ಸಿಹಿ ಕಹಿ ಚಂದ್ರು ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4 ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ 'ಬೊಂಬಾಟ್ ಭೋಜನ'..
ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ 'ಬೊಂಬಾಟ್ ಭೋಜನ'ದಲ್ಲಿ ಇದೀಗ ನವ ಸಂವತ್ಸರದ ಮೊದಲ ಹಬ್ಬ 'ಯುಗಾದಿ'ಯ ಸಂಭ್ರಮಾಚರಣೆ ಬೊಂಬಾಟ್ ಆಗಿ ನಡೆಯುತ್ತಿದೆ.
ಸಿಹಿ ಕಹಿ ಚಂದ್ರು ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4 ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ 'ಬೊಂಬಾಟ್ ಭೋಜನ' ಕಾರ್ಯಕ್ರಮದಲ್ಲಿ ಈ ಬಾರಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಾರವಿಡೀ ಸ್ಯಾಂಡಲ್‌ವುಡ್ ತಾರೆಗಳು ಆಗಮಿಸಲಿದ್ದಾರೆ.
ಬೇವು ಬೆಲ್ಲದ ಸವಿ ಹಂಚಲು ಇದೇ ಏಪ್ರಿಲ್ 8 ರಂದು ಸೋಮವಾರ ನಟ ಸತೀಶ್ ನೀನಾಸಂ, ಮಂಗಳವಾರ ನಟಿ ನಿಶ್ವಿಕಾ ನಾಯ್ಡು ಹಾಗು ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಬುಧವಾರ ನಟ ದಿಗಂತ್, ಗುರುವಾರ ಶಿವರಾಜ್ ಕೆ ಆರ್ ಪೇಟೆ, ಶುಕ್ರವಾರ ಕಿರುತೆರೆ ನಟ ಕಿರಣ್ ರಾಜ್ ಹಾಗು ಶನಿವಾರ 'ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು' ಸಿನಿಮಾ ಖ್ಯಾತಿಯ ದಡ್ಡ ಪ್ರವೀಣ ಆಗಮಿಸುತ್ತಿದ್ದಾರೆ. ಹೀಗಾಗಿ ವಾರಪೂರ್ತಿ ಮಧ್ಯಾಹ್ನ ವೀಕ್ಷಕರಿಗೆ ಬೊಂಬಾಟ್ ಮನರಂಜನೆ ಸಿಗಲಿದೆ.
ಯುಗಾದಿ ಹಬ್ಬದ ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ 'ಸುವರ್ಣ ಸಾವಿರ ಸಂಭ್ರಮ' ಅದ್ದೂರಿ ಶೋ ಪ್ರಸಾರ!
ಯುಗಾದಿಯ ಪ್ರಯುಕ್ತ 'ಬೊಂಬಾಟ್ ಭೋಜನ'ದಲ್ಲಿ ಬರ್ತಿದೆ ಹಬ್ಬದ ವಿಶೇಷ ಸಂಚಿಕೆಗಳು ಏಪ್ರಿಲ್ 8 ರಿಂದ ಏಪ್ರಿಲ್ 14 ರವರೆಗೆ ಸೋಮವಾರದಿಂದ ಶನಿವಾರ ಮಧ್ಯಾಹ್ನ12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು..
ಅಂದಹಾಗೆ, ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ತ್ರಿವಳಿ ಕಾರ್ಯಕ್ರಮಗಳಾದ 'ಸುವರ್ಣ ಸಂಕಲ್ಪ', 'ಬೊಂಬಾಟ್ ಭೋಜನ' ಹಾಗು 'ಸುವರ್ಣ ಸೂಪರ್ ಸ್ಟಾರ್' ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿದೆ. ಹೀಗಾಗಿ 'ಸುವರ್ಣ ಸಾವಿರ ಸಂಭ್ರಮ'ದ ಅದ್ದೂರಿ ವೇಧಿಕೆಯಲ್ಲಿ ಸಾವಿರದ ಸಾಧಕರಾಗಿರುವ ಡಾ. ಶ್ರೀ ಗೋಪಾಲಕೃಷ್ಣ ಗುರೂಜಿ, ಸುಜಾತ ಅಕ್ಷಯ, ಸಿಹಿ ಕಹಿ ಚಂದ್ರು ಹಾಗು ಶಾಲಿನಿ ಯವರಿಗೆ ಗೌರವಿಸಿ, ಸನ್ಮಾನಿಸಲಾಗಿದೆ. ಈ ಸಾಧಕರು ತಮ್ಮ ಪಯಣವನ್ನು ಮೆಲುಕು ಹಾಕಿ, ಸಂತೋಷದಾಯಕ ಕ್ಷಣವನ್ನು ಖುಷಿಯಿಂದ ವ್ಯಕ್ತ ಪಡಿಸಿದ್ದಾರೆ.
