ ಮಧ್ಯೆ ಮೂರನೇ ವ್ಯಕ್ತಿ ಬಂದಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ದೊಡ್ಮನೆಯಲ್ಲಿ ದಾಂಪತ್ಯ ಕಲಹ, ನಟ ಯುವರಾಜ್ - ಶ್ರೀದೇವಿ ಬದುಕಲ್ಲಿ ಬಿರುಕು, ವಿಚ್ಚೇದನಕ್ಕೆ ಅರ್ಜಿ!
ಈ ಬಗ್ಗೆ ಚಂದನ್ ಮಾತನಾಡಿ ಒಬ್ಬ ಮೂರನೇ ವ್ಯಕ್ತಿಯ ಜೊತೆಗೆ ನಿವೇದಿತಾ ಅವರ ಜೊತೆಗೆ ಸಂಬಂಧ ಕಲ್ಪಿಸುತ್ತಿರುವುದು ನನಗೂ ತುಂಬಾ ಬೇಜಾರಾಗಿದೆ. ಯಾಕೆಂದರೆ ಆ ವ್ಯಕ್ತಿ ಮನೆಗೆ ನಾನು ಕೂಡ ಸಾಕಷ್ಟು ಬಾರಿ ಹೋಗಿದ್ದೇನೆ. ಅವರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದೆ. ಅವರು ತುಂಬಾ ಒಳ್ಳೆಯ ಫ್ಯಾಮಿಲಿ. ಅವರ ಮನೆಯ ಸಮಾರಂಭದಲ್ಲಿ ಭಾಗವಹಿಸುವುದು ನಮಗೂ ಖುಷಿ ಇದೆ. ಆ ವ್ಯಕ್ತಿ ಜೊತೆಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಕನ್ನಡಿಗರಾಗಿ ನಮಗೆ ಶೋಭೆ ಅಲ್ಲ ಎಂದಿದ್ದಾರೆ.
ಈ ಬಗ್ಗೆ ನಿವೇದಿತಾ ಗೌಡ ಕೂಡ ಸ್ಪಷ್ಟನೆ ನೀಡಿ, ಹೌದು ನನಗೆ ಅದನ್ನು ನೋಡಿದ ತಕ್ಷಣ ಬೇಜಾರಾಯ್ತು, ಚಂದನ್ ಹೇಳಿದ ಹಾಗೇ ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್, ನಾವೆಲ್ಲ ಅವರ ಮನೆಗೆ ಹೋಗುತ್ತೇವೆ. ಏನಾದರೂ ಫಂಕ್ಷನ್ ಬಂದ್ರೆ ಎಲ್ಲರನ್ನೂ ಸೇರಿಸುತ್ತಾರೆ. ಅವರ ಫ್ಯಾಮಿಲಿ ಜೊತೆಗೆ ಒಳ್ಲೆಯ ಬಾಂಡಿಂಗ್ ಇದೆ. ಪ್ರತೀ ವರ್ಷವೂ ನಾನು ಅವರಿಗೆ ಬರ್ತಡೇ ವಿಶ್ ಮಾಡುಯತ್ತೇನೆ. ಅವರು ಕೂಡ ಮಾಡುತ್ತಾರೆ. ಈ ವರ್ಷ ಯಾಕೆ ಹೀಗಾಯ್ತು ಗೊತ್ತಿಲ್ಲ. ತುಂಬಾ ತಪ್ಪಿದು. ಅವರಿಗೂ ಫ್ಯಾಮಿಲಿ ಇದೆ. ಮಕ್ಕಳಿದ್ದಾರೆ. ಪ್ಲೀಸ್ ಯಾರೂ ಹರ್ಟ್ ಮಾಡಬೇಡಿ. ಏನೋ ಒಂದು ಪೋಸ್ಟ್ ಹಾಕಿದ ತಕ್ಷಣ, ಟ್ರೆಂಡಿಂಗ್ ಸಾಂಗ್ ಹಾಕಿದ ತಕ್ಷಣ, ಲವ್ ಇದೆ ಅದು ಇದು ಅಂತ ತುಂಬಾ ಜನ ಅವರ ಪೋಸ್ಟ್ ಗೆ ಎಂಗೇಜ್‌ಮೆಂಟ್ ಸಿಗಬೇಕು ಎಂದು ಮಾಡುತ್ತಾರೆ. ಅದರ ಹಿಂದಿನ ನೋವು ಈ ಸಂದರ್ಭದಲ್ಲಿ ತುಂಬಾ ನೋವಾಗುತ್ತೆ.
ಕನ್ನಡದ ಕ್ಯಾಂಡಿಕ್ರಶ್ ಸಿನೆಮಾಗೆ ಡಬಲ್ ಶಾಕ್, ಚಂದನ್ ಶೆಟ್ಟಿ ಫೋನ್ ಸ್ವಿಚ್ ಆಫ್!
ಮುಂದುವರೆದು ಮಾತನಾಡಿದ ನಿವೇದಿತಾ ಅವರು, ಈ ವಿಚಾರ ವೈರಲ್ ಆದ ತಕ್ಷಣ ನಾನು ಅವರಿಗೆ ಮತ್ತು ಅವರ ಹೆಂಡತಿಗೆ ಕಾಲ್ ಮಾಡಿ ಕೇಳಿದೆ ಪ್ಲೀಸ್ ಬೇಜಾರು ಮಾಡಿಕೊಳ್ಳಬೇಡಿ ಎಂದು ಆಗ ಅವರೇ ಹೇಳಿದ್ರು ತಲೇನೆ ಕೆಡಿಸಿಕೊಳ್ಳಬೇಡ, ಅವರಿಬ್ಬರೂ ಕೂಡ ನನಗೆ ತುಂಬಾ ಸಪೋರ್ಟ್ ಮಾಡಿದ್ರು. ಬೇಸ್ ಲೆಸ್ ಆಗಿ ಏನೂ ಮಾತನಾಡಬೇಡಿ. ಇಲ್ಲದಿರುವುದನ್ನು ಹೇಳಿದರೆ ತುಂಬಾ ನೋವಾಗುತ್ತೆ. ಏನೂ ಕೂಡ ಗೊತ್ತಿಲ್ಲದೆ, ಪೋಸ್ಟ್ ನೋಡಿಕೊಂಡು ಮಾತನಾಡುವುದು ಈ ಥರ ಮಾತನಾಡುವುದು ತುಂಬಾ ತಪ್ಪು ಮನಸ್ಸಿಗೆ ಎಲ್ಲಿಲ್ಲದ ನೋವಾಗುತ್ತೆ ಎಂದಿದ್ದಾರೆ.