ಹನಿಮೂನ್ ಸಡಗರದಲ್ಲಿ ಗೌತಮ್​- ಭೂಮಿಕಾ: ಪತ್ನಿಗೆ ಭರ್ಜರಿ ಗಿಫ್ಟ್​- ಆತಂಕದಲ್ಲಿ ಫ್ಯಾನ್ಸ್​

By Suchethana D  |  First Published May 15, 2024, 11:57 AM IST

ಭೂಮಿಕಾ ಮತ್ತು ಗೌತಮ್​ ಹನಿಮೂನ್​ಗೆ ಹೊರಟಿದ್ದಾರೆ. ಪತ್ನಿಗೆ ಗೌತಮ್​ ಭರ್ಜರಿ ಗಿಫ್ಟ್​ ಕೂಡ ಕೊಡಲಿದ್ದಾನೆ. ಆದರೂ ಆತಂಕದಲ್ಲಿ ಫ್ಯಾನ್ಸ್​. ಕಾರಣವೇನು?
 


ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಎಂದರೆ ಅದು ಅಮೃತಧಾರೆಯ ಗೌತಮ್​  ಮತ್ತು ಭೂಮಿಕಾ ಜೋಡಿ. ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ಹೋಗಲು ರೆಡಿಯಾಗಿದೆ. ನಾಚಿಕೊಳ್ಳುತ್ತಲೇ ಮಧುಚಂದ್ರಕ್ಕೆ ಹೋಗಲು ರೆಡಿಯಾಗಿದ್ದಾರೆ. ಇದೇ ವೇಳೆ ಮದುವೆಯಾಗಿ ಇಷ್ಟು ದಿನವಾದರೂ, ಭೂಮಿಕಾರಿಗೆ ತಾನು ಏನೂ ಗಿಫ್ಟ್​ ಕೊಟ್ಟಿಲ್ಲ ಎಂದು ಅಜ್ಜಿಯ ಬಳಿ ಹೇಳಿಕೊಂಡ ಗೌತಮ್​, ಚಿಕ್ಕಮಗಳೂರಿನಲ್ಲಿರುವ ಎಸ್ಟೇಟ್​ ಅನ್ನು ಭೂಮಿಕಾ ಹೆಸರಿಗೆ ಬರೆದು ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಅಜ್ಜಿ ಕೂಡ ಒಪ್ಪಿಕೊಂಡಿದ್ದಾಳೆ. ಇದನ್ನು ಶಕುಂತಲಾ ದೇವಿಯ ತಮ್ಮ ಕೇಳಿಸಿಕೊಂಡಿದ್ದಾನೆ. ಅಷ್ಟಕ್ಕೂ ಈ ಎಸ್ಟೇಟ್​  ಮೇಲೆ ಶಕುಂತಲಾಳ ಕಣ್ಣೂ ಇದೆ. 

 ಜೀಪ್​ನಲ್ಲಿ ಜೋಡಿ ಚಿಕ್ಕಮಗಳೂರಿಗೆ ಹೊರಟಿದೆ. ಹೋಗುತ್ತಿರುವುದು ಹನಿಮೂನ್​ಗಾದ್ರೂ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಇದಕ್ಕೆ ಕಾರಣ, ಗೌತಮ್​ ಚಿಕ್ಕಮ್ಮ ಈ ಜೋಡಿಯ ಕೊಲೆ ಮಾಡಿಸುವ ಪ್ಲ್ಯಾನ್​ ಮಾಡಿದ್ದಾಳೆ. ಮಗ ಗೌತಮ್​ ಮತ್ತು ಸೊಸೆ ಭೂಮಿಕಾ ಎಂದಿಗೂ ಒಂದಾಗಬಾರದು ಎಂದು ಬಯಸ್ತಿರೋ, ಸದಾ ಕುತಂತ್ರ ರೂಪಿಸುತ್ತಿರುವ ಅತ್ತೆ ಶಕುಂತಲಾ ದೇವಿ ಈಗ ಇಬ್ಬರನ್ನೂ ಹನಿಮೂನ್​ಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಾಳೆ.   ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಬಂದು ಧಮ್ಕಿ ಹಾಕಿ ಹೋಗಿದ್ದಾರೆ. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್​ಗೆ ಯಾವುದೇ ಮಾಹಿತಿ ಇಲ್ಲ. ಇದನ್ನು ತಿಳಿಸದಂತೆ ಭೂಮಿಕಾಗೂ ಮನೆಯವರು ಹೇಳಿದ್ದಾರೆ. ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್​ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. 

