ಕಾಲ್ ಮೇಲೆ ಕಾಲ್ ಹಾಕಿ ಕುಳಿತ ಭಾಗ್ಯಾ, ಶ್ರೇಷ್ಠಾ ಬಾಳು ಅಯೋಮಯ

By Roopa Hegde  |  First Published Dec 19, 2024, 12:56 PM IST

ಕಲರ್ಸ್ ಕನ್ನಡ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಭಾಗ್ಯಾ ಮಹಾ ಆದೇಶ ತಾಂಡವ್ ನಡುಗಿಸಿದೆ. ಶ್ರೇಷ್ಠಾ ಬೀದಿ ಪಾಲಾಗೋದು ಖಚಿತವಾಗಿದೆ. ಮನೆಯವರು ಭಾಗ್ಯಾ ಆದೇಶಕ್ಕೆ ಉಘೇ ಎಂದಿದ್ದಾರೆ. 
 


ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ (Colors Kannada Bhagyalakshmi Serial) ನಲ್ಲಿ ಭಾಗ್ಯಾ ಹೊಸ ಅಧ್ಯಾಯ ಇಂದಿನಿಂದ ಶುರುವಾಗ್ತಿದೆ. ಭಾಗ್ಯಾ, ತಾಂಡವ್ ವಿರುದ್ಧ ಸಿಡಿದು ನಿಂತಿದ್ದಾಳೆ. ನಾನಾ ನೀವಾ ನೋಡೇ ಬಿಡೋಣ ಎಂದು ಚಾಲೆಂಜ್ ಹಾಕಿದ್ದ ಭಾಗ್ಯಾ, ಕಾಲ್ ಮೇಲೆ ಕಾಲು ಹಾಕಿ ಕುಳಿತು, ತಾಂಡವ್ ಮುಂದೆ ಷರತ್ತು ಇಡ್ತಿದ್ದಾಳೆ. ಜೈಲಿನಲ್ಲಿ ಮುದ್ದೆ ತಿನ್ನೋದನ್ನು ತಪ್ಪಿಸಿಕೊಳ್ಳಲು, ತಾಂಡವ್ ಗೆ ಈಗ ಭಾಗ್ಯಾ ಹೇಳೋದನ್ನು ಕೇಳುವ ಅನಿವಾರ್ಯತೆ ಎದುರಾಗಿದೆ. ಶ್ರೇಷ್ಠಾ ಗತಿ ಹರೋಹರ. ತಾಂಡವ್ ನಂಬಿ ಬಂದಿದ್ದ ಶ್ರೇಷ್ಠಾಳನ್ನು, ತಾಂಡವ್ ಮನೆಯಿಂದ ಹೊರಗೆ ಹಾಕೋದು ಹತ್ತಿರವಾಗಿದ್ದು, ವೀಕ್ಷಕರು, ಕುರ್ಚಿ ತುದಿಯಲ್ಲಿ ಕುಳಿತು, ತಾಂಡವ್ ಹಾಗೂ ಶ್ರೇಷ್ಠಾಗೆ ಭಾಗ್ಯ ಬುದ್ಧಿ ಕಲಿಸೋದನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ. 

ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಭಾಗ್ಯಲಕ್ಷ್ಮಿ ಪ್ರೋಮೋ (Promo) ಬಿಡುಗಡೆ ಮಾಡಿದೆ. ಅದ್ರಲ್ಲಿ ಭಾಗ್ಯಾ ದರ್ಬಾರ್ (Darbar) ನೋಡೋದೇ ಚಂದ. ಸೋಫಾ ಮೇಲೆ ಕುಳಿತುಕೊಳ್ಳುವ ಭಾಗ್ಯಾ, ಇನ್ಮುಂದೆ ಭಾಗ್ಯಾ ಜೀವನದ ಹೊಸ ಅಧ್ಯಾಯ ಶುರುವಾಗುತ್ತೆ ಎನ್ನುತ್ತಾಳೆ. ಇದನ್ನು ಕೇಳಿದ ಗುಂಡಣ್ಣ ಸಿಳ್ಳೆ ಹೊಡೆದು ಅಮ್ಮನನ್ನು ಪ್ರೋತ್ಸಾಹಿಸ್ತಾನೆ. ಅಷ್ಟೇ ಅಲ್ಲ ಭಾಗ್ಯಾ ಒಂದಾದ್ಮೇಲೆ ಒಂದು ಷರತ್ತನ್ನು ತಾಂಡವ್ ಗೆ ಹಾಕ್ತಾಳೆ. ಮೊದಲ ಷರತ್ತು ಎನ್ನುತ್ತ, ಎಲ್ಲರೂ ಒಟ್ಟಿಗೆ, ಇದೇ ಮನೆಯಲ್ಲಿ ಇರ್ತೇವೆ ಎಂದು ತಾಂಡವ್ ಮುಂದೆ ಹೇಳ್ತಾಳೆ. ಎರಡನೇ ಷರತ್ತಿನಲ್ಲಿ, ತಾಂಡವ್ ಶ್ರೇಷ್ಠಾ ಕೈ ಹಿಡಿದು ಆಕೆಯನ್ನು ಮನೆಯಿಂದ ಹೊರಗೆ ಹಾಕ್ಬೇಕು. ಸೊಸೆ ಒಂದಾದ್ಮೇಲೆ ಒಂದು ಷರತ್ತು ಹೇಳ್ತಿದ್ದರೆ ಕುಸುಮಾ, ಹುಬ್ಬೇರಿಸಿಕೊಂಡು ಭಾಗ್ಯಾಳನ್ನು ನೋಡ್ತಿದ್ದಾಳೆ. ತಾಂಡವ್ ಮುಖ ಹಿಂಡುತ್ಲೇ ಶ್ರೇಷ್ಠಾಳನ್ನು ಹೊರಗೆ ತಳ್ಳುವ ತಯಾರಿ ನಡೆಸಿದ್ದಾನೆ. ಮದುವೆ ಖುಷಿಯಲ್ಲಿದ್ದ ಶ್ರೇಷ್ಠಾ, ಈ ಅನಿರೀಕ್ಷಿತ ಬದಲಾವಣೆಯಿಂದ ಬೆಚ್ಚಿದ್ದಾಳೆ. 

