ಸುವರ್ಣ ಪರಿವಾರ ಮೋಸ್ಟ್ ಪಾಪ್ಯುಲರ್ ಜೋಡಿಯೆಂದೇ ಖ್ಯಾತಿಗಳಿಸಿರುವ ವಿಕ್ರಂ-ವೇದಾ ಹಾಗು ಸೂರ್ಯ-ಮೀನಾ ಮೈನವಿರೇಳಿಸುವಂತೆ ಹೆಜ್ಜೆ ಹಾಕಿದ್ದು ವೇದಿಕೆಯಲ್ಲಿ ಭರ್ಜರಿ ಮನರಂಜನೆ ನೀಡಲಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಹೆಸರಾಂತ ಕಲಾವಿದರು 'ಸುವರ್ಣ ಸಾವಿರ ಸಂಭ್ರಮ' ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು. ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಕನ್ನಡ ಜನತೆಯ ಮನಗೆದ್ದ 'ಯುವ' ಸಿನಿಮಾದ ನಟ ಯುವರಾಜಕುಮಾರ್ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಭರ್ಜರಿ ಡಾನ್ಸ್ ನೊಂದಿಗೆ ಅನುಪಮಾ ಕೇಳಿದ ಪ್ರಶ್ನೆಗಳಿಗೆ ಬಿಂದಾಸ್ ಆಗಿ ಉತ್ತರಿಸಿದ್ದಾರೆ.
ಜೊತೆಗೆ ನಟ ಶರಣ್, ಕಾಂತಾರದ ಬೆಡಗಿ ಸಪ್ತಮಿ ಗೌಡ, ನಟಿ ಅಮೃತ ಅಯ್ಯಂಗಾರ್, ಪೃಥ್ವಿ ಅಂಬರ್, ಪದ್ಮಶ್ರೀ ಜೋಗತಿ ಮಂಜಮ್ಮ ಸೇರಿದಂತೆ ಇನ್ನು ಅನೇಕ ಕಲಾವಿದರು ವೇಧಿಕೆಯಲ್ಲಿ ಭಾಗಿಯಾಗಿದ್ದರು. ಅದ್ದೂರಿ ಸಂಭ್ರಮದ ವೇದಿಕೆಯಲ್ಲಿ ಅತ್ಯದ್ಭುತವಾದ ಗಾಯನದಿಂದ ಅಬ್ಬರಿಸಿದ ಆಲ್ ಓಕೆ ಹಾಗು ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ತಮ್ಮ ಪವರ್ ಪ್ಯಾಕ್ ನೃತ್ಯವನ್ನು ಡೆಡಿಕೇಟ್ ಮಾಡಲಿದ್ದಾರೆ ನಟ ಪೃಥ್ವಿ ಅಂಬರ್.
ಇನ್ನು ಸುವರ್ಣ ಪರಿವಾರ ಮೋಸ್ಟ್ ಪಾಪ್ಯುಲರ್ ಜೋಡಿಯೆಂದೇ ಖ್ಯಾತಿಗಳಿಸಿರುವ ವಿಕ್ರಂ-ವೇದಾ ಹಾಗು ಸೂರ್ಯ-ಮೀನಾ ಮೈನವಿರೇಳಿಸುವಂತೆ ಹೆಜ್ಜೆ ಹಾಕಿದ್ದು ವೇದಿಕೆಯಲ್ಲಿ ಭರ್ಜರಿ ಮನರಂಜನೆ ನೀಡಲಿದ್ದಾರೆ. ನಟಿ ಅಮೃತ ಅಯ್ಯಂಗಾರ್ ಅವರ ಸ್ವಯಂವರ ವೀಕ್ಷಕರಿಗೆ ಇನ್ನಷ್ಟು ಮಜಾ ನೀಡಲಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮನರಂಜನೆಯ ಮಹಾ ಪರ್ವವನ್ನೇ ಹೊತ್ತು ತರ್ತಿದೆ 'ಸುವರ್ಣ ಸಾವಿರ ಸಂಭ್ರಮ' ನಾಳೆ ಸಂಜೆ 6 ಗಂಟೆಗೆ, ತಪ್ಪದೇ ವೀಕ್ಷಿಸಿ..