ರೀಲ್ಸ್​ ಜೋಡಿಯ ಕಣ್ಣೀರ ಕಥೆ... ನಿವೇದಿತಾಗೆ ಇದನ್ನು ತೋರಿಸಿ ಬುದ್ಧಿ ಹೇಳಿ ಅಂತಿದ್ದಾರೆ ನೆಟ್ಟಿಗರು!

By Suchethana D  |  First Published Jun 8, 2024, 4:56 PM IST

ಗೋವಿಂದ್‌ರಾಜ್‌- ವೈಲಾ ರೀಲ್ಸ್ ಜೋಡಿಯ ಕಣ್ಣೀರ ಕಥೆ ಕೇಳಿದ ನೆಟ್ಟಿಗರು, ಬದುಕು ಎಂದರೇನು ಎಂಬುದನ್ನು ರೀಲ್ಸ್​ ರಾಣಿ ನಿವೇದಿತಾ ಗೌಡಗೆ ತೋರಿಸಿ ಎನ್ನುತ್ತಿದ್ದಾರೆ!
 


ಸ್ಯಾಂಡಲ್​ವುಡ್​​ ಸೂಪರ್​ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಮತ್ತು ಚಂದನ್ ಶೆಟ್ಟಿ ಇಬ್ಬರೂ ನಿನ್ನೆ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಸೋಷಿಯಲ್​  ಮೀಡಿಯಾಗಳಲ್ಲಿ ಹಲವರು ಚಂದನ್​ ಶೆಟ್ಟಿ ಪರವಾಗಿದ್ದು, ನಿವೇದಿತಾ ಅವರಿಗೆ ಬುದ್ಧಿ ಹೇಳುವುದೇ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಿಪರೀತ ರೀಲ್ಸ್​ ಹುಚ್ಚು ಹಚ್ಚಿಕೊಂಡಿದ್ದ ನಿವೇದಿತಾ ಅವರಿಂದಲೇ ಸಂಸಾರ ಹಾಳಾಯ್ತು ಎನ್ನುವುದೇ ಬಹುತೇಕರ ಅಭಿಮತ. ದಂಪತಿ ನಡುವೆ ಏನಾಗಿದೆ, ಅವರ ಸಮಸ್ಯೆ ಏನು, ಯಾಕೆ ಹೀಗಾಯ್ತು ಎಂದು ಇಬ್ಬರೂ ಬಾಯಿ ಬಿಡದ ಹಿನ್ನೆಲೆಯಲ್ಲಿ, ಸೋಷಿಯಲ್​ ಮೀಡಿಯಾದಲ್ಲಿ, ತಮ್ಮದೇ ಆದ ರೀತಿಯಲ್ಲಿ ಹೇಳಿಕೆಗಳನ್ನು ನೀಡಲಾಗುತ್ತಿದೆ.

ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ರಾಜಾ ರಾಣಿ ರೀಲೋಡೆಡ್ GRAND OPENING ಕಾರ್ಯಕ್ರಮದಲ್ಲಿ ಆಗಮಿಸಿರುವ ಖ್ಯಾತ ರೀಲ್ಸ್​ ಜೋಡಿ ಗೋವಿಂದ್‌ರಾಜ್‌- ವೈಲಾ ದಂಪತಿ ತಮ್ಮ ನೋವಿನ ದಿನಗಳನ್ನು ಹೇಳಿಕೊಂಡಿದ್ದು, ಅದನ್ನು ಕೇಳಿ ಅಲ್ಲಿದ್ದವರು ಕಣ್ಣೀರಾಗಿದ್ದಾರೆ. ಎಷ್ಟೇ ಕಷ್ಟವಿದ್ದರೂ ಅದನ್ನು ಹಿಮ್ಮೆಟ್ಟಿ, ಇದೀಗ ರೀಲ್ಸ್​ ಮೂಲಕವೇ ಇಷ್ಟು ದೊಡ್ಡ ವೇದಿಕೆ ಏರಿದ ಜೋಡಿಯನ್ನು ನೋಡಿ ಸ್ವಲ್ಪನಾದ್ರೂ ಕಲಿ ಎಂದು ನೆಟ್ಟಿಗರು ಸೀದಾ ನಿವೇದಿತಾ ಗೌಡ ಅವರಿಗೇ ಹೇಳುತ್ತಿದ್ದಾರೆ. 

