ನಿವೇದಿತಾ ಜತೆ ಮೈಸೂರಿಗೆ ಹೋದ ಚಂದನ್ ಮರಳಿಲ್ಲ! ಡಿವೋರ್ಸ್ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ವಕೀಲೆ

By Suvarna NewsFirst Published Jun 8, 2024, 4:43 PM IST
Highlights

ವಿಚ್ಚೇದನ ಪಡೆದ ಬಳಿಕ ನಿವೇದಿತಾರನ್ನು ಅವರ ತಾಯಿ ಮನೆ ಮೈಸೂರಿಗೆ ಸ್ವತಃ  ಚಂದನ್‌ ಕರೆದುಕೊಂಡು ಹೋಗಿದ್ದು, ಚಂದನ್‌ ಮರಳಿ ಮೈಸೂರಿನಿಂದ ಬೆಂಗಳೂರಿಗೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಾದ್ಯಂತ ಈಗ ಕಿರುತೆಯ ಜನಪ್ರಿಯ ಜೋಡಿ ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ವಿಚ್ಚೇದನದ್ದೇ ಸುದ್ದಿ, ಇದಕ್ಕೆ ಕಾರಣ ಏನೆಂದು ಅಭಿಮಾನಿಗಳು ಹುಡುಕುತ್ತಲೇ ಇದ್ದಾರೆ. ಆದರೆ ಈಗ ವಿಷ್ಯ ಅದಲ್ಲ ಬೇರೆಯಾದ ಚಂದನ್‌ ಮತ್ತು ನಿವೇದಿತಾ ಬಗ್ಗೆ ಮತ್ತೊಂದು ಸುದ್ದಿ ಇದೆ. 

ನಿನ್ನೆ ವಿಚ್ಚೇದನ ಪಡೆದುಕೊಂಡ ಬಳಿಕ ಕೋರ್ಟ್ ಆವರಣದಿಂದ ಪರಸ್ಪರ ಕೈ ಹಿಡಿದುಕೊಂಡೇ ಹೊರ ಬಂದಿದ್ದ ಚಂದನ್ ಮತ್ತು ನಿವೇದಿತಾ ಅವರ ವಿಡಿಯೋ ವೈರಲ್ ಆಗಿದೆ. ವಿಚ್ಚೇದನ ಪಡೆದ ಬಳಿಕ ನಿವೇದಿತಾರನ್ನು ಅವರ ತಾಯಿ ಮನೆ ಮೈಸೂರಿಗೆ ಸ್ವತಃ  ಚಂದನ್‌ ಕರೆದುಕೊಂಡು ಹೋಗಿದ್ದು, ಚಂದನ್‌ ಮರಳಿ ಮೈಸೂರಿನಿಂದ ಬೆಂಗಳೂರಿಗೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Latest Videos

ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಚೇದನದ ಬಗ್ಗೆ ಚಂದನ್‌ ಆಪ್ತ ನಿರ್ಮಾಪಕ ನವರಸನ್ ಹೇಳಿಕೆ, ಇದು ನಿಜಾನಾ?

ಇನ್ನು ಇವರಿಬ್ಬರ ವಿಚ್ಚೇದನದ ಬಗ್ಗೆ ವಕೀಲೆ ಅನಿತಾ ಅವರು ಖಾಸಗಿ ಮಾಧ್ಯಮದಲ್ಲಿ ಮಾತನಾಡಿದ್ದು, 6 ತಿಂಗಳ ಹಿಂದೆಯೇ ಇಬ್ಬರೂ ನನ್ನನ್ನು ಭೇಟಿ ಮಾಡಿದ್ದರು. ಇಬ್ಬರನ್ನೂ ನಾನು ಮಾತನಾಡಿಸಿ ಮನವರಿಗೆ ಮಾಡಲು ಪ್ರಯತ್ನಿಸಿದ್ದೆ, ಆದರೆ ಅವರಿಬ್ಬರೂ ಡಿಸೈಡ್ ಮಾಡಿಕೊಂಡೇ ವಿಚ್ಚೇದನ ಪಡೆಯಲು ಬಂದಿದ್ದರು. ಹೀಗಾಗಿ ನಾನೇನು ಪ್ರಕ್ರಿಯೆಗಳು ಮಾಡಬೇಕು ಅದರ ಪ್ರಕಾರ ಮಾಡಿದ್ದೇನೆ.

ನಿವೇದಿತಾ ಅವರು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ಸಿಂಪಲ್ ಆಗಿ ವಿಚ್ಚೇದನ ಮಾತ್ರ ಸಾಕು ಬೇರೆನೂ ಬೇಡ ಎಂದಿದ್ದರು. ಅದು ಅವರಿಬ್ಬರೇ ನಿರ್ಧಾರ ಮಾಡಿರುತ್ತಾರೆ. ಇಬ್ಬರ ಕಡೆಯಿಂದನೂ ಯಾವುದೇ ರೀತಿಯ ಡಿಮ್ಯಾಂಡ್‌ ಇರಲಿಲ್ಲ.

ಕನ್ನಡದ ಕ್ಯಾಂಡಿಕ್ರಶ್ ಸಿನೆಮಾಗೆ ಡಬಲ್ ಶಾಕ್, ಚಂದನ್ ಶೆಟ್ಟಿ ಫೋನ್ ಸ ...

