ಗೆಳತಿ ಗಂಡ ನನ್ನ ಹಾಫ್ ಹಸ್ಬೆಂಡ್, ಪತಿ–ಪತ್ನಿ ಮಧ್ಯೆ ಮಲಗಿದ್ದ ನಟಿಯ ಹೇಳಿಕೆ ಟ್ರೋಲ್ !

Published : Jul 24, 2024, 11:54 AM ISTUpdated : Jul 24, 2024, 12:34 PM IST
ಗೆಳತಿ ಗಂಡ ನನ್ನ ಹಾಫ್ ಹಸ್ಬೆಂಡ್, ಪತಿ–ಪತ್ನಿ ಮಧ್ಯೆ ಮಲಗಿದ್ದ ನಟಿಯ ಹೇಳಿಕೆ ಟ್ರೋಲ್ !

ಸಾರಾಂಶ

ಕಿರುತೆರೆ ನಟಿ ಹಾಗೂ ಮಾಡೆಲ್ ಪೌಲೋನಿ ದಾಸ್ ಸದ್ಯ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. ಎರಡು ಮದುವೆ ವಿಷ್ಯದಲ್ಲಿ ತಮಾಷೆ ಮಾತೊಂದು ಈಗ ಸುದ್ದಿಯಾಗ್ತಿದೆ. ಅವರ ಹಾಫ್ ಹಸ್ಬೆಂಡ್ ಹೇಳಿಕೆ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. 

ಬಿಗ್ ಬಾಸ್ ಒಟಿಟಿ 3ನಿಂದ ಹೊರಗೆ ಬಂದಿರುವ ನಟಿ ಹಾಗೂ ಮಾಡೆಲ್ ಪೌಲೋನಿ ದಾಸ್ ಮಾತೊಂದು ಈಗ ವೈರಲ್ ಆಗಿದೆ. ಆಕೆ ಹೇಳಿಕೆ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಗೆಳತಿ ಪತಿ ತನ್ನ ಹಾಫ್ ಪತಿ ಎನ್ನುವ ಮೂಲಕ ನಟಿ ಈಗ ಟ್ರೋಲ್ ಆಗಿದ್ದಾಳೆ. ಬಿಗ್ ಬಾಸ್ ಒಟಿಟಿ 3ನಲ್ಲಿ ಸ್ಪರ್ಧಿಯಾಗಿರುವ ಅರ್ಮಾನ್ ಮಲ್ಲಿಕ್ ಹಾಗೂ ಆತನ ಇಬ್ಬರು ಪತ್ನಿಯರ ಬಗ್ಗೆ ಮಾತನಾಡುವ ವೇಳೆ, ಪೌಲೋನಿ ದಾಸ್ ಹೇಳಿದ ತಮಾಷೆ ಮಾತೊಂದು ಈಗ ವಿವಾದ ಸೃಷ್ಟಿಸಿದೆ.

ಪೌಲೋನಿ ದಾಸ್ (Pauloni Das) ಟ್ರೋಲ್ ಆಗಲು ಕಾರಣವೇನು? : ಬಿಗ್ ಬಾಸ್ (Bigg Boss) ಒಟಿಟಿಯಿಂದ ಹೊರ ಬಂದ ಪೌಲೋನಿ ದಾಸ್, ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಅರ್ಮಾನ್ ಮಲ್ಲಿಕ್ ಹಾಗೂ ಅವರ ಇಬ್ಬರು ಪತ್ನಿಯರ ಬಗ್ಗೆ ಅಭಿಪ್ರಾಯ ಕೇಳಲಾಗಿದೆ. ನಿಮ್ಮ ಬಾಯ್ ಫ್ರೆಂಡ್ (Boyfriend) ಕೂಡ ಹೀಗೆ ಮಾಡಿದ್ರೆ ನೀವು ಏನು ಮಾಡ್ತೀರಾ ಅಂತ ಪೌಲೋನಿ ದಾಸ್ ಗೆ ಪ್ರಶ್ನೆ ಹಾಕಲಾಗಿದೆ. 

