ಸರಿಗಮಪ ವಿನ್ನರ್ ದುರಂತ ಜೀವನ: ಅಂಟಿದ್ದು ಡ್ರಗ್ಸ್ ವ್ಯಸನ!

By Web DeskFirst Published Oct 18, 2019, 11:32 AM IST
Highlights

ಸಂಗೀತದಲ್ಲಿ ಸಾಧನೆಯ ಕನಸು ಹೊತ್ತು ಬಂದವರಿಗೆ ಆಶಾಕಿರಣ ಕೆಲವು ಟಿವಿ ಚಾನೆಲ್‌ಗಳ ರಿಯಾಲಿಟಿ ಶೋ. ನೋಡ ನೋಡುತ್ತಲೇ ಸಾಲು ಸಾಲು ಸೀಸನ್ ಮುಗಿಸಿ ಮುಂದಿನ ಹಂತ ತಲುಪುತ್ತಿರುವ ರಿಯಾಲಿಟಿ ಶೋ ವಿಜೇತನ ದುರಂತ ಜೀವನಂದ ಕಥೆ ಇದು. 

ಇದೇನು ಹೀಗೆ ಹೇಳುತ್ತೀರಾ? ಟಿವಿ, ರೇಡಿಯೋದಲ್ಲಿ ಗಾಯಕರಿಗೇನು ಮನ್ನಣೆ ಹಾಕುತ್ತಾರಾಲ್ಲ? ಒಂದು ಸೀಸನ್‌ನಲ್ಲಿ ಹಾಡು ಹೇಳಿದ್ರೆ ಸಾಕು ಅವರಿಗೆ ಅಭಿಮಾನಿಗಳ ಸಂಘವೇ ಕಟ್ಟುತ್ತಾರೆ ಮಂದಿ. ರಿಲೀಸ್ ಆಗಲು ಕಾಯುತ್ತಿರುವ ಸಿನಿಮಾಗಳಲ್ಲೇ ಅವರಿಗೆ ಹಾಡುವ ಅವಕಾಶ ಲಭ್ಯವಾಗುತ್ತದೆ. ಈ ಎಲ್ಲ ಅವಕಾಶಗಳೊಂದಿಗೆ ಕಲ್ಪನಾ ಲೋಕದಲ್ಲಿ ವಿಹರಿಸುವ ಜನರಿಗೆ 2001ರ ಸರಿಗಮಪ ವಿಜೇತ ಅಜ್ಮತ್ ಹುಸೇನ್‌ ಜೀವನ ದುರಂತ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ. 

'ಅವರು ಏನಾದ್ರೂ ಮಾಡ್ಕೊಳ್ಳಲಿ, ತಲೆ ಕೆಡಿಸ್ಕೋಳ್ಳಲ್ಲ' ಹನುಮಂತ ರಿಯಾಕ್ಷನ್

2001ರಲ್ಲಿ ಹಿಂದಿ ಸರಿಗಮಪದ ವಿಜೇತ ಅಜ್ಮರ್ ಹಾಡು ಕೇಳಿ ನಟ ಶಾರೂಖ್ ಖಾನ್‌ ಕೂಡ ಫಿದಾ ಆಗೋಗಿದ್ರು. ಯಶಸ್ಸಿನ ಅಲೆಯಲ್ಲಿ ಕಳೆದು ಹೋಗಿದ್ದ ಅಜ್ಮತ್‌ಗೆ ನೂರಾರು ಅವಕಾಶಗಳು ಸಿಕ್ಕವು. ಸಾಲು ಸಾಲು ಕಾರ್ಯಕ್ರಮಗಳನ್ನು ನೀಡಿದರು. ಸಂಗೀತವನ್ನು ವೃತ್ತಿಯಾಗಿ ತೆಗದುಕೊಳ್ಳುವ ಆಶಯದಲ್ಲಿರುವಾಗಲೇ ಅವಕಾಶಗಳು ಕಡಿಮೆಯಾದವು. ಜೀವನದಲ್ಲಿ ಕಂಡ ಕನಸಿನ ಗೋಪುರ ಉದುರಲು ಆರಂಭವಾಯಿತು. 

ಸರಿಗಮಪ ರುಬೀನಾ ’ಮಕ್ಕಳ ದಸರಾ’ ಮುಖ್ಯ ಅತಿಥಿ!