ಒಂದು ದಿನದಲ್ಲಿ ವಿಚ್ಚೇದನ ಆಗಿದೆ ಎನ್ನುವುದು ಹಲವರ ಪ್ರಶ್ನೆ. ನಾವು ಕಾನೂನಿನ ಪ್ರಕಾರವೇ ಇದನ್ನು ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಒಂದಿದೆ. ಅದರಲ್ಲಿ ಹೊಂದಾಣಿಕೆಯೇ ಇಲ್ಲ. ಗಂಡ ಹೆಂತಿಯಾಗಿ ಜೀವನ ಮಾಡಲು ಸಾಧ್ಯವೇ ಇಲ್ಲ ಎಂದಾಗ  6 ತಿಂಗಳ ಮುಂಚೆಯೇ ವಿಚ್ಚೇದನ ಪಡೆಯಬಹುದು. ಸೆಕ್ಷನ್  13B(2) ಪ್ರಕಾರವೇ ಅರ್ಜಿ ಹಾಕಲಾಯ್ತು. ಜೂನ್ 6 ಹಾಕಿ ಅದಕ್ಕೆ ಒಪ್ಪಿಗೆ ಸಿಕ್ಕಿತು. ಜೂನ್ 7ಕ್ಕೆ ಇಬ್ಬರನ್ನೂ ಕೋರ್ಟ್ ಮುಂದೆ ಹಾಜರು ಪಡಿಸಿದೆ. ನ್ಯಾಯಾಧೀಶರು ಸಂಪೂರ್ಣವಾಗಿ ಪರಿಶೀಲಿಸಿ ವಿಚ್ಚೇದನ ಮಾನ್ಯ ಮಾಡಿದರು ಎಂದಿದ್ದಾರೆ.

ಅವರಿಬ್ಬರು ಬೇರೆ ಬೇರೆಯಾಗಲು ನಿರ್ಧರಿಸಿರುವುದಕ್ಕೆ ಕಾರಣ ಇಬ್ಬರ ಚಿಂತನೆಗಳು, ಯೋಜನೆಗಳು ಬೇರೆ ಬೇರೆ ಇತ್ತು. ಇದು ಇವರ ಮಧ್ಯದಲ್ಲಿ ಹೊಂದಾಣಿಕೆ ತರುತ್ತಿರಲಿಲ್ಲ. ಅವರಿಬ್ಬರ ಕ್ರೀಯೇಟಿವ್ ಫೀಲ್ಡ್‌ನಲ್ಲಿ ಇಬ್ಬರೂ ಕೂಡ ಅವರದ್ದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ಕಾರಣಕ್ಕೆ  ಅವರಿಬ್ಬರು ಈ ನಿರ್ಧಾರ ಮಾಡಿದರೆಂದು ನನಗೆ ಅನ್ನಿಸುತ್ತೆ. ಇದಲ್ಲದೆ ಬೇರೆ ತರ ಸೀರಿಯಸ್‌ ಆಗಿರುವ ಭಿನ್ನಾಭಿಪ್ರಾಯಗಳು ಏನು ಕೂಡ ಇಲ್ಲ. 

ಇಬರಿಬ್ಬರೂ ಕೂಡ ಸಡನ್ ಆಗಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಇವರಷ್ಟಕ್ಕೇ ಇವರು ಈ ತೀರ್ಮಾನ ತೆಗೆದುಕೊಂಡಿಲ್ಲ. ಇಬ್ಬರೂ ಕೂಡ  ತಂದೆ-ತಾಯಿಯಂದಿರ ಜೊತೆಗೆ ಕೂತು ಮಾತನಾಡಿ, ಚರ್ಚಿಸಿ ಸಮಯ ತೆಗದುಕೊಂಡ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. ಇಬ್ಬರೂ ಕೂಡ ತಮ್ಮದೇ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಕೊಂಡಿದ್ದಾರೆ. ಬೇರೆಯಾಗಿದ್ದರೆ ಇದು ಸಾಧ್ಯ ಎಂದು ಅವರು ನಿರ್ಧಾರ ಮಾಡಿದ್ದಾರೆ. 

ಏನಿದು ಸೆಕ್ಷನ್  13B?: ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್‌ 13ಬಿಯು ಫ್ಯಾಮಿಲಿ ಕೋರ್ಟ್‌ನಲ್ಲಿ ದಂಪತಿಗಳಿಗೆ ಸಮ್ಮತಿಯ ಒಪ್ಪಿಗೆ ನೀಡಿ ಡಿವೋರ್ಸ್‌ ಪಡೆಯಲು ಅವಕಾಶ. ಇದಕ್ಕಾಗಿ ಪರಸ್ಪರ ಒಪ್ಪಿಗೆ ನೀಡಿ ಸಹಿ ಮಾಡಿದ ಅಗ್ರಿಮೆಂಟ್‌ ಅನ್ನು ಕೋರ್ಟ್‌ಗೆ ನೀಡಬೇಕು. ಆಗ ಕೋರ್ಟ್ ವಿಚ್ಚೇದನ ಪ್ರಕಟಿಸುತ್ತದೆ.

click me!