‘ಜಿಪಿಎಸ್’ ಕಿರುಚಿತ್ರ ಪ್ರದರ್ಶನದ ಬಳಿಕ ಸತೀಶಾ ನೀನಾಸಂ ಇಬ್ಬರನ್ನು ಭಾರಿ ಮೆಚ್ಚಿಕೊಂಡರು. ಅದರಲ್ಲಿ ಒಬ್ಬರು ಜಿಪಿಎಸ್ ನಿರ್ದೇಶಕ ರಘುನಂದನ ಕಾನಡ್ಕ. ‘ಪವನ್ ಕುಮಾರ್, ಹೇಮಂತ್ ರಾವ್ ಮುಂತಾದ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಬ್ಬ ಪ್ರತಿಭಾವಂತ ಈ ರಘುನಂದನ ಕಾನಡ್ಕ’ ಎಂದರು ಸತೀಶ್.
ಅವರು ಹೊಗಳಿದ ಇನ್ನೊಬ್ಬರು ನಟ ಗೋಪಾಲಕೃಷ್ಣ ದೇಶಪಾಂಡೆ. ಬಡವರ ಅಚ್ಯುತ್ ಕುಮರ್ ಎಂದೇ ಕರೆಯಲ್ಪಡುವ ಗೋಪಾಲಕೃಷ್ಣ ಜಿಪಿಎಸ್ ಚಿತ್ರದ ಜೀವಾಳ. ಅವರ ಒಂದೊಂದು ಎಕ್ಸ್‌ಪ್ರೆಷನ್ ಕೂಡ ಈ ಸಿನಿಮಾದ ಶಕ್ತಿ. ಅಂದಹಾಗೆ ಅವರನ್ನು ಬಡವರ ಅಚ್ಯುತ್ ಕುಮಾರ್ ಎಂದು ಕರೆಯಲು ಕಾರಣವಿದೆ. ಮೊದಲೆಲ್ಲಾ ಅನಂತ್‌ನಾಗ್ ನಿಭಾಯಿಸಬಲ್ಲ ಪಾತ್ರಗಳಿಗೆ ಸುಲಭವಾಗಿ ಕೈಗೆ ಸಿಗುತ್ತಿದ್ದ ಅಚ್ಯುತ್‌ರನ್ನು ನಟಿಸಲು ಚಿತ್ರತಂಡದವರು ಕೇಳಿಕೊಳ್ಳುತ್ತಿದ್ದರು.
‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’
ಆಗ ಅಚ್ಯುತ್ ಬಡವರ ಅನಂತ್‌ನಾಗ್ ಆಗಿದ್ದರು. ಈಗ ಅಚ್ಯುತ್ ಬ್ಯುಸಿಯಾಗಿದ್ದಾರೆ. ಅವರು ನಿಭಾಯಿಸಬಲ್ಲ ಪಾತ್ರಗಳು ಗೋಪಾಲಕೃಷ್ಣರನ್ನು ಹುಡುಕಿ ಕೊಂಡು ಬರುತ್ತಿವೆ. ಗೋಪಿ ಬಡವರ ಅಚ್ಯುತ್ ಆಗಿದ್ದಾರೆ. ಅಂಥಾ ಪ್ರತಿಭಾವಂತ ನಟ ಈ ಗೋಪಾಲಕೃಷ್ಣ ದೇಶಪಾಂಡೆ. ಛಾಯಾಗ್ರಾಹಕ ವಿಶ್ವೇಶ್ ಶಿವಪ್ರಸಾದ್ ಭಾಗಿರಥಿ, ಸಂಗೀತ ನಿರ್ದೇಶಕ ನವನೀತ್ ಶ್ಯಾಮ್, ಸಂಭಾಷಣಾಕಾರ ಸಂಪತ್ ಸಿರಿಮನೆ ಸೇರಿದಂತೆ ಎಲ್ಲರೂ ಚಿತ್ರರಂಗದ ಆಸ್ತಿಗಳೇ. ಈ ಕಿರುಚಿತ್ರವನ್ನು ಹೇಮಂತ್ ರಾವ್, ಸತ್ಯಪ್ರಕಾಶ್, ರಾಘು ಶಿವಮೊಗ್ಗ ಮುಂತಾದ ನಿರ್ದೇಶಕರೇ ಹೊಗಳಿದ್ದಾರೆ. ಎಲ್ಲಾದರೂ ನೋಡಲು ಸಿಕ್ಕರು ಮಿಸ್ ಮಾಡಿಕೊಳ್ಳುವುದು ತರವಲ್ಲ.
BB7; ಬಯಲಾಯ್ತು ಮದ್ವೆ ಗುಟ್ಟು, 'ಅಗ್ನಿಸಾಕ್ಷಿ' ಚಂದ್ರಿಕಾಳ ಸಿಂಗಲ್ ಲೈಫ್‌ಗೆ ಬ್ರೇಕ್?