Tap to resize

Latest Videos

ಈ ವಯಸ್ಸಲ್ಲೂ ಬೇಕಿತ್ತಾ ಇದೆಲ್ಲಾ ಅನ್ನೋರಿಗೇ ಸವಾಲೆಸೆದು ರಾಜಾ ರಾಣಿ ವೇದಿಕೆ ಮೇಲೆ ರೀಲ್ಸ್​ ಜೋಡಿ!

ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಗೋವಿಂದ್‌ರಾಜ್‌ ಅವರು ತಮ್ಮ ಆ ದಿನಗಳನ್ನು ನೆನೆಸಿಕೊಂಡಿದ್ದಾರೆ. ಅದು ನಮ್ಮ ದುಷ್ಮನ್​ಗೂ ಬೇಡ. ಎಲ್ಲರನ್ನೂ ಪ್ರೀತಿ ಮಾಡ್ತಿದ್ದ ನಮಗೆ ದೇವರು ಏಕೆ ಈ ರೀತಿ ಕಷ್ಟ ಕೊಟ್ಟ ಅಂತ ಎಷ್ಟೋ ಸಲ ಅಂದುಕೊಂಡಿದ್ದಿದೆ ಎನ್ನುತ್ತಲೇ ಬಡತನದ ದಿನಗಳ ನೆನಪು ಮಾಡಿಕೊಂಡದು. 15 ದಿನಗಳಲ್ಲಿ 10 ದಿನ ಉಪವಾಸದ್ದೆವು. ಅಷ್ಟು ಬಡತನ ಮನವೆ.  25 ಕಿಲೋಮೀಟರ್​ ದೂರ ಹೋದರೆ ಅಲ್ಲಿ ಲೋಡ್​, ಅನ್​ಲೋಡ್​ ಕೆಲಸ ಸಿಗುತ್ತಿತ್ತು. 20-30 ರೂಪಾಯಿ ಕೊಡುತ್ತಿದ್ದರು. ಅದರಿಂದಲೇ ಜೀವನ ಆಗಬೇಕಿತ್ತು.  ದೊಡ್ಡ ಮಗ ಹೊಟ್ಟೆಯಲ್ಲಿದ್ದ. ಇವಳು ತುಂಬು ಬಸುರಿಯಾಗಿದ್ದಳು. ನಮ್ಮದು ದೊಡ್ಡ ಸಂಸಾರ ಆದರೂ ನಮ್ಮನ್ನು ನೋಡಲು ಯಾರೂ ಬರಲಿಲ್ಲ. ಬಸುರಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಜೇಬಲ್ಲಿ ಒಂದೇ ರೂಪಾಯಿ ನಾಣ್ಯವಿತ್ತು. ಇವಳ ಅಕ್ಕನಿಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿರುವ ವಿಷಯ ಹೇಳುವ ಮೊದಲೇ ಫೋನ್​ ಕಟ್​ ಆಯಿತು. ಮತ್ತೆ ಮಾಡಲು ದುಡ್ಡು ಇರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ರಕ್ತದಿಂದಲೇ ಇದ್ದ ಮಗುವನ್ನು ನನ್ನ ಕೈಗೆ ನರ್ಸ್ ಕೊಟ್ಟಳು. ಆ ಮಗುವಿನ ರಕ್ತ ಒರೆಸಲು ನನ್ನ ಬಳಿ ಬಟ್ಟೆ ಇರಲಿಲ್ಲ. ಅಂಥ ಸ್ಥಿತಿಯಲ್ಲಿ ನಾವು ಇದ್ದೆವು. ಇದೇ ಕಾರಣಕ್ಕೆ ಈಗ ನನ್ನಿಂದ ಆದ ಸಹಾಯವನ್ನು ಮಾಡುತ್ತೇನೆ. ಯಾರಿಗಾದ್ರೂ ಆ್ಯಕ್ಸಿಡೆಂಟ್​ ಏನೇ ಆದರೂ ಕೂಡಲೇ ಅವರ ನೆರವಿಗೆ ಧಾವಿಸುತ್ತೇನೆ. ಹಲವರು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಾರೆ. ಅಷ್ಟರಲ್ಲಿ ಅವರ ಪ್ರಾಣ ಹೋಗುತ್ತದೆ. ಅದರ ಬದಲು ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ ಎಂದಿದ್ದಾರೆ.  ಎಂಥ ಸಂಕಟದಲ್ಲಿಯೂ ಎಲ್ಲರ ಸೇವೆ ಮಾಡಿದ ಕಾರಣಕ್ಕೆ ಇಂದು ದೇವರು ಇಷ್ಟು ದೊಡ್ಡ ವೇದಿಕೆಯ ಮೇಲೆ ಬರಲು ಅವಕಾಶ ಕೊಟ್ಟಿದ್ದಾರೆ ಎಂದಿದ್ದಾರೆ. ಇವರ ನೋವಿನ ಕಥೆಯನ್ನು ಒಮ್ಮೆ ನಿವೇದಿತಾ ನೋಡಿದರೆ ಜೀವನ ಏನು ಎಂದು ಗೊತ್ತಾಗುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು. 