Tap to resize

Latest Videos

undefined

ಬಿಗ್ ಬಾಸ್ ತಂದು ಕೊಡ್ತು ಲಕ್, ಹೊಸ ಚಿತ್ರದಲ್ಲಿ ಹೊರ ಬಂದ ಸ್ಪರ್ಧಿ!

ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಜೊತೆ ಮನೆಗೆ ನುಗ್ಗಿದ್ದಳು ಭಾಗ್ಯ. ಭಾಗ್ಯಾ ಹಿಂದೆ ಮನೆಯವರೆಲ್ಲ ಬಂದಿದ್ದಾರೆ. ತಾಂಡವ್ ಗೆ ಬುದ್ದಿ ಹೇಳುವ ಪ್ರಯತ್ನ ಕೂಡ ನಡೆಯುತ್ತದೆ. ಆದ್ರೆ ತಾಂಡವ್, ಶ್ರೇಷ್ಠಾ ಮದುವೆಯಾಗೋ ಜಿದ್ದು ಬಿಡೋದಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿದ್ಮೇಲೆ ಮುಗೀತು, ಭಾಗ್ಯಾ ಜೊತೆ ಜೀವನ ನಡೆಸಲು ನನಗೆ ಇಷ್ಟವಿಲ್ಲ, ನನ್ನ ಪಾಡಿಗೆ ನನ್ನನ್ನು ಬಿಡಿ ಎನ್ನುತ್ತಾನೆ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿದ್ದು ನಿಜ ಆದ್ರೆ ನಮ್ಮ ಮಕ್ಕಳಿಗಾಗಿ ಅಪ್ಪ – ಅಮ್ಮ ಒಟ್ಟಿಗೆ ಇರ್ಬೇಕು ಎನ್ನುತ್ತ ವಾಸ್ತವದ ಅರಿವು ಮೂಡಿಸುವ ಪ್ರಯತ್ನ ಮಾಡಿದ್ರೂ ತಾಂಡವ್ ಕೇಳೋದಿಲ್ಲ. ಎರಡನೇ ಮದುವೆಗೆ ಮುಂದಾಗಿದ್ದ ತಾಂಡವ್ ಬಂಧಿಸಲು ಪೊಲೀಸರು ಮುಂದಾಗ್ತಾರೆ. ಭಾಗ್ಯಾ ಮುಂದೆ ಕ್ಷಮೆ ಕೇಳಿದ್ರೂ ಭಾಗ್ಯಾ ಮನಸ್ಸು ಆರಂಭದಲ್ಲಿ ಕರಗೋದಿಲ್ಲ. ಕೆಲವರಿಗೆ ಬಾಯಲ್ಲಿ ಹೇಳಿದ್ರೆ ಬುದ್ಧಿ ಬರೋದಿಲ್ಲ, ನಿಮ್ಮ ಕೆಲಸ ಮಾಡಿ ಎನ್ನುತ್ತ ಭಾಗ್ಯಾ ಪೊಲೀಸರಿಗೆ, ತಾಂಡವ್ ಬಂಧಿಸಲು ಒಪ್ಪಿಗೆ ನೀಡ್ತಾಳೆ. ತಾಂಡವ್ ಹಾಗೂ ಶ್ರೇಷ್ಠಾಳನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. 

ದೀಪಿಕಾ ಪಡುಕೋಣೆ ಬೆಂಗಳೂರಿಗೆ ಬಂದ್ರೆ ಈ ಫುಡ್‌ ಜಾಯಿಂಟ್‌ಗೆ ಗ್ಯಾರಂಟಿ!

ಪ್ರೋಮೋ ನೋಡಿದ ವೀಕ್ಷಕರು ಎಲ್ಲ ಹೆಣ್ಮಕ್ಕಳು ಭಾಗ್ಯಾ ತರ ಇರ್ಬೇಕು ಎನ್ನುತ್ತಿದ್ದಾರೆ. ಅಕ್ಕ ಸೂಪರ್, ಭಾಗ್ಯಾ ಹೀಗೆ ಬದಲಾಗಿದ್ದು ಖುಷಿ ತಂದಿದೆ, ಭಾಗ್ಯಾ ಆಕ್ಟಿಂಗ್ ಸೂಪರ್, ತಾಂಡವ್ ಗೆ ಇದೆ ಮಾರಿ ಹಬ್ಬ, ಶ್ರೇಷ್ಠಾ ಪಾಡು ನಾಯಿ ಪಾಡು ಹೀಗೆ ನಾನಾ ರೀತಿಯಲ್ಲಿ ವೀಕ್ಷಕರು ಕಮೆಂಟ್ ಮಾಡಿ, ಭಾಗ್ಯಾಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ತಾಂಡವ್ ವಿರುದ್ಧ ಸೇಡು ತೀರಿಸಿಕೊಳ್ಳುವ ಜೊತೆಗೆ ಮಕ್ಕಳಿಗಾಗಿ ಒಂದಾಗಿ ಜೀವನ ನಡೆಸಲು ಮುಂದಾಗಿರುವ ಭಾಗ್ಯಾ ಕೆಲಸವನ್ನು ವೀಕ್ಷಕರು ಮೆಚ್ಚಿದ್ದಾರೆ.

click me!