
ಎಲ್ಲವೂ ಬಲ್ಲ ಸೊಸೆ ಭಾಗ್ಯಳಿಗೆ, ಊರಿನ ಉಸಾಬರಿಯನ್ನೆಲ್ಲಾರ ಅರಿತಿರೋ ಅತ್ತೆ ಕುಸುಮಾಳಿಗೆ ಇನ್ನೂ ತಾಂಡವ್ ವಿಷಯನೇ ಗೊತ್ತಾಗಲಿಲ್ಲ! ತಾಂಡವ್ ಮದುವೆ ಇನ್ನೇನು ಶ್ರೇಷ್ಠಾಳ ಜೊತೆ ನಡೆಯುತ್ತಿದೆ ಎನ್ನುವ ವಿಷಯವೇ ಗೊತ್ತಿಲ್ಲ. ಶ್ರೇಷ್ಠಾ ಮತ್ತು ತಾಂಡವ್ ಇದಾಗಲೇ ಎಂಗೇಜ್ಮೆಂಟ್ ಕೂಡ ಆಗಿದ್ದಾರೆ ಎಂದು ತಿಳಿದಿಲ್ಲ! ಪ್ರತಿ ಹಂತದಲ್ಲಿಯೂ ಶ್ರೇಷ್ಠಾ ತಾಂಡವ್ ಜೊತೆಯಲ್ಲಿಯೇ ಇದ್ದರೂ, ಸ್ವಲ್ಪವೂ ಡೌಟೇ ಬರ್ತಿಲ್ಲ ಈ ಅತ್ತೆ-ಸೊಸೆಗೆ. ತಾಂಡವ್ ಭಾಗ್ಯಳಿಂದ ಪದೇ ಪದೇ ಡಿವೋರ್ಸ್ ಕೇಳ್ತಿದ್ರೂ, ಅತ್ತ ತಾಂಡವ್ ಮತ್ತು ಶ್ರೇಷ್ಠಾ ಎಲ್ಲಾ ಕಡೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಮನೆಯವರಿಗೆ ಮಾತ್ರ ಇನ್ನೂ ತಾಂಡವ್ ಮೇಲೆ ಅನುಮಾನ ಬರದೇ ಇರುವುದು ಮಾತ್ರ ಸೋಜಿಗವೇ.
ಈಗ ಭಾಗ್ಯಲಕ್ಷ್ಮಿಗೆ ಟ್ವಿಸ್ಟ್ ಸಿಕ್ಕಿದೆ. ಶ್ರೇಷ್ಠಾ, ತಾಂಡವ್ಗೆ ಕಾಲ್ ಮಾಡಿದ್ದಾಳೆ. ಶ್ರೇಷ್ಠಾಳ ಹೆಸರು ನೋಡಿದ ಭಾಗ್ಯಳಿಗೆ ಉರಿ ಹತ್ತಿದೆ. ಫೋನ್ ರಿಸೀವ್ ಮಾಡಿ ಹಲೋ ಹೇಳಲಿಲ್ಲ. ತಾಂಡವ್ನೇ ಫೋನ್ ರಿಸೀವ್ ಮಾಡಿದ್ದು ಎಂದು ತಿಳಿದ ಶ್ರೇಷ್ಠಾ, ರೋಷಾವೇಷದಿಂದ ತಾಂಡವ್ಗೆ ಬಯ್ಯುತ್ತಿದ್ದಾಳೆ. ತನ್ನ ಜಾತಕದಲ್ಲಿ ಏನೋ ದೋಷ ಇದೆ ಎಂದು ಅಪ್ಪ-ಅಮ್ಮ ಹೇಳಿದ್ದು, ಬಾಳೆಗಿಡಕ್ಕೆ ಮದುವೆ ಮಾಡಬೇಕು ಎಂದೆಲ್ಲಾ ಹೇಳ್ತಿದ್ದಾರೆ. ಇದೆಲ್ಲಾ ನನಗೆ ಆಗಿ ಬರಲ್ಲ. ನೀನು ನನ್ನ ಅಪ್ಪ-ಅಮ್ಮನ ಬಳಿ ಮಾತನಾಡು ಎಂದು ಹೇಳಿಬಿಟ್ಟಿದ್ದಾಳೆ. ಇಷ್ಟು ಕೇಳುತ್ತಿದ್ದಂತೆಯೇ ಭಾಗ್ಯಳ ಆವೇಷ ಉಕ್ಕಿ ಹರಿದಿದೆ. ಬಾಂಬ್ ಅಂತೂ ಬ್ಲಾಸ್ಟ್ ಆಗಿದೆ. ಆದರೆ ಅದು ಸಂಪೂರ್ಣ ಸಿಡಿಲಿಲ್ಲ ಅಷ್ಟೇ.