ಸದ್ಯದಲ್ಲೇ ನೆನಪಿರಲಿ ಪ್ರೇಮ್-ಮಾನ್ವಿತಾ ಹರೀಶ್ ಜೋಡಿಯ 'ಅಪ್ಪಾ ಐ ಲವ್ ಯೂ' ತೆರೆಗೆ ಎಂಟ್ರಿ!
ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಹೆಸರಾಂತ ಕಲಾವಿದರು 'ಸುವರ್ಣ ಸಾವಿರ ಸಂಭ್ರಮ' ವೇಧಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು. ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಕನ್ನಡ ಜನತೆಯ ಮನಗೆದ್ದ 'ಯುವ' ಸಿನಿಮಾದ ನಟ ಯುವರಾಜಕುಮಾರ್ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಭರ್ಜರಿ ಡಾನ್ಸ್ ನೊಂದಿಗೆ ಅನುಪಮಾ ಕೇಳಿದ ಪ್ರಶ್ನೆಗಳಿಗೆ ಬಿಂದಾಸ್ ಆಗಿ ಉತ್ತರಿಸಿದ್ದಾರೆ.
ಹೊಸಬರ ಟೀಮ್ 'ವಿಕ್ಟೋರಿಯಾ ಮಾನ್ಸನ್'ಗೆ ಡಾ ಶಿವರಾಜ್‌ಕುಮಾರ್ ಸಾಥ್!
ಜೊತೆಗೆ ನಟ ಶರಣ್, ಕಾಂತಾರದ ಬೆಡಗಿ ಸಪ್ತಮಿ ಗೌಡ, ನಟಿ ಅಮೃತ ಅಯ್ಯಂಗಾರ್, ಪೃಥ್ವಿ ಅಂಬರ್, ಪದ್ಮಶ್ರೀ ಜೋಗತಿ ಮಂಜಮ್ಮ ಸೇರಿದಂತೆ ಇನ್ನು ಅನೇಕ ಕಲಾವಿದರು ವೇಧಿಕೆಯಲ್ಲಿ ಭಾಗಿಯಾಗಿದ್ದರು. ಅದ್ದೂರಿ ಸಂಭ್ರಮದ ವೇದಿಕೆಯಲ್ಲಿ ಅತ್ಯದ್ಭುತವಾದ ಗಾಯನದಿಂದ ಅಬ್ಬರಿಸಿದ ಆಲ್ ಓಕೆ ಹಾಗು ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ತಮ್ಮ ಪವರ್ ಪ್ಯಾಕ್ ನೃತ್ಯವನ್ನು ಡೆಡಿಕೇಟ್ ಮಾಡಲಿದ್ದಾರೆ ನಟ ಪೃಥ್ವಿ ಅಂಬರ್.
ಹೇಮಂತ್ ಪೂರ್ತಿ ಪಫ್ಸ್ ತಿನ್ನಲು ಬಿಡಲಿಲ್ಲ, ರಕ್ಷಿತ್ ಎಂಟು ತಿಂದ್ರು; ದುಃಖ ತೋಡಿಕೊಂಡ ರುಕ್ಮಿಣಿ ವಸಂತ್!
ಇನ್ನು ಸುವರ್ಣ ಪರಿವಾರ ಮೋಸ್ಟ್ ಪಾಪ್ಯುಲರ್ ಜೋಡಿಯೆಂದೇ ಖ್ಯಾತಿಗಳಿಸಿರುವ ವಿಕ್ರಂ-ವೇದಾ ಹಾಗು ಸೂರ್ಯ-ಮೀನಾ ಮೈನವಿರೇಳಿಸುವಂತೆ ಹೆಜ್ಜೆ ಹಾಕಿದ್ದು ವೇದಿಕೆಯಲ್ಲಿ ಭರ್ಜರಿ ಮನರಂಜನೆ ನೀಡಲಿದ್ದಾರೆ. ನಟಿ ಅಮೃತ ಅಯ್ಯಂಗಾರ್ ಅವರ ಸ್ವಯಂವರ ವೀಕ್ಷಕರಿಗೆ ಇನ್ನಷ್ಟು ಮಜಾ ನೀಡಲಿದೆ.
ಶೂಟಿಂಗ್ ಸ್ಪಾಟ್‌ನಲ್ಲಿ ಸೂಪರ್ ನ್ಯಾಚುರಲ್ ಪವರ್ ಅನುಭವವಾಗಿತ್ತು; ಸಪ್ತಮಿ ಗೌಡ ಮಾತಿನ ಮರ್ಮವೇನು?
ಯುಗಾದಿ ಹಬ್ಬದ ಪ್ರಯುಕ್ತ ಮನರಂಜನೆಯ ಮಹಾ ಪರ್ವವನ್ನೇ ಹೊತ್ತು ತರ್ತಿದೆ 'ಸುವರ್ಣ ಸಾವಿರ ಸಂಭ್ರಮ' ನಾಳೆ ಸಂಜೆ 6 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಬಹುದು.