ಸೀರೆ ಉಟ್ಟ ಮಾತ್ರಕ್ಕೆ ಸ್ಟಾರ್​ ಹೋಟೆಲ್​ ಕೆಲ್ಸ ಬರಲ್ಲ ಅಂದ್ಕೊಂಡ್ರಾ? ಗೃಹಿಣಿ ತಾಕತ್ತು ಏನ್​ ಗೊತ್ತುರೀ?

By Suchethana D  |  First Published Jun 8, 2024, 4:14 PM IST

ಭಾಗ್ಯಲಕ್ಷ್ಮಿಯ ಗೋಳು ಮುಗಿಯುವ ಕಾಲ ಸನ್ನಿಹಿತವಾಗಿದೆ. ಸ್ಟಾರ್​ ಹೋಟೆಲ್​ನಲ್ಲಿಯೇ ಆಕೆಗೆ ಅವಳಿಷ್ಟದ ಕೆಲಸ ಸಿಗುತ್ತಾ? ವೀಕ್ಷಕರು ಹೇಳ್ತಿರೋದೇನು?
 


 ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಹೋಟೆಲ್‌ನಲ್ಲಿ ಕೆಲಸ ಸಿಕ್ಕಿತು. ಆದರೆ ಯಾರದ್ದೋ ಹೆಸರಿನಲ್ಲಿ ಭಾಗ್ಯಳಿಗೆ ಕೆಲಸ ಸಿಕ್ಕಿತ್ತು. ಅದು ಅವಳಿಗೆ ಗೊತ್ತಿರಲಿಲ್ಲ. ಕೊನೆಗೆ ಅಲ್ಲಿ ಕೆಲಸ ಕಳೆದುಕೊಂಡಿದ್ದಾಳೆ, ಮನೆಗೆ ವಾಪಸಾಗಿದ್ದಾಳೆ. ಅದೇ ಇನ್ನೊಂದೆಡೆ ಅತ್ತೆ ಕುಸುಮಾ ಸ್ಥಿತಿ ಕೂಡ ಇದೇ ರೀತಿಯಾಗಿದೆ.  ಇದರ ನಡುವೆಯೇ ಮತ್ತು ಪತಿ-ಪತ್ನಿ ನಡುವೆ ಡಿವೋರ್ಸ್‌ ಚರ್ಚೆ ಶುರುವಾಗಿದೆ. ಇದಾಗಲೇ ಹಲವು ಬಾರಿ ತಾಂಡವ್‌ ಹೇಳಿರುವಂತೆ ಈಗ ಮಕ್ಕಳ ಎದುರಿಗೇ ವಿಚ್ಛೇದನ ಬಗ್ಗೆ ಮಾತನಾಡಿದ್ದಾನೆ. ಇದನ್ನು ಕೇಳಿ ಮಕ್ಕಳಿಗೆ ಶಾಕ್‌ ಆಗಿದೆ. ಭಾಗ್ಯ ಮಕ್ಕಳನ್ನು ಸಾಂತ್ವನ ಮಾಡುತ್ತಿದ್ದಾಳೆ. ಆದರೆ ಸ್ವಲ್ಪವೂ ಅಳುಕು ಇಲ್ಲದೇ ಡಿವೋರ್ಸ್‌ ಬೇಕೇ ಬೇಕು ಅಂತಿದ್ದಾನೆ ತಾಂಡವ್‌.

ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಯಾರದ್ದೋ ಹೆಸರಿನಲ್ಲಿ ಸೇರಿಕೊಂಡುಬಿಟ್ಟಿದ್ದಳು. ಖುದ್ದು ಅವಳಿಗೂ ವಿಷಯ ಗೊತ್ತಿರಲಿಲ್ಲ. ಆದರೆ ಅಸಲಿಯತ್ತು ಗೊತ್ತಾಗುತ್ತಿದ್ದಂತೆಯೇ ಅವಳನ್ನು ಕೆಲಸದಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಯಾವ ಕೆಲಸ ಕೊಟ್ಟರೂ ಸರಿ ಮಾಡುತ್ತೇನೆ, ಅಡುಗೆ ಕೆಲಸ ಕೊಡಿ ಎಂದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಕಾರಣ, ಅವಳಿಗೆ ಇಂಗ್ಲಿಷ್​ ಬರಲ್ಲ, ಸೀರೆಯುಡುವ ಅಪ್ಪಟ ಗೃಹಿಣಿ ಎನ್ನುವ ತಾತ್ಸಾರ. ಭಾಗ್ಯ ಹೋಟೆಲ್​ನವರಿಗೆ ಕಾಡಿ ಬೇಡಿದರೂ ಅವರಿಗೆ ಕರುಣೆ ಬರುವ ರೀತಿಯಲ್ಲಿ ಕಾಣಿಸುತ್ತಿರಲಿಲ್ಲ. ಭಾಗ್ಯಳ ಗೋಳು ನೋಡಿ ವೀಕ್ಷಕರಿಗೆ ತಲೆ ಚಿಟ್ಟು ಹಿಡಿದು ಹೋಗಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

Tap to resize

Latest Videos

ಇಂಥ ಮಗನಿಗೆ ಅಮ್ಮ ಕೈಮುಗಿಬೇಕಾ? ಗಂಡಿಲ್ಲದೇ ಹೆಣ್ಣಿಗೆ ಬಾಳಲು ಆಗೋದಿಲ್ವಾ? ಯಾವ ಕಾಲದಲ್ಲಿದ್ದೀರಾ ಸ್ವಾಮಿ?