ಗಂಡನಿಗೊಂದು ಕಾಲ, ಇಟ್ಟುಕೊಂಡವಳಿಗೊಂದು ಕಾಲ... ಈಗೇನಿದ್ರೂ ಪತ್ನಿಯದ್ದೇ ಕಾಲ..! ಭಲೇ ಭಲೇ ಭಾಗ್ಯ
ನಿನಗೆ ಎಲ್ಲದಕ್ಕೂ ನನ್ನ ಗಂಡನೇ ಬೇಕಾ ಎಂದು ಭಾಗ್ಯ ಮತ್ತೊಮ್ಮೆ ಸಿಡಿದೆದ್ದಿದ್ದಾಳೆ. ನೀನು ಮದುವೆಯಾಗುವ ಹುಡುಗನಿಗೆ ಈ ವಿಷಯ ಹೇಳು, ನನ್ನ ಗಂಡ ನಿನಗ್ಯಾಕೆ ಎಂದು ಪ್ರಶ್ನಿಸಿದ್ದಾಳೆ. ಫೋನ್ ರಿಸೀವ್ ಮಾಡಿದ್ದು ಭಾಗ್ಯ ಎಂದು ಗೊತ್ತಾಗಿ ಶ್ರೇಷ್ಠಾ ಶಾಕ್ ಆಗಿದ್ದಾಳೆ. ಒಟ್ಟಿನಲ್ಲಿ ಶ್ರೇಷ್ಠಾ ಮತ್ತು ತಾಂಡವ್ ಇಬ್ಬರೂ ಪೇಚಿನಲ್ಲಿ ಸಿಲುಕಿದ್ದಾರೆ! ಅಷ್ಟಕ್ಕೂ ಈಗ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅಳುಮುಂಜಿ ಭಾಗ್ಯಳನ್ನು ನೋಡಿ ನೋಡಿ ಸುಸ್ತಾಗಿ ಹೋಗಿ ಸೀರಿಯಲ್ ನೋಡುವುದನ್ನೇ ನಿಲ್ಲಿಸುತ್ತೇನೆ ಎಂದು ಒಂದೇ ಸಮನೆ ಗೋಳಾಡುತ್ತಿದ್ದ ವೀಕ್ಷಕರ ಮನಸ್ಥಿತಿಯೂ ಈಗ ಬದಲಾಗಿ ಹೋಗಿದೆ. ನಮಗೆ ಭಾಗ್ಯಲಕ್ಷ್ಮಿ ಸೀರಿಯಲ್ ಸಿಕ್ಕಾಪಟ್ಟೆ ಇಷ್ಟ ಆಗ್ತಿದೆ ಎನ್ನುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಸದ್ಯ ಗಂಡ ತಾಂಡವ್ನ ಕಾಲವೂ ಹೋಗಿದೆ, ಇಟ್ಟುಕೊಂಡಿರೋ ಶ್ರೇಷ್ಠಾಳಿಗೂ ಕುತ್ತು ಬಂದಿದೆ. ಈಗ ಏನಿದ್ರೂ ಪತ್ನಿ ಭಾಗ್ಯಳದ್ದೇ ಕಾಲವಾಗಿದೆ.
ಶ್ರೇಷ್ಠಾ ತನ್ನ ಗಂಡನ ಜೊತೆಗೆ ಮದುವೆಯಾಗಲು ಸಕಲ ಸಿದ್ಧತೆ ನಡೆಸುತ್ತಿದ್ದಾಳೆ ಎನ್ನುವುದು ಆಕೆಗೆ ತಿಳಿಯದಿದ್ದರೂ. ಭಾಗ್ಯಳಿಗೆ ಶ್ರೇಷ್ಠಾಳ ದುರ್ಬುದ್ಧಿ ಗೊತ್ತಾಗಿದೆ. ಇದೇ ಕಾರಣಕ್ಕೆ ಸಿಕ್ಕ ಸಿಕ್ಕಲ್ಲೆಲ್ಲಾ ಶ್ರೇಷ್ಠಾಳಿಗೆ ಅವಮರ್ಯಾದೆ ಮಾಡುತ್ತಿದ್ದಾಳೆ. ಬಟ್ಟೆ ಅಂಗಡಿಗೆ ಭಾವಿ ಗಂಡ ತಾಂಡವ್ ಜೊತೆ ಹೋಗಿದ್ದ ಶ್ರೇಷ್ಠಾಳಿಗೆ ಬೆಂಡೆತ್ತಿದ್ದಾಳೆ ಭಾಗ್ಯ. ಎಲ್ಲರ ಎದುರು ಅವಮಾನ ಮಾಡಿದ್ದಾಳೆ. ಅದೇ ಇನ್ನೊಂದೆಡೆ ಯಾವುದೇ ಕಾರಣಕ್ಕೂ ನಾನು ಡಿವೋರ್ಸ್ ಕೊಡಲ್ಲ ಎಂದು ತಾಂಡವ್ಗೆ ಖಡಾಖಂಡಿತವಾಗಿ ಹೇಳಿದ್ದಾಳೆ. ಈಗ ತಾಂಡವ್ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಇತ್ತ ಭಾಗ್ಯಳನ್ನು ಬಿಡುವ ಹಾಗೂ ಇಲ್ಲ, ಅತ್ತ ಶ್ರೇಷ್ಠಾಳ ಜೊತೆ ಮದುವೆ ನಿಲ್ಲಿಸುವ ಹಾಗೂ ಇಲ್ಲ. ಇದೀಗ ತರಕಾರಿ ಖರೀದಿಗೆ ಹೋಗಿರುವ ಭಾಗ್ಯ, ಅಲ್ಲಿ ತರಕಾರಿಯನ್ನು ಖರೀದಿಸುವ ಪಾಠ ಮಾಡಿದ್ದಾಳೆ ತಾಂಡವ್ಗೆ. ಕೊನೆಗೆ ಪೂಜಾ ಅಷ್ಟೂ ತರಕಾರಿಗಳನ್ನು ತಾಂಡವ್ ಕೈಯಲ್ಲಿ ಟಾಂಗ್ ಕೊಡುತ್ತಲೇ ಹೊರಿಸಿದ್ದಾಳೆ. ಸದ್ಯ ಭಾಗ್ಯಳ ಪಾಲಿಗೆ ಅದೃಷ್ಟ ಒಲಿದಿದೆ. ಮುಂದೇನು ಎನ್ನುವ ಕಾತರ ಅಭಿಮಾನಿಗಳಲ್ಲಿದೆ.
ಗಂಡನನ್ನು ಬಿಟ್ಟು ಮಗಳ ಮನೆಯಲ್ಲೇ ಕಾಯಂ ಉಳಿಯೋದು ಎಷ್ಟು ಸರಿ? ತಾಂಡವ್ ಪರ ನೆಟ್ಟಿಗರ ಬ್ಯಾಟಿಂಗ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.