ಭಲೇ ಗೌತಮ್​.. ನಿಜ ಜೀವನದಲ್ಲೂ ಇಂಥ ಗಂಡ ಇರೋಕೆ ಸಾಧ್ಯನಾ ಕೇಳ್ತಿದ್ದಾರೆ ಮಹಿಳಾ ಫ್ಯಾನ್ಸ್​!

By Suvarna News  |  First Published Apr 8, 2024, 11:34 AM IST

ಪತ್ನಿ ಭೂಮಿಕಾಳಿಗಾಗಿ ಗೌತಮ್​ ಮಾಡುತ್ತಿರುವ ಈ ತ್ಯಾಗಗಳನ್ನು ನೋಡಿರುವ ಅಮೃತಧಾರೆ ಅಭಿಮಾನಿಗಳು,  ನಿಜ ಜೀವನದಲ್ಲಿಯೂ ಇಂಥ ಗಂಡಂದಿರು ಇರಲು ಸಾಧ್ಯವೇ ಕೇಳ್ತಿದ್ದಾರೆ.
 


ಗೌತಮ್​ ಈಗ ಬದಲಾಗಿದ್ದಾನೆ. ಪ್ರೀತಿ-ಪ್ರೇಮದ ಅಂದ್ರೇನು ಎಂಬ ಅರಿವೇ ಇಲ್ಲದ ಈ ಬಿಜಿನೆಸ್​ಮೆನ್​ ಈಗ ಪತ್ನಿ ಭೂಮಿಕಾ ಸಮೀಪವಾಗಿದ್ದಾನೆ. ಐ ಲವ್​ ಯೂ ಎಂದು ಇದುವರೆಗೂ ಪತ್ನಿ ಎದುರು ಹೇಳದಿದ್ದರೂ, ಈಗ ಆಕೆಯೇ ಎಲ್ಲಾ ಆತನಿಗೆ. ಪತ್ನಿಯ ಬಳಿ ಪ್ರೀತಿ ಹೇಳಿಕೊಳ್ಳಲು ಒದ್ದಾಡುತ್ತಿದ್ದ ಗೌತಮ್​ಗೆ ಗೆಳೆಯ ಆನಂದ್​ ಸಹಾಯ ಮಾಡಿ, ಪ್ರೀತಿಯ ನಿವೇದನೆ ಹೇಗೆ ಮಾಡಿಕೊಳ್ಳಬೇಕು ಎಂದೆಲ್ಲಾ ಟ್ಯೂಷನ್​ ಕೊಟ್ಟಿದ್ದ. ಅದರಂತೆ ಗುಲಾಬಿ ಹೂವು ಹಿಡಿದು ಪತ್ನಿಗೆ ಹೇಗೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಗೌತಮ್​ ಪ್ರಾಕ್ಟೀಸ್​ ಕೂಡ ಮಾಡಿದ್ದ. ಆದರೆ ಆದದ್ದೇ ಬೇರೆ. ಗೌತಮ್​ ಮತ್ತು ಭೂಮಿಕಾ ಒಂದಾಗಿ ಅವರಿಗೆ ಮಕ್ಕಳು ಹುಟ್ಟಿದರೆ ಮನೆಯ ಆಸ್ತಿಯೆಲ್ಲಾ ಅವರ ಹೆಸರಿಗೇ ಆಗುತ್ತದೆ ಎನ್ನುವ ಚಿಂತೆಯಲ್ಲಿದ್ದಾಳೆ ಗೌತಮ್​ ಚಿಕ್ಕಮ್ಮ ಶಕುಂತಲಾ. ತಾನೇ ಹೆತ್ತ ಮಕ್ಕಳು, ಮೊಮ್ಮಕ್ಕಳಿಗೇ  ಎಲ್ಲಾ ಆಸ್ತಿ ಹೋಗಬೇಕು ಎನ್ನುವುದು ಅವಳ ಆಸೆ. ಇದೇ ಕಾರಣಕ್ಕೆ ಹಾವು-ಮುಂಗುಸಿಯಂತಿದ್ದ ಗೌತಮ್​ ಮತ್ತು ಭೂಮಿಕಾರನ್ನು ಮದುವೆ ಮಾಡಿಸಿದ್ದಳು. ಆದರೆ ಆದದ್ದೇ ಬೇರೆ. ಇಬ್ಬರಲ್ಲಿಯೂ ಪ್ರೀತಿ ಮೊಳಗಿದೆ.