ಆದರೆ ಇದೀಗ ವೀಕ್ಷಕರ ಜೊತೆ ಭಾಗ್ಯಳ ಗೋಳು ಕೂಡ ಮುಗಿಯುವ ಹಾಗೆ ಕಾಣಿಸ್ತಿದೆ. ಸ್ಟಾರ್​ ಹೋಟೆಲ್​ನ ಮೇನ್​ ಶೆಫ್​ ಅವಳನ್ನು ಇನ್ನೇನು ನೂಕಿ ಹೊರಹಾಕುವುದೊಂದೇ ಬಾಕಿ. ಅಷ್ಟರಲ್ಲಿಯೇ ಖ್ಯಾತ ಪತ್ರಕರ್ತರಾಗಿರುವ ಜೊತೆಗೆ ಬಿಗ್​ಬಾಸ್ ಸ್ಪರ್ಧಿಯೂ ಆಗಿದ್ದ ಗೌರೀಶ್​ ಅಕ್ಕಿ ಅವರ ಎಂಟ್ರಿಯಾಗಿದೆ. ಅವರಿಗೆ ಒತ್ತು ಶ್ಯಾವಿಗೆ ಬೇಕಾಗಿರುತ್ತದೆ. ಇದನ್ನು ಕೇಳಿದವರಿಗೆ ಪಕ್ಕದ ಚಿಕ್ಕ ಹೋಟೆಲ್​ನಿಂದ ಖರೀದಿ ಮಾಡುವ ಪಾಡು ಈ ಸ್ಟಾರ್​ ಹೋಟೆಲ್​ನವರದ್ದು. ಆದರೆ ಅಲ್ಲಿ ಅವರಿಗೆ ಸಿಗುವುದಿಲ್ಲ. ಅಷ್ಟರಲ್ಲಿಯೇ  ಮಧ್ಯೆ ಪ್ರವೇಶಿಸುವ ಭಾಗ್ಯ ತನಗೆ ಇದು ಚೆನ್ನಾಗಿ ಮಾಡುವುದು ಗೊತ್ತು. ನಾನು ಮಾಡುತ್ತೇನೆ ಎಂದರೂ ಮುಖ್ಯಸ್ಥ ಆಕೆಯನ್ನು ಹೀಯಾಳಿಸುತ್ತಾನೆ.

ಕೊನೆಗೆ ಗೌರೀಶ್​ ಅಕ್ಕಿ ಅವರೇ ಭಾಗ್ಯಳಿಗೆ ಒಂದು ಚಾನ್ಸ್​ ನೀಡಿದ್ದು, ಅದರಂತೆ ಭಾಗ್ಯಳ ಗೋಳು ಮುಗಿಯುವ ಕಾಲ ಬಂದಂತಿದೆ. ಸೀರೆಯುಟ್ಟು ಅಪ್ಪಟ ಗೃಹಿಣಿಯಾಗಿರುವ ಭಾಗ್ಯ ಸ್ಟಾರ್​ ಹೋಟೆಲ್​ನ ಕೆಲಸಕ್ಕೆ ಉಪಯೋಗವಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದ ಮುಖ್ಯಸ್ಥನ ಮುಖಕ್ಕೆ ಮಂಗಳಾರತಿ ಮಾಡು ಭಾಗ್ಯ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಗೃಹಿಣಿಯ ತಾಕತ್ತು ಏನೆಂದು ತೋರಿಸು, ಚಿಕ್ಕ ಚಿಕ್ಕ ಡ್ರೆಸ್​ ಹಾಕಿಕೊಂಡು ತಿರುಗಾಡಿದ ಮಾತ್ರಕ್ಕೆ ಸ್ಟಾರ್​ ಹೋಟೆಲ್​ ನೌಕಕರಾಗಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸು ಎನ್ನುತ್ತಿದ್ದಾರೆ ಭಾಗ್ಯಲಕ್ಷ್ಮಿ ವೀಕ್ಷಕರು. ಸದ್ಯ ಇದರ ಪ್ರೊಮೋ ಬಿಡುಗಡೆಯಾಗಿದ್ದು, ಮುಂದೇನಾಗುತ್ತದೋ ಕಾದು ನೋಡಬೇಕಿದೆ. 

ಪಾದರಸ ಅಂದ್ರೆ ಕಾಲಿನ ಜ್ಯೂಸಾ? ಸಿಹಿ ಪ್ರಶ್ನೆಗೆ ಸೀತಾ ಕೊಟ್ಟ ಉತ್ತರಕ್ಕೆ ಭೇಷ್​ ಅಂತಿರೋ ಫ್ಯಾನ್ಸ್​


click me!