Tap to resize

Latest Videos

ಎಲ್ಲೋ ಕೂಗಿದ್ರೆ ಕೇಳ್ಸತ್ತೆ, ಮಗಳಲ್ಲ ಅಂತ ಗೊತ್ತಾಗಿಲ್ವಾ? ಸಹನಾಗೆ ಸೀರೆ ಎಲ್ಲಿಂದ ಬರ್ತಿವೆ? ಪ್ರಶ್ನೆಗಳ ಸುರಿಮಳೆ...

ಆದ್ದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.  ನಿಜಕ್ಕೂ ಅವಳ ಪ್ಲ್ಯಾನ್​ ಸಕ್ಸಸ್​ ಆಗುತ್ತಾ? ಅಥವಾ ಪ್ರತಿ ಬಾರಿಯಂತೆ ಹೀಗೆಲ್ಲಾ ಪ್ಲ್ಯಾನ್​ ಮಾಡಿದಾಗ ದಂಪತಿ ಹತ್ತಿರ ಆಗುವಂತೆ ಈ ಬಾರಿಯೂ ಆಗುತ್ತಾ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ಗೌತಮ್​ ಮೊದಲು ಪ್ರೀತಿ ಬಗ್ಗೆ ಹೇಳಲಿ ಎಂದು ಭೂಮಿಕಾ, ಭೂಮಿಕಾ ಮೊದಲು ಹೇಳಲಿ ಎಂದು ಗೌತಮ್​... ಒಟ್ಟಿನಲ್ಲಿ ಇಬ್ಬರೂ ಐ ಲವ್​ ಯೂ ಅನ್ನೋದಕ್ಕೆ ಪರದಾಡುತ್ತಿದ್ದಾರೆ.   

ಹೀಗೆ ಬಿಟ್ಟರೆ ಇವರಿಬ್ಬರೂ ಲವ್​ ಬಗ್ಗೆ ಹೇಳುವುದೇ ಇಲ್ಲ ಎಂದು ಆನಂದ್​ ಮತ್ತು ಪತ್ನಿ ಪ್ಲ್ಯಾನ್​ ಮಾಡುತ್ತಲೇ ಇದ್ದರು.  ಬಂಗಾಳಿಯ ಕ್ಲೈಂಟ್ಸ್​ ಜೊತೆ ಗೌತಮ್​ ಮೀಟಿಂಗ್​ ಫಿಕ್ಸ್ ಆಗಿತ್ತು. ಆ ಸಮಯದಲ್ಲಿ  ಅವರನ್ನು ಸ್ವಾಗತಿಸಲು ಬಂಗಾಳಿಯಲ್ಲಿ ಮಾತನಾಡುವಂತೆ ಆನಂದ್​ ಹೇಳಿದ್ದ.  ನಾವು ನಿಮ್ಮವರು ಎನ್ನಲು ಬೆಂಗಾಳಿಯಲ್ಲಿ ಹೇಗೆ ಹೇಳ್ತೀರಾ ಎಂದು ಭೂಮಿಕಾ ಕೇಳಿದ್ದಳು. ಅದಕ್ಕೆ ಗೌತಮ್​ ಬಂಗಾಳಿಯಲ್ಲಿ ಮಾತನಾಡಿದ್ದಾನೆ. ನಿಜವಾಗಿ ಹೇಳಬೇಕು ಎಂದರೆ ಅದು ಬಂಗಾಳಿಯಲ್ಲಿ ಐ ಲವ್​ ಯು ಎನ್ನುವುದು. ಇದು ಗೌತಮ್​ಗೂ ತಿಳಿದಿರಲಿಲ್ಲ, ಭೂಮಿಕಾಗೂ ತಿಳಿದಿರಲಿಲ್ಲ. ಕೊನೆಗೆ ಆನಂದ್​ನೇ ನೀನು ಹೇಳಿದ್ದು ಐ ಲವ್​ ಯು ಅಂತ ಹೇಳಿದ್ದಾನೆ. ಇದನ್ನು ಮರೆಯಿಂದ ಕೇಳಿಸಿಕೊಂಡು ಭೂಮಿಕಾ ನಾಚಿ ನೀರಾಗಿದ್ದಳು. ಗೌತಮ್​ ತಲೆ ತಲೆ ಚಚ್ಚಿಕೊಂಡಿದ್ದ. ಇದೀಗ ಮತ್ತಷ್ಟು ಹತ್ತಿರವಾಗಿರೋ ಜೋಡಿ, ಹನಿಮೂನ್​ನಲ್ಲಿ ಒಂದಾಗ್ತಾರಾ ಎನ್ನುವುದು ಮುಂದಿರುವ ಪ್ರಶ್ನೆ. 

ಬಿಗ್​ಬಾಸ್​ ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!


 

click me!