ಸಿಹಿಯ ಗುಟ್ಟನ್ನು ಹೇಳಲು ಹೋದಾಗಲೆಲ್ಲಾ ರಾಮ್ ಅದನ್ನು ಕೇಳಲು ರೆಡಿಯಾಗ್ತಿಲ್ಲ. ನನಗೆ ನಿಮ್ಮ ಇತಿಹಾಸ ಬೇಡ ಅನ್ನುತ್ತಿದ್ದಾನೆ. ಇದರ ಹಿಂದಿನ ಗುಟ್ಟೇನು? ವೀಕ್ಷಕರು ಹೇಳ್ತಿರೋದೇನು?
ಸೀತಾರಾಮ ಸೀರಿಯಲ್ನಲ್ಲಿ ಸದ್ಯ ಮದುವೆಯ ಸಡಗರ ಜೋರಾಗಿ ನಡೆಯುತ್ತಿದೆ. ನಿಶ್ಚಿತಾರ್ಥವೂ ನಡೆದಾಗಿದೆ. ಇನ್ನೇನಿದ್ದರೂ ಮದುವೆ ಮಾತ್ರ. ನಿಶ್ಚಿತಾರ್ಥ ಆಗುತ್ತಿದ್ದಂತೆಯೇ ಜೋಡಿ ಲವ್ಬರ್ಡ್ಸ್ ರೀತಿಯಲ್ಲಿ ಹಾರಾಡುತ್ತಿವೆ. ಅತ್ತ ಚಿಕ್ಕಮ್ಮ ಮಾಡಿದ ಕುತಂತ್ರ ಯಾವುದೂ ವರ್ಕ್ಔಟ್ ಆಗಲಿಲ್ಲ. ಈಗ ವಿಲನ್ ಭಾರ್ಗವಿಗೆ ಬೇರೆ ದಾರಿ ಇಲ್ಲ.ಮದುವೆಯಾದ ಮೇಲೆ ಸೀತಾಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾಳೇ ವಿನಾ ಮದುವೆಯಂತೂ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇತ್ತ ರುದ್ರಪ್ರತಾಪ್ ಮಾತ್ರ ಸಂಚು ಹೂಡುತ್ತಲೇ ಇದ್ದು ಸೀತಾ-ರಾಮ ಕಲ್ಯಾಣದಲ್ಲಿ ಏನು ಮಾಡುವನೋ ಕಾದು ನೋಡಬೇಕಿದೆ.
ಆದರೆ, ಸಿಹಿಯ ಹುಟ್ಟಿನ ರಹಸ್ಯ ಮಾತ್ರ ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಈಕೆ ಸೀತಾಳ ಮಗಳೇ ಅಲ್ಲ ಎನ್ನುವ ವೀಕ್ಷಕರ ಅನಿಸಿಕೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮ್ ಜೊತೆಗೆ ಇರುವಾಗಲೇ ಈ ಗುಟ್ಟನ್ನು ಸೀತಾ ಹೇಳುತ್ತಿಲ್ಲಾ ಯಾಕೆ ಎಂದು ಸೀರಿಯಲ್ ಫ್ಯಾನ್ಸ್ ಪ್ರಶ್ನೆ ಮಾಡುತ್ತಿರುವ ಹೊತ್ತಲ್ಲೇ ಸಿಹಿಯ ಗುಟ್ಟನ್ನು ವಾಯ್ಸ್ ಮೆಸೇಜ್ ಮೂಲಕ ಸೀತಾ ಮಾಡಿ ಕಳುಹಿಸಿದ್ದಾಳೆ. ಮದುವೆಗೂ ಮುನ್ನ ಸಿಹಿಯ ಬಗ್ಗೆ ರಾಮ್ ತಿಳಿದುಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾಳೆ. ಆದರೆ ಆ ಗುಟ್ಟು ರಾಮ್ವರೆಗೆ ತಲುಪಲಿಲ್ಲ. ಹಲವು ಬಾರಿ ಸಿಹಿಯ ರಹಸ್ಯವನ್ನು ರಾಮ್ ಬಳಿ ಹೇಳಲು ಹೋದಾಗಲೆಲ್ಲಾ ರಾಮ್ ಅವೆಲ್ಲಾ ನನಗೆ ಬೇಡ ಎನ್ನುತ್ತಲೇ ಬಂದಿದ್ದಾನೆ. ಆದರೆ ಸೀತಾಳ ಮನಸ್ಸು ಮಾತ್ರ ಸಿಹಿಯ ಬದುಕಿನ ರಹಸ್ಯವನ್ನು ರಾಮ್ಗೆ ಹೇಳಲೇಬೇಕು ಎಂದು ಪಣ ತೊಟ್ಟಿದ್ದಾಳೆ.
ಮುದ್ದು ಸಿಹಿಯ ಆ್ಯಕ್ಟಿಂಗ್ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...
ಇದೀಗ ಮತ್ತೊಮ್ಮೆ ಸಿಹಿಯ ಬಗ್ಗೆ ಹೇಳಹೊರಟಿದ್ದಾಳೆ ಸೀತಾ. ಆದರೆ ಈಗಲೂ ನನಗೆ ನಿನ್ನ ಪಾಸ್ಟ್ ಬೇಡ. ಸಿಹಿ ನನ್ನದೂ ಮಗಳು ಅಷ್ಟೇ ಎಂದಿದ್ದಾನೆ. ಅಲ್ಲಿಗೆ ಸೀತಾ ಸುಮ್ಮನಾಗಿದ್ದಾಳೆ. ಇದಕ್ಕೆ ಹಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸೀತಾಳ ಮದುವೆಯಾಗಿ ಡಿವೋರ್ಸ್ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಡಿವೋರ್ಸ್ ಪಡೆಯದೇ ಗಂಡ ದೂರವಾಗಿದ್ದು ನಂತರ ಆತ ತೊಂದರೆ ಕೊಟ್ಟರೆ ಏನು ಮಾಡುವುದು ಎನ್ನುವ ಚಿಂತೆ ಅವರದ್ದು. ಸೀತಾ ಏನೇ ಆದರೂ ಈ ರಹಸ್ಯವನ್ನು ಹೇಳಿಯೇ ಬಿಡಬೇಕಿತ್ತು ಎನ್ನುವುದು ಅವರ ಮಾತು. ಇದರ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ.
ಇದರ ನಡುವೆಯೇ ಕಮೆಂಟಿಗರೊಬ್ಬರು ನೀಡಿರುವ ಪ್ರತಿಕ್ರಿಯೆಗೆ ಸಾಕಷ್ಟು ಮಂದಿ ಮರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದೇನೆಂದರೆ, ಒಂದು ವೇಳೆ ಸೀತಾ ಈಗಲೇ ಸಿಹಿಯ ವಿಷಯ ತಿಳಿಸಿಬಿಟ್ಟರೆ ಇಬ್ಬರ ಮದುವೆಯಾದ ಮೇಲೆ ಕಿತ್ತಾಡಿಕೊಂಡು ದೂರವಾಗಲು ವಿಷ್ಯ ಬೇಡ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತೆ ಕೆಲವರು ಇದು ನಿಜ. ಮದ್ವೆಯಾದ ಮೇಲೆ ಕಥೆ ಮುಗಿದೇ ಹೋಗುತ್ತದೆ. ಆಗ ಸಿಹಿಯ ರಹಸ್ಯದ ಬಗ್ಗೆ ತಿಳಿಯುತ್ತದೆ. ಆಗ ರಾಮ್ ಮೊದಲೇ ಯಾಕೆ ಹೇಳಲಿಲ್ಲ ಎಂದು ಗಲಾಟೆ ಶುರು ಮಾಡುತ್ತಾನೆ, ಆಗ ಸೀತಾ ನಿಮಗೆ ಹೇಳಲು ಹೋದಾಗಲೆಲ್ಲಾ ಬೇಡ ಎನ್ನುತ್ತಿದ್ದೀರಿ ಎನ್ನುತ್ತಾಳೆ. ಇಷ್ಟು ದೊಡ್ಡ ಗುಟ್ಟನ್ನು ನೀನು ಮರೆಮಾಚಿದ್ದು ಯಾಕೆ ಎಂದು ಸಿಹಿಯ ವಿಷಯದಲ್ಲಿ ಕಿತ್ತಾಟ ಶುರುವಾಗಿ ಸೀರಿಯಲ್ ಎಳೆಯಲು ಬೇಕಲ್ವಾ? ಅದಕ್ಕೆ ಸಿಹಿಯ ಗುಟ್ಟು ಸದ್ಯ ಗುಟ್ಟಾಗಿಯೇ ಉಳಿದಿದೆ. ಇದು ಮದುವೆಯಾದ ಮೇಲೆ ಕಿತ್ತಾಟದ ವಿಷಯವಾಗಲಿದೆ ಎಂದಿದ್ದಾರೆ. ಇದಕ್ಕೆ ಅನೇಕರು ನಿಜ ನಿಜ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಸಿಹಿಯ ಗುಟ್ಟು ತಿಳಿಯಲು ತಾವು ಇನ್ನೆಷ್ಟು ವರ್ಷ ಕಾಯಬೇಕೋ ಎಂದು ಕಮೆಂಟಿಗರು ಹೇಳುತ್ತಿದ್ದಾರೆ.
ನೋಡಿ ಫ್ರೆಂಡ್ಸ್... ರಾತ್ರಿ ನಿದ್ದೆ ಮಾಡಲೂ ಬಿಡಲಿಲ್ಲ... ಸೀತಾರಾಮ ಸಿಹಿಯಿಂದ ಹೀಗೊಂದು ಕಂಪ್ಲೇಂಟ್...