ಅಂದಹಾಗೆ, ಗೋವಿಂದ್‌ರಾಜ್‌- ವೈಲಾ ದಂಪತಿ  ಕದಂಬ ಚಿತ್ರದ 'ಯಾಮಿನಿ ಯಾರಮ್ಮ ನೀನು ಯಾಮಿನಿ..' ಹಾಡು ಸಕತ್​ ವೈರಲ್​ ಆದ ಬಳಿಕ ಫೇಮಸ್​ ಆಗಿದ್ದಾರೆ. ಈ ಹಾಡಿನ ಬಳಿಕ ಇವರ ಸೋಷಿಯಲ್ ಮೀಡಿಯಾ ಖಾತೆಗೆ ಲಗ್ಗೆ ಹಾಕಿ ಇವರ ಹಲವಾರು ಡ್ಯಾನ್ಸ್​ಗಳನ್ನು ನೋಡಿ ಖುಷಿ ಪಟ್ಟವರೇ ಎಲ್ಲ. ಈ ದಂಪತಿಯದ್ದು ರೊಮ್ಯಾನ್ಸ್​ ಜಾಸ್ತಿ ಇರುವ ಕಾರಣ, ಈ ವಯಸ್ಸಿನಲ್ಲಿ ಇವೆಲ್ಲಾ ಅಜ್ಜ-ಅಜ್ಜಿಗೆ ಬೇಕಿತ್ತಾ ಎಂದವರಿಗೇನೂ ಕಮ್ಮಿ ಇಲ್ಲ. ಯಾರೇ ಕೂಗಾಡಲಿ... ಎನ್ನುವ ಹಾಡಿನಂತೆ ಯಾವ ಟ್ರೋಲ್​ಗಳಿಗೂ ಅಂಜದೇ ಇವರು, ತಮ್ಮದೇ ರೀಲ್ಸ್ ಪ್ರಪಂಚದಲ್ಲಿ ಮುಳುಗಿದ್ದು, ಇವರಿಗೆ ಈಗ ದೊಡ್ಡ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಕಲಿ ರಮೇಶ್​, ಪ್ರೇಮಾ, ನಿಶ್ವಿಕಾರನ್ನು ನೋಡಿ ಅಸಲಿ ನಟರು ಸುಸ್ತೋ ಸುಸ್ತು- ನಕ್ಕು ನಲಿದಾಡಿದ ನೆಟ್ಟಿಗರು

 

click me!