ಮನಸ್ಸು ಆತಂಕಗೊಂಡಿತ್ತು. ಅಭದ್ರತೆ ಕಾಡಲು ಆರಂಭವಾಯಿತು. ಸಂಗೀತವೆಂದ ಮೇಲೆ ಧ್ವನಿಯೂ ಉತ್ತಮವಾಗಿರಬೇಕು ಅಲ್ಲವೇ? ಬದಲಾದ ಜೀವನ ಶೈಲಿ, ಮನಸ್ಸು ಧ್ವನಿಯನ್ನೇ ಬದಲಿಸಿತು. ಇದ್ದ ಒಂದೆರಡೂ ಅವಕಾಶಗಳೂ ಕೈ ತಪ್ಪಿದವು. ಕೈಯಲ್ಲಿ ಹಣವಿಲ್ಲ. ಇದ್ದದ್ದು ಎಲ್ಲವೂ ಖಾಲಿಯಾಗಿತ್ತು. ಜೀವನ ದುಸ್ತರವೆನಿಸಿದ್ದು ಸುಳ್ಳಲ್ಲ. ಮನಸ್ಸಿಗೆ ಖಿನ್ನತೆ ಆವರಿಸಿಕೊಂಡಿತ್ತು. ನೋವಿನಿಂದ ಹೊರ ಬರಲು ಹಿಡಿದು ಕೊಂಡ ದಾರಿ ಡ್ರಗ್ಸ್. ಸರಿ ಕೇಳ್ಬೇಕಾ, ಜೀವನ ಮತ್ತಷ್ಟು ಹದಗೆಟ್ಟಿತು. ಹಲವು ವರ್ಷಗಳ ಕಾಲ ಇದೇ ಜೀವನ ಮುಂದುವರಿದಿತ್ತು. ಕೈಯಲ್ಲಿ ದುಡ್ಡಿಲ್ಲದೇ, ಹೀಗೆ ಶುಶ್ಚಟಗಳ ವ್ಯಸನಿಯಾದರೆ ಬದುಕು ಸಾಗುವುದು ಹೇಗೆ?

ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!

ಇನ್ನೂ ವಯಸ್ಸು ಚಿಕ್ಕದು. ಬದುಕಿ ಬಾಳ ಬೇಕಾದ ಪ್ರತಿಭಾನ್ವಿತ ಹುಡುಗನೊಬ್ಬ ಜೀವನವನ್ನು ಹೀಗೇ ಹಾಳು ಮಾಡಿಕೊಂಡರೆ? ಹಿತೈಷಿಗಳು ಬುದ್ಧಿ ಹೇಳಿದರು. ಅಜ್ಮತ್‌ಗೂ ಮಾಡುತ್ತಿರುವುದು ತಪ್ಪೆಂಬ ಅರಿವಾಗಿತ್ತು. ಹೊಸ ಬದುಕನ್ನು ಕಟ್ಟಿಕೊಳ್ಳಲು ಮನಸ್ಸು ಮಾಡಿದ. ಮತ್ತೆ ಸ್ವರ ಸಾಧನೆ ಆರಂಭಿಸಿದೆ. ತಪ್ಪಿ ಹೋದ ಕಲೆ ಮತ್ತೆ ದನಿಗೂಡಿಸಿತು. ಇದೀಗ ಮತ್ತೊಂದು ರಿಯಾಲಿಟ ಶೋಗೆ ಕಾಲಿಟ್ಟಿದ್ದಾರೆ.  'ಇಂಡಿಯನ್ ಐಡಲ್' ಪ್ರವೇಶಿಸಿದ್ದಾನೆ. ಸ್ವರ ಮಾಧುರ್ಯದಿಂದ ಬದುಕನ್ನು ಹಸನು ಮಾಡಿಕೊಳ್ಳಲು ಮುಂದಾಗಿದ್ದಾನೆ. 

'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!

ಅಜ್ಮತ್‌ಗೆ ಸಂಗೀತ ಮತ್ತೆ ಕೈ ಹಿಡಿಯಲಿ. ಬಂಗಾರದ ಬದುಕು ಮತ್ತೊಮ್ಮೆ ಈ ಪ್ರತಿಭಾನ್ವಿತದ್ದಾಗಲಿ ಎಂಬುವುದು ಸುವರ್ಣನ್ಯೂಸ್.ಕಾಂ ಆಶಯವೂ ಹೌದು. 

click me!