ಇನ್ನೇನು ಇಬ್ಬರೂ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ.  ಗೌತಮ್​ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ.  ಈ ವಿಷಯವನ್ನು ಗೌತಮ್​ ಗೆಳೆಯ ಆನಂದ್​ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 

Tap to resize

Latest Videos

6ನೇ ಕ್ಲಾಸ್​​ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್​ ಶೆಟ್ಟಿಯ ಅಪರೂಪದ ಫೋಟೋ ವೈರಲ್​

ಇದೇ ಕಾರಣಕ್ಕೆ ಏನೇನೋ ನೆಪ ಮಾಡಿಕೊಂಡು ಪತ್ನಿಗಾಗಿ ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ. ಗೆಳೆಯ ಆನಂದ್​ಗೂ ಏನೂ ಹೇಳದ ಸ್ಥಿತಿ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ.  ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. ಈ ವಿಷಯ ಭೂಮಿಕಾಗೆ ಬೇಗ ತಿಳಿಯಬೇಕು, ಆಕೆ ತುಂಬಾ ಜಾಣೆ. ಅವಳು ಖಂಡಿತವಾಗಿಯೂ ಇದರ ರಹಸ್ಯ ಭೇದಿಸುತ್ತಾಳೆ ಎಂದೆಲ್ಲಾ ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಇದು ಸೀರಿಯಲ್​.  ಇಷ್ಟು ಬೇಗ ಸತ್ಯ ಗೊತ್ತಾಗಲು ಸಾಧ್ಯವಿಲ್ಲ.

ಅದೇನೇ ಇದ್ದರೂ, ಪತ್ನಿಗಾಗಿ ಪತಿ ಗೌತಮ್​ನ ಉರುಳುಸೇವೆ, ನೆಲದಲ್ಲಿ ಅನ್ನ ಊಟ ಮಾಡುವುದನ್ನು ನೋಡಿದ ಅಮೃತಧಾರೆ ಫ್ಯಾನ್ಸ್​, ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ನಿಜ ಜೀವನದಲ್ಲಿಯೂ ಇಂಥ ಗಂಡನನ್ನು ನೋಡಲು ಸಾಧ್ಯವೆ ಎಂದು ಪ್ರಶ್ನಿಸುತ್ತಿದ್ದಾರೆ. ಪತಿ,ಮಕ್ಕಳು ಮತ್ತು ಕುಟುಂಬಕ್ಕಾಗಿ ಹೆಣ್ಣು ಮಕ್ಕಳು ಈ ರೀತಿ ಕಠಿಣ ವ್ರತ, ಪೂಜೆ-ಪುನಸ್ಕಾರ, ಉರುಳು ಸೇವೆ, ಹರಕೆ ಎಲ್ಲಾ ಮಾಡುವುದು ಮಾಮೂಲು. ಆದರೆ ಕೇವಲ ಪತ್ನಿಯಾಗಿ ಇಂಥದ್ದನ್ನು ಮಾಡುವ ಗಂಡಸರು ಎಷ್ಟು ಮಂದಿ ನೋಡಲು ಸಿಗುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಸೀರಿಯಲ್​ಗಳು ಎಷ್ಟೋ ಮಂದಿಗೆ ಪ್ರೇರಣೆ ನೀಡುತ್ತದೆ ನಿಜ, ಈ ಧಾರಾವಾಹಿ ನೋಡುವ ಮೂಲಕವಾದರೂ ಒಂದಷ್ಟು ಗಂಡಸರು ತಮ್ಮ ಪತ್ನಿಗಾಗಿ ಈ ರೀತಿಯ ಪ್ರೀತಿಯ ಧಾರೆ ಹರಿಸಿದರೆ ಎಷ್ಟು ಚೆಂದ ಎನ್ನುತ್ತಿದ್ದಾರೆ. 

ತುಕಾಲಿ ಸಂತೋಷ್​ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್​ಗಳನ್ನು ನಮ್ರತಾ ರಿವೀಲ್​ ಮಾಡೇ ಬಿಟ್ರು!


click me!