ಮುದಿ ಹಸುಗಳನ್ನು ಕಸಾಯಿಖಾನೆಗೆ ಕೊಡುವ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್?: ವೀರೇಶ್ ಹೊಸಕೋಟೆ

By Vaishnavi Chandrashekar  |  First Published Jul 24, 2024, 1:23 PM IST

ಮತ್ತೆ ವರ್ತೂರ್ ಸಂತೋಷ್ ಮೇಲೆ ಆರೋಪ ಮಾಡಿದ ಹೊಸಕೋಟೆ ವೀರೇಶ್. ಡ್ರಗ್ಸ್‌ ಸೇವಿಸುವುದು ನಿಜವೇ?


ಹಳ್ಳಿಖಾರ್ ಒಡೆಯಾ ಎಂದೇ ಖ್ಯಾತಿ ಪಡೆದಿರುವ ವರ್ತೂರ್ ಸಂತೋಷ ಒಂದಾದಮೇಲೊಂದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹುಲಿ ಉಗುರು ವಿಚಾರದಿಂದ ಟಾರ್ಗೆಟ್‌ ಆದ ವರ್ತೂರ್‌ ಈಗ ಗಾಂಜಾ ವ್ಯಸನಿ ಎನ್ನುವ ಆರೋಪವೂ ಶುರುವಾಗಿದೆ. ಜೇಬು ತುಂಬಾ ಹಣ ಇಟ್ಟುಕೊಂಡು ಓಡಾಡುತ್ತಿರುವ ವರ್ತೂರ್‌ರನ್ನು ಬೆಳೆಸಿದ್ದು ನಾನೇ ಎಂದು ಹೇಳಿಕೊಂಡಿರುವ ಹೊಸಕೋಟೆ ವೀರೇಶ್‌ ಗುಂಪು ಮತ್ತೊಂದು ಆರೋಪ ಮಾಡಿದೆ. 

ಹಳ್ಳಿಕಾರ್ ಒಡೆಯಾ ಎಂದು ವರ್ತೂರ್ ಸಂತೋಷ್‌ಗೆ ಬಿರುದು ಬರಲು ಹೊಸಕೋಟೆ ವೀರೇಶ್ ಕಾರಣ. ತಲೆ ಇಲ್ಲದ ಜನರು ಅವನ ಬಳಿ ಹೋಗುತ್ತಿದ್ದಾರೆ ಆತ ಚೆನ್ನಾಗಿ ಟೋಕನ್ ಹೊಡೆಯುತ್ತಿದ್ದಾನೆ. ರೈತರಿಗೆ ದೊಡ್ಡ ಮೋಸ ಮಾಡುತ್ತಿದ್ದಾನೆ ಚೀಲದಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದಾನೆ. ವರ್ತೂರ್ ಸಂತೋಷ್‌ರಿಂದ ನನಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ ಆತ ಎಲ್ಲಾ ಹಸುಗಳನ್ನು ಕೂಯಿಸು ಕಳುಹಿಸುತ್ತಾನೆ. ನಾವು ಎಷ್ಟೇ ಫೋನ್ ಕಾಲ್ ಮಾಡಿದ್ದರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವೀರೇಶ್ ತಂಡದವರು ಇತ್ತೀಚಿಗೆ ಪ್ರೆಸ್‌ಮೀಟ್‌ ಮಾಡಿ ಮಾತನಾಡಿದ್ದಾರೆ.

Tap to resize

Latest Videos

ಪ್ರಜ್ವಲ್ ರೇವಣ್ಣ ಸೆಲ್‌ 1 ಕಿಮೀ. ದೂರದಲ್ಲಿದೆ, ಬೇಕರಿ ಐಟಂ ಸಿಗುತ್ತೆ; ದರ್ಶನ್‌ VIP ಸೆಲ್‌ ಬಗ್ಗೆ ಸತ್ಯ ಬಿಚ್ಚಿಟ್ಟ ವ್ಯಕ್ತಿ

ನಾನು ವರ್ತೂರ್ ಸಂತೋಷ್ ವಿರುದ್ಧ ಆರೋಪ ಮಾಡಿದ್ದು ಸತ್ಯ ಹಾಗಿದ್ದ ಮೇಲೆ ಆತ ಕರೆ ಮಾಡಿ ನನ್ನನ್ನು ಕೇಳಬೇಕಿತ್ತು. ಒಂದು ಕಡೆ ಮಾತನಾಡಿದರೆ ಮತ್ತೊಂದು ಕಡೆ ಮಾತನಾಡುವುದಿಲ್ಲ ಆತ ಪಕ್ಕಾ ಜಾತಿವಾದಿ ನಾವು ಯಾವತ್ತೂ ಜಾತಿ ನೋಡಿಲ್ಲ. ನನ್ನ ಜೊತೆ ಎಲ್ಲ ಜಾತಿಯವರು ಇದ್ದಾರೆ ಆದರೆ ಅವನು ಅವರ ಜಾತಿ ಬಿಟ್ಟು ಬೇರೆಯೊಬ್ಬರ ಜೊತೆ ಇರುವುದಿಲ್ಲ. ಜಾತಿ ಬಗ್ಗೆ ಮಾತನಾಡುವುದಕ್ಕೆ ಆತ ಯಾರು? ಎಂದು ವೀರೇಶ್ ಪ್ರಶ್ನಿಸಿದ್ದಾರೆ.

ಗರ್ಭಿಣಿ ಪತ್ನಿ ಮೇಲೆ 'ನೇತ್ರಾವತಿ' ನಟನಿಂದ ಹಲ್ಲೆ; ಮತ್ತೊಬ್ಬರ ಜೊತೆ ಸೈಲೆಂಟ್‌ ಆಗಿ ನಿಶ್ಚಿತಾರ್ಥ?

ವರ್ತೂರ್ ಸಂತೋಷ್ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದಾನೆ ಎಂದು ಅವರ ಮಾವ ಹೇಳುತ್ತಿದ್ದಾರೆ ಹೀಗಾಗಿ ತಕ್ಷಣವೇ ಆತನನ್ನು ಅರೆಸ್ಟ್‌ ಮಾಡಿ ತನಿಖೆ ಮಾಡಬೇಕು. ಆತನ ರಕ್ತ ಟೆಸ್ಟ್‌ ಮಾಡಬೇಕು ಡ್ರಗ್ಸ್‌ ಬಗ್ಗೆ ತಿಳಿದು ಬರುತ್ತದೆ. ಸಿಟಿಯಲ್ಲಿ ಇರುವ ನನ್ನ ಸ್ನೇಹಿತರು ಕೂಡ ಇದನ್ನು ನೋಡಿದ್ದಾರೆ. ಒಮ್ಮೆ ಡ್ರಗ್ಸ್‌ ವಿಚಾರಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಅದಕ್ಕೆ ಫೋಟೋ ಸಾಕ್ಷಿ ಇದೆ. ವರ್ತೂರ್‌ ಎಲ್ಲಿಂದ ಡ್ರಗ್ಸ್‌ ಖರೀಸಿದುತ್ತಿದ್ದಾನೆ ಎಂದು ಗೃತ ಸಚಿವರು ಕಠಿಣ ತನಿಖೆ ಮಾಡಬೇಕು ಎಂದು ವೀರೇಶ್ ಹೇಳಿದ್ದಾರೆ. 

click me!