ಜಹೀರ್‌ ಇಕ್ಬಾಲ್‌ನನ್ನು ಮದುವೆಯಾಗಲು ಅಪ್ಪನನ್ನು ಒಪ್ಪಿಸಿದ್ದು ಹೇಗೆ ಅನ್ನೋದನ್ನ ತಿಳಿಸಿದ ಸೋನಾಕ್ಷಿ ಸಿನ್ಹಾ!

ನನ್ನ ಬೆಸ್ಟ್ ಫ್ರೆಂಡ್ ಗೆ ಮದುವೆ ಆಗಿದೆ ಎಂದು ಫಟ್ ಅಂತ ಉತ್ತರ ನೀಡಿದ ಪೌಲೋನಿ, ಅಷ್ಟಕ್ಕೆ ಸುಮ್ಮನಾಗಲಿಲ್ಲ. ನಂತ್ರ ಆಕೆ ಹೇಳಿದ ಮಾತುಗಳೇ ಈಗ ಬಿಸಿಬಿಸಿ ಚರ್ಚೆಯಾಗ್ತಿವೆ. ನನ್ನ ಗೆಳತಿಗೆ, ನಿನ್ನ ಪತಿ ನನ್ನ ಹಾಫ್ ಹಸ್ಬೆಂಡ್ ಅಂತ ಆಗಾಗಾ ಹೇಳ್ತಿರುತ್ತೇನೆ ಎಂದು ಪೌಲೋನಿ ದಾಸ್ ಹೇಳಿದ್ದಾರೆ. ಮುಂದೆ ನಾನು ಮದುವೆಯಾಗಲಿರುವ ಪತಿ ನಿನ್ನ ಹಾಫ್ ಹಸ್ಬೆಂಡ್ ಎಂದು ನನ್ನ ಗೆಳತಿಗೆ ಹೇಳ್ತೇನೆ ಎಂದಿದ್ದಾಳೆ ದಾಸ್.

ಇನ್ನು ಗೋವಾದಲ್ಲಿ ನಡೆದ ಘಟನೆಯನ್ನೂ ಪೌಲೋನಿ ದಾಸ್ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ಬಾರಿ ಗೆಳತಿ ಹಾಗೂ ಆಕೆ ಪತಿ ಜೊತೆ ಪೌಲೋನಿ ಗೋವಾಕ್ಕೆ ತೆರಳಿದ್ದರು. ಅಲ್ಲಿ ರೂಮ್ ಸಿಗದ ಕಾರಣ ಎಲ್ಲರೂ ಒಂದೇ ರೂಮ್ ಬುಕ್ ಮಾಡಿದ್ರು. ಸ್ನೇಹಿತೆಗೆ ಕಾಲು ನೋವಿರುವ ಕಾರಣ ಆಕೆ ಬೆಡ್ ನ ಒಂದು ತುದಿಯಲ್ಲಿ ಮಲಗಿದ್ದಳು. ಇನ್ನೊಂದು ತುದಿಯಲ್ಲಿ ಆಕೆ ಪತಿ ಮಲಗಿದ್ದ. ಇಬ್ಬರ ಮಧ್ಯೆ ನಾನು ಮಲಗಿದ್ದೆ. ಆ ಘಟನೆ ನಂತ್ರ, ನಿನ್ನ ಪತಿ ನನಗೆ ಹಾಫ್ ಹಸ್ಬೆಂಡ್ ಆದ ಎನ್ನುತ್ತಿದ್ದೆ. ನಿನ್ನ ಮದುವೆಯಂತೂ ಆಗಿದೆ, ನನ್ನ ಮದುವೆ ಆದ್ರೆ ನನ್ನ ಗಂಡ ನಿನಗೆ ಹಾಫ್ ಹಸ್ಬೆಂಡ್ ಅಂದಿದ್ದೆ. ಅದಕ್ಕೆ ನನ್ನ ಗೆಳತಿ ಡೀಲ್ ಪಕ್ಕಾ ಎಂದಿದ್ದಳು ಎಂದು ಪೌಲೋನಿ ದಾಸ್ ತಮಾಷೆಯಾಗಿ ಹೇಳಿದ್ದಾರೆ. ಆದ್ರೆ ಪೌಲೋನಿ ಈ ಮಾತು ಜನರಿಗೆ ಇಷ್ಟವಾಗಿಲ್ಲ. ಜಗತ್ತು ಕೆಟ್ಟ ದಾರಿಯಲ್ಲಿ ಸಾಗ್ತಿದೆ ಎಂದು ಕೆಲವರು ಹೇಳಿದ್ರೆ, ಅಂತ್ಯ ಹತ್ತಿರದಲ್ಲೇ ಇದೆ ಎನ್ನಿಸುತ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

2024ರಲ್ಲಿ ರಿಲೀಸ್ ಆಗಿ ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಲಿವೆಯೇ ಈ ಪ್ಯಾನ್‌ ಇಂಡಿಯಾ ಸಿನಿಮಾಗಳು?

ಬಿಗ್ ಬಾಸ್ ಮನೆಯಲ್ಲಿದ್ದಾಗ ಪೌಲೋನಿ ದಾಸ್ ಅನೇಕ ವಿಷ್ಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಎಕ್ಸ್ ಬಾಯ್ ಫ್ರೆಂಡ್ ಬಗ್ಗೆಯೂ ಹೇಳಿದ್ದರು. ಆದ್ರೆ ಬಾಯ್ ಫ್ರೆಂಡ್ ವಿಷ್ಯ ಹೇಳಿ ಪೌಲೋನಿ, ಜನರ ಕನಿಕರಗಿಟ್ಟಿಸಿಕೊಳ್ತಿದ್ದಾರೆ ಎಂಬ ಆರೋಪವಿತ್ತು. ಆದ್ರೆ ಹೊರಗೆ ಬಂದ್ಮೇಲೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೌಲೋನಿ, ಆರು ತಿಂಗಳ ಹಿಂದೆಯೇ ಬ್ರೇಕ್ ಅಪ್ ಆಗಿದೆ, ಅದು ಜನರಿಗೆ ತಿಳಿದಿದೆ. ಜನರ ವೋಟ್ ಗಾಗಿ ಬಾಯ್ ಫ್ರೆಂಡ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದರು. ಈಗ್ಲೂ ನನಗೆ ಅವನ ನೆನಪು ಕಾಡುತ್ತದೆ. ನೆನಪಾದಾಗೆಲ್ಲ ಅಳ್ತೇನೆ. ಮಧ್ಯರಾತ್ರಿ ಎದ್ದು ಕುಳಿತು ಜೋರಾಗಿ ಅಳೋದಿದೆ ಎಂದು ಸಂದರ್ಶನದಲ್ಲಿ ಪೌಲೋನಿ ದಾಸ್ ಹೇಳಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನಿಲ್ಲದೆ Bigg Boss ಮನೇಲಿ Spark ಇಲ್ಲ ಎಂದ Rakshita Shetty; ಅಲ್ಲೇ ಸತ್ಯದರ್ಶನ ಮಾಡಿಸಿದ ಕಿಚ್ಚ ಸುದೀಪ್
BBK 12: ರಕ್ಷಿತಾ ಆಟದ ನಿಗೂಢ ತಂತ್ರಗಾರಿಕೆ ಬಿಚ್ಚಿಟ್ಟ ಧ್ರುವಂತ್‌ಗೆ ಫಿದಾ ಆದ್ರು ಗಿಲ್ಲಿ ಫ್ಯಾನ